ವಿನುತಾ ಬಿ ಶೆಟ್ಟಿ ಇವರಿಗೆ ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್.

0
61

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ಪ್ರಿಮ್ ರೋಸ್ ಫೌಂಡೇಶನ್ ಶಾಲೆಯ ಪ್ರಾಂಶುಪಾಲೆ ವಿನುತ ಬಿ ಶೆಟ್ಟಿಯವರನ್ನು ಭಾರತ್ ನ್ಯಾಷನಲ್ ಲೀಡರ್ ಶಿಪ್ ಅವಾರ್ಡ್ 2026 ನೀಡಿ ಗೌರವಿಸಲಾಗಿದೆ.

ಶಿಕ್ಷಣ, ನವೀನತೆ, ನಾಯಕತ್ವ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಾಗಿ ಈ ಗೌರವನ್ನು ಪ್ರಧಾನ ಮಾಡಲಾಗಿದೆ.

ಗ್ರೇಟರ್ ನೋಯ್ಡಾದ IILM ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ಭಾರತ್ ಎಜುಕೇಶನ್ ಲೀಡರ್ಶಿಪ್ ಕಾನ್ ಕ್ಲೇವ್ ಮತ್ತು ನ್ಯಾಷನಲ್ ಅವಾರ್ಡ್ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ.

ಕಾರ್ಯಕ್ರಮ ದ ವಕ್ತಾರ ಹಾಗೂ ಮಾಧ್ಯಮದ ಉಸ್ತುವಾರಿ ಅಯುಬ್ ಕೆ ಸಿಲಾವಟ್ ಅವರು ಮಾತನಾಡಿ ವಿನುತಾ ಬಿ ಶೆಟ್ಟಿ ಅವರನ್ನು ಕಳೆದ ಒಂದುವರೆ ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು

ಚಿರಂತನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶೈಕ್ಷಣಿಕ ಸಾಧನೆಯ ಜೊತೆಗೆ ಸೃಜನಶೀಲತೆ, ಆತ್ಮವಿಶ್ವಾಸ, ಸಮಸ್ಯೆ ಪರಿಹಾರ ಸಾಮರ್ಥ್ಯ, ಶಿಸ್ತು, ಚಾರಿತ್ರ್ಯ ನಿರ್ಮಾಣ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಲು ವಿಶೇಷ ಒತ್ತನೀಡಲಾಗುತ್ತಿದೆ.

ಈ ಪ್ರಶಸ್ತಿಯ ಸಂದರ್ಭದಲ್ಲಿ ಈ ಸಾಧನೆ ಸಂಪೂರ್ಣ ತಂಡದ ಸಾಮೂಹಿಕ ಯಶಸ್ಸು ಹಾಗೂ ಕುಟುಂಬದ ಸಹಕಾರ ಎಂದು ವಿನುತಾ ಬಿ ಶೆಟ್ಟಿ ರವರು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here