ಲಯನ್ಸ್ ಕ್ಲಬ್ ವತಿಯಿಂದ ಕೋಟ ಪಂಚಾಯತ್ ಘನತ್ಯಾಜ್ಯ ನಿರ್ವಾಹಕ, ಸಿಬ್ಬಂದಿಗಳಿಗೆ ಸನ್ಮಾನ

0
5

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗ್ರಾಮ ಪಂಚಾಯತ್, ಕೋಟ ಹಾಗೂ ಲಯನ್ಸ್ ಕ್ಲಬ್, ಕೋಟ-ಗಿಳಿಯಾರು ಮತ್ತು ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ಸಹಯೋಗದೊಂದಿಗೆ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ವಿಶೇಷ ಗೌರವ ಸಂಮ್ಮಾನ ಕಾರ್ಯಕ್ರಮ ಏರ್ಪಡಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ಲಯನ್ಸ್ ಕ್ಲಬ್ ಕೋಟ ಗಿಳಿಯಾರು ಅಧ್ಯಕ್ಷ ಸುರೇಶ್ ಕಾರಂತ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೋಟ ಗ್ರಾಮಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಇವರುಗಳನ್ನು ಗೌರವ ಸಂಮ್ಮಾನ ನೀಡಿಲಾಯಿತು.
ಮುಖ್ಯ ಅಭ್ಯಾಗತರಾಗಿ ಲಯನ್ಸ್ ಕ್ಲಬ್ ಆರ್ ಸಿ ಸ್ವರಸ್ವತಿ ಪುತ್ರನ್, ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷರಾದ ಜಡ್ಡಾಡಿ ವಿಜಯ ಕುಮಾರ್ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚಾಯತ್ ಪಿಡಿಒ ಉಮೇಶ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗುರುರಾಜ್ ಆಚಾರ್ ಸ್ವಾಗತಿಸಿ, ಕಲಾವತಿ ಅಶೋಕ್ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here