ಕೋಟೇಶ್ವರ ಮೊಗವೀರ ಯುವ ಸಂಘಟನೆ ವತಿಯಿಂದ ನಾಡೋಜ ಡಾ. ಜಿ. ಶಂಕರ್ ಜನ್ಮ ದಿನಾಚರಣೆ ಪ್ರಯುಕ್ತ ಬೀಚ್ ಕ್ಲಿನಿಂಗ್, ಸನ್ಮಾನ ನೆರವು ಕಾರ್ಯಕ್ರಮ

0
7

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆಯ ವತಿಯಿಂದ “ಸೇವೆಗೆ ಸುದಿನ ಎಂಬ ಶೀರ್ಷಿಕೆಯಡಿ ಸಮಾಜದ ಕಣ್ಮಣಿ ನಾಡೋಜ ಡಾ. ಜಿ. ಶಂಕರ್ ಜನ್ಮ ದಿನಾಚರಣೆ ಅಂಗವಾಗಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಹಾಗೂ ಎಸ್ ಎಲ್‍ಆರ್ ಎಂ ಘಟಕದ ಸಹಯೋಗದಲ್ಲಿ ಕೊಮೆ ಬೀಚ್ ಕ್ಲಿನಿಂಗ್ ಹಾಗೂ ವಿವಿಧ ಸಮಾಜ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿತು.
ಈ ಹಿನ್ನಲೆಯಲ್ಲಿ ಡಾ. ಜಿ. ಶಂಕರ್ ಅವರ ಶೈಕ್ಷಣಿಕ ಚಿಂತನೆಯಂತೆ, ಬೀಜಾಡಿ ಸರ್ಕಾರಿ ಪ್ರೌಢಶಾಲೆಗೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುರ್ಚಿಗಳನ್ನು ವಿತರಿಸಲಾಯಿತು. ಆರೋಗ್ಯ ಚಿಂತನೆಯಂತೆ ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನವರ ಅಂತ್ಯಕ್ರಿಯೆಯ ಪುಣ್ಯದ ಮೋಕ್ಷ ಕಾರ್ಯದಲ್ಲಿ ಅತ್ಯಂತ ಮಹತ್ವದ ಸೇವೆಗೈದ ಕೋಟೇಶ್ವರದ ಮೋಕ್ಷ ಸೂರಿ ಹಾಗೂ ತೆಕ್ಕಟ್ಟೆಯ ಚಂದ್ರ ದೇವಾಡಿಗ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ತೆಕ್ಕಟ್ಟೆ ಎಸ್‍ಎಲ್‍ಆರ್‍ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಸಂಘಟನೆಯ ಅಧ್ಯಕ್ಷ ರಾಘವೇಂದ್ರ ಹರಪನಕರೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮೊಗವೀರ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೋಟೇಶ್ವರ ಸೇವಾ ಟ್ರಸ್ಟ್ ಸದಸ್ಯ ಜಗದೀಶ್ ಮೊಗವೀರ ಮಾರ್ಕೋಡು, ಗೌರವಾಧ್ಯಕ್ಷ ಆನಂದ್ ಕುಂದರ್ ಹಳಅಳಿವೆ, ಜಿಲ್ಲಾ ಸಂಘಟನೆ ಉಪಾಧ್ಯಕ್ಷ ಅಶೋಕ್ ತೆಕ್ಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ್ ತೋಳಾರ್,ಮಹಿಳಾ ಅಧ್ಯಕ್ಷೆ, ಗಾಯತ್ರಿ ವಿಕ್ರಮ್ ತೆಕ್ಕಟ್ಟೆ, ಕಾರ್ಯದರ್ಶಿ ರಾಜೇಶ್ವರಿ ಮರ್ಕೋಡು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್, ಸದಸ್ಯ ಗೋಪಾಲ್ ಕೊಮೆ,
ಶನೇಶ್ವರ ದೇವಸ್ಥಾನ ಕೊಮೆ- ತೆಕ್ಕಟ್ಟೆ ಇದರ ಅಧ್ಯಕ್ಷರಾದ ನರಸಿಂಹ ಕಾಂಚನ್ ಹಾಗೂ ಬೊಬ್ಬರ್ಯ ದೇವಸ್ಥಾನದ ಅಧ್ಯಕ್ಷರಾದ ಸೋಮ ಕಾಂಚನ್,ರಾಜು ತೋಟದಬೆಟ್ಟು, ಟಿ.ಆರ್. ಮಂಜುನಾಥ್, ಕೋಟೇಶ್ವರ ಘಟಕದ ಮಾಜಿ ಮಹಿಳಾ ಅಧ್ಯಕ್ಷರು, ಘಟಕದ ಪದಾಧಿಕಾರಿಗಳು, ಗುರಿಕಾರರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬೀಜಾಡಿ ನಿರ್ವಹಿಸಿದರು. ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here