Category: ರಾಜಕೀಯ

  • ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯತಿಥಿ ಮತ್ತು ಸರ್ದಾರ್ ಪಟೇಲ್ ಜನ್ಮದಿನಾಚರಣೆ

    ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯತಿಥಿ ಮತ್ತು ಸರ್ದಾರ್ ಪಟೇಲ್ ಜನ್ಮದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬಲಿಷ್ಠ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಭಾರತದ ಶಿಲ್ಪಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತ ಅವಧಿಯಲ್ಲಿ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ದುರ್ಗೆಯಂತೆ ಹೋರಾಡಿ ಹುತಾತ್ಮರಾದರು. ಬಡತನ ಮತ್ತು ಅಸಮಾನತೆಯ ನಿರ್ಮೂಲನೆಗಾಗಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದರು.

    ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಗೃಹ ಸಚಿವರಾದ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ಮಂಚೂಣಿಯಲ್ಲಿದ್ದು, ಸ್ವಾತಂತ್ರ್ಯ ನಂತರ ದೇಶವನ್ನು ಆಳುತ್ತಿದ್ದ ರಾಜ್ಯ ಸಂಸ್ಥಾನದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ, ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯ ಹಾಕಿದರು ಎಂದರು.

    ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಐಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಪಂಚಾಯತ್ ಅಧ್ಯಕ್ಷರುಗಳಾದ ಗಣಪತಿ ಶೇಟ್, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಅಬ್ಬು ಮೊಹಮದ್, ಪ್ರಭಾವತಿ ಶೆಟ್ಟಿ , ಶಶಿ ರಾಜ್ ಪೂಜಾರಿ, ಅಶೋಕ್ ಸುವರ್ಣ, ಶಶಿಧರ ಕೋಟೆ, ಸದಾನಂದ ಖಾರ್ವಿ, ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್ ಆನಗಳ್ಳಿ, ಗೀತಾ ಆನಗಳ್ಳಿ, ರೋಷನ್ ಬರೆಟ್ಟೊ, ಜೆಸಿಂತಾ ಡಿಮೆಲ್ಲೊ, ಬ್ಲಾಕ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಮುನಾಫ್ ಕೊಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ತಾಲೂಕು ಕೆ ಡಿ ಪಿ ಸದಸ್ಯ ವಿಜಯ ಕೆ ವಿ, ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಜಾನಕಿ ಬಿಲ್ಲವ, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಠಲ ಕಾಂಚನ್, ನಾಗರಾಜ್ ನಾಯಕ್, ಸೀಮಾ ಚಂದ್ರ ಪೂಜಾರಿ , ದಿನೇಶ್ ಬೆಟ್ಟ, ಜಿಲ್ಲಾ ಸೇವಾದಳ ಕಾರ್ಯದರ್ಶಿ ಜ್ಯೋತಿ ನಾಯಕ್, ಜಿಲ್ಲಾ ಅಲ್ಪಸಂಖ್ಯಾತ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ, ನಗರ ಪ್ರಾಧಿಕಾರ ಸದಸ್ಯ ಅಲ್ಫಾಜ್, ಯುವ ಮುಖಂಡ ಕೊಡಿ ಸುನಿಲ್ ಪೂಜಾರಿ, ದೀಕ್ಷಿತ್ ಸೂಡಾ, ಅರುಣ್ ಪಟೇಲ್, ಕುಮಾರ ಖಾರ್ವಿ, ರಿಯಾಜ್ ಕೋಡಿ , ವಿವೇಕಾನಂದ, ವೇಲಾ ಬ್ರಗಾಂಜ, ಮುನಾವರ ಕೊಡಿ , ಕೆ ಎಸ್ ವಿಜಯ , ಕ್ಲಿಫರ್ಡ್ ಡಿಸಿಲ್ವಾ , ಲಕ್ಷ್ಮಣ ಬರೆಕಟ್ಟು , ನಿತಿನ್ ಡಿಸೋಜಾ , ಶಶಿ ಬಳ್ಕೂರು, ಜೊಯ್ ರೆಬೆಲ್ಲೊ , ಮೊಹಮ್ಮದ್ ಸಾಯರ್ ಕೊಡಿ, ನವೀನ್, ಎಡೊಲ್ಫ್ ಡಿಕೋಸ್ತಾ ಇನ್ನಿತರರು ಉಪಸ್ಥಿತರಿದ್ದರು.

  • ಕುಂದಾಪುರ :ತೆರಿಗೆ ಇಳಿಕೆ – ಕುಂದಾಪುರ ಬಿಜೆಪಿ ವತಿಯಿಂದ ಸಂಭ್ರಮಾಚರಣೆ

    ಕುಂದಾಪುರ :ತೆರಿಗೆ ಇಳಿಕೆ – ಕುಂದಾಪುರ ಬಿಜೆಪಿ ವತಿಯಿಂದ ಸಂಭ್ರಮಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಇತ್ತೀಚೆಗೆ ದೆಹಲಿಯಲ್ಲಿ ಜಿ.ಎಸ್.ಟಿ(GST)ಕೌನ್ಸಿಲ್ ಸಭೆ ದೆಹಲಿಯಲ್ಲಿ ನಡೆದಿದ್ದು, ಪ್ರಧಾನ ಮಂತ್ರಿಗಳು ಐತಿಹಾಸಿಕ ತೆರಿಗೆ ಇಳಿಕೆ ನಿರ್ಧಾರವನ್ನು ಕೈಗೊಂಡಿದ್ದು ಇದರಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

    ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಪಟಾಕಿಯನ್ನು ಸಿಡಿಸಿ ನಂದಿನಿ ಕೆಎಂಎಫ್ ನಲ್ಲಿ ಉತ್ಪನ್ನದ ಮಳಿಗೆಯಲ್ಲಿ ತಿಂಡಿ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಬಡ ಹಾಗೂ ಮಧ್ಯಮ ವರ್ಗದವರಿಗೆ ನವರಾತ್ರಿಯ ಶುಭದಿನದಂದು ಒಳ್ಳೆಯ ಗಿಫ್ಟನ್ನು ದೇಶದ ಜನತೆಗೆ ನೀಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

    ಈ ಸಂಭ್ರಮಾಚರಣೆ ನೇತೃತ್ವವನ್ನು ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ ಎಸ್, ಪುರಸಭೆ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಮತ್ತು ಕುಂದಾಪುರ ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪುರಸಭೆ ಮತ್ತು ವಿವಿಧ ಕ್ಷೇತ್ರದ ಜನ ಪ್ರತಿನಿಧಿಗಳು ಮೋದಿಜಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • ಕುಂದಾಪುರ :ಆಸ್ಕರ್ ಫೆರ್ನಾಂಡಿಸ್‌ಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನುಡಿನಮನ

    ಕುಂದಾಪುರ :ಆಸ್ಕರ್ ಫೆರ್ನಾಂಡಿಸ್‌ಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನುಡಿನಮನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಆಸ್ಕರ್ ಫೆರ್ನಾಂಡಿಸ್ ರವರ ಸರಳ ವ್ಯಕ್ತಿತ್ವ, ಸೇವಾ ಮನೋಭಾವನೆ , ಪ್ರಾಮಾಣಿಕ ಪಕ್ಷ ನಿಷ್ಠೆ,ದೂರ ದೃಷ್ಟಿಯ ನಾಯಕತ್ವ, ಅವರನ್ನು ಸಾಮಾನ್ಯ ವ್ಯಕ್ತಿಯಿಂದ ಬೆಳೆದು ಕರಾವಳಿ ಭಾಗದ ಧೀಮಂತ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದರು. ಕೇಂದ್ರ ಸಚಿವರಾದ ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತು ಗುರುತು ಯಾರು ಮರೆಯುವಂತಿಲ್ಲ , ಸದಾ ಅಧ್ಯಯನಶೀಲರಾದ ಅವರು ಸಾಕಷ್ಟು ಜನಾನುರಾಗಿಯಾಗಿದ್ದರು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡಿಸ್ ರವರ ನಾಲ್ಕನೇ ವರ್ಷದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ , ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ , ನ್ಯಾಯವಾದಿ ಕೆರಾಡಿ ಪ್ರಸನ್ನ ಕುಮಾರ್ ಶೆಟ್ಟಿ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಶ್ರದ್ಧಾಂಜಲಿಯ ಮಾತುಗಳನ್ನಾಡಿದರು.

    ಸಭೆಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸೊಸೈಟಿಯ ಅಧ್ಯಕ್ಷರಾದ ಜಯರಾಮ ಶೆಟ್ಟಿ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಶೇರಿಗಾರ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ , ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಪಂಚಾಯತ್ ಅಧ್ಯಕ್ಷರುಗಳಾದ ಸವಿತಾ, ಗಣಪತಿ ಶೇಟ್ , ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಹಿರಿಯರಾದ ಮೋಹನದಾಸ್ ಶೆಟ್ಟಿ, ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ ,ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಪಂಚಾಯತ್ ಸದಸ್ಯರಾದ ಗೀತಾ ,ಚೈತ್ರ ಅಡಪ , ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್ , ಗ್ಯಾರಂಟಿ ಸಮಿತಿಯ ಸದಸ್ಯರಾದ ಗಣೇಶ್ ವಿ , ಆಶಾ ಕರ್ವಾಲ್ಲೊ, ಕೊಡಿ ಸುನಿಲ್ ಪೂಜಾರಿ, ಜ್ಯೋತಿ ಡಿ ನಾಯ್ಕ್ , ಮಧುಕರ , ಸುಧೀಂದ್ರ , ರಿಯಾಜ್ ಕೊಡಿ , ಜೋಸೆಫ್ ರೆಬೆಲ್ಲೊ, ಅಲ್ಫಾಜ್ , ದಿನೇಶ್ ಬೆಟ್ಟ ,ರತ್ನಾಕರ ಶೆಟ್ಟಿ ,ಶ್ರೀಧರ ಶೆಟ್ಟಿ ,ವಿವೇಕಾನಂದ , ಪ್ರಭಾಕರ ಕಡ್ಗಿಮನೆ , ಅರುಣ್ ಪಟೇಲ್ , ರಾಕೇಶ್ ಶೆಟ್ಟಿ , ಜೋಯ್ಟನ್ ಡಿಸೋಜಾ ,ನಿಹಾದ್ ಶೆಟ್ಟಿ , ಎಡಾಲ್ಫ್ ಡಿಕೋಸ್ಟ , ವೇಲಾ ಬ್ರಗಾಂಜ , ಗಿರೀಶ್ ಭಟ್ ,ರಾಘವೇಂದ್ರ ಕಂದಾವರ ,ಅನಿಲ್ ಕೆ , ವಿನಾಯಕ ರಾವ್ ಇನ್ನಿತರರು ಉಪಸ್ಥಿತರಿದ್ದರು.

  • ಬೈಂದೂರು :”ಸಂಸದ್ ಖೇಲ್ ಮಹೋತ್ಸವ್-2025 ” – ಸ್ಥಳೀಯ ಕ್ರೀಡಾ ಪ್ರತಿಭೆಗಳ ಒಂದು ಅನಾವರಣ ವೇದಿಕೆ

    ಬೈಂದೂರು :”ಸಂಸದ್ ಖೇಲ್ ಮಹೋತ್ಸವ್-2025 ” – ಸ್ಥಳೀಯ ಕ್ರೀಡಾ ಪ್ರತಿಭೆಗಳ ಒಂದು ಅನಾವರಣ ವೇದಿಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೇಂದ್ರ ಸರ್ಕಾರ ದೇಶದ ಕ್ರೀಡಾ ಕ್ಷೇತ್ರವನ್ನು ಮತ್ತೊಂದು ಮಹತ್ವದ ಘಟ್ಟಕ್ಕೆ ಕೊಂಡೊಯ್ಯಲು ದೇಶದ ಇತಿಹಾಸದಲ್ಲಿ ಮೊದಲ ಪ್ರಯತ್ನವಾಗಿ ದೇಶದಾದ್ಯಂತ ಜಾರಿಗೆ ತಂದಿರುವ “ಸಂಸದ್ ಖೇಲ್ ಮಹೋತ್ಸವ್-2025” ನೋಂದಣಿ ಪ್ರಕ್ರಿಯೆಗೆ ಇಂದು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2030 ರಲ್ಲಿ “ಕಾಮನ್ ವೇಲ್ತ್ ಗೇಮ್ಸ್” ಹಾಗೂ 2036 ರಲ್ಲಿ “ಒಲಿಂಪಿಕ್ ಗೇಮ್ಸ್” ಆಯೋಜನೆ ಮಾಡಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದೆ.

    ಈಗಾಗಲೇ “ಖೇಲೋ ಇಂಡಿಯಾ” ಹಾಗೂ “ಫಿಟ್ ಇಂಡಿಯಾ” ಯೋಜನೆ ಜಾರಿಯ ಮೂಲಕ ದೇಶದಲ್ಲಿರುವ ಲಕ್ಷಾಂತರ ಕ್ರೀಡಾ ಪ್ರತಿಭೆಗಳನ್ನು ಮುನ್ನೆಲೆಗೆ ತಂದು ವಿಶ್ವದ ಬಲಿಷ್ಠ ರಾಷ್ಟ್ರಗಳ ಕ್ರೀಡಾ ಪಟುಗಳೊಂದಿಗೆ ಪೈಪೋಟಿ ನಡೆಸಿ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಂಡಿದ್ದಾರೆ.

    ಇದರ ಮುಂದುವರೆದ ಭಾಗವಾಗಿ ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಇನ್ನೂ ಅನೇಕ ಕ್ರೀಡಾ ಪಟುಗಳನ್ನು ಮತ್ತು ಕ್ರೀಡಾ ಆಸಕ್ತರನ್ನು ಮುನ್ನೆಲೆಗೆ ತರಲು ಈ ಯೋಜನೆ ಮಹತ್ವದ ಮೈಲಿಗಲ್ಲಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

    ಇದು ಕೇವಲ ದೇಶದ ಕ್ರೀಡಾ ಹಬ್ಬವಾಗದೆ ದೇಶದ ಹಿರಿಮೆ, ಗರಿಮೆ ವಿಶ್ವ ಭೂಪಟದಲ್ಲಿ ರಾರಾಜಿಸಲು ವೇದಿಕೆಯಾಗಿದೆ. ಈ ಮೂಲಕ ದೇಶದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಮುನ್ನುಡಿ ಬರೆಯಲು ವಿಶೇಷ ವೇದಿಕೆಯಾಗಿದೆ.

  • ಕೋಟ ಮಹಿಳಾ ಕಾಂಗ್ರೆಸ್‍ನಿಂದ ಮಹಿಳಾ ಆರೋಗ್ಯ ಸಂಕಲ್ಪ ಕಾರ್ಯಕ್ರಮ

    ಕೋಟ ಮಹಿಳಾ ಕಾಂಗ್ರೆಸ್‍ನಿಂದ ಮಹಿಳಾ ಆರೋಗ್ಯ ಸಂಕಲ್ಪ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲೆಯ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ವಾರ್ಡ್ ಹಾಗೂ ಗುಂಡ್ಮಿ ಗ್ರಾಮದ ಚೆಲ್ಲಮಕ್ಕಿ ವಾರ್ಡ್‌ ನಲ್ಲಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‍ಗಳನ್ನು ವಿತರಿಸಲಾಯಿತು.

    ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮತ್ತು ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಂಯುಕ್ತ ಆಶ್ರಯದಲ್ಲಿ ನಡೆದ ನಾರೀ ನ್ಯಾಯ್ ಕಾರ್ಯಕ್ರಮದ ಮಹತ್ವದ ಯೋಜನೆಯಾದ ಮಹಿಳಾ ಆರೋಗ್ಯ ಸಂಕಲ್ಪ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ.ಪಿ. ಸುವರ್ಣ ವಹಿಸಿದ್ದರು.

    ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರು ಯುವತಿಯರಿಗೆ ಪ್ಯಾಡ್‍ಗಳನ್ನು ವಿತರಿಸಿ ಮಾತನಾಡಿ ತಮ್ಮ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಸದಾ ಚಿಂತಿಸುವ, ಕಾಳಜಿ ವಹಿಸುವ ನಮ್ಮ ಮಹಿಳೆಯರು ತಮ್ಮ ಆರೋಗ್ಯದ ಗಮನ ಹರಿಸುವುದನ್ನು ಮರೆತು ಬಿಡುತ್ತಾರೆ. ಹಾಗಾಗಿ ಅವರಲ್ಲಿ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ನಂತಹ ಮಾರಕ ರೋಗಗಳು, ಇನ್ನಿತರ ಸೋಂಕು ತಗುಲುವ ಸಂಭವ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಮಾಸಿಕ ಋತು ಚಕ್ರದ ದಿನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಾಂಬಾ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿಯವರು ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ಎಂದು ನುಡಿದರು.

    ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರುತ್ತಿದೆ. ಕೋವಿಡ್ ಸಮಯದಲ್ಲೂ ಬಡ ಕುಟುಂಬದ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗಿತ್ತು. ಅಲ್ಲದೇ ಗೃಹ ಲಕ್ಷ್ಮಿ ಯಂತಹ ಹಲವು ಯೋಜನೆಗಳು ಬಡ ಮಹಿಳೆಯರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬಹಳಷ್ಟು ಸಹಕಾರಿಯಾಗಿವೆ ಎಂದು ನುಡಿದರು.

    ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿಯ ಸದಸ್ಯೆ ಸುಧಾ ಎ. ಪೂಜಾರಿ ಮತ್ತು ಜ್ಯೋತಿ ದೇವದಾಸ್ ಕಾಂಚನ್, ಐರೋಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಪದ್ಮಾವತಿ ಗೋಪಾಲ್, ಪಾಂಡೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

  • ಸಾಲಿಗ್ರಾಮ: ಕಾಂಗ್ರೆಸ್ ಕಣ್ಮಣಿಗಳು ಅಭಿಯಾನಕ್ಕೆ ಚಾಲನೆ: ಹಿರಿಯ ಕಾರ್ಯಕರ್ತರಿಗೆ ಸಮ್ಮಾನ

    ಸಾಲಿಗ್ರಾಮ: ಕಾಂಗ್ರೆಸ್ ಕಣ್ಮಣಿಗಳು ಅಭಿಯಾನಕ್ಕೆ ಚಾಲನೆ: ಹಿರಿಯ ಕಾರ್ಯಕರ್ತರಿಗೆ ಸಮ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ,ಆ.10: ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಗ್ರಾಮೀಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ “ಕಾಂಗ್ರೆಸ್ ಕಣ್ಮಣಿಗಳು” ಸರಣಿ ಅಭಿಯಾನಕ್ಕೆ ಆ.10 ರಂದು ಚಾಲನೆ ನೀಡಲಾಯಿತು.

    ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸುವ ಸಲುವಾಗಿ” ಕಾಂಗ್ರೆಸ್ ಕಣ್ಮಣಿಗಳು” ಎನ್ನುವ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಈ ಮೂಲಕ ಪಕ್ಷ ಬಲವರ್ಧನೆ ಜತೆಗೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ,
    ಪಕ್ಷಕ್ಕಾಗಿ ದುಡಿದು ಇಂದಿಗೂ ಕಾಂಗ್ರೆಸ್ ಪಕ್ಷನಲ್ಲಿ ಸಕ್ರಿಯವಾಗಿ ಇರುವರನ್ನ ಗುರುತಿಸುತ್ತಿರುವುದು ಪಕ್ಷದ ಐತಿಹಾಸಿಕ ಕಾರ್ಯಕ್ರಮ ಹಾಗೂ ಎಲ್ಲಾ ಸಮಿತಿಗಳಿಗೂ ಇದು ಮಾದರಿ ಎಂದರು.

    ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಬಸವಪೂಜಾರಿ ಹಾಗೂ ಕುಸುಮ ಬಸವ ಪೂಜಾರಿ, ರಘು ಭಂಡಾರಿ ಕಾರ್ಕಡ, ಜಿ. ಮೊಹಮ್ಮದ್ ಖಾಶಿಮ್ ಅವರನ್ನು ಸಮ್ಮಾನಿಸಲಾಯಿತು. ಪಕ್ಷದ ಪ್ರಮುಖರಾದ ಅಚ್ಯುತ್ ಪೂಜಾರಿ ಕಾರ್ಕಡ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ. ನೆಲ್ಲಿಬೆಟ್ಟು, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಶೇಖರ್ ಪಿ. ಮರಕಾಲ ಕಾರ್ಕಡ, ವಕೀಲರಾದ ಮೊಹಮ್ಮದ್ ಸುಹಾನ್ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ರಮೇಶ್ ಮೆಂಡನ್, ಗಣೇಶ್ ಮೆಂಡನ್ ಬೆಟ್ಲಕ್ಕಿ, ಮಂಜುನಾಥ್ ಪೂಜಾರಿ ಗುಂಡ್ಮಿ, ರಮೇಶ್ ಪೂಜಾರಿ ಮೂಡಹೋಳಿ, ಶಶಿಧರ್ ಪೂಜಾರಿ ಮೂಡಹೋಳಿ, ರವೀಂದ್ರ ಕಾಮತ್ ಗುಂಡ್ಮಿ ಇದ್ದರು.

  • ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯ ದರ್ಶನ ಪ್ರತಿಭಟನಾ ಸಪ್ತಾಹ

    Video :

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಪ್ರತಿಭಟನೆ ಮಾಡಿ ಅನೇಕ ಸುಳ್ಳು ವಿಚಾರಗಳನ್ನು ಹೇಳಿದ್ದಾರೆ. ಅಭಿವೃದ್ಧಿ ಕೆಲಸಗಳು ಆಗುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಕುಂದಾಪುರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಯೋಜನೆಯಂತಹ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಬಿಜೆಪಿಯವರು ಅದನ್ನು ಬಿಟ್ಟು ಯಾವುದೋ ಸುಳ್ಳುಗಳನ್ನು ಹೇಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಹೇಳಿದ ಸುಳ್ಳಿನ ಸತ್ಯಾಂಶಗಳನ್ನು ಹೇಳಲು ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹೇಳಿದರು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಂದಾಪುರ ಪುರಸಭೆ ಎದುರು ಬುಧವಾರ 9/11 ಜಾರಿ, 53 57 ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಪಿಂಚಣಿ ರದ್ದತಿ, ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ಎರಡು ಕಂತುಗಳಲ್ಲಿ ಬರುವ ರಾಜೀವ ಗಾಂಧಿ ಅಭಿವೃದ್ಧಿ ನಿಗಮದ ದುಡ್ಡುಗಳಲ್ಲಿ ನಿಯತ್ತಾಗಿ ಪ್ರತಿ ಅವಧಿಯಲ್ಲಿ ಬರುತ್ತಿದೆ. ಆದರೆ ಕೇಂದ್ರ ಸರಕಾರದ ದುಡ್ಡು ಬರುತ್ತಿಲ್ಲ. ಸಿದ್ಧರಾಮಯ್ಯ ಸರಕಾರ ಬಂದ ಬಳಿಕ ಕುಂದಾಪುರ ತಾಲೂಕು ಆಸ್ಪತ್ರೆಗೆ ಎಂಟು ಡಯಾಲಿಸಿಸ್ ಯಂತ್ರಗಳು ಬಂದಿದ್ದು, ಸುಮಾರು 80 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 40 ಲಕ್ಷ ರೂ. ಅನುದಾನದಲ್ಲಿ ಲ್ಯಾಬೋರೇಟರಿಯನ್ನು ಆಧುನೀಕರಣ, ಎಸ್‍ಟಿಪಿ ಯೋಜನೆಗೆ 20 ಲಕ್ಷ ಅನುದಾನ ಬಂದಿದೆ ಎಂದು ಅವರು ಹೇಳಿದ ಅವರು, ಚುನಾವಣೆ ಮುಂಚೆ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಶಾಸಕರು, ಸಂಸದರು ಹೇಳುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ 373 ಕೋಟಿ ಅನುದಾನ ಕುಂದಾಪುರ ತಾಲೂಕಿಗೆ ಬಂದಿದೆ ಎಂದರು.

    ಆನಗಳ್ಳಿ ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, 2021ರಲ್ಲಿ ಬಿಜೆಪಿಯವರೇ 9/11 ತಂದ ನೀತಿ. ಇದರಿಂದ ಹಳ್ಳಿಗಳಲ್ಲಿ ಬಹಳಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚೆ ನಡೆಸಲಾಗಿದ್ದು, ವಾರದೊಳಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು. ಬಿಜೆಪಿಯವರು ಚುನಾವಣೆ ಸಂದರ್ಭ ಐದು ಗ್ಯಾರಂಟಿ ಬಗ್ಗೆ ಲೇವಡಿ ಮಾಡಿದ್ದರು. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಯಶಸ್ವಿಯಾಗಿ ಐದೂ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದಾರೆ. ಗ್ಯಾರಂಟಿ ಯಾವುದೇ ಕಾರಣಕ್ಕೂ ನಿಲ್ಲುದಿಲ್ಲ. ಜಿಪಂ., ತಾಪಂ., ಪುರಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರು ಸುಳ್ಳು ಹೇಳಿ ಜನರ ಮನಸ್ಸು ಬದಲಾವಣೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಸರಕಾರದ ಗ್ಯಾರಂಟಿ ಯೋಜನೆ ಬಗ್ಗೆ ಹೆದರಿಕೆ ಆಗಿದೆ ಎಂದು ಲೇವಡಿ ಮಾಡಿದರು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ ಬಸ್ರೂರು, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು, ಕುಂದಾಪುರ ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ್, ಅಶ್ಫಕ್ ಕೋಡಿ, ಪ್ರಭಾವತಿ ಶೆಟ್ಟಿ, ಆನಗಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ ಬಿಲ್ಲವ, ಉಪಾಧ್ಯಕ್ಷುದಯ ಪೂಜಾರಿ, ಪ್ರಭಾಕರ ಬಂಗೇರ, ಗೀತಾ ಎಸ್., ಜೋಸೆಫ್ ರೆಬೆಲ್ಲೊ, ಜೋಯ್ಸನ್ ಡಿಸೋಜ, ಸತೀಶ್ ಮೊಗವೀರ, ನಾಮನಿರ್ದೇಶಿತ ಸದಸ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

  • ಬೈಂದೂರು :ಕಾಂಗ್ರೆಸ್ ಪಕ್ಷ ಅಧಿಕ್ಕಾರಕೇರಲು ಯುವ ಕಾರ್ಯಕರ್ತರ ಶ್ರಮ ಸಾಕಷ್ಟಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

    ಬೈಂದೂರು :ಕಾಂಗ್ರೆಸ್ ಪಕ್ಷ ಅಧಿಕ್ಕಾರಕೇರಲು ಯುವ ಕಾರ್ಯಕರ್ತರ ಶ್ರಮ ಸಾಕಷ್ಟಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

    ಬೈಂದೂರು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ – ನೂತನ ಅಧ್ಯಕ್ಷರಾಗಿ ‌ಭರತ್ ದೇವಾಡಿಗ ಅಧಿಕಾರ ಸ್ವೀಕಾರ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಯುವ ಕಾರ್ಯಕರ್ತರ ಶ್ರಮ ಸಾಕಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

    ಉಡುಪಿಯ ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಸದಾ ಬಡವರ ಬಗ್ಗೆ ಯೋಚಿಸುವ ಪಕ್ಷ ಎಂದು ಹೇಳಿದರು.

    ದೇಶಕ್ಕಾಗಿ ಗಾಂಧಿ ಕುಟುಂಬದ ಕೊಡುಗೆ ಅಪಾರ. ಗಾಂಧಿ ಕುಟುಂಬದಿಂದ ಪ್ರಧಾನಿಯಾದ ಮೂವರಲ್ಲಿ ಇಬ್ಬರು‌ ಈ‌ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ 2004ರಲ್ಲೆ ಅಧಿಕಾರ ಹಿಡಿಯಬಹುದಿತ್ತು. ಜವಹರಲಾಲ್ ನೆಹರು ಅವರು ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್.

    ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ‌ ಸಂಘಟನೆಯಲ್ಲಿ ತೊಡಗಬೇಕು, ನಾನು‌ ಕೂಡ ಬೂತ್ ಏಜೆಂಟ್, ‌ಕೌಟಿಂಗ್ ಏಜೆಂಟ್ ಆಗಿ ಕೆಲಸ ಮಾಡಿರುವೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಟಿಕೆಟ್ ನೀಡಲಾಯಿತು. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬಳೇ ಮಹಿಳಾ ಮಂತ್ರಿಯಾಗಿರುವೆ. ನನಗೆ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

    ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರು‌ ಕಳೆದ‌ ಚುನಾವಣೆಯಲ್ಲಿ ಸೋತರೂ‌ ಕಾರ್ಯಕರ್ತರ, ಕ್ಷೇತ್ರದ ಒಡನಾಟ ಬಿಟ್ಟಿಲ್ಲ. ಜನರ ಕಷ್ಟ ಸುಖದ ಬಗ್ಗೆ ಸದಾ ಯೋಚನೆ ಮಾಡುತ್ತಾರೆ ಎಂದರು.

    ನಿಕಟ ಪೂರ್ವ ಅಧ್ಯಕ್ಷ ಶೇಖರ್ ಪೂಜಾರಿ ಅವರು ನೂತನ ಅಧ್ಯಕ್ಷರಾದ ‌ಭರತ್ ದೇವಾಡಿಗ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

    ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಅಶೋಕ್ ಕೊಡವೂರು, ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ರಾಜು ಪೂಜಾರಿ, ಕಿಶನ್ ಹೆಗ್ಡೆ, ರಘುರಾಮ್ ಶೆಟ್ಟಿ, ಅರವಿಂದ್ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.‌

  • ಕುಂದಾಪುರ :ರಾಹುಲ್ ಗಾಂಧಿ ಹುಟ್ಟು ಹಬ್ಬ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಹಣ್ಣು ಹಂಪಲು ವಿತರಣೆ

    ಕುಂದಾಪುರ :ರಾಹುಲ್ ಗಾಂಧಿ ಹುಟ್ಟು ಹಬ್ಬ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಹಣ್ಣು ಹಂಪಲು ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ತಾಲೂಕು ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ , ಯುವ ಕಾಂಗ್ರೆಸ್ ಕುಂದಾಪುರ ಪದಾಧಿಕಾರಿಗಳು ಹಣ್ಣು ಹಂಪಲು ವಿತರಿಸಿ , ಲೋಕಸಭೆಯ ವಿರೋಧ ಪಕ್ಷ ನಾಯಕ , ಸಂಸದ ರಾಹುಲ್ ಗಾಂಧಿಯವರ ಹುಟ್ಟು ಹಬ್ಬವನ್ನು ಆಚರಿಸಿದರು.

    ಈ ಸಂದರ್ಭದಲ್ಲಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಪುರಸಭಾ ನಾಮನಿರ್ದೇಶನ ಸದಸ್ಯರಾದ ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಕಾಳವಾರ, ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೊಸೆಫ್ ರೆಬೆಲ್ಲೊ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರೋಶನ್ ಬರೆಟ್ಟೊ ಹಂಗಳೂರು, ಸೌಮ್ಯ ಮೋಗವೀರ ಕೋಣಿ,ಜೊಯ್ಸ್ಟನ್ ಡಿಸೋಜಾ, ಶಶಿಕಾಂತ್ ವಡೇರಹೋಬಳಿ, ಚಂದ್ರ ಪೂಜಾರಿ ವಡೇರಹೋಬಳಿ , ಯುವ ಕಾಂಗ್ರೆಸ್ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ ಹೇರಿಕುದ್ರು ಅವರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಭಾರತ ವಿಶ್ವಗುರು ಹೆಗ್ಗಳಿಕೆ ಮರಳಿ ಗಳಿಸುತ್ತಿದೆ – ಪರಿಷತ್ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ಅಭಿಮತ

    ಕುಂದಾಪುರ :ಭಾರತ ವಿಶ್ವಗುರು ಹೆಗ್ಗಳಿಕೆ ಮರಳಿ ಗಳಿಸುತ್ತಿದೆ – ಪರಿಷತ್ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ಅಭಿಮತ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ : ಭಾರತ ವಿಕಸಿತಗೊಳ್ಳುತ್ತಿದೆ. ಸರ್ವ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣುತ್ತಿದೆ. ತನ್ನ ವಿಶ್ವಗುರು ಹೆಗ್ಗಳಿಕೆಯನ್ನು ಮರಳಿ ಗಳಿಸುತ್ತಿದೆ. ವಿದೇಶಗಳಲ್ಲಿ ಇಂದು ಭಾರತ ದೇಶ ಮಾತ್ರವಲ್ಲ, ಭಾರತೀಯರಿಗೂ ವಿಶೇಷ ಗೌರವ ಸಿಗುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಪ್ರತಾಪ ಸಿಂಹ ನಾಯಕ್ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಹನ್ನೊಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿ.ಜೆ.ಪಿ ಕುಂದಾಪುರ ಮಂಡಲ ಆಶ್ರಯದಲ್ಲಿ ಕೋಟೇಶ್ವರದಲ್ಲಿ ಮಂಗಳವಾರ ಸಂಜೆ ಜರಗಿದ ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

    2013ರ ಸಮಯದಲ್ಲಿ ಭಾರತೀಯರೆಲ್ಲರೂ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಚಾರಗಳನ್ನು ಕಂಡು ಬೇಸತ್ತಿದ್ದರು. ಭಾರತಕ್ಕೆ ರಾಜಕೀಯವಾಗಿ ಇನ್ನು ಭವಿಷ್ಯವಿದೆಯೇ ಎಂದು ಚಿಂತಿಸುತ್ತಿದ್ದರು. ಪ್ರತಿ ಯೋಜನೆಯಲ್ಲೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರದಲ್ಲಿನ ಮೊತ್ತಗಳಿಗೆ ಎಷ್ಟು ಸೊನ್ನೆ ಬರೆಯಬೇಕು ಎಂಬುದೇ ತೋಚುತ್ತಿರಲಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಜನರು ವಿಶ್ವಾಸ ಕಳೆದುಕೊಂಡಿದ್ದರು. ಆದರೂ ಗುಜರಾತ್‍ನಲ್ಲಿ 14 ವರ್ಷ ಮುಖ್ಯ ಮಂತ್ರಿಯಾಗಿ, ಆ ರಾಜ್ಯದಲ್ಲಿ ತಂದ ಬದಲಾವಣೆಗಳನ್ನು ಗಮನಿಸಿದ್ದ ಜನತೆ, ಈ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದರೆ, ದೇಶದ ಭವಿಷ್ಯ ಬೆಳಗಬಹುದು ಎಂಬ ಒಂದು ಆಶಾ ಕಿರಣ ಹೊಂದಿದ್ದರು. ಅದೇ ನರೇಂದ್ರ ಮೋದಿ ಪ್ರಧಾನಿಯಾಗಿ ಇಂದು ಭಾರತವನ್ನೇ ಬದಲಿಸಿದ್ದು, ಭಾರತೀಯರು ಮಾತ್ರವಲ್ಲದೆ ವಿಶ್ವವೇ ಹೆಮ್ಮೆ ಪಡುವಂತಾಗಿದೆ. ಕೇಂದ್ರ ಸರ್ಕಾರದ ಅಂತಹ ಮಹಾನ್ ಸಾಧನೆಗಳನ್ನು ಪ್ರತಿ ಕಾರ್ಯಕರ್ತನೂ ಇಂದು ಮನೆಮನೆಗೆ ಸಾರಬೇಕಾಗಿದೆ. 2047 ರ ಭಾರತ ವಿಶ್ವಗುರು ಸಂಕಲ್ಪವನ್ನು ಸಾಕಾರಗೊಳಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದವರು ಕರೆ ನೀಡಿದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟ ಆಡಳಿತದಿಂದ ಜನಜೀವನವನ್ನೇ ದುರ್ಭರಗೊಳಿಸಿದೆ. ಜನರಿಗೆ ಕಾಂಗ್ರೆಸ್‍ನ ಭ್ರಷ್ಟಚಾರಗಳನ್ನು ಪರಿಚಯಿಸುವುದರೊಂದಿಗೆ ಬಿಜೆಪಿಯ ಒಳ್ಳೆಯ ಆಡಳಿತವನ್ನೂ ನೆನಪಿಸಬೇಕಾಗಿದೆ. ಜೂನ್ 23ರಂದು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಐದು ಅಂಶಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಾಗೂ ಆಡಳಿತದ ಭ್ರಷ್ಟಚರಣೆಯನ್ನು ವಿಶಿಷ್ಟ ರಿತಿಯಲ್ಲಿ ಆಚರಿಸಿಕೊಂಡ ಬಿಜೆಪಿ ಕಾರ್ಯಕರ್ತ, ರಿಕ್ಷಾ ಚಾಲಕ ಸತೀಶ್ ಪ್ರಭು ಅವರನ್ನು ಸನ್ಮಾನಿಸಲಾಯಿತು. ವಿವಿಧ ಮೋರ್ಚಾಗಳ ವತಿಯಿಂದ ಸತೀಶ್ ಪ್ರಭು ಅವರನ್ನು ಗೌರವಿಸಲಾಯಿತು.

    ಪ್ರಧಾನ ಕಾರ್ಯದರ್ಶಿ ಸುಧೀರ್, ಶಂಕರ್ ಅಂಕದಕಟ್ಟೆ, ಕುಂದಾಪುರ ಮಂಡಲ ಸಂಚಾಲಕ ಸುನಿಲ್ ಶೆಟ್ಟಿ, ಸಹ ಸಂಚಾಲಕಿ ರೂಪಾ ಪೈ, ರಾಜೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಸದಾನಂದ ಬಳ್ಕೂರ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು, ಬಿಜೆಪಿ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.

    ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.