ಕುಂದಾಪುರ: ನಮ್ಮೂರ ದೀಪಾವಳಿ ನಮ್ಮೂರ ಪ್ರತಿಭೆಗಳಿಗೆ ಕಾರ್ಯಕ್ರಮ

0
29

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಅಕ್ಷರ ಸಾಂಸ್ಕೃತಿಕ ಸಂಸ್ಥೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಘಟನೆ ಆಶ್ರಯದಲ್ಲಿ ಇಂದು ಕುಂದಾಪುರದ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸ್ಥಳೀಯ ಮಹಿಳೆಯರಿಗೆ, ಮಕ್ಕಳಿಗೆ, ಯುವಜನರಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಂಡು ನಮ್ಮೂರ ದೀಪಾವಳಿ ನಮ್ಮೂರ ಪ್ರತಿಭೆಗಳಿಗೆ ಕಾರ್ಯಕ್ರಮ ನಡೆಯಿತು.
ಸುಮಾರು 60 ಮಂದಿ ಸ್ಥಳೀಯರು ಗೂಡು ದೀಪ, ರಂಗೋಲಿ, ಸಂಗೀತ ಕುರ್ಚಿ,ಸೀರೆ, ಚೂಡಿದಾರಕ್ಕೆ ನಿಖರ ದರ ಹೇಳುವುದು,ಬೈಕ್, ಸೈಕಲ್ ಸ್ಲೋ ರೇಸ್, ರಿಂಗ್ ಎಸೆತ ಮುಂತಾದ ಸ್ಪರ್ಧೆಗಳಲ್ಲಿ ನೂರಾರು ಮಂದಿ ಭಾಗವಹಿಸಿ ಬಹುಮಾನ ಪಡೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ತಾಲೂಕು ಅಧ್ಯಕ್ಷ ವಿಶ್ವನಾಥ ದಾರಿ ಮನೆ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿ ಬಹುಮಾನ ವಿತರಿಸಿದರು.
ಅಧ್ಯಕ್ಷತೆಯನ್ನು ಅಕ್ಷರ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ರವಿ ವಿಎಂ ಮಾತನಾಡಿದರು.ವೇದಿಕೆಯಲ್ಲಿ ಮಂಜುನಾಥ ಶೋಗನ್ ಸ್ರಷ್ಠಿ ಚಂದನ್, ಕವಿತಾ ಇದ್ದರು.
ಸ್ವಾಗತ ರಾಘವೇಂದ್ರ ದೋಣಿಮನೆ ಮಾಡಿದರು. ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here