ಕೋಟದಲ್ಲಿ ಪಂಚವರ್ಣ ಸಂಘಟನೆ ಹಮ್ಮಿಕೊಂಡ ಸದ್ಭಾವನಾ ಶೀರ್ಷಿಕೆಯಡಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ
ನಾಡೋಜ ಜಿ.ಶಂಕರ್ ಜಗತ್ತಿಗೆ ಸಂತನಂತೆ ಸೇವೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಡೋಜ ಜಿ. ಶಂಕರ್ ರವರ ವ್ಯಕ್ತಿತ್ವ ವಿಭಿನ್ನವಾದದ್ದು. ಸಮಾಜಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದ ಮಹಾನ್ ಶಕ್ತಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟದ ಮಾಂಗಲ್ಯ ಮಂದಿದ ಸಮೀಪ ಹಿರೇ ಮಹಾಲಿಂಗೇಶ್ವರ ರಥಬೀದಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸದ್ಭಾವನಾ- 2026ರ ಶೀರ್ಷಿಕೆಯಡಿ ನಡೆದ ಪಂಚವರ್ಣ ಕನ್ನಡ ರಾಜ್ಯೋತ್ಸವ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ ಜಿ. ಶಂಕರ್ ಎನ್ನುವ ಓರ್ವ ವ್ಯಕ್ತಿಯಾಗಿರದೆ ಅವರೊಬ್ಬ ಶಕ್ತಿಯಾಗಿ ಸಮಾಜದ ಕಣ್ಣು ತೆರೆಸುವುದರ ಜೊತೆಗೆ ಜಗತ್ತಿಗೆ ಸಂತನಂತೆ ಕಾರ್ಯನಿರ್ವಹಿಸಿದ ಮೇಧಾವಿ. ಅಂತಹ ಶಕ್ತಿ ಯಾವುದೇ ಪ್ರಶಸ್ತಿ ಹಿಂದೆ ಹೊದವರಲ್ಲಿ ಆದರೆ ಅವರು ತನ್ನ ಹುಟ್ಟೂರ ಸಮೀಪ ಪಂಚವರ್ಣ ಎಂಬ ಒಂದು ಸಮಾಜಮುಖಿ ಪರಿಸರದ ಬಗ್ಗೆ ಕಾಳಜಿ ಇರುವ ಸಂಸ್ಥೆಯ ಗೌರವಗೆ ಪಾತ್ರರಾಗಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಪಂಚವರ್ಣ ರಾಜ್ಯೋತ್ಸವ ಗೌರವ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ.ಜಿ.ಶಂಕರ್ ನಿಮ್ಮ ಗೌರವವನ್ನು ವಿನಂಬ್ರತೆಯಿಂದ ಸ್ವೀಕರಿಸಿದ್ದೇನೆ ಆದರೆ ಸನ್ಮಾನ ಪ್ರಶಸ್ತಿಗಳು ತೆರೆಯ ಮರೆಯಲ್ಲಿದ್ದ ಅದೆಷ್ಟೋ ಸಾಧಕರಿದ್ದಾರೆ ಅಂತವರನ್ನು ಹುಡುಕಿ ಗೌರವಿಸಿ ಪಂಚವರ್ಣ ಪರಿಸರ ಕಾಳಜಿ ಕಾರ್ಯಕ್ರಮಗಳು ಮನಮುಟ್ಟುವಂತದ್ದು ಎಂದು ಪಂಚವರ್ಣ ಸಮಾಜಮುಖಿ ಕಾರ್ಯಕ್ಕೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸದಾ ನಿಲ್ಲಲಿದೆ ಎಂದರು.
ನಾಡೋಜ ಡಾ.ಜಿ ಶಂಕರ್ ರವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನಿಸಿದರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಸಂತೋಷ್ ಮೇಷ್ಟ್ರು ವಿದ್ಯಾನಿಧಿಯನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಪಂಚವರ್ಣ ವಿಶೇಷ ಪುರಸ್ಕಾರವನ್ನು ಕನ್ನಡಪರ ಹೋರಾಟಗಾರ ಯುವ ಉದ್ಯಮಿ ಕೆ.ಎನ್ ಶ್ರೀನಿವಾಸ ಜೋಗಿ ಬೆಂಗಳೂರು ಇವರಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೀಡಿದರು.
ಅಂತಾರಾಷ್ಟ್ರೀಯ ಕರಾಟೆಪಟು ಹರ್ತಟ್ಟು ವಿಜಯ ಪೂಜಾರಿ ಮುಂಬೈ ವಿಶೇಷ ಅಭಿನಂದನೆಯನ್ನು ಮುಂಬೈ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ ಗಿಳಿಯಾರು ನೀಡಿ ಗೌರವಿಸಿದರು.
ಸ್ಥಳೀಯ ಚೆಚ್ಕೆರೆ ಅಂಗನವಾಡಿಗೆ ಸೃಷ್ಠಿ ಇಂಜಿನಿಯರಿಂಗ್ ಮಣಿಪಾಲ ಸಮವಸ್ತ್ರವನ್ನು ಹಸ್ತಾಂತರಿಸಿದರು.
ಕಾರ್ಕಳದ ಹೊಸಬೆಳಕುಅನಾಥಾಶ್ರಮದ ಮುಖ್ಯಸ್ಥೆ ತನುಲ ಇವರಿಗೆ ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ದಿನಸಿ ಕಿಟ್ ಅನ್ನು ಹಸ್ತಾಂತರಿಸಿದರು.
ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಅನಾರೋಗ್ಯ ನಿಧಿಯನ್ನು ನಾರಾಯಣ ಆಚಾರ್ ಪರವಾಗಿ ಸಹೋದರ ಸೀತರಾಮ ಆಚಾರ್ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಎರಡು ಲಕ್ಷ ರೂ ವೆಚ್ಚದಲ್ಲಿ ನೀಡಲಾಗುವ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಶೈಕ್ಷಣಿಕ ನಿಧಿಯನ್ನು ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಫಲಾನುಭವಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಈ ವರ್ಷದ ಹಸಿರು ಹೆಜ್ಜೆ ಅತ್ಯುತ್ತಮ ಗಿಡ ಪೋಷಣೆಗಾಗಿ ಮೂವರು ವಿದ್ಯಾರ್ಥಿಗಳಿ ಬೆಳ್ಳಿ ನಾಣ್ಯವನ್ನು ಪಂಚವರ್ಣದ ಸ್ಥಾಪಕ ಶೇವಧಿ ಸುರೇಶ್ ಗಾಣಿಗ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.
ನಾಡೋಜರ ಕುರಿತಾಗಿ ಗುತ್ತಿಗೆದಾರ ಸುರೇಶ್ ಕಾಂಚನ್ ಬಾರಿಕೆರೆ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ರವೀಶ್ ಶ್ರೀಯಾನ್ ಕೊರವಡಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಗೌರವ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆಗೈದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಯೂರಿ ನೃತ್ಯ ತಂಡ ಕುಂಭಾಶಿ, ಹಂದಟ್ಟು ಮಹಿಳಾ ಬಳಗ,ಪಂಚವರ್ಣ ಮಹಿಳಾ ಮಂಡಲ,ಕಲ್ಮಾಡಿ ಅಂಗನವಾಡಿ ಇವರಿಂದ ನೃತ್ಯ ಸಿಂಚನ,ಚೈತನ್ಯ ಕಲಾವಿದರು ಬೈಲೂರು ಇವರಿಂದ ಸಾಮಾಜಿಕ ನಗೆನಾಟಕ ರಾಘು ಮಾಸ್ಟ್ರು ಪ್ರದರ್ಶನಗೊಂಡಿತು.
