ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕಾರ್ಕಡ ಗ್ರಾಮದ ಮೂಡೋಳಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ದಿನಾಂಕ ಸೆ.27ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೇದಮೂರ್ತಿ ಬಾಲಕೃಷ್ಣ ನಕ್ಷತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಕೆ. ಶಶಿಧರ ಮಯ್ಯ
ಕಾರ್ಯದರ್ಶಿಯಾಗಿ ಕೆ. ನಾಗರಾಜ ಮಧ್ಯಸ್ಥ , ಸಹ ಕಾರ್ಯದರ್ಶಿಯಾಗಿ ರಮೇಶ ನಕ್ಷತ್ರಿ, ಖಜಾಂಚಿ ಕೆ. ಲಕ್ಷ್ಮಣ ನಕ್ಷತ್ರಿ, ಸದಸ್ಯರಾಗಿ ಕೆ. ಚಂದ್ರಶೇಖರ ಸೋಮಯಾಜಿ, ಕೆ. ಸೀತಾರಾಮ ಸೋಮಯಾಜಿ, ಕೆ. ರಘುರಾಮ ಹೊಳ್ಳ, ಕೆ. ಬಾಬು, ಲಕ್ಷ್ಮಣ ಪೂಜಾರಿ ಹಾಗೂ ಕೆ. ರಾಮ ಅವರು ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹಂಗಾಮಿ ಸಭಾ ಅಧ್ಯಕ್ಷರಾಗಿ ಕೆ. ಸುಬ್ರಹ್ಮಣ್ಯ ಹೆಬ್ಬಾರ್ ಅವರು ಸಭೆಯನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮುಂಬರುವ ನವರಾತ್ರಿ ಉತ್ಸವದ ಬಗ್ಗೆ ಚರ್ಚೆ ನಡೆಸಲಾಯಿತು. ಸಹಕಾರ್ಯದರ್ಶಿ ರಮೇಶ ನಕ್ಷತ್ರಿ ಧನ್ಯವಾದ ಸಲ್ಲಿಸಿದರು.
