ಮರವಂತೆ ಬೀಚ್ ಸುರಕ್ಷತೆ – ಸುಂದರೀಕರಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸಚಿವರಲ್ಲಿ ಮನವಿ – ಎನ್.ಹೆಚ್.ಎ.ಐ‌ ಅಧಿಕಾರಿಗಳಿಂದ ಪರಿಶೀಲನೆ

0
495

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ -66 ರ ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ ಬೈಪಾಸ್, ಬೈಂದೂರು ತಾಲೂಕು ಕಛೇರಿ ಬಳಿ ಅಂಡರ್ ಪಾಸ್ ನಿರ್ಮಿಸುವಂತೆ ಹಾಗೂ ಮರವಂತೆ ಬೀಚ್ ಬಳಿ ರಸ್ತೆ ಸುರಕ್ಷತೆ ಹಾಗೂ ಸುಂದರೀಕರಣ ಮಾಡಲು ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಿಂದ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಚೀಫ್ ಜನರಲ್ ಮ್ಯಾನೇಜರ್ ವಿಶಾಲ್ ಗುಪ್ತಾ ಅವರು ಬೈಂದೂರು ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ ವಿವರ ಪಡೆದುಕೊಂಡರು.

ಇನ್ನು ಅವರೊಂದಿಗೆ ಸ್ಥಳೀಯರಾದ ಉದ್ಯಮಿ ವೆಂಕಟೇಶ್ ಕಿಣಿ, ಮಂಗಳೂರು ವಿಭಾಗದ ಪಿ.ಡಿ ಲಿಂಗೇಗೌಡ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here