ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್‌ಪ್ರೆಸ್ 2K26’ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿಂದ ಸಾವಿರಾರು ಉದ್ಯೋಗಾವಕಾಶಗಳು

0
9

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸ್ಥಳೀಯ ಐ.ಎಂ.ಜೆ. ಶಿಕ್ಷಣ ಸಂಸ್ಥೆ ಮೂಡ್ಲಕಟ್ಟೆಯಲ್ಲಿ ಕರ್ನಾಟಕ ಸರ್ಕಾರ, ಮೈಕ್ರೋಸಾಫ್ಟ್, ಕೇಂದ್ರ ಸರ್ಕಾರದ MeitY ಸ್ಟಾರ್ಟ್‌ಅಪ್ ಹಬ್ ಮತ್ತು 1M1B ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್‌ಪ್ರೆಸ್ 2K26’ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಐಬಿಎಂ ಇಂಡಿಯಾ ಕ್ಲೌಡ್ ಲ್ಯಾಬ್ಸ್‌ನ ಆರ್ಕಿಟೆಕ್ಟ್ ಡಾ. ಸ್ಯಾಮ್ಯುಯೆಲ್ ಅಗಸ್ಟಸ್ ನಾರ್ಟನ್ ಸ್ಟಾನ್ಲಿ ಅವರು ಆಗಮಿಸಿದ್ದು, ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ಸ್ನೇಹಿ ಕೌಶಲಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಜ್ಞಾನಕ್ಕೆ ಅಪಾರ ಬೇಡಿಕೆಯಿದ್ದು, ಯುವಜನತೆ ನಿರಂತರ ಕಲಿಕೆಯೊಂದಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ರೇಮಾ ಜೋಸೆಫ್, ಮುಖ್ಯಸ್ಥರು ಮತ್ತು ಹಿರಿಯ ಮಾರ್ಗದರ್ಶಕರು, ಗ್ರೀನ್ ಸ್ಕಿಲ್ಸ್ & ಅಪ್ಲೈಡ್ ಎಐ ಫಾರ್ ಕ್ಲೈಮೇಟ್ ಆಕ್ಷನ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದ್ದು, ಅವರನ್ನು ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಸಂಪರ್ಕಿಸುವ ವೇದಿಕೆ ಇದಾಗಿದೆ ,ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಹಾಗೂ ಉತ್ತಮ ವೃತ್ತಿ ಅವಕಾಶಗಳನ್ನು ಕಲ್ಪಿಸಿಕೊಡಲು ನಮ್ಮ ಸಂಸ್ಥೆ ಎಲ್ಲಾ ರೀತಿಯಲ್ಲೂ ಸದಾ ಬೆಂಬಲ ನೀಡಲು ಬದ್ಧವಾಗಿದೆ ಎಂದರು.

ಸಂಸ್ಥೆಯ ಅಕಾಡೆಮಿಕ್ಸ್ ವಿಭಾಗದ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಗಣ್ಯರನ್ನು, ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಉದ್ಘಾಟನೆಯ ನಂತರ ನೇರ ಸಂದರ್ಶನ ಮತ್ತು ನೇಮಕಾತಿ ಪ್ರಕ್ರಿಯೆ ಜರುಗಿತು. 30ಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳು ಭಾಗವಹಿಸಿ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಪದವೀಧರರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟವು.

ವೇದಿಕೆಯಲ್ಲಿ ಎಂ ಐ ಟಿ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ, ಐ ಏಮ್ ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ.ಪ್ರತಿಭಾ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಂಪೆನಿಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.

ಐ ಎಂ ಜೆ ಪ್ಲೇಸ್ಮೆಂಟ್ ಡೀನ್ ಅಮೃತಮಾಲ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಂಯೋಜಕಿ ಸೂಕ್ಷ್ಮ ಅಡಿಗ ಹಾಗೂ ಪ್ರೊ ಫರಾನಾ ಇಮ್ರಾನ್ ಅತಿಥಿ ಪರಿಚಯ ನೀಡಿದರು, ಪ್ಲೇಸ್ಮೆಂಟ್ ಡೀನ್ ಅಕ್ಷತ ನಾಯಕ್ ವಂದಿಸಿದರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕಿ ರಾಜೇಶ್ವರಿ ನಿರೂಪಿಸಿದರು.

LEAVE A REPLY

Please enter your comment!
Please enter your name here