ಇಂಜಿನಿಯರ್ಸ್ ದಿನಾಚರಣೆ :ಲಯನ್ಸ್ ಕ್ಲಬ್ ತೆಕ್ಕಟ್ಟೆ ವತಿಯಿಂದ ಕೆದೂರು ವಿನೂತ್ ಹೆಗ್ಡೆಯವರಿಗೆ ಸನ್ಮಾನ

0
122

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಲಯನ್ಸ್ ಕ್ಲಬ್ ತೆಕ್ಕಟ್ಟೆ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಕೆದೂರು ವಿನೂತ್ ಹೆಗ್ಡೆಯವರನ್ನು ಅವರ ನಿವಾಸದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸಾಫ್ಟ್ವೇರ್ ಇಂಜಿನಿಯರ್ ಆಗಿ ಅವರ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಅವರ ಕೊಡುಗೆಗಳನ್ನು ಗುರುತಿಸಿ ವಿಜಯಲಕ್ಷ್ಮಿ ಮತ್ತು ವಿನೂತ್ ಹೆಗ್ಡೆ ದಂಪತಿಗಳನ್ನು ಗೌರವಿಸಲಾಯಿತು
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಸಂಪತ್ ಶೆಟ್ಟಿ ವಕ್ವಾಡಿ, ಖಜಾಂಚಿ ಚಂದ್ರಕಾಂತ್ ಶೆಟ್ಟಿ, ಸದಸ್ಯರಾದ ಹರ್ಷವರ್ಧನ್ ಶೆಟ್ಟಿ, ಕಿಶೋರ್ ಶೆಟ್ಟಿ, ಸದಾರಾಮ ಶೆಟ್ಟಿ, ಜಯಕರ ಹೆಗ್ಡೆ, ಶಂಕರ್ ಶೆಟ್ಟಿ ಬವಲಾಡಿ, ಧರ್ಮರಾಜ ಮುದಲಿಯಾರ್, ಸೀತಾರಾಮ ಶೆಟ್ಟಿ ನಾರ್ಕಳಿ, ಅರುಣ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು,
ಲಯನ್ ಸದಸ್ಯ ರಾಜೇಂದ್ರ ಶೆಟ್ಟಿ ನಿರೂಪಿಸಿದರು, ಸ್ಥಾಪಕಾಧ್ಯಕ್ಷ ಕೆ. ಸೀತಾರಾಮ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ಅರುಣ್ ಶೆಟ್ಟಿ ಉಳ್ತೂರು ವಂದಿಸಿದರು.

LEAVE A REPLY

Please enter your comment!
Please enter your name here