ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಪುನಿತ್ ರಾಜ್ ಕುಮಾರ್ ವಿದ್ಯಾನಿಧಿ ಯೋಜನೆಯಡಿ ಶೈಕ್ಷಣಿಕ ದತ್ತು ಪಡೆದ ಹಾಗೂ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾ ಪರಿಕರ ವಿತರಣೆ ಕಾರ್ಯಕ್ರಮ ಜೂ.4ರ ಗುರುವಾರ ಸಂಜೆ 5.45ಕ್ಕೆ ಕೋಟದ ಸಮುದ್ಯತಾ ಸಭಾಂಗಣದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಾಪೋಷಕರಾದ ಆನಂದ್ ಸಿ ಕುಂದರ್ ಹಾಗೂ ಕೃಷ್ಣಪ್ರಸಾದ್ ಕ್ಯಾಶು,ಸ್ಟೀಲ್ ಇಂಡಸ್ಟ್ರೀಸ್ ಮಾಲಿಕ ಸಂಪತ್ ಕುಮಾರ್ ಶೆಟ್ಟಿ, ಸ್ನೇಹಕೂಟದ ಅಧ್ಯಕ್ಷೆ, ಸಲಹಾ ಸಮಿತಿ ಸದಸ್ಯೆ ಭಾರತಿ ಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

Leave a Reply Cancel reply