ಐರೋಡಿ ಆಡಳಿತಾಧಿಕಾರಿ ಚಲುವರಾಜು ಪದೋನ್ನತಿ, ಬಿಳ್ಕೋಡುಗೆ, ಸನ್ಮಾನ

0
9

ಪ್ರಾಮಾಣಿಕ ಸೇವಾಕಾರ್ಯ ಬಣ್ಣನೆ -ಐರೋಡಿ ವಿಠ್ಠಲ್ ಪೂಜಾರಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗ್ರಾಮ ಆಡಳಿತಾಧಿಕಾರಿಯಾಗಿ ಚಲುವರಾಜ್ ಇವರ ಸೇವೆಯಲ್ಲಿ ಪ್ರಾಮಾಣಿಕತೆ ನಿಜಕ್ಕೂ ಶ್ಲಾಘನೀಯ ಎಂದು ಐರೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು.
ಇತ್ತೀಚಿಗೆ ಐರೋಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ
ಐರೋಡಿ ಮತ್ತು ಬಾಳ್ಕುದ್ರು ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪದೋನ್ನತಿ ಹೊಂದಿದ ಗ್ರಾಮ ಆಡಳಿತಾಧಿಕಾರಿ ಚೆಲುವರಾಜ್ ಇವರನ್ನು ಐರೋಡಿ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮ ವ್ಯವಸ್ಥೆಯಲ್ಲಿ ಕಾರ್ಯಭಾರ ಕ್ಲಿಷ್ಟಕರ ದಿನಕ್ಕೊಂದರಂತೆ ಜನಸಾಮಾನ್ಯರ ಸಮಸ್ಯೆಯ ನಡುವೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಚಲುವರಾಜ್ ಇವರದ್ದಾಗಿದೆ ಎಂದು ಅವರ ಆಡಳಿತ ವ್ಯವಸ್ಥೆ ದಿನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಚಲುಚರಾಜ್ ಇವರನ್ನು ಗ್ರಾಮಪಂಚಾಯತ್ ಹಾಗೂ ಗ್ರಾಮಸ್ಥರ ಪರವಾಗಿ ಗೌರವ ಸಂಮ್ಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಸೂರಜ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಾಸುದೇವ ಕೋಟ್ಯಾನ್, ನಿಕಟಪೂರ್ವ ಸದಸ್ಯರಾದ ಶಿವರಾಮ್ ಶ್ರೀಯಾನ್ ಮತ್ತು ಶೇಖರ ಪೂಜಾರಿ, ಗ್ರಾಮ ಸಹಾಯಕರಾದ ನರಸಿಂಹ ಪೂಜಾರಿ, ಸ್ಥಳೀಯರಾದ ಶಂಕರ ಕುಲಾಲ್, ಸುರೇಶ ಕುಂದರ್, ಸಂಜೀವ ಪೂಜಾರಿ, ಅರವಿಂದ ಹೆಬ್ಬಾರ್, ಮಂಜುನಾಥ ಬಾಳ್ಕುದ್ರು, ಪಿ ಡಿ ಓ ಪ್ರಶಾಂತ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾಗೀರಥಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣೇಶ್ವರಿ, ಎಸ್ ಡಿಎ ಶೇಖರ, ತೋಟಗಾರಿಕೆ ಇಲಾಖೆ ಅಧಿಕಾರಿ ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಯವರು , ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here