ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ದುರ್ಗಾಹೋಮ ಕಾರ್ಯಕ್ರಮಗಳು ಜರಗುತ್ತಿದ್ದು ಭಾನುವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವು ಸೇವಾರ್ತಿಗಳಿಂದ ದುರ್ಗಾಹೋಮ ಕಾರ್ಯಕ್ರಮಗಳು ಜರಗಿದವು.
ವೇ.ಮೂ.ಮಧುಸೂದನ್ ಬಾಯರಿ ನೇತೃತ್ವದಲ್ಲಿ ನಡೆದ ಹೋಮಾಧಿಕಾರ್ಯಕ್ರಮದಲ್ಲಿ ಸಂಸದ ಕೋಟ ಹಾಗೂ ಪತ್ನಿ ಶಾಂತ ಮತ್ತು ಮಕ್ಕಳು ಇತರ ಸೇವಾರ್ತಿಗಳಾದ
ಲಕ್ಷ್ಮಿ ಮತ್ತು ನರಸಿಂಹ ಪೂಜಾರಿ ಹಾಗೂ ಕುಟುಂಬ ಅಪೂರ್ವ ನಿಲಯ ಹಾಡಿಕೆರೆ ಕೋಟ, ಸಜನಿ ಮತ್ತು ಆದಿತ್ಯ ಕೋಟ್ಯಾನ್ ಕುಟುಂಬದವರು, ನಡುಬೆಟ್ಟು ಮಣೂರು ಇವರು ಸೇವಾರ್ತಿಗಳಾಗಿ ಭಾಗಿಯಾದರು.
ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಸೇವಾರ್ತಿಗಳಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.
ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಸುಭಾಷ್ ಶೆಟ್ಟಿ, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ಕಾಂಚನ್, ಸುಬ್ರಾಯ ಜೋಗಿ, ಚಂದ್ರ ಅಚಾರ್ ಸಹಿತ ಹಲವರು ಉಪಸ್ಥಿತರಿದ್ದರು.
