Category: Uncategorized

  • ಕುಂದಾಪುರ: ರಾಷ್ಟ್ರ ರಕ್ಷಣೆ ಮತ್ತು ಸ್ವಯಂ ಶಿಸ್ತಿಗೆ ಭಾರತ್ ಸ್ಕೌಟ್ & ಗೈಡ್ಸ್ ಹೆಚ್ಚು ಪರಿಣಾಮಕಾರಿ – ಶೋಭಾ ಶೆಟ್ಟಿ

    ಕುಂದಾಪುರ: ರಾಷ್ಟ್ರ ರಕ್ಷಣೆ ಮತ್ತು ಸ್ವಯಂ ಶಿಸ್ತಿಗೆ ಭಾರತ್ ಸ್ಕೌಟ್ & ಗೈಡ್ಸ್ ಹೆಚ್ಚು ಪರಿಣಾಮಕಾರಿ – ಶೋಭಾ ಶೆಟ್ಟಿ

    ಭಾರತ್‌ ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್ – ಬುಲ್ ಬುಲ್ ಉತ್ಸವ-2025

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ನೇತೃತ್ವದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆದ ಭಾರತ್ ಸ್ಕೌಟ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ ಉತ್ಸವ-2025 ಯಶಸ್ವಿಯಾಗಿ ನಡೆಯಿತು.

    ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷೆ ಶೋಭಾ ಶೆಟ್ಟಿ ಮಾತನಾಡಿ, ರಾಷ್ಟ್ರ ರಕ್ಷಣೆ ಮತ್ತು ಸ್ವಯಂ ಶಿಸ್ತಿಗೆ ಭಾರತ್ ಸ್ಕೌಟ್ & ಗೈಡ್ಸ್ ಹೆಚ್ಚು ಪ್ರೇರಣಾದಾಯಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸ್ಕೌಟ್ & ಗೈಡ್ಸ್, ಕಬ್ಸ್ ಬುಲ್ ಬುಲ್ ಜೊತೆಗೆ ಗುರುತಿಸಿಕೊಂಡು ಬೆಳೆಯುವಂತಾಗಲಿ ಎಂದು ಹಾರೈಸಿದರು.

    ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಇವರನ್ನು ಗೌರವಿಸಲಾಯಿತು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆ ಅಧ್ಯಕ್ಷೆ ಗುಣರತ್ನ, ಸ್ಕೌಟ್ & ಗೈಡ್ಸ್ ಶಿಸ್ತು, ಸಂಯಮ, ದೇಶಪ್ರೇಮವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು. ಪ್ರತಿಯೊಂದು ಚಟುವಟಿಕೆ ಕೂಡಾ ಶಿಸ್ತಿನಿಂದ ಕೂಡಿರಬೇಕು. ವ್ಯಕ್ತಿತ್ವ ವಿಕಾಸವಾಗಲು ಸೌಟ್ ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು, ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಎರಡು ದಿನಗಳ ಕಾಲ ಯಾಲಿಯನ್ನು ಆಯೋಜಿಸಲಾಗುವುದು. ರಾಜ್ಯ ಸಂಸ್ಥೆ ನೀಡಿದ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದೇವೆ. ಪಿ.ಜಿ ಆರ್ ಸಿಂಧ್ಯಾ ಅವರು ನಿರಂತರ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದರು.

    ಆನೆಗುಡ್ಡೆ ಶ್ರೀ ವಿನಾಯಕ ಸಭಾಭವನದ ಮಾಲಕ ರವಿರಾಜ ಉಪಾಧ್ಯಾಯ, ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆಯ ರೇಖಾ ಉಪಸ್ಥಿತರಿದ್ದರು.

    ಭಾರತ್ ಸ್ಕೌಟ್ & ಗೈಡ್ಸ್ ನ ಶಿಕ್ಷಕ ವೀರೇಂದ್ರ ಸ್ವಾಗತಿಸಿ, ಶಿಕ್ಷಕಿ ತಾರ ವಂದಿಸಿದರು. ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಆನಂದ ಅಡಿಗ ಪ್ರಾಸ್ತಾವಿಸಿದರು. ಸದಾನಂದ ಶೆಟ್ಟಿ ನಿರೂಪಿಸಿದರು.

  • ಉಡುಪಿ – ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ನವೆಂಬರ್ 16ಕ್ಕೆ ಕನ್ನಡ ನಾಡು ಕಂಡ ಶ್ರೇಷ್ಠ ಉದ್ಯಮಿ ಡಾ.ವಿಜಯ ಸಂಕೇಶ್ವರ ರವರಿಗೆ ಪ್ರಶಸ್ತಿ ಪ್ರದಾನ

    ಉಡುಪಿ – ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ನವೆಂಬರ್ 16ಕ್ಕೆ ಕನ್ನಡ ನಾಡು ಕಂಡ ಶ್ರೇಷ್ಠ ಉದ್ಯಮಿ ಡಾ.ವಿಜಯ ಸಂಕೇಶ್ವರ ರವರಿಗೆ ಪ್ರಶಸ್ತಿ ಪ್ರದಾನ

     

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಸದ್ಭಾವನಾ 2024 ಎಂಬ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಈ ಬಾರಿ ನವೆಂಬರ್ 16 ರಂದು ಕೋಟದ ಗಾಂಧಿ ಮೈದಾನದಲ್ಲಿ ಆಯೋಜಿಸುತ್ತಿದೆ.

    ಪ್ರತಿವರ್ಷ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಈ ಬಾರಿ ಕನ್ನಡ ನಾಡು ಕಂಡ ಶ್ರೇಷ್ಠ ಉದ್ಯಮಿ ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರ ರವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಪ್ರಶಸ್ತಿ 20ಸಾವಿರ ಮೌಲ್ಯದ ಬೆಳ್ಳಿ ಫಲಕ, ನಗದು ಒಳಗೊಂಡಿದೆ.

    ಇದೇ ವೇಳೆ ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಿದ್ದು , ವಿಶೇಷ ಪುರಸ್ಕಾರವನ್ನು ಪರಿಸರಸ್ನೇಹಿ ಸಂಘಟನೆ ಸ್ವಚ್ಛ ಬ್ರಿಗೇಡ್ ಕಾರ್ಕಳ ತಂಡಕ್ಕೆ ನೀಡಲಿದೆ.ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ , ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನೀಡಲಿದೆ. ವಿಶೇಷ ಆಹ್ವಾನಿತರಾಗಿ ಕನ್ನಡ ಚಿತ್ರರಂಗದ ಶ್ರೇಷ್ಟ ನಟ ಎಸ್ ದೊಡ್ಡಣ್ಣ,ಗಂಗಾವತಿ ಶಾಸಕ ಗಾಲಿ ಜನರ್ದನ ರೆಡ್ಡಿ ಉಪಸ್ಥಿತರಿರಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಯೂರಿ ನೃತ್ಯ ತಂಡ ಕುಂಭಾಶಿ, ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಅವಿಭಜಿತ ಜಿಲ್ಲೆಗಳ ಪ್ರಸಿದ್ಧ ನಾಟಕ ತಂಡ ಪಿಂಗಾರ್ ಕಲಾವಿದರ್ ಬಿದ್ರೆ ಇವರ ಸಾಮಾಜಿಕ ಪೌರಾಣಿಕ ಹಿನ್ನಲ್ಲೆಯಯಳ್ಳ ಹಾಸ್ಯಮಯ ಕದಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ಹಾಗೂ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ತಿಳಿಸಿದ್ದಾರೆ.

  • ಕಾರಂತ ದೀವಿಗೆ 2024: ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂಧ ಮಂಡನೆ ಕಾರ್ಯಕ್ರಮ

    ಕಾರಂತ ದೀವಿಗೆ 2024: ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂಧ ಮಂಡನೆ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ಶಾರದಾ ಕಾಲೇಜು ಬಸ್ರೂರು ಕುಂದಾಪುರ ಇಲ್ಲಿನ ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘ ಇದರ ಆಶ್ರಯದಲ್ಲಿ ಕಾರಂತರ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಒಂದು ದಿನದ ಪದವಿ ಕಾಲೇಜಿನ ವಿದ್ಯಾರ್ಥಿಗೆ ರಸಪ್ರಶ್ನೆ ಸ್ಪರ್ಧೆ ಮತ್ತು ಪ್ರಬಂಧ ಮಂಡನೆ ಕಾರ್ಯಕ್ರಮ ಕಾಲೇಜಿನ ವೀರ ರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕವಿಯತ್ರಿ ಸುಕನ್ಯಾ ಕಳಸ ಕಾರಂತರು ಸರ್ವಕಾಲಿಕ ಶ್ರೇಷ್ಠ ಸಾಹಿತಿ ಮತ್ತು ತಮ್ಮ ಕಾವ್ಯಗಳಲ್ಲಿ ವೈಚಾರಿಕ ವಿಚಾರಧಾರೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ವಹಿಸಿದ್ದರು.

    ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರವಿಚಂದ್ರ, ಕಾರ್ಯಕ್ರಮ ಸಂಯೋಜಕರಾದ ಮಮತಾ ಕನ್ನಡ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿ ನೀಶಾ ಉಪಸ್ಥಿತರಿದ್ದರು.

    ಸಮರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ ಲೇಖಕಿ ವಿಜಯಶ್ರೀ ಎಂ. ಭಾಗವಹಿಸಿ ಕಾರಂತರ ಕೃತಿಗಳ ಬಗ್ಗೆ ವಿಶ್ಲೇಷೀಸಿದರು .

    ಉಡುಪಿ ಜಿಲ್ಲೆಯ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಮಂಡನೆ ಕಾರ್ಯಕ್ರಮದ ಸಮನ್ವಯಕಾರರಾಗಿ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಉಪನ್ಯಾಸಕ ಅಕ್ಷಯ ಹೆಗ್ಡೆ ನಿರ್ವಹಿಸಿದರು. ಕಾರ್ಯಕ್ರಮವನ್ನು ಇತಿಹಾಸ ಉಪನ್ಯಾಸಕ ರಾಘವೇಂದ್ರ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿಯರಾದ ಪ್ರಮೀಳಾ ಮತ್ತು ಅನಿತಾ ಎನ್. ನಿರ್ವಹಿಸಿ, ಸಂಯೋಜಕರಾದ ಮಮತಾ ವಂದಿಸಿದರು.

  • ಕುಂದಾಪುರ: ನಮ್ಮ ಕುಂದಾಪುರ ಮೇಳಕ್ಕೆ ಚಾಲನೆ

    ಕುಂದಾಪುರ: ನಮ್ಮ ಕುಂದಾಪುರ ಮೇಳಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಅ5 ಮತ್ತು 6ರಂದು ಆರ್.ಎನ್.ಶೆಟ್ಟಿಯ ಗಿಳಿಯಾರು ಕುಶಾಲ ಹೆಗ್ಡೆ ಸ್ಮಾರಕ ಸಭಾಂಗಣದಲ್ಲಿ ನಡೆಯುತ್ತಿರುವ “ನಮ್ಮ ಕುಂದಾಪುರ ಮೇಳ” ಉದ್ಘಾಟನೆಯನ್ನು ಕುಂದಾಪುರ ಅಮೃತಧಾರೆ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಹಿಳೆಯರೇ ಇಂತಾಹದ್ದೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮಹಿಳೆಯರು ಮುಂದೆ ಬಂದಾಗ ಯಶಸ್ಸು ಸಾಧ್ಯ ಎನ್ನುವುದು ಈ ಒಂದು ಮೇಳದಿಂದ ಸಾಬೀತಾಗಿದೆ ಎಂದರು.

    ದೀಪಂ ಆಭರಣ ಮಳಿಗೆಯ ಸುಧಾ ಮಾತನಾಡಿ, ಭಾರತದ ಸಾಂಪ್ರದಾಯಿಕ ಶೈಲಿ, ಆಧುನಿಕ ಶೈಲಿಯ ವನ್ ಗ್ರಾಂ ಗೋಲ್ಡ್ ಆಭರಣಗಳು ಅತೀ ಕಡಿಮೆ ಬೆಲೆಯಲ್ಲಿ ನಮ್ಮಲ್ಲಿ ಸಿಗುತ್ತದೆ. ನಾವು ಕೇವಲ ಸ್ಥಳೀಯ ಮಟ್ಟ ಮಾತ್ರವಲ್ಲದೇ ದೇಶಾದ್ಯಂತ ನಮ್ಮ ಆಭರಣಗಳು ದೊರೆಯುತ್ತವೆ. ಮದುವೆ ಸಮಾರಂಭಗಳಿಗೂ ನಾವು ಅತೀ ಕಡಿಮೆ ಬೆಲೆಗೆ ಆನ್ ಲೈನ್ ಮೂಲಕವೂ ಕಳುಹಿಸುವ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೇಘನಾ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸುರೇಖಾ ಪುರಾಣಿಕ್ ಉಪಸ್ಥಿತರಿದ್ದರು.

    ಬೃಹತ್ ಸಂಗ್ರಹ ಮತ್ತು ಮಾರಾಟ ಮಳಿಗೆಯಲ್ಲಿ ಸಿಲ್ಕ್ ಸಾರಿ, ಕೈಮಗ್ಗ ಸಾರಿ, ಕುರ್ತ, ಚೂಡಿದಾರ್ ಸೆಟ್, ಕಾಟನ್ ಬೆಡ್ಶೀಟ್,ಸಾಂಪ್ರದಾಯಿಕ, ಆಧುನಿಕ ದೈನಂದಿನ ಬಳಕೆಯ ದೀಪಂ 1 ಗ್ರಾಂ ಗೋಲ್ಡ್ ಆಭರಣಗಳು ಅತೀ ಕಡಿಮೆ ಬೆಲೆಗೆ ಮಾರಾಟಕ್ಕಿಡಲಾಗಿದೆ. ಅಲ್ಲದೇ ಲಕ್ಜಿ ಡ್ರಾ ಮೂಲಕ ಬಹುಮಾನ ಗೆಲ್ಲುವ ಅವಕಾಶ ಇರುತ್ತದೆ.

  • ಹಂಗಳೂರು ಲಯನ್ಸ್ ಕ್ಲಬ್ ನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ

    ಹಂಗಳೂರು ಲಯನ್ಸ್ ಕ್ಲಬ್ ನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : 78ನೇ ಸ್ವತಂತ್ರ ದಿನಾಚರಣೆಯನ್ನು ಕೋಣಿಯ ಸೈಂಟ್ ಆ್ಯಂಟನಿ ಸಂಸ್ಥೆಯ ಯಾರ್ಡನ ಆವರಣದಲ್ಲಿ ಸರ್ವ ನೌಕರರ ಜೊತೆ ಸೇರಿ ಆಚರಿಸಲಾಯಿತು.

    ಅಧ್ಯಕ್ಷರಾದ ಲಯನ್ ರೋವನ್ ಡಿ’ಕೋಸ್ತ ಧ್ವಜಾರೋಹಣ ನೆರವೇರಿಸಿದರು. ವಲಯ ಅಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಅರ್ಪಿಸಿದರು.

    ಲಯನ್ ಮ್ಯಾಥ್ಯೂ, ಲಯನ್ ಪುನೀತ್ ಶೆಟ್ಟಿ, ಲಯನ್ ರಮೇಶ್ ಶೆಟ್ಟಿ ,ಲಯನ್ ಫಿಲಿಪ್ ಡಿ’ ಕೋಸ್ತ , ಲಯನ್ ಕಿರಣ್ ಡಿ’ ಕೋಸ್ತ ಮುಂತಾದ ಬಹುಸಂಖ್ಯೆಯಲ್ಲಿ ಲಯನ್ಸ್ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

    ಚಂದ್ರಹಾಸ ಕಾರ್ಯಕ್ರಮವನ್ನು ನಿರೂಪಿಸಿದರು

  • ಮಣೂರು ಅಪ್ಪು ಅಟ್ಯಾಕರ್ಸ್‍ನಿಂದ ಸಾಧಕರಿಗೆ ಸನ್ಮಾನ, ವಾಲಿಬಾಲ್ ಪಂದ್ಯಾಕೂಟ

    ಮಣೂರು ಅಪ್ಪು ಅಟ್ಯಾಕರ್ಸ್‍ನಿಂದ ಸಾಧಕರಿಗೆ ಸನ್ಮಾನ, ವಾಲಿಬಾಲ್ ಪಂದ್ಯಾಕೂಟ

    ಕುಂದಾಪುರ ಮಿರರ್ ಸುದ್ದಿ…

    ಕೋಟ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಪ್ಪು ಅಟ್ಯಾಕರ್ಸ್ ಮಣೂರು ಇವರ ವತಿಯಿಂದ ದ್ವಿತೀಯ ವರ್ಷದ ಫ್ರೀಡಂ ಟ್ರೋಫಿ -2024 ವಾಲಿಬಾಲ್ ಪಂದ್ಯಾಕೂಟ, ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

    ಸಾಧಕ ಕೃಷಿಕ ಸತೀಶ್ ಶೆಟ್ಟಿ ನಡುಬೆಟ್ಟು, ಸಮಾಜಸೇವಕ ವಸಂತ ಪೂಜಾರಿ, ಸಮಾಜಸೇವಾ ಮಹಿಳಾ ಸಂಘಟನೆ ಸ್ನೇಹ ಕೂಟ ಮಣೂರು ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.

    ಇದೇ ವೇಳೆ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ಹಾಗೂ ಸಿಹಿತಿಂಡಿ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ, ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ನಿವೃತ್ತ ಉಪನ್ಯಾಸಕ ಅರುಣಾಚಾಲ ಮಯ್ಯ, ಕೋಟ ಅಮೃತೇಶ್ವರಿ ದೇಗುಲದ ಮಾಜಿ ಟ್ರಸ್ಟಿ ಸುಬ್ರಾಯ ಆಚಾರ್ಯ ಮಣೂರು, ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಭರತ ಶೆಟ್ಟಿ ಗಿಳಿಯಾರು, ಉದ್ಯಮಿಗಳಾದ ನಾಗೇಶ್ ಪೂಜಾರಿ ಮಣೂರು, ಸಂತೋಷ್ ಸುವರ್ಣ, ದಿನಕರ ಶೆಟ್ಟಿ ನಡುಬೆಟ್ಟು, ಕೋಟ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ಅಂಗನವಾಡಿ ಶಿಕ್ಷಕಿ ನಿರ್ಮಲ ಮಣೂರು, ಅಪ್ಪು ಅಟ್ಯಾಕರ್ಸ್‍ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

  • ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು: ಸೈಬರ್ ಸೆಕ್ಯೂರಿಟಿ ಅರಿವು ಕಾರ್ಯಕ್ರಮ

    ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು: ಸೈಬರ್ ಸೆಕ್ಯೂರಿಟಿ ಅರಿವು ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ
    : ಇಲ್ಲಿನ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಸೈಬರ್ ಸೆಕ್ಯೂರಿಟಿಯ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ವಿಷಯಾಧರಿತ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಟಿ.ವಿ. ದೇವರಾಜ್ ಅಡಿಷನಲ್ ಎಸ್.ಐ., ಸೈಬರ್ ಕ್ರೈಮ್ ಡಿಪಾರ್ಟ್ಮೆಂಟ್, ಮಣಿಪಾಲ ಇವರು ವಿವಿಧ ರೀತಿಯ ಸೈಬರ್ ಅಪರಾಧವನ್ನು ತಡೆಗಟ್ಟುವುದು ಮತ್ತು ಅದರಿಂದ ತಪ್ಪಿಸಿಕೊಳ್ಳುವ ರೀತಿಯ ಬಗ್ಗೆ ಮಾತನಾಡುತ್ತಾ, ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಬುದ್ಧಿಯ ಜೊತೆಗೆ ಬೆರಳುಗಳ ಮೇಲೆ ಕೂಡ ನಿಯಂತ್ರಣ ಪಡೆದುಕೊಳ್ಳುವ ಅಗತ್ಯ ಇದೆ ಎಂದರು.

    ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದು, ಮೊಬೈಲ್ ಬಳಕೆ ಹಾಗೂ ಸಾಮಾಜಿಕ ಜಾಲಾತಾಣಗಳಲ್ಲಿ ತೊಡಗಿಸಿಕೊಳ್ಳುವಾಗ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆ ಮರೆಯಬಾರದು ಎಂದರು.

    ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಪ್ರಾಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಜೋಸ್ಲಿನ್ ಅಲ್ಮೇಡಾ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ಶ್ರೀನಾಭ ಸ್ವಾಗತಿಸಿ, ನೇಹಾ ಅತಿಥಿಗಳನ್ನು ಪರಿಚಯಿಸಿ, ಸಿಂಚನಾ ವಂದಿಸಿ, ಚಂದನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸುಹಾನಿ ಕಾರ್ಯಕ್ರಮದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

  • ಸರ್ಕಾರಿ ಶಾಲೆ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಗುರುರಾಜ್ ಗಂಟಿಹೊಳೆ

    ಸರ್ಕಾರಿ ಶಾಲೆ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಗುರುರಾಜ್ ಗಂಟಿಹೊಳೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದಾನಿಗಳು ಹಾಗೂ ಸಮಾಜದ ಸಹಕಾರ ಅತಿ ಮುಖ್ಯ ಎಂದು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.

    ಚಿತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್. ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಹಾಗೂ ವಿವೇಕ ಕೊಠಡಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯ ಪರಿಕರ ವಿತರಿಸಿ ಶಾಸಕರು ಮಾತನಾಡಿದರು.

    ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300ಟ್ರೀಸ್ ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ದಾನಿಗಳ ಮೂಲಕ ಸರ್ಕಾರಿ ಶಾಲೆಯ ವ್ಯವಸ್ಥೆ, ಮೂಲಸೌಕರ್ಯ ಸುಧಾರಿಸುವ ಕಾರ್ಯವೂ ನಡೆಯುತ್ತಿದೆ. ಅನೇಕ ಸಂಘ ಸಂಸ್ಥೆ ನಮ್ಮ ಈ ಅಭಿಯಾನಕ್ಕೆ ಕೈ ಜೋಡಿಸಿವೆ ಎಂದರು.

    ಎಂ.ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಮಾಡಿರುವ ಕಾರ್ಯವೂ ಶ್ಲಾಘನೀಯವಾಗಿದೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

    ನಿವೃತ್ತ ಶಿಕ್ಷಕ ಗಣಪತಿ ಕಿಣಿ ಅವರಿಗೆ ಸನ್ಮಾನ ನಡೆಯಿತು.

    ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಹಳೇ ವಿದ್ಯಾರ್ಥಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.

  • ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಮತ್ತು ಜೆಸಿಐ ಕಲ್ಯಾಣಪುರ

    ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಮತ್ತು ಜೆಸಿಐ ಕಲ್ಯಾಣಪುರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಜೆಸಿಐ ಕಲ್ಯಾಣಪುರ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರ ಆಶ್ರಯದಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದ ಶಿಕ್ಷಕ ಸಾಹಿತಿ ಜೆಸಿ ನರೇಂದ್ರ ಕುಮಾರ್ ಕೋಟ ಸಾರಥ್ಯದಲ್ಲಿ 25ಗಂಟೆಗಳ ನಿರಂತರ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ದಾಖಲೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾನ್ಯತೆ ಪಡಿದಿದೆ. ಕಳೆದ ಒಂದು ತಿಂಗಳಿನಿಂದ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ದಾಖಲೆಗೆ ಮಾನ್ಯ ಮಾಡಿದೆ.

    ಕಳೆದ ಮೇ ತಿಂಗಳ 27ರ ಸಂಜೆ 4 ಗಂಟೆಯಿಂದ ಮೇ 28ರ ಸಂಜೆ 5ರವರೆಗೆ ಈ ಮ್ಯಾರಥಾನ್ ನಡೆದಿತ್ತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ 26 ತರಬೇತುದಾರರಾದ ಶಿವರಾಮ ಕೆ.ಕೆ., ಅರುಣ್ ಪೀಟರ್ ಪಿಂಟೋ, ಅನಿತಾ ನರೇಂದ್ರ, ಜ್ಯೋತಿ ಪ್ರಶಾಂತ್, ಪ್ರದೀಪ ಬಾಕಿಲ, ರಾಜೇಶ್ ಶೆಣೈ, ರಾಘವೇಂದ್ರ ಚರಣ, ಅಕ್ಷತಾ ಗಿರೀಶ್, ರಾಘವೇಂದ್ರ ಕರ್ವಾಲು, ಶೆರ್ಲಿ ಮನೋಜ್, ಮನೋಜ ಕಡಬ, ಎಮ್.ಎನ್. ನಾಯಕ್, ಡಾ. ಶಿವಪ್ರಸಾದ್, ಸೌಜನ್ಯ ಹೆಗ್ಡೆ, ಪ್ರವೀಣ ಉಡುಪ, ದೀರಜ್ ಉದ್ಯಾವರ, ಗುಣವತಿ ರಮೇಶ್, ವರ್ಷಾ ಕಾಮತ್, ಬಾಲಕೃಷ್ಣ ಪ್ರಭು, ಡಾ. ವಿಜಯ ಸಿಗಲೂರು, ದಾಮೋದರ ಪಾಟಾಲಿ, ಹರಿಶ್ಚಂದ್ರ ಕರ್ಕೆರ, ಪಾಂಡುರಂಗ, ಕೃಷ್ಣ ಪವಾರ್ ಭಾಗವಹಿಸಿದ್ದರು.

    ಈ ಮ್ಯಾರಥಾನ್‍ಗೆ ಗಿನ್ನೀಸ್ ರೆಕಾರ್ಡ್ ದಾಖಲಿತ ಪ್ರತ್ವೀಶ್ ಜಿ. ಭಟ್ ಮಾರ್ಗದರ್ಶನ, ಚಿತ್ರೀಕರಣ ಪ್ರಸಾರದ ಜವಾಬ್ದಾರಿಯ ಉಡುಪಿ ಚಾನೆಲ್ ವಹಿಸಿದ್ದು ಕಿರಣ ಮತ್ತವರ ತಂಡ ಸಹಕರಿಸಿತ್ತು.

    ವಿಷಯ ನಿಯೋಜನೆಯಲ್ಲಿ ಶಿವರಾಮ ಕೆ.ಕೆ., ಮನೋಜ್ ಕಡಬರವರು, ನಿರೂಪಕರಾಗಿ ಸತೀಶ್ ವಡ್ಡರ್ಸೆ, ಜ್ಯೋತಿ ಸಾಲಿಗ್ರಾಮ, ಸಂಯೋಜನೆಯಲ್ಲಿ ಪ್ರದೀಪ ಬಸ್ರೂರು, ರವೀಂದ್ರ ಶೆಟ್ಟಿ ತಂತ್ರಾಡಿ, ಪ್ರಶಾಂತ್ ಕುಮಾರ್ ಜೊತೆಗಿದ್ದರು. ಮ್ಯಾರಥಾನ್ ಕಾರ್ಯಕ್ರಮ ನಿರ್ದೇಶಕರಾಗಿ ಚಿತ್ರ ಕುಮಾರ್, ಜಗದೀಶ್ ಕೆಮ್ಮಣ್ಣು, ಅಲೆನ್ ರೋಹನ್ ಹಾಜರಿದ್ದರು. ನಿರ್ದೇಶಕರಾಗಿ ಚಿತ್ರ ಕುಮಾರ್, ಜಗದೀಶ್ ಕೆಮ್ಮಣ್ಣು, ಅಲೆನ್ ರೋಹನ್ ಹಾಜರಿದ್ದರು.

    ಸಾಂಸ್ಕೃತಿಕ ಚಿಂತಕರಾಗಿ ಆನಂದ ಸಿ. ಕುಂದರ್, ಚಿತ್ರ ಕುಮಾರ್, ರಾಜೇಶ್ ಆಚಾರ್ಯ, ವಿಘ್ನೇಶ್ವರ ಅಡಿಗ ಕನಸಿಗೆ ಬಣ್ಣ ತುಂಬಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಅಶ್ವಿನಿ ದಿನೇಶ್ ಉಪಾಧ್ಯಕ್ಷ ವಾಸು ಪೂಜಾರಿ ವಲಯಾಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಅಭಿನಂದನೆ ಸೂಚಿಸಿದ್ದಾರೆ. ಜೆಸಿಐ ಇಂಡಿಯಾ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಈ ದಾಖಲೆ ನಡೆದಿರುವುದು ಜೆಸಿಐ ಸಾಧನೆಯ ಮೈಲಿಗಲ್ಲು ಎಂದು ಜೆಸಿಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ, ಕಾರ್ಯದರ್ಶಿ ಲವಿನಾ ಲೂಯಿಸ್, ಜೆಸಿರೇಟ್ ವಿಭಾಗದ ಜ್ಯೂನಿಯರ್ ಜೇಸಿ ನಿರಂತರ ಸಹಕರಿಸಿದವರಿಗೆಲ್ಲ ಅಭಿನಂದನೆ ಸಲ್ಲಿಸಿ, ಶೀಘ್ರವಾಗಿ ಪ್ರಮಾಣಪತ್ರ ಹಸ್ತಾಂತರಿಸುವ ಕಾರ್ಯಕ್ರಮ ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    ಹೊಸತನದ ಚಿಂತನೆಗಳು ಕಾರ್ಯರೂಪಕ್ಕೆ ತಂದಾಗ ಸಾಧನೆಯ ಸಾಧ್ಯ ನಿಜವಾಗಿಯೂ ಅಪೂರ್ವವಾದ ಸಾಧನೆಯಿದು. ತರಬೇತುದಾರ ಎಅ ನರೇಂದ್ರ ಕುಮಾರ್ ಕೋಟರವರು ನಿಜವಾಗಿಯೂ ಅಭಿನಂದನೆಗೆ ಅರ್ಹರು. ನಮಗೆಲ್ಲ ತುಂಬು ಸಂತಸ – ಪುರುಷೋತ್ತಮ ಶೆಟ್ಟಿ ವಲಯಾಧ್ಯಕ್ಷರು

    ಸರ್ವರ ಸಹಕಾರದಿಂದ ಈ ಕನಸು ಈಡೇರಿದೆ. ಕಲ್ಪನೆ ನನ್ನದಾದರೂ ಅದಕ್ಕೆ ಬಣ್ಣ ತುಂಬಿದವರು ಹಲವರು. ಎಲ್ಲರಿಗೂ ನನ್ನ ಬದುಕಿನ ಪ್ರೀತಿ ನೀಡುತ್ತಿದ್ದೇನೆ.
    ನರೇಂದ್ರಕುಮಾರ್ ಕೋಟ
    ಶಿಕ್ಷಕರು-ಸಾಹಿತಿಗಳು, ವಿವೇಕ ಬಾ.ಪ್ರೌಢ ಶಾಲೆ, ಕೋಟ

    ನಮ್ಮ ಪ್ರತಿಷ್ಠಾನ ವ್ಯಕ್ತಿತ್ವ ವಿಕಸನ ಮ್ಯಾರಥಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿರುವುದು ನಮಗೆಲ್ಲ ತುಂಬಾ ಖುಷಿ ಕೊಟ್ಟಿದೆ. ನರೇಂದ್ರಕುಮಾರ್ ಕೋಟ ಮತ್ತವರ ತಂಡಕ್ಕೆ ಅಭಿನಂದನೆಗಳು.
    ಆನಂದ ಸಿ. ಕುಂದರ್
    ಕಾರ್ಯಾಧ್ಯಕ್ಷರು, ಕಾರಂತ ಪ್ರತಿಷ್ಠಾನ

    ಕಾರಂತರ ಜೀವಂತಿಕೆ ಪ್ರತಿಬಿಂಬವಾಗಿರುವ ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ಈ ದಾಖಲೆ ನಡೆದಿರುವುದು ನಮಗೆಲ್ಲಾ ತುಂಬಾ ಸಂತೋಷ ತಂದಿದೆ ಇಡೀ ತಂಡಕ್ಕೆ ಅಭಿನಂದನೆಗಳು
    ಕೋಟ ಶ್ರೀನಿವಾಸ ಪೂಜಾರಿ
    ನಿರ್ದೇಶಕರು, ಕಾರಂತ ಪ್ರತಿಷ್ಠಾನ

  • ಪಾಂಡೇಶ್ವರ – ಬಿಲ್ಲವ ಯುವ ವೇದಿಕೆಯ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ,ನೋಟ್‍ಬುಕ್ ವಿತರಣೆ

    ಪಾಂಡೇಶ್ವರ – ಬಿಲ್ಲವ ಯುವ ವೇದಿಕೆಯ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ,ನೋಟ್‍ಬುಕ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಇವರ ವತಿಯಿಂದ ಕಲ್ಪತರು ಸ್ವಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಪಾಂಡೇಶ್ವರ ಶಾಲೆಯಲ್ಲಿ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಅಧ್ಯಕ್ಷ ಎಮ್. ಸಿ ಚಂದ್ರಶೇಖರ್, ಪ್ರಧಾನ ಕಾರ್ಯಧರ್ಶಿಗಳಾದ ಐರೋಡಿ ವಿಠಲ್ ಪೂಜಾರಿ,ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಪನಾ ದಿನಕರ ಪೂಜಾರಿ,ಪಾಂಡೇಶ್ವರ ಗ್ರಾ.ಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ ಪೂಜಾರಿ. ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಜೆ ರಾಜ್ , ಸ್ಥಳೀಯ ಉದ್ಯಮಿಗಳಾದ ದಯಾನಂದ ಪೂಜಾರಿ, ಸಂಘದ ಕಾರ್ಯದರ್ಶಿ ವಿಜಯ್ ಪೂಜಾರಿ ಮೂಡಕಟ್ಟು ಹಾಗೂ ವಿಜಯ್ ಬ್ಯಾಂಕ್ ನಿವೃತ್ತ ಅಧಿಕಾರಿ ಪಂಜು ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ 265 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಗಣ್ಯರಿಂದ ವಿತರಿಸಲಾಯಿತು. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90% ಅಂಕ ಪಡೆದ ಐವರು ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಪ್ರಮುಖರಾದ ಸುರೇಶ್ ಪೂಜಾರಿ ಪ್ರಾಸ್ತವನೆ ಸಲ್ಲಿಸಿ ಸ್ವಾಗತಿಸಿದರು. ಉಷಾ ಗಣೇಶ್ ಪೂಜಾರಿ, ಸೀಮಾ ವಿಜಯ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನೂತನ ಕಾರ್ಯದರ್ಶಿ ವಿಜಯ್ ಪೂಜಾರಿ ವಂದಿಸಿದರು.