ವಂಡ್ಸೆ: ವರ್ಗಾವಣೆಗೊಂಡಿರುವ ಲೈನ್ ಮ್ಯಾನ್ ಸಚಿನ್ ಅವರಿಗೆ ಮೇಲ್ ಪೇಟೆ ಫ್ರೆಂಡ್ಸ್ ವತಿಯಿಂದ ಸನ್ಮಾನ

0
120

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಂಡ್ಸೆ ಮೆಸ್ಕಾಂ ವಿಭಾಗದಲ್ಲಿ ಲೈನ್‌ಮ್ಯಾನ್ ವಿಭಾಗದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಸವದತ್ತಿ ಶಾಖೆಯ ಹೆಸ್ಕಾಂ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಸಚಿನ ಶಿವಾನಂದ ಹಂಚಿನಾಳಮಠ ಇವರನ್ನು ವಂಡ್ಸೆ ಮೇಲ್ ಪೇಟೆ ಫ್ರೆಂಡ್ಸ್ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿ.ಕೆ ಶಿವರಾಮ ಶೆಟ್ಟಿ, ಶ್ರೀನಿವಾಸ ಪೂಜಾರಿ ಕಲ್ಮಡಿ, ಗ್ರಾ.ಪಂ.ಮಾಜಿ ಸದಸ್ಯರಾದ ಗುಂಡು ಪೂಜಾರಿ, ಮೆಸ್ಕಾಂ ಜೆ‌ಇ‌ಇ ರಾಜೇಶ, ಪ್ರಕಾಶ ಮೊಗವೀರ, ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಆನಂದ ನಾಯ್ಕ ನ್ಯಾಗಳಮನೆ, ಬಾಲಕೃಷ್ಣ ಶ್ಯಾನುಭಾಗ್, ವೆಂಕಟೇಶ್ ಶೆಟ್ಟಿ ಅಬ್ಬಿ, ಮೇಲ್ಪೇಟೆ ಫ್ರೆಂಡ್ಸ್ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here