ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಭೇಟಿ, ಮನವಿ

0
448

ಕುಂದಾಪುರ ಮಿರರ್ ಸುದ್ದಿ…

ಕೋಟ: ಮುಂದಿನ ಅಧಿವೇಶನಲ್ಲಿ ಟೈಲರ್ಸ್ ರವರ ಬೇಡಿಕೆ ಪರವಾಗಿ ಸದನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.

ಭಾನುವಾರ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ವತಿಯಿಂದ ಮುಂದಿನ ಅಧಿವೇಶನದಲ್ಲಿ ಟೈಲರ್ಸ್ ರವರ ಬೇಡಿಕೆಯನ್ನು ಈಡೇರಿಸುವಂತೆ ಸದನದಲ್ಲಿ ಮುಖ್ಯ ಮಂತ್ರಿಗಳ ಗಮನ ಸೆಳೆಯುವಂತೆ ಅವರ ಮನೆಯಲ್ಲಿ ನೀಡಲಾದ ಮನವಿಗೆ ಅವರು ಸ್ಪಂದಿಸಿ ಮಾತನಾಡಿ ಕಳೆದ 20 ವರ್ಷದಿಂದ ರಾಜ್ಯದ ಟೈಲರ್ಸ್ ಸಂಘಟನೆಯೊಂದಿಗೆ ಅವಿನಾಭಾವ ಸಂಭದ ಇದ್ದು ಈ ಹಿಂದೆ ಕೂಡಾ ಅನೇಕ ಬೇಡಿಕೆಗೆಯನ್ನು ಸದನದಲ್ಲಿ ಗಮನ ಸೆಳೆದಿದ್ದು ಈ ಬಾರಿಯ ಅಧಿವೇಶನದಲ್ಲಿ ಕೂಡಾ ರಾಜ್ಯದ ಎಲ್ಲಾ ಟೈಲರ್ಸ್ ಪರವಾಗಿ ಮಾತನಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕುರಿತು ಶ್ರಮಿಸುತ್ತೇನೆ ಎಂದರು.

ಜುಲೈ 26 ರಂದು ರಾಜ್ಯದ ಎಲ್ಲಾ ಭಾಗದ ಟೈಲರ್ಸ್ ಒಂದು ದಿನ ಬಂದ್ ಆಚರಿಸಿ, ರಾಜ್ಯದ ಪ್ರತೀ ಜಿಲ್ಲಾಧಿಕಾರಿಗಳಿಗೆ ಹಲವಾರು ಬೇಡಿಕೆಯ ಮನವಿಯನ್ನು ಸಲ್ಲಿಸಲಾಗಿತ್ತು .
ಟೈಲರ್ ಅಸೋಶಿಯೇಷನ್ ರಾಜ್ಯ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಬ್ರಹ್ಮಾವರ ಕ್ಷೇತ್ರ ಸಮಿತಿಯ ಅಧ್ಯಕ್ಷ ನವೀನ ಬಿ.ರಾವ್ ಕೊಕ್ಕರ್ಣೆ, ಕಾರ್ಯದರ್ಶಿ ಕೃಷ್ಣ ದೇವಾಡಿಗ , ಬ್ರಹ್ಮಾವರ ನಗರ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್, ಕೋಟ ವಲಯ ಅಧ್ಯಕ್ಷ ಗಣೇಶ್ ಪೂಜಾರಿ,ಕಾರ್ಯದರ್ಶಿ ಅವಿನಾಶ್ ಮರಕಾಲ, ಸಾಸ್ತಾನ ವಲಯ ಅಧ್ಯಕ್ಷೆ ಉಷಾ, ಬಾರಕೂರು ವಲಯದ ಗೌರಿ, ಪೇತ್ರಿ ವಲಯದ ಶ್ರೀಧರ ಆಚಾರ್ಯ , ಕಾರ್ಯದರ್ಶಿ ವೀಣಾ, ಕುಂದಾಪುರ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಇನ್ನಿತರು ಹಾಜರಿದ್ದರು.

LEAVE A REPLY

Please enter your comment!
Please enter your name here