ಗುಂಡ್ಮಿ -ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ ಪ್ರದಾನ

0
59

ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶ್ಲಾಘನೀಯ- ರವೀಂದ್ರ ಕೋಟ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಕ್ಕಳ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಶನಿವಾರ ಗುಂಡ್ಮಿ ವೇ.ಮೂ. ಸತ್ಯನಾರಾಯಣ ಉಪಾಧ್ಯಾಯ ಮನೆಯಂಗಳದಲ್ಲಿ ಸಾಲಿಗ್ರಾಮದ ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ,ಸಾಹಿತ್ಯ ಸಂಘ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇವರ ಆಶ್ರಯದಲ್ಲಿ ವರ್ಷ ಸಂಭ್ರಮ – ಕೃತಿ ಬಿಡುಗಡೆ ಮತ್ತು ಅಂಬಲಪಾಡಿ ಡಾ.ನಿ.ವಿಜಯ ಬಲ್ಲಾಳರು ತಮ್ಮ ತಂದೆಯ ನೆನಪಿನಲ್ಲಿ ಸಾಹಿತ್ಯ ಕೃಷಿಗಾಗಿ ಕೊಡಮಾಡುತ್ತಿರುವ 17ನೇ ವರ್ಷದ ಅಣ್ಣಾಜಿ ಬಲ್ಲಾಳ ಸ್ಮಾರಕ ಬಾಲ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳನ್ನು ಕೇಂದ್ರಿಕರಿಸಿ ಹಲವು ರೀತಿಯ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿ ಪರಿಸರದಲ್ಲಿ ಸಾಹಿತ್ಯಿಕ ಕಂಪು ಪಸರಿಸಲಾಗುತ್ತಿದೆ ಅಲ್ಲದೆ ಡಾ.ಅಣ್ಣಾಜೀ ಬಲ್ಲಾಳರ ಹೆಸರಿನಲ್ಲಿ ಕೊಡ ಮಾಡುವ ಸಾಹಿತ್ಯಿಕ ಪ್ರಶಸ್ತಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕವಾಗಿ ಮುನ್ನುಡಿ ಬರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಅವನಿ ಹೊಳ್ಳ ಇವರಿಗೆ ಅಣ್ಣಾಜೀ ಬಲ್ಲಾಳ ಬಾಲ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ವೇ.ಮೂ ಸತ್ಯನಾರಾಯಣ ಉಪಾಧ್ಯಾಯ ಉದ್ಘಾಟಿಸಿದರು.
ಕುಮಾರಿ ಅವನಿ ಹೊಳ್ಳ ರಚಿಸಿದ ಕವನ ಸಂಕಲ ಮನದ ಮಾತು ಕೃತಿಯನ್ನು ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ಬಿಡುಗಡೆಗೊಳಿಸಿ ಶುಭಹಾರೈಸಿದರು.
ವರ್ಷ ಸಂಭ್ರಮದ ಅಧ್ಯಕ್ಷತೆಯನ್ನು ವಿವೇಕ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿ ಅನಘ ಹೊಳ್ಳ ವಹಿಸಿದರು.
ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಪ್ರೋ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅಣ್ಣಾಜಿ ಬಲ್ಲಾಳ್ ಪುರಸ್ಕಾರ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಕೋಟ ವಿವೇಕ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರೇಮಾನಂದ,ಅವನಿ ಹೊಳ್ಳ ಪೋಷಕರಾದ ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಸಂಘಟಕಿ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರೆ, ಕೋಟದ ವಿವೇಕ ಪ್ರೌಢಶಾಲಾ ವಿದ್ಯಾರ್ಥಿನಿ ಸೃಷ್ಠಿ ಆರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ನಿಲಾವರ ಸುರೇಂದ್ರ ಅಡಿಗ ವಂದಿಸಿದರು.

LEAVE A REPLY

Please enter your comment!
Please enter your name here