ನವೆಂಬರ್ 30ರಂದು ಜ್ಞಾನಸರಸ್ವತಿ ಪಿಯು ಕಾಲೇಜಿನಲ್ಲಿ ವ್ಯವಹಾರ ಮೇಳ “ಬಿಝ್ ಕಾರ್ನಿವಾಲ್ 2026”

0
6

ಕುಂದಾಪುರ ಮಿರರ್ ಸುದ್ದಿ…

ಸಿದ್ಧಾಪುರ: ಇಲ್ಲಿನ ಸುಮುಖ ಎಜ್ಯುಕೇಷನಲ್ ಟ್ರಸ್ಟ್ (ರಿ) ಸಿದ್ದಾಪುರ ಪ್ರವರ್ತಿತ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾಗಿರುವ ಜ್ಞಾನಸರಸ್ವತಿ ಪಿಯು ಕಾಲೇಜಿನ ಆವರಣದಲ್ಲಿ ನವೆಂಬರ್ 30ರಂದು ಬೆಳಿಗ್ಗೆ 8.30ರಿಂದ ವಿದ್ಯಾರ್ಥಿಗಳಿಗಾಗಿ ವಾಣಿಜ್ಯ ಜ್ಞಾನ ತಿಳಿಯುವ ವ್ಯವಹಾರ ಮೇಳ ಬಿಝ್ ಕಾರ್ನಿವಾಲ್ 2026ನ್ನು ಹಮ್ಮಿಕೊಳ್ಳಲಾಗಿದೆ.

ನವೆಂಬರ್ 30ರಂದು ಬೇಳಿಗ್ಗೆಯಿಂದ ಸಂಜೆಯ ವರೆಗೆ ಜ್ಞಾನಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಾಣಿಜ್ಯ ಮಳಿಗೆಗೆಳನ್ನು ನಡೆಸುತ್ತಿದ್ದು, ಸುಮಾರು 35ಕ್ಕೂ ಅಧಿಕ ಮಳಿಗೆಗಳಲ್ಲಿ ವ್ಯಾಪಾರ ನಡೆಯುತ್ತದೆ. ಶಿಕ್ಷಣದ ಜೊತೆಗೆ ಬದುಕಿನ ಭಾಗವಾಗಿರುವ ವ್ಯವಹಾರ (ವ್ಯಾಪಾರ ಮತ್ತು ಖರೀದಿ) ತಿಳುವಳಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ಧೇಶ ಹೊಂದಿದೆ.

ಬಿಝ್ ಕಾರ್ನಿವಾಲ್ 2026ನ್ನು ವಂಡಾರಿನ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸಂಪತ್ ಶೆಟ್ಟಿ ಚಾಲನೆ ನೀಡಲಿದ್ದು, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಹಾಗೂ ಸೃಷ್ಟಿ ಇನ್ಫೋಟೆಕ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಹರ್ಷವರ್ಧನ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭ ಕುಂದಾಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳೂ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ. -ಬಿ.ಎಸ್.ಸುರೇಶ್ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟೀ , ಸುಮುಖ ಎಜ್ಯುಕೇಷನಲ್ ಟ್ರಸ್ಟ್ (ರಿ) ಸಿದ್ದಾಪುರ ಹಾಗೂ ಅಧ್ಯಕ್ಷರು, ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಿದ್ಧಾಪುರ
ಯು. ಪಾಂಡುರಂಗ ಪಡಿಯಾರ್, ಕಾರ್ಯದರ್ಶಿಗಳು, ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಿದ್ಧಾಪುರ

ಅಮರೇಶ್ ಹೆಗ್ಡೆ ಪ್ರಾಂಶುಪಾಲರು, ಜ್ಞಾನಸರಸ್ವತಿ ಪಿಯು ಕಾಲೇಜು, ಸಿದ್ಧಾಪುರ ಹಾಗೂ ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ.

LEAVE A REPLY

Please enter your comment!
Please enter your name here