ಕುಂದಾಪುರ ಕಾಂಗ್ರೆಸ್ ನಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ

0
21

ಕುಂದಾಪುರ :ಮಾಜಿ ಪ್ರಧಾನಿ ಇಂದಿರಾಗಾಂಧಿ ಬಲಿಷ್ಠ, ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತದ ಶಿಲ್ಪಿ, ದೇಶದ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಿ ಹುತಾತ್ಮರಾದವರು. ಪ್ರತ್ಯೇಕ ರಾಷ್ಟ್ರದ ಕೂಗು ಹೇಳುತ್ತಿದ್ದ ಖಲಿಸ್ತಾನಿಗಳನ್ನು ಬಗ್ಗು ಬಡಿದು ದೇಶ ರಕ್ಷಣೆ ಮಾಡಿ ಅದಕ್ಕಾಗಿ ಪ್ರಾಣತೆತ್ತ ಮಹಾತಾಯಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ ಹೇಳಿದರು.

ಇಲ್ಲಿನ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಬಳಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಉಚಿತ ಉಪಹಾರ ನೀಡಿ ಮಾತನಾಡಿದರು.
ಕಾಂಗ್ರೆಸ್ ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ಇಂದಿರಾಗಾಂಧಿಯ ಆಶಯದಂತೆ, ದೇಶದ ಕಟ್ಟ ಕಡೆಯ ಜನರನ್ನು ಸಮಾನತೆಯ ಮೂಲಕ ಮುಖ್ಯ ವಾಹನಿಗೆ ತಂದಿದ್ದು ಕಾಂಗ್ರೆಸ್ ಸರಕಾರ. ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳು ಅದರ ಮುಂದುವರಿದ ಭಾಗ ಎಂದರು.
ಸಭೆಯಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ, ಮಾಜಿ ಪುರಸಭಾ ಅಧ್ಯಕ್ಷ ಹಾರೂನ್ ಸಾಹೇಬ್, ಚಂದ್ರ ಅಮೀನ್, ನಾರಾಯಣ ಆಚಾರಿ, ಅಬ್ಬು ಅಹ್ಮದ್, ರೇವತಿ ಶೆಟ್ಟಿ, ಕೋಡಿ ಪ್ರಭಾಕರ, ಗಣೇಶ್ ವಿ, ಅಶೋಕ್ ಸುವರ್ಣ, ವಿಜಯಾಧರ್ , ಮಾಣಿ ಉದಯ, ರಿಯಾಜ್ ಕೊಡಿ, ಆಶಾ ಕರ್ವಾಲೋ, ಕುಮಾರ ಖಾರ್ವಿ, ಕೇಶವ ಭಟ್, ಜೋಸೆಫ್ ರೆಬೆಲ್ಲೊ, ಸದಾನಂದ ಖಾರ್ವಿ, ಅರುಣ್ ಪಟೇಲ್, ವೇಣುಗೋಪಾಲ್ , ಸಂದೇಶ್ ಕೊಡಿ, ವೇಲಾ ಬ್ರಗಾಂಜ, ವಿವೇಕ್ ಚರ್ಚೆ ರಸ್ತೆ , ಡಾಲ್ಫಿ ಡಿ ಕೋಸ್ಟಾ , ಮ್ಯಾಥ್ಯೂ ಡಿಸಿಲ್ವಾ ಇನ್ನಿತರ ಉಪಸ್ಥಿತರಿದ್ದರು .

ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ , ನಿರೂಪಿಸಿ , ಜ್ಯೋತಿ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here