ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕಳೆದ ಕೆಲವು ವರ್ಷಗಳಿಂದ ಹೊಸ ಪಡಿತರ ಚೀಟಿ (ರೇಷನ್ ಕಾರ್ಡಗೆ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ. ಇದರಿಂದ ಜನ ಸಾಮಾನ್ಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಪಡಿತರ ಚೀಟಿ ಅತೀ ಮುಖ್ಯ ದಾಖಲೆ ಆಗಿರುವುದರಿಂದ ಪಡಿತರ ಚೀಟಿ ಇಲ್ಲದವರು ಹೊಸ ಅರ್ಜಿ ಸಲ್ಲಿಸಲು ಕೂಡಲೇ ಅವಕಾಶ ಕಲ್ಪಿಸಬೇಕು, ಜೊತೆಯಲ್ಲಿ ಕೂಡಲೇ ಅವರಿಗೆ ರೇಷನ್ ಕಾರ್ಡ ನೀಡಬೇಕು. ಇದರ ಬಗ್ಗೆ ಸರಕಾರದ ಗಮನಕ್ಕೆ ತರಬೇಕು ಎಂದು ಪ್ರಜಾ ಸೇವೆ ಆಂದೋಲನ ಸಭೆ ಹಾಗೂ ಸಾರ್ವಜನಿಕರ ಅಹವಾಲು ಕಾರ್ಯಕ್ರಮದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರಿಗೆ ಮಾಜಿ ಪುರಸಭಾ ಸದಸ್ಯೆ ಗುಣರತ್ನ ಮನವಿ ಮಾಡಿದರು.
ಗುಣರತ್ನ ಅವರ ಮನವಿಗೆ ಶಾಸಕರು ಸಕರಾತ್ಮವಾಗಿ ಸ್ಪಂದಿಸಿ ಸರಕಾರ ಮಟ್ಟದಲ್ಲಿ ಅತೀ ಶೀಘ್ರದಲ್ಲಿ ಹೊಸ ರೇಷನ್ ಕಾರ್ಡ ಅರ್ಜಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
