ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಣಿಪಾಲ ಇವರ ಆಶ್ರಯದಲ್ಲಿ ಸುಣ್ಣಾರಿಯ ವಿವೇಕೋದಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಬರೋಬ್ಬರಿ 17 ಪ್ರಥಮ ಸ್ಥಾನಗಳನ್ನು ಗಳಿಸುವುದರ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರೌಢ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ
ಪ್ರಥಮ ಸ್ಥಾನ: ಸೃಜನ್ ಶೆಟ್ಟಿ (ಮಿಮಿಕ್ರಿ), ಧನ್ವಿ (ಸಂಸ್ಕೃತ ಧಾರ್ಮಿಕ ಪಠಣ), ತುಷಾರ (ರಂಗೋಲಿ), ಫಾತಿಮಾ ನಜೀಫಾ (ಅರೇಬಿಕ್ ಧಾರ್ಮಿಕ ಪಠಣ), ಋತು & ತಂಡ (ಕವ್ವಾಲಿ), ಗರ್ವಿತಾ & ತಂಡ (ಜಾನಪದ ನೃತ್ಯ).
ದ್ವಿತೀಯ ಸ್ಥಾನ: ವೃದ್ಧಿ (ಭಾವಗೀತೆ), ಸ್ಫೂರ್ತಿ (ಕನ್ನಡ ಭಾಷಣ), ಪೂರ್ವಿ (ಚಿತ್ರಕಲೆ), ಸಮೃದ್ಧಿ (ಕನ್ನಡ ಪ್ರಬಂಧ), ರಿಷಿ ಹಾಗೂ ವಿಲೋಕ್ ರಂಜನ್ (ಕ್ವಿಜ್), ರಾನೀಯ (ಹಿಂದಿ ಭಾಷಣ), ಋತು (ಗಝಲ್).
ತೃತೀಯ ಸ್ಥಾನ: ಹಿತಾಶ್ರೀ (ಕನ್ನಡ ಕವನ ವಾಚನ), ಮಹಾತೇಜಾ (ಇಂಗ್ಲಿಷ್ ಭಾಷಣ), ಅವನಿ ಶೆಟ್ಟಿ (ಸಂಸ್ಕೃತ ಭಾಷಣ).
ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರೌಢ ವಿಭಾಗದಲ್ಲಿ (8 ರಿಂದ 10ನೇ ತರಗತಿ)
ಪ್ರಥಮ ಸ್ಥಾನ: ಪ್ರಗತಿ ಜಿ. ಆಚಾರ್ (ಕನ್ನಡ ಪ್ರಬಂಧ), ಹರ್ಷಿತಾ ಆರ್. (ಇಂಗ್ಲಿಷ್ ಭಾಷಣ), ದಶಮಿ ಶೆಟ್ಟಿ (ಕನ್ನಡ ಭಾಷಣ), ಧನುಷ್ (ಹಿಂದಿ ಭಾಷಣ), ಪ್ರತೀಕ್ ಜಿ.ಎಮ್. (ಆಶುಭಾಷಣ ಹಾಗೂ ಚರ್ಚಾಸ್ಪರ್ಧೆ – ಎರಡರಲ್ಲೂ ಪ್ರಥಮ), ಶ್ರೀಲಕ್ಷ್ಮಿ ರಾವ್ (ಜಾನಪದ ಗೀತೆ), ಆಲಿಯಾ ಹಲೀಮ್ ಖಾನ್ (ಗಝಲ್).
ದ್ವಿತೀಯ ಸ್ಥಾನ: ಆಲಿಯಾ ಹಲೀಮ್ ಖಾನ್ & ತಂಡ (ಕವ್ವಾಲಿ), ಅಕ್ಷಯ್ (ಚಿತ್ರಕಲೆ), ಪ್ರಣಿತ ಕೇಶವ್ (ಸಂಸ್ಕೃತ ಭಾಷಣ), ತ್ರಿಶೂಲ್ (ಮಿಮಿಕ್ರಿ), ಸಂಜನ್ (ಸಂಸ್ಕೃತ ಧಾರ್ಮಿಕ ಪಠಣ), ಅಭಿಜಿತ್ (ಕವನ/ಪದ್ಯ ವಾಚನ).
ತೃತೀಯ ಸ್ಥಾನ: ಶ್ರೀಲಕ್ಷ್ಮಿ ರಾವ್ (ಭಾವಗೀತೆ), ರಾಹೀಶ್ ಹುಸೇನ್ (ಅರೇಬಿಕ್ ಧಾರ್ಮಿಕ ಪಠಣ), ಪಂಚಮಿ ಶೆಟ್ಟಿ (ಭರತನಾಟ್ಯ).
ಹಿರಿಯ ಪ್ರಾಥಮಿಕ ವಿಭಾಗ (5 ರಿಂದ 7ನೇ ತರಗತಿ)
ಪ್ರಥಮ ಸ್ಥಾನ: ಸಾನಿಧ್ಯ ಸಿ.ಕೆ. (ಕಥೆ ಹೇಳುವುದು), ವೆನಿಶ ಸಿ. ಭಂಡಾರಿ (ಕವನ/ಪದ್ಯ ವಾಚನ), ಸನ್ನಿಧಿ ಶೆಟ್ಟಿ (ಹಿಂದಿ ಕಂಠಪಾಠ).
ದ್ವಿತೀಯ ಸ್ಥಾನ: ವಿಸ್ಮಯಿ (ಭಕ್ತಿಗೀತೆ), ಐಸಿರಿ ಶೆಟ್ಟಿ (ಪ್ರಬಂಧ ರಚನೆ).
ತೃತೀಯ ಸ್ಥಾನ: ಯೂಸುಫ್ ಖಾನ್ (ಅರೇಬಿಕ್ ಧಾರ್ಮಿಕ ಪಠಣ), ಅಭಿಷೇಕ್ ಎನ್. (ಮಿಮಿಕ್ರಿ), ಸುಮೇದ್ ಎಸ್. ಶೆಟ್ಟಿ (ಆಶುಭಾಷಣ), ಮೊಹಮ್ಮದ್ ಆಹಿಲ್ (ಕನ್ನಡ ಕಂಠಪಾಠ).
ಕಿರಿಯ ಪ್ರಾಥಮಿಕ ವಿಭಾಗ (1 ರಿಂದ 4ನೇ ತರಗತಿ)
ದ್ವಿತೀಯ ಸ್ಥಾನ: ರಮಾನಾಥ್ ಕಿಣಿ (ಭಕ್ತಿಗೀತೆ), ಧ್ರುವಿ ಪಿ. (ಕಥೆ ಹೇಳುವುದು), ಲಿಖಿತ್ (ಆಶುಭಾಷಣ), ಜಾಹ್ನವಿ (ಇಂಗ್ಲಿಷ್ ಕಂಠಪಾಠ).
ತೃತೀಯ ಸ್ಥಾನ: ರುಷಬ್ ಕುಲಾಲ್ (ಕ್ಲೇ ಮಾಡ್ಲಿಂಗ್), ಆರ್ಯನ್ ಆರ್. (ಸಂಸ್ಕೃತ ಧಾರ್ಮಿಕ ಪಠಣ), ಯಕ್ಷಿತ್ ಡಿ. ಕುಲಾಲ್ (ಛದ್ಮವೇಷ).
ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಅವರ ಯಶಸ್ಸಿಗೆ ಶ್ರಮಿಸಿದ ಮಾರ್ಗದರ್ಶಿ ಶಿಕ್ಷಕ ವೃಂದಕ್ಕೆ ಹಾಗೂ ಪೋಷಕರಿಗೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ಅವರು ಅಭಿನಂದನೆ ಸಲ್ಲಿಸಿದ್ದಾರೆ.
