ಅ.19ರಂದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ವತಿಯಿಂದ ಹುಲಿವೇಷ ನೃತ್ಯ ಪ್ರದರ್ಶನ

0
19

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನವರಾತ್ರಿಯಲ್ಲಷ್ಟೇ ವಿಶೇಷವಾಗಿ ಬಣ್ಣ ಹಚ್ಚಿ ಹೆಜ್ಜೆ ಹಾಕುವ ಪಾರಂಪರಿಕ ಹುಲಿವೇಷ ನೃತ್ಯ ಕುಂದಾಪುರದ ವೈಶಿಷ್ಟ್ಯವಾಗಿದೆ. ವಾದ್ಯ, ತಾಸ್ಮಾರ ಡೋಲು ಮೌರಿಯ ನಾದಕ್ಕೆ ಗೊಂಡೆಯಾಡಿಸುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಲಿಗಳ ನರ್ತನ, ಹುಲಿವೇಷ ಪ್ರೇಮಿಗಳ ಹೃನ್ಮನ ಸೆಳೆಯುತ್ತದೆ. ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹುಲಿವೇಷದಾರಿಗಳ ತಂಡದೊಂದಿಗೆ ಬಹುವರ್ಷಗಳಿಂದ ಕೈಜೋಡಿಸಿ, ಸಾರ್ವಜನಿಕರನ್ನು ಒಂದೆಡೆ ಸೇರಿಸಿ ನೃತ್ಯ ಪ್ರದರ್ಶನವನ್ನು ಪ್ರತೀ ವರ್ಷವೂ ವಿಶೇಷ ವೇದಿಕೆ ಸಿದ್ದಪಡಿಸಿ ಬಿನ್ನವಾದ ಶೈಲಿಯಲ್ಲಿ ನೃತ್ಯ ಪ್ರದರ್ಶನವನ್ನು ಆಯೋಜಿಸುತ್ತಿದೆ.
ಈ ಬಾರಿ ಅಕ್ಟೋಬರ್ 19 ರಂದು ಸೋಮವಾರ ಸಂಜೆ 7.00 ಕ್ಕೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ವೇದಿಕೆಯಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಈ ಕಾರ್ಯಕ್ರಮ ವಿಜೃಂಬಿಸಲಿದೆ. ಕುಂದಾಪುರದ ಪಾರಂಪರಿಕ ಹುಲಿವೇಷದ ಜೊತೆಗೆ, ಪರಿಸರದ ವಿವಿಧ ಹುಲಿವೇಷಧಾರಿಗಳ ತಂಡ ಇಲ್ಲಿ ಭಾಗವಹಿಸಿ ಕಲಾಸಕ್ತರನ್ನು ರಂಜಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹುಲಿವೇಷದಾರಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಮುಂದಿನ ಅನೇಕ ತಲೆಮಾರುಗಳಿಗೆ ಈ ಕಲೆ ಉಳಿಯುವಂತೆ ಕಲಾವಿದರನ್ನು ಹುರಿದುಂಬಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here