ಕೋಟ ಅಮೃತೇಶ್ವರಿಯಲ್ಲಿ ದುರ್ಗಾಷ್ಟಮಿ ದಿನದ ಶರನ್ನವರಾತ್ರಿ ಉತ್ಸವ

0
327

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಶರನ್ನವರಾತ್ರಿ ಅಂಗವಾಗಿ ಎಂಟನೇ ದಿನದ ಪೂಜಾ ಕಾರ್ಯಕ್ರಮ ನೆರವೆರಿತು.

ಭಕ್ತಾಧಿಗಳಾದ ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ವಾಸು ಕರ್ಕೇರ ಕೋಡಿ ಬೇಂಗ್ರೆ ಇವರ ಸೇವೆಯಾದ ದುರ್ಗಾಹೋಮ, ಸಪ್ತಸತೀ ಪಾರಾಯಣ ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ಸಂಪನ್ನಗೊಂಡಿತು.

ದೇವೇಂದ್ರ ಗಾಣಿಗ,ಅಶ್ವಥ್ ಜೋಗಿ,ವಿಮಲ ದೇವಾಡಿಗ ಅನ್ನದಾನ ಸೇವಾಕೈಂಕರ್ಯದಲ್ಲಿ ಭಾಗಿಯಾದರು.

ಈ ವೇಳೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು ,ಅರ್ಚಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಾವಿರಾರು ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here