ಪಂಚವರ್ಣದ 321ನೇ ವಾರ ಪರಿಸರಸ್ನೇಹಿ ಭಾನುವಾರ ಅಭಿಯಾನ – ಆನೆಗುಡ್ಡೆ ಶ್ರೀ ವಿನಾಯಕ ದೇಗುಲ ಸ್ವಚ್ಛತಾ ಕಾರ್ಯ, ಕೋಟೇಶ್ವರ ರೋಟರಿ ಸಮುದಾಯ ದಳ ಸಹಯೋಗ

0
72

ಕುಂದಾಪುರ ಮಿರರ್ ಸುದ್ದಿ…

ಕುಂಭಾಶಿ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ರೋಟರಿ ಸಮುದಾಯದಳ ಕೋಟೇಶ್ವರ ಇವರ ಸಹಭಾಗಿತ್ವದಡಿ 321ನೇ ಪರಿಸರಸ್ನೇಹಿ ಭಾನುವಾರದ ಪ್ರಯುಕ್ತ ಕುಂಭಾಶಿ ಆನೆಗುಡ್ಡೆ ಶ್ರೀವಿನಾಯಕ ದೇಗುಲ ವಠಾರ ಸ್ವಚ್ಛತಾಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿತು.
ದೇಗುಲ ಸ್ವಚ್ಛತಾ ಕಾರ್ಯಕ್ಕೆ ದೇಗುಲದ ಮುಕ್ತೇಸರ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು.
ಸ್ವಚ್ಛತಾ ಕಾರ್ಯದ ಅಂಗವಾಗಿ ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ ಸ್ವಚ್ಛಾಗೃಹಿ ಪಂಚವರ್ಣ ಸಂಘಟನೆ ಪರವಾಗಿ ಲಲಿತಾ ಪೂಜಾರಿ ಹಾಗೂ ರೋಟರಿ ಸಮುದಾಯದಳದ ಪರವಾಗಿ ಸುಪ್ರಿತಾ ಪುರಾಣಿಕ್ ಇವರುಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.
ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ರೋಟರಿ ಸಮುದಾಯ ದಳದ ಪ್ರಮುಖರು ಉಪಸ್ಥಿತರಿದ್ದರು.

ನಡಿಗೆಗಾಗಿ ಪಾದರಕ್ಷೆ ಅಭಿಯಾನ
ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಮಾಜಸೇವಕ ಅವಿನಾಶ್ ಕಾಮತ್ ನೇತೃತ್ವದಲ್ಲಿ ಇದೇ ಅಕ್ಟೋಬರ್ 23,24,25ರಂದು ನಡೆಯುವ ನಡಿಗೆ ಹಳೆಯ ಪಾದರಕ್ಷೆ ಅಭಿಯಾನಕ್ಕೆ ಪಂಚವರ್ಣ ಸಂಘಟನೆ ಹಾಗೂ ರೋಟರಿ ಸಮುದಾಯ ಕೋಟೇಶ್ವರ ಕೈಜೋಡಿಸಿದ್ದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಹಳೆಯ ಪಾದರಕ್ಷೆ ತೆರವುಗೊಳಿಸುವ ಮೂಲಕ ಚಾಲನೆಗೊಳಿಸಿತು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ರವೀಂದ್ರ ಕೋಟ ಪರಿಸರಕ್ಕೆ ಮಾಲಿನ್ಯವಾಗುವ ಹಳೆಯ ಪಾದರಕ್ಷೆ ಎಸೆಯುವ ಮುನ್ನ ಅವುಗಳನ್ನು ಕೋಟದ ಪಂಚವರ್ಣ ಸಂಘಟನೆಯ ಕಛೇರಿಗೆ ಅಥವಾ ರೋಟರಿ ಸಮುದಾಯದಳ ಕೋಟೇಶ್ವರ ಇವರ ಬಳಿ ನೀವು ನಿಮ್ಮಲ್ಲಿರುವ ಹಳೆಯ ಪಾದರಕ್ಷೆ ನೀಡಿ ಎಂಬ ಸಂದೇಶವನ್ನು ನೀಡಿದರು.

LEAVE A REPLY

Please enter your comment!
Please enter your name here