ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೃಷಿಅರಣ್ಯ ರೈತರು ಮತ್ತು ತಂತ್ರಜ್ಞರ ಸಂಸ್ಥೆ ವತಿಯಿಂದ ದಿವಂಗತ ಎ ಎಸ್ ಸದಾಶಿವಯ್ಯ ಹೆಸರಿನಲ್ಲಿ ನೀಡಲಾಗುವ ರಾಜ್ಯ ಮಟ್ಟದ ಕೃಷಿಅರಣ್ಯದ ಉತ್ತಮ ಪ್ರೇರೇಪಕ ಪ್ರಶಸ್ತಿಯನ್ನು ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಮೊಳಹಳ್ಳಿ ಘಟಕದ ಹಿಂದಿನ ಫಾರೆಸ್ಟರ್ ಪ್ರಸ್ತುತ ಕುಂದಾಪುರ ಸಾಮಾಜಿಕ ಅರಣ್ಯದಲ್ಲಿರುವ ಶ್ರೀ ಮಂಜುನಾಥ್ ಗಣಪತಿ ನಾಯ್ಕ ರವರಿಗೆ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತು ಪದ್ಮಶ್ರೀ ಪುರಸ್ಕೃತ ಸುಶೀಲಮ್ಮ ರವರು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಮತ್ತು ಕೃಷಿ ಇಲಾಖೆಯ ನಿವೃತ ಹಿರಿಯ ಅಧಿಕಾರಿಗಳು, ರೈತರು ಮತ್ತು ಸಂಸ್ಥೆಯ ಸದಸ್ಯರು ಹಾಜರಿದ್ದರು. ಪ್ರಶಸ್ತಿ ಸ್ವೀಕರಿಸಿದ ಫಾರೆಸ್ಟರ್ ಗೆ ಮೊಳಹಳ್ಳಿ ಹಾಗೂ ಹಾರ್ದಲ್ಲಿ ಮಂಡಲ್ಲಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿಸಿದರು.
ಅರಣ್ಯ ಮತ್ತು ಕೃಷಿ ಇಲಾಖೆಯ ನಿವೃತ ಹಿರಿಯ ಅಧಿಕಾರಿಗಳು, ರೈತರು ಮತ್ತು ಸಂಸ್ಥೆಯ ಸದಸ್ಯರು ಹಾಜರಿದ್ದರು.
