ಬೈಂದೂರಿನ ರಿಯಲ್ ಎಸ್ಟೇಟ್ ಲಾಭಿಗಳ ಜತೆ ಸೇರಿ ಕುಂದಾಪುರ ರೈಲ್ವೇ ಬಳಕೆದಾರರಿಗೆ ಶಿವಮೊಗ್ಗ ಸಂಸದರಿಂದ ದ್ರೋಹ

0
665

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸ್ಥಳೀಯ ಜನರ ಅನುಕೂಲದ ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲುಗಡೆ ಮಾಡಬಾರದು ಬದಲಾಗಿ ಕೇರಳದವರಿಗಾಗಿ ಬೈಂದೂರಿನಲ್ಲಿ ಮಾತ್ರ ನಿಲುಗಡೆ ಮಾಡುವಂತೆ ರೈಲ್ವೇ ಸಚಿವ ಸೋಮಣ್ಣ ಅವರಿಗೆ ಅಗಸ್ಟ್ 8ನೇ ತಾರೀಕಿನಂದು ಶಿವಮೊಗ್ಗ ಬೈಂದೂರು ಸಂಸದ ರಾಘವೇಂದ್ರ ಪತ್ರ ಬರೆದಿರುವುದು ಬೆಳಕಿಗೆ ಬಂದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ವ್ಯಾಪ್ತಿಯ ನಿಲ್ದಾಣಕ್ಕೆ ನಿಲುಗಡೆ ಕೇಳಲಿ ಅದನ್ನು ಬಿಟ್ಟು ಮತ್ತೊಂದು ನಿಲ್ದಾಣದ ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಲು ಸಂಸದರಿಗೆ ಯಾವ ಅಧಿಕಾರವಿದೆ ಎಂದು ಕುಂದಾಪುರ ರೈಲ್ವೇ ಸಮಿತಿ ಪ್ರಶ್ನೆ ಮಾಡಿದೆ.
ಬೈಂದೂರಿನ ನಿಲ್ದಾಣದ ಸುತ್ತ ಮುತ್ತ ಹೂಡಿಕೆ ಮಾಡಿರುವ ರಿಯಲ್ ಎಸ್ಟೇಟ್ ಉದ್ಯಮಿಗಳ ತಾಳಕ್ಕೆ ಕುಣಿದು ಮತ್ತೊಂದು ನಿಲ್ದಾಣಕ್ಕೆ ದ್ರೋಹ ಎಸಗುವ ಬೇಕಾಬಿಟ್ಚಿ ಪತ್ರಗಳಿಗೆ ಸಹಿ ಹಾಕುವ ಮೊದಲು ಸಂಸದರು ಈ ಪತ್ರವನ್ನು ಓದಿರುತ್ತಾರ ಅಥವಾ ಯಾರದ್ದೋ ತಾಳಕ್ಕೆ ಕುಣಿದು ಸಹಿ ಹಾಕುವ ಮೂಲಕ ರಿಯಲ್ ಎಸ್ಟೇಟ್ ಲಾಭಿಗಳ ಜತೆ ಸಂಸದರೂ ಸೇರಿದ್ದಾರ ಎಂಬ ಗೊಂದಲ ಈಗ ಮೂಡಿದೆ ಎಂದು ಕುಂದಾಪುರ ರೈಲು ಪ್ರಯಾಣಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರಿನ ಮತದಾರರಾಗಿ ಕುಂದಾಪುರ ರೈಲು ನಿಲ್ದಾಣವನ್ನು ಬಳಸುವ ಅಸಂಖ್ಯಾತ ಮತದಾರರಿದ್ದು ಈ ಮತಗಳಿಂದ ಗೆದ್ದು ತನ್ನ ಮತದಾರರಿಗೇ ರೈಲು ನಿಲುಗಡೆ ನೀಡ ಬೇಡಿ ಎಂದು ದ್ರೋಹ ಎಸಗಿದ ಈ ಕ್ರತ್ಯಕ್ಕೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ಕೊಡಲಾಗುವುದು ಎಂದೂ ಅಂಪಾರು ಶಂಕರನಾರಾಯಣ ಹಾಲಾಡಿ ವಂಡ್ಸೇ ಭಾಗದ ಪ್ರಯಾಣಿಕ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸೋಮಣ್ನನವರಿಗೆ ಬರೆದ ಪತ್ರದಲ್ಲಿ ಕುಂದಾಪುರದಿಂದ ಕೊಲ್ಲೂರಿಗೆ 52 ಕಿಲೋಮೀಟರ್ ಇದೆ ಎಂಬ ಸುಳ್ಳನ್ನು ಬರೆದಿರುವ ಸಂಸದರು ಈ 52 ಕಿಲೋಮೀಟರ್ ಹೇಗೆ ಎಂಬುದನ್ನು ಸಾಭೀತು ಮಾಡಬೇಕು ಎಂದು ರೈಲ್ವೇ ಹೋರಾಟಗಾರರು ಸವಾಲು ಹಾಕಿದ್ದಾರೆ.
ಕುಂದಾಪುರದಿಂದ ಬಸ್ರೂರು ಮಾರ್ಗದಲ್ಲಿ ಕೇವಲ 35 KM ದೂರವಿರುವ ಕೊಲ್ಲೂರಿಗೆ ಪ್ರಯಾಣಿಕನೊಬ್ಬ ಟಾಕ್ಸೀ ಮೂಲಕ ರೈಲು ಬೈಂದೂರಿಗೆ ತಲುಪುವುದರೊಳಗೆ ಕೊಲ್ಲೂರಿಗೆ ತಲುಪ ಬಹುದಾಗಿದೆ. ಬೈಂದೂರಿನಿಂದ ಇಳಿದ ಮೇಲೂ ಮತ್ತೆ ಸುಮಾರು 30 ಕಿಲೋಮೀಟರ್ ಪ್ರಯಾಣ ಮಾಡ ಬೇಕಾಗಿರವಾಗ ಕುಂದಾಪುರದಿಂದ ಕೊಲ್ಲೂರು ದೂರ ಮತ್ತು ಬೈಂದೂರು ಹತ್ತಿರ ಎಂಬ ಹೇಳಿಕೆಗೆ ಆದಾರ ಯಾವುದು ಎಂಬುದನ್ನು ಸಂಸದರು ತಿಳಿಸಬೇಕಿದೆ ಎಂದು ಸಮಿತಿ ತಿಳಿಸಿದೆ.
ಕುಂದಾಪುರದಲ್ಲಿ ನಿಲ್ಲುವ ರೈಲುಗಳಲ್ಲಿ ಕೇವಲ ಕೊಲ್ಲೂರಿಗೆ ಬರುವವರು ಮಾತ್ರವಲ್ಲದೇ ಕುಂದಾಪುರ ಭಾಗದ ಕೇರಳ ಮತ್ತು ಉತ್ತರ ಭಾರತದ ಯಾತ್ರಿಗಳು ಹತ್ತಿಳಿಯುತ್ತಾರೆ ಹೀಗಿರುವಾಗ ಕೊಲ್ಲೂರಿಗೆ ಬರುವ ಕೇರಳದವರಿಗಾಗಿ ರೈಲುಗಳು ಬೈಂದೂರಲ್ಲಿ ಮಾತ್ರ ನಿಲ್ಲಬೇಕು ಎಂದು ಸಂಸದರು ಪತ್ರ ಬರೆದಿರುವುದನ್ನು ನೋಡಿದರೆ ಸಂಸದರಿಗೆ ಕೇರಳಿಗರ ಹಿತಾಸಕ್ತಿ ಮುಖ್ಯವೇ ಹೋರತೂ ಸ್ಥಳೀಯರಿಂದ ತಮ್ಮ ರಿಯಲ್ ಎಸ್ಟೇಟ್ ಲಾಭ ಸಾದ್ಯವಿಲ್ಲ ಎಂಬ ಭಾವನೆ ಬಂದಿದೆಯೇ ಎಂಬುದನ್ನು ತಿಳಿಸಲಿ ಎಂದು ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.
ಬೈಂದೂರು ರೈಲು ನಿಲ್ದಾಣದ ಸುತ್ತಾ ಮುತ್ತಾ ಇರುವ ಭೂಮಿಯ ದಾಖಲಾತಿ ಮತ್ತು ಸಂಸದರ ಸುತ್ತಾ ಮುತ್ತ ಸುಳಿದಾಡುವವರ ದಾಖಲೆಗಳನ್ನು ಪರೀಶಿಲನೆ ಮಾಡಿದರೆ ಸಂಸದರ ವೀವೆಚನೆ ರಹಿತ ಪತ್ರ ಬರೆದಿರುವುದರ ಕಾರಣ ತಿಳಿಯಲಿದೆ ಎಂದು ರೈಲು ಹೋರಾಟಗಾರರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here