ಸಾಸ್ತಾನ- ರಂಗೋಲಿಯಲ್ಲಿ ಅರಳಿಸಿದ 12 ಅಡಿ ಎತ್ತರದ ಮೋದಿಯ ಭಾವಚಿತ್ರ

0
463

ಕುಂದಾಪುರ ಮಿರರ್ ಸುದ್ದಿ…

ಕೋಟ :ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಸಾಸ್ತಾನ ಚೆನ್ನಕೇಶವ ಕಲ್ಯಾಣ ಮಂಟಪದಲ್ಲಿ 5 ಬಣ್ಣಗಳ ಮಿಶ್ರಣದಿಂದ ರಂಗೋಲಿಯ ಮೂಲಕ 12 ಅಡಿ ಎತ್ತರ ಹಾಗೂ 5 ಅಡಿ ಅಗಲದ ಪ್ರಧಾನ ಮಂತ್ರಿ ಮೋದಿಯ ಭಾವಚಿತ್ರವನ್ನು ಅರಳಿಸಿದ್ದಾರೆ. ಸಾಸ್ತಾನ ನಿವಾಸಿಯಾಗಿರುವ ಉಪನ್ಯಾಸಕಿ ಸ್ಫೂರ್ತಿಆಚಾರ್ಯ ಹಾಗೂ ಬ್ರಹ್ಮಾವರದ ಚಿತ್ರಕಲಾವಿದ ಅಶ್ವಥ್ ಆಚಾರ್ಯ ಬೃಹತ್ ರಂಗೋಲಿಯಲ್ಲಿ ಭಾವಚಿತ್ರವನ್ನು ಬಿಡಿಸುವ ರಚಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.ಇವರಿಗೆ ಚಿತ್ರ ಕಲಾವಿದರಾದ ಆದಿತ್ಯ ಪೂಜಾರಿ ಇವರಿಗೆ ಸಹಕರಿಸಿದ್ದಾರೆ.ಸಾಕಷ್ಟು ಮೋದಿ ಅಭಿಮಾನಿಗಳು,ಬಿಜೆಪಿ ಕಾರ್ಯಕರ್ತರು ರಂಗೋಲಿಯಲ್ಲಿ ಅರಳಿದ ಮೋದಿ ಚಿತ್ರಕ್ಕೆ ಫಿದಾ ಹೇಳಿದ್ದಾರೆ.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಯೋಜನೆಯಡಿ ಮಾಹಿತಿ ತಂತ್ರಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸ್ಪೂರ್ತಿ ಆಚಾರ್ಯ ಅವರು. ಮೊದಲ ಭಾರಿಗೆ ಪೋರ್ಟೆಲ್ ರಂಗೋಲಿ ಬಿಡಿಸಿದ್ದಾರೆ. ಅಶ್ವಥ್ ಆಚಾರ್ಯ ಪದವೀಧರ ಚಿತ್ರಕಲಾವಿರಾಗಿದ್ದಾರೆ.

ಈ ಭಾವ ಚಿತ್ರವನ್ನು ಬಿಡಿಸಲು ಸುಮಾರು 15 ಗಂಟೆಗಳ ಸಮಯ ವ್ಯಯಿಸಿದ್ದಾರೆ. ಶನಿವಾರ ಸಂಜೆಯ ತನಕ ರಂಗೋಲಿ ಪ್ರದರ್ಶನವಿರಲಿದೆ.

LEAVE A REPLY

Please enter your comment!
Please enter your name here