ಬೈಂದೂರು ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಂದುಕಾ ಎ.ಎಸ್, ಕಾರ್ಯದರ್ಶಿಯಾಗಿ ಅರುಣ ಕುಮಾರ್ ಶಿರೂರು ಆಯ್ಕೆ

0
459

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಬೈಂದೂರು ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಂದುಕಾ ಎ.ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೈಂದೂರಿನ ಸಂಘದ ಕಛೇರಿಯಲ್ಲಿ ಗುರುವಾರ ಜರುಗಿದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘದ ಗೌರವಾಧ್ಯಕ್ಷರಾಗಿ ಎಸ್. ಜನಾರ್ದನ ಮರವಂತೆ, ಕಾರ್ಯದರ್ಶಿಯಾಗಿ ಅರುಣ ಕುಮಾರ್ ಶಿರೂರು, ಉಪಾಧ್ಯಕ್ಷರಾಗಿ ಉದಯ ಪಡಿಯಾರ್, ಕೊಶಾಧಿಕಾರಿಯಾಗಿ ಸುನಿಲ್ ಹೆಚ್. ಜಿ., ಬೈಂದೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನರಸಿಂಹ ಬಿ. ನಾಯಕ್, ರಾಮ ಬಿಜೂರು, ಗಿರೀಶ್ ಶಿರೂರು, ಕೃಷ್ಣ ಬಿಜೂರು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here