Category: ಸುದ್ದಿ

  • ಕುಂದಾಪುರ :ಜೆ.ಇ.ಇ ಮೈನ್ ಫಲಿತಾಂಶ ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

    ಕುಂದಾಪುರ :ಜೆ.ಇ.ಇ ಮೈನ್ ಫಲಿತಾಂಶ ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ದಾರಿಯಾಗಲು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024 ರಲ್ಲಿ ನಡೆದ ಜೆಇಇ ಮೈನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುದರ ಮೂಲಕ ಸಂಸ್ಥೆಗೆ ಕಿರ್ತಿ ತಂದಿದ್ದಾರೆ. ಸಂಸ್ಥೆಯಲ್ಲಿ ಜೆಇಇ ತರಬೇತಿ ಪಡೆದ 20 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿಗಳಾದ ಈಶಾ ಶೆಟ್ಟಿ 98.63, ಚಿರಾಗ್ ವಿನಾಯಕ ಮಹಲೆ 97.66, ಎಂ. ಸೃಜನ್ 95.82, ಗೌರವ್ 95.64, ನಿಶಾ 94.50, ನಾಗರಾಜ್ ಸಿದ್ಧಪ್ಪಾ ಉಪ್ಪಾರ್ 94.35, ಸನ್‍ಮಾನ್ 94.11, ವರುಣ್ ಕೆ ಪಿ 92.58, ಸಮರೇಶ್ 92.40, ರೋಹಿತ್ ಆರ್ ಪೂಜಾರಿ 91.28, ಧನುಷ್ 91.23, ಶಶಾಂಕ್ ಶೆಟ್ಟಿ 91.11, ಪ್ರೀತಮ್ ಶೆಟ್ಟಿ 90.73, ನಿರ್ಮಿತಾ ಎನ್. ಡಿ 90.61, ಅನಿರುದ್ಧ್ ಎಸ್ ಹತ್‍ವಾರ್ 90.54, ವಿನುತಾ 90.46 ಶೇಕಡಾ ಅಂಕಗಳನ್ನು ಗಳಿಸಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ. ಎಕ್ಸಲೆಂಟ್ ಕುಂದಾಪುರ ಸಂಸ್ಥೆಯಲ್ಲಿ ಸರ್ಧಾತ್ಮಕ ಪರೀಕ್ಷೆಗಳಾದ ಜೆಇಇ/ನೀಟ್ ಪರೀಕ್ಷೆಗೆ ದೇಶದ ನಾನಾ ಭಾಗಗಳಿಂದ ತರಬೇತುದಾರರು ಆಗಮಿಸಿ ತರಬೇತಿ ನೀಡುವುದರಲ್ಲಿ ಅನುಭವಿ ಭೋಧಕ ಸಿಬ್ಬಂದಿ ವರ್ಗದವರು ಪ್ರತಿ ದಿನ ವಿದ್ಯಾರ್ಥಿಗಳಿಗೆ ಜೆಇಇ/ನೀಟ್ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಿದ್ಧ ಗೊಳಿಸುವುದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ.

    ಬೋಧಕ ಸಿಬ್ಬಂದಿ ವರ್ಗದವರಿಗೂ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಎಂ.ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಎಂ.ಮಹೇಶ್ ಹೆಗ್ಡೆ ಹಾಗೂ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೆಮ್ಮಾಡಿ :ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

    ಹೆಮ್ಮಾಡಿ :ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2024 ಪರೀಕ್ಷೆಯಲ್ಲಿ ಕ್ರಮವಾಗಿ ಪ್ರಣವ್ ಅಡಿಗ 95.33 ಪರ್ಸಂಟೈಲ್( 97.12) ಪರ್ಸಂಟೈಲ್(ಭೌತಶಾಸ್ತ್ರ)ಆದಿತ್ಯ ಸಿ.ಚಂದನ್ 90.42 ಪರ್ಸಂಟೈಲ್, ಲಲನ್ ಪಿ. 90.21 ಪರ್ಸಂಟೈಲ್, ಪ್ರಜ್ವಲ್ ಎಸ್.ಪೂಜಾರಿ 89.12ಪರ್ಸಂಟೈಲ್,ರಜತ್ ಪೂಜಾರಿ 87.82 ಪರ್ಸಂಟೈಲ್,ಎನ್. ಕೌಶಿಕ್ 87.52ಪರ್ಸಂಟೈಲ್,ಪ್ರಾಂಜಲಾ 85.24ಪರ್ಸಂಟೈಲ್ ಪಡೆದು ಜೆಇಇ ಅಡ್ವನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಉಡುಪಿ :ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

    ಉಡುಪಿ :ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನೀರನ್ನು ಒದಗಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಜಿಲ್ಲೆಯಲ್ಲಿ ನಿರ್ಮಿಸಿರುವ ಪ್ರತಿಯೊಂದು ಕಿಂಡಿ ಆಣೆಕ್ಟುಗಳಿಗೆ ಹಲಗೆಗಳನ್ನು ಅಳವಡಿಸಬೇಕು. ಇದರಿಂದ ನೀರು ನಿಂತು ಅಂತರ್ಜಲ ಮಟ್ಟ ಏರುತ್ತದೆ. ಹಲಗೆಗಳನ್ನು ಅಳವಡಿಸದೇ ಇದ್ದಲ್ಲಿ ನೀರು ಮುಂದೆ ಹರಿದು ಹೋಗುತ್ತದೆ ಅಥವಾ ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರು ಕ್ರಮವಹಿಸಬೇಕು ಎಂದರು.

    ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವುದರ ಜೊತೆಗೆ ಕಣಿವೆಗಳಲ್ಲಿ ನೀರು ಹರಿಯುವ ಸೆಲೆಗಳು ಕಡಿಮೆಯಾಗಿರುತ್ತದೆ. ಹಾಗೂ ಬಿಸಿಲಿಗೆ ಕೆರೆ, ಜಲಾಶಯಗಳಲ್ಲಿ ನೀರಿನ ಆವಿಯು ಉಂಟಾಗುತ್ತದೆ. ಹೀಗಾಗಿ ನೀರಿನ ಕೊರತೆ ಕೆಲವು ಪ್ರದೇಶಗಳಲ್ಲಿ ಆಗುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆ ಜನ ಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಒಂದೊಮ್ಮೆ ಸಮಸ್ಯೆಗಳು ಉಂಟಾದರೆ ಅವುಗಳಿಂದ ನೀರು ಒದಗಿಸಲು ಮುಂದಾಗಬೇಕು ಎಂದರು.

    ಪ್ರಸ್ತುತ ಜಿಲ್ಲೆಯಲ್ಲಿ 21 ವಾರಗಳಿಗೆ ಆಗುವಷ್ಟು 2.25 ಲಕ್ಷ ಮೆಟ್ರಿಕ್ ಟನ್ ನಷ್ಟು ಮೇವು ಲಭ್ಯವಿದೆ. ಸರ್ಕಾರ ಈಗಾಗಲೇ 5 ಲಕ್ಷ ಅನುದಾನವನ್ನು ಮೇವು ಸಂಗ್ರಹಣೆಗೆ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಈಗಾಗಲೇ ನೀಡಲಾಗಿರುವ ಮೇವಿನ ಮಿನಿ ಕಿಟ್ ಗಳು ಹಾಗೂ ಪ್ರಸ್ತುತ ಬೆಳೆದಿರುವ ಮೇವು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಮುಂದೇನಾದರೂ ಸಮಸ್ಯೆ ಉಂಟಾದರೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆ ವತಿಯಿಂದ ಈಗಾಗಲೇ 1654 ಕಿಟ್ ಹಾಗೂ ಕೆ.ಎಂ.ಎಫ್ ವತಿಯಿಂದ 3918 ಕಿಟ್ ಗಳನ್ನು ವಿತರಿಸಲಾಗಿದೆ. ಗಾಗಲೇ ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸುವುದರೊಂದಿಗೆ ಬರ ನಿರ್ವಹಣೆ ಕಾರ್ಯಗಳನ್ನು ಮಾಡಬೇಕು ಎಂದರು.
    ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ನೀರು ನಿಂತಲ್ಲಿ ಸೊಳ್ಳೆಗಳ ಸಂತಾನೋತ್ಪತಿಗೆ ಆಸ್ಪದವಾಗಿ ರೋಗ ರುಜಿನಗಳು ಹರಡುವ ಸಾಧ್ಯತೆ ಇರುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದ ಅವರು, ಕುಡಿಯುವ ನೀರಿನ ಪೈಪ್‌ಲೈನ್ ದುರಸ್ಥಿ, ಶುದ್ಧ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.

    ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಆಶ್ರಯ ತಾಣಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಲ್ಲಿ ಇವುಗಳ ಬಳಕೆ ಮಾಡಿಕೊಳ್ಳಬೇಕು. ಇವುಗಳ ನಿರ್ವಹಣೆ ಮಾಡಲು ಸಮಿತಿಯನ್ನು ರಚಿಸಬೇಕು ಎಂದ ಅವರು, 300 ಜನ ಆಪದ್ ಮಿತ್ರ ಸ್ವಯಂ ಸೇವಕರಿದ್ದು, ಇದರ ಜೊತೆಯಲ್ಲಿ ಇನ್ನು ಹೆಚ್ಚು ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಬೇಕು ಎಂದರು.

    ಸಾರ್ವಜನಿಕರು ನೀರಿನ ಮಿತ ಬಳಕೆ ಮಾಡಬೇಕು, ಪ್ರತಿಯೊಂದು ಕಟ್ಟಡಗಳು ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಕೆ ಮಾಡಿ ನೀರು ಎಲ್ಲಿಯೂ ಪೋಲಾಗದಂತೆ ನೋಡಿಕೊಂಡರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರ ಬಗ್ಗೆ ಒತ್ತು ನೀಡಬೇಕು ಎಂದ ಅವರು, ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಲು ಸೂಚನೆ ನೀಡಬೇಕು ಎಂದರು.

    ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗಿರುವಂತಹ ಮರದ ಕೊಂಬೆಗಳನ್ನು ಹಾಗೂ ಗಾಳಿ ಮಳೆಗೆ ಬುಡ ಸಮೇತ ಉರುಳಿ ಬೀಳುವಂತ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಅರಣ್ಯ ಇಲಾಖೆಯು ಇತರ ಇಲಾಖೆಯ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು ಎಂದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಉಪ ವಿಭಾಗಾಧಿಕಾರಿ ರಶ್ಮಿ ಎಸ್, ಪೌರಾಯುಕ್ತ ರಾಯಪ್ಪ, ತಾಲೂಕುಗಳ ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಜೆ.ಇ.ಇ ಮೈನ್ ಫಲಿತಾಂಶ ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

    ಕುಂದಾಪುರ :ಜೆ.ಇ.ಇ ಮೈನ್ ಫಲಿತಾಂಶ ಎಕ್ಸಲೆಂಟ್ ಕುಂದಾಪುರ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕೆ ದಾರಿಯಾಗಲು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ 2024 ರಲ್ಲಿ ನಡೆದ ಜೆಇಇ ಮೈನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುದರ ಮೂಲಕ ಸಂಸ್ಥೆಗೆ ಕಿರ್ತಿ ತಂದಿದ್ದಾರೆ. ಸಂಸ್ಥೆಯಲ್ಲಿ ಜೆಇಇ ತರಬೇತಿ ಪಡೆದ 20 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿಗಳಾದ ಈಶಾ ಶೆಟ್ಟಿ 98.63, ಚಿರಾಗ್ ವಿನಾಯಕ ಮಹಲೆ 97.66, ಎಂ. ಸೃಜನ್ 95.82, ಗೌರವ್ 95.64, ನಿಶಾ 94.50, ನಾಗರಾಜ್ ಸಿದ್ಧಪ್ಪಾ ಉಪ್ಪಾರ್ 94.35, ಸನ್‍ಮಾನ್ 94.11, ವರುಣ್ ಕೆ ಪಿ 92.58, ಸಮರೇಶ್ 92.40, ರೋಹಿತ್ ಆರ್ ಪೂಜಾರಿ 91.28, ಧನುಷ್ 91.23, ಶಶಾಂಕ್ ಶೆಟ್ಟಿ 91.11, ಪ್ರೀತಮ್ ಶೆಟ್ಟಿ 90.73, ಅನಿರುದ್ಧ್ ಎಸ್ ಹತ್‍ವಾರ್ 90.54 ಶೇಕಡಾ ಅಂಕಗಳನ್ನು ಗಳಿಸಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ. ಎಕ್ಸಲೆಂಟ್ ಕುಂದಾಪುರ ಸಂಸ್ಥೆಯಲ್ಲಿ ಸರ್ಧಾತ್ಮಕ ಪರೀಕ್ಷೆಗಳಾದ ಜೆಇಇ/ನೀಟ್ ಪರೀಕ್ಷೆಗೆ ದೇಶದ ನಾನಾ ಭಾಗಗಳಿಂದ ತರಬೇತುದಾರರು ಆಗಮಿಸಿ ತರಬೇತಿ ನೀಡುವುದರಲ್ಲಿ ಅನುಭವಿ ಭೋಧಕ ಸಿಬ್ಬಂದಿ ವರ್ಗದವರು ಪ್ರತಿ ದಿನ ವಿದ್ಯಾರ್ಥಿಗಳಿಗೆ ಜೆಇಇ/ನೀಟ್ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಿದ್ಧ ಗೊಳಿಸುವುದು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಿದೆ.

    ಬೋಧಕ ಸಿಬ್ಬಂದಿ ವರ್ಗದವರಿಗೂ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಎಂ.ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಎಂ.ಮಹೇಶ್ ಹೆಗ್ಡೆ ಹಾಗೂ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕುಂದಾಪುರ :ಎಕ್ಸಲೆಂಟ್‌ ಪದವಿಪೂರ್ವ ಕಾಲೇಜು, ಸುಣ್ಣಾರಿ: ಸಿಎ /ಸಿಎಸ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ

    ಕುಂದಾಪುರ :ಎಕ್ಸಲೆಂಟ್‌ ಪದವಿಪೂರ್ವ ಕಾಲೇಜು, ಸುಣ್ಣಾರಿ: ಸಿಎ /ಸಿಎಸ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉತ್ತಮ ಶಿಕ್ಷಣ ಉಜ್ವಲ ಭವಿಷ್ಯದ ಅಡಿಪಾಯ ಎನ್ನುವ ಧ್ಯೇಯ ವಾಕ್ಯದಂತೆ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಸುಣ್ಣಾರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾಗಿರುವ ಎಕ್ಸಲೆಂಟ್‌ ಪಿ.ಯು. ಕಾಲೇಜ್‌ ಸುಣ್ಣಾರಿ ಸುಜ್ಙಾನ್‌ ಎಜ್ಯುಕೇಶನಲ್‌ ಟ್ರಸ್ಟ್‌ನ ನೂತನ ಸಾರಥ್ಯದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾದ ಒಂದು ಶಿಕ್ಷಣ ಸಂಸ್ಥೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸು ಗಳಾದ ಸಿಎ ಮತ್ತು ಸಿಎಸ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಅತ್ತ್ಯುತ್ತಮ ಸಾಧನೆಗೈದಿದ್ದಾರೆ.

    ಎಕ್ಸಲೆಂಟ್‌ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಾದ ಹೃತಿಕ್‌ ಎಮ್. (237), ಆಯುಷ್‌ (236), ದೀಕ್ಷಾ ಎ. ಶೆಟ್ಟಿ (223), ಸಮೃದ್ಧಿ ಎಸ್. ಶೆಟ್ಟಿ (218) ಮತ್ತು ಅಮೋಘ್‌ (202) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವೈಷ್ಣವಿ (137), ಸಹನಾ (118) ಮತ್ತು ಭೂಮಿಕಾ (112) ಅಂಕಗಳೊಂದಿಗೆ ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಸಿಎ ಫೌಂಡೇಶನ್, ಸಿಎಸ್ ಫೌಂಡೇಶನ್ (ಸಿಎಸ್ಇಇಟಿ ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ಹಂತದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ.

    ಪದವಿಪೂರ್ವ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸು ಗಳಿಗೆ ಸಿದ್ಧತೆ:
    ಎಕ್ಸಲೆಂಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಇಂದಲೇ ವೃತ್ತಿಪರ ಕೋರ್ಸು ಗಳಾದ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ನೆರವಾಗಿದೆ. ಸಿಎ/ಸಿಎಸ್ ಫೌಂಡೇಶನ್ ಕೋರ್ಸ್ ಗಳಿಗೆ ದೇಶದ ವಿವಿಧ ಭಾಗಗಳ ಅನುಭವಿ ಶಿಕ್ಷಕರು, ಅನುಭವಿ ಲೆಕ್ಕಪರಿಶೋಧಕರ ಜೊತೆಗೆ ಅನುಭವಿ ಕಂಪನಿ ಸೆಕ್ರೆಟರಿ ಅವರು ಕೂಡ ಬೋಧಕ ಸಿಬ್ಬಂದಿಗಳಾಗಿರುವುದರಿಂದ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಉನ್ನತಿಗೆ ಅವರು ಸಹಕಾರಿಯಾಗಲಿದ್ದಾರೆ . ಪದವಿಪೂರ್ವ ಶಿಕ್ಷಣದೊಂದಿಗೆ ವೃತ್ತಿಪರ ಕೋರ್ಸು ಗಳ ತರಬೇತಿಯನ್ನು ನೀಡಿ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

  • ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ‘ವರ್ಣಾಂಜಲಿ’ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮ

    ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ‘ವರ್ಣಾಂಜಲಿ’ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಉತ್ತಮ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಲಲಿತಾ ಕಲೆಗಳ ಪಾತ್ರ ಮಹತ್ತರವಾದುದು. ಆಸ್ತಿ, ಐಶ್ವರ್ಯ, ಸಂಪತ್ತು ಎಷ್ಟೇ ಇದ್ದರೂ, ಮನಸ್ಸಿಗೆ ಬೇಕಾದ ಶಾಂತಿಯನ್ನು ಹಣದಿಂದ ಖರೀದಿಸಲು ಸಾ‘ವಿಲ್ಲ. ಅದು ಚಿತ್ರಕಲೆ, ಸಂಗೀತ, ನಾಟಕ, ನೃತ್ಯ, ಕ್ರೀಡೆಯಿಂತಹ ಕಲೆಗಳಿಂದ ಮಾತ್ರ ಸಾ‘ ಎಂದು ಆರ್ಟಿಸ್ಟ್ ಫೋರಂನ ಕಾರ್‍ಯದರ್ಶಿ ಸಕು ಪಾಂಗಾಳ ಹೇಳಿದರು.

    ಅವರು ಗುರುವಾರ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ರಜತ ಮಹೋತ್ಸವದ ಅಂಗವಾಗಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಶಾಲೆಯ ಮತಂಗವನದಲ್ಲಿ ಆರ್ಟಿಸ್ಟ್ ಫೋರಂ ಉಡುಪಿ ಸಹಯೋಗದೊಂದಿಗೆ ೩ ದಿನಗಳ ಕಾಲ ಆಯೋಜಿಸಿರುವ ‘ವರ್ಣಾಂಜಲಿ’ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್ ಕಾರ್‍ಯಕ್ರಮವನ್ನು ಉದ್ಘಾಟಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣ ಕುಮಾರ ಮಾತನಾಡಿ, ಕವಿ ಕಂಡ ಕನಸನ್ನು ನನಸು ಮಾಡುವವರು ಚಿತ್ರಕಲಾವಿದರು ಎನ್ನುವ ಮಾತಿನಂತೆ, ಕಲಾವಿದರು ಎಲ್ಲರ ಭಾವನೆಗಳಿಗೆ ಹತ್ತಿರವಾದವರು. ಕಲೆ ವಿಶ್ವ ಭಾಷೆ. ಕಲಾವಿದರ ಬಿಡಿಸುವ ಚಿತ್ರಗಳಿಗೆ ನಾವು ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಹೃದಯದಿಂದ ಮೂಡಿರುವ ಕಲೆ ಆಗಿರುವುದರಿಂದ ಮೌಲ್ಯಯುತವಾದುದು. ಚಿತ್ರಕಲೆ ಖಾಲಿ ಹಾಳೆಯಿದ್ದಂತೆ. ಅದಕ್ಕೆ ಬಣ್ಣ – ಭಾವನೆಗಳನ್ನು ತುಂಬಿ ಸುಂದರವಾಗಿಸುವವರು ಕಲಾವಿದರು. ಇದು ಬದುಕಿಗೂ ಅನ್ವಯ ಆಗುವಂತದ್ದು ಎಂದವರು ಹೇಳಿದರು.

    ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ರಾವ್ ಬಿ. ಹಂಪಿ, ಸಾವಿತ್ರಿ ಯರಾಶಿ ಬಾಗಲಕೋಟೆ ಮಾತನಾಡಿದರು
    .
    ಹೆಸರಾಂತ ಚಿತ್ರ ಕಲಾವಿದರಾದ ಚಂದ್ರಕಾಂತ ಆಚಾರ್ಯ ಬೆಂಗಳೂರು, ಗಣೇಶ್ ಸೋಮಯಾಜಿ ಮಂಗಳೂರು, ಬಸವರಾಜ ಕುಟಿನಿ ಗುಲ್ಬರ್ಗ, ಜನಾರ್ದನ ಹಾವಂಜೆ, ಕಂದನ್ ಜಿ. ಬೆಂಗಳೂರು, ಕಿಶೋರ್ ಕುಮಾರ್ ತುಮಕೂರು, ಕೃಷ್ಣ ಶೆಟ್ಟಿ ಬೆಂಗಳೂರು, ಸಿಂಧು ಕಾಮತ್ ಉಡುಪಿ, ಶಂಕರ್ ಕೆ.ವಿ. ಹುಬ್ಬಳ್ಳಿ, ವಿಶ್ವಾಸ್ ಕಾಸರಗೋಡು, ವಿಲ್ಸನ್ ಕಯ್ಯರ್ ಕಾಸರಗೋಡು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ನಾಗರಾಜ್ ಎಸ್., ಮತ್ತಿತರರು ಉಪಸ್ಥಿತರಿದ್ದರು.

    ಉಪ ಪ್ರಾಂಶುಪಾಲ ರಾಮ ದೇವಾಡಿಗ ಪ್ರಸ್ತಾವಿಸಿ, ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಸುಮಲತಾ ಜೋಗಿ ಸ್ವಾಗತಿಸಿ, ಸುನೀತಾ ವಂದಿಸಿದರು. ಶಶಿಕಲಾ ನಿರೂಪಿಸಿದರು.

  • ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎ ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ:-

    ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿಎ ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ:-

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ಥೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್‌ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.

    ಸಂಸ್ಥೆಯ ವಿದ್ಯಾರ್ಥಿಗಳಾದ ರಾಹುಲ್‌ ಪೂಜಾರಿ (275), ಸಮರ್ಥ ಆರ್‌ ಶೆಟ್ಟಿ (266), ಶ್ರೀವತ್ಸ ಜಿ. ಉಡುಪ (255), ಹೃತಿಕ್‌ ಎಮ್.‌ (237), ಆಯುಷ್‌ (236), ರೋಹನ್‌ ಆಚಾರ್‌ (236), ನಮನ (232), ನಿಖಿತಾ (231), ಗೌತಮಿ ಎನ್.‌ ನಾಯಕ್‌ (221), ಯಶಸ್‌ (219), ಸಮೃದ್ಧಿ ಎಸ್.‌ ಶೆಟ್ಟಿ (218), ಸುಹಾಸ್‌ ಎಸ್‌. (215), ತೇಜಸ್ವಿನಿ (215), ಆಕಾಶ್‌ (214), ವೈಷ್ಣವಿ ಬಿ. (209), ಶ್ರಾವ್ಯ (205), ಶ್ರುತಿ(204), ಅಮೋಘ್‌ ಶೆಟ್ಟಿ (202), ಹೇಮಂತ್‌ (200), ಶ್ರೇಯಸ್‌ (200), ಸುಶ್ರುತ್‌ ಕುಮಾರ್‌ (200), ವಿಸ್ಮಿತಾ ಆಚಾರಿ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
    ಶಿಕ್ಷ ಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಬೋಧಕ ಸಿಬ್ಭಂದಿಗಳಾಗಿ ಆಗಮಿಸುವ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುವುದರ ಪರಿಣಾಮ ಪ್ರತಿ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬೋಧಕ ಸಿಬ್ಬಂಧಿ ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

    “ನಾನು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಯಾಗಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ನನಗೆ ತರಬೇತಿ ನೀಡಿದ ಶಿಕ್ಷಪ್ರಭಾ ಸಂಸ್ಥೆ ಹಾಗೂ ನನ್ನ ಪೋಷಕರ ಪ್ರೋತ್ಸಾಹ ನನಗೆ ಸಹಾಯವಾಗಿದೆ .ಇದಕ್ಕೆ ನಾನು ಶಿಕ್ಷಕ ವೃಂದ ಹಾಗೂ ನನ್ನ ಪೋಷಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ”. – ರಾಹುಲ್‌ ಪೂಜಾರಿ, ಸಿಎ ಫೌಂಡೇಶನ್ ಉತ್ತೀರ್ಣ ವಿದ್ಯಾರ್ಥಿ

    ಸಿಎ ಫೌಂಡೇಶನ್ ಉತ್ತೀರ್ಣರಾದ, ಪದವಿ ಪೂರ್ಣಗೊಳಿಸಿದ ಮತ್ತು ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಶಿಕ್ಷ‌ ಪ್ರಭ ಅಕಾಡಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯಲ್ಲಿ ನೂತನ ಸಿಎ ಇಂಟರ್ಮೀಡಿಯೇಟ್ ಬ್ಯಾಚ್ನ ತರಗತಿಗಳು ಇದೇ ಸೋಮವಾರ, ದಿನಾಂಕ 12-01-2024ರಂದು ಆರಂಭವಾಗಲಿದ್ದು ಆಸಕ್ತ ವಿದ್ಯಾರ್ಥಿಗಳು ನೂತನ ಬ್ಯಾಚ್‌ಗೆ ಸೇರ್ಪಡೆಗೊಳ್ಳಬಹುದು.
    ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿಯ ಕಚೇರಿಗೆ ಭೇಟಿ ನೀಡಬಹುದಾಗಿದೆ ಅಥವಾ 9964291755, 9845925983 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕುಂದಾಪುರ :ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಗೆ ಕೆನರಾ ಬ್ಯಾಂಕ್ ವತಿಯಿಂದ ನೂತನ ಜನರೇಟರ್ ಕೊಡುಗೆ

    ಕುಂದಾಪುರ :ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಗೆ ಕೆನರಾ ಬ್ಯಾಂಕ್ ವತಿಯಿಂದ ನೂತನ ಜನರೇಟರ್ ಕೊಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೆನರಾ ಬ್ಯಾಂಕ್ ವತಿಯಿಂದ ನೂತನ ಜನರೇಟರ್ ನ್ನು ಶ್ರೀ ವೆಂಕಟರಮಣ ಸಮೂಹ ಶಿಕ್ಷಣ  ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಕೆನರಾ ಬ್ಯಾಂಕ್ ಮಣಿಪಾಲ್ ಇಲ್ಲಿನ ಪ್ರಧಾನ ವ್ಯವಸ್ಥಾಪಕರಾದ ಎಂ. ಜಿ. ಪಂಡಿತ್ ನೂತನ ಜನರೇಟರ್ ನ್ನು ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.

    ಕುಂದಾಪುರ ಕೆನರಾ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಭಾರತಿ ವಸಂತ್, ಶ್ರೀ ವೆಂಕಟರಮಣ ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಶ್ರೀ ವೆಂಕಟರಮಣ ಸಂಸ್ಥೆಯ ಖಜಾಂಚಿ ಕೆ. ಲಕ್ಷ್ಮೀ ನಾರಾಯಣ ಶೆಣೈ, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣ ಅಡಿಗ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಸುಖಿತಾ ಸುವರ್ಣ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.

  • ಕುಂದಾಪುರ :ಫೆ.8 ರಿಂದ 10ರ ತನಕ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ “ವರ್ಣಾಂಜಲಿ” ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ

    ಕುಂದಾಪುರ :ಫೆ.8 ರಿಂದ 10ರ ತನಕ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ “ವರ್ಣಾಂಜಲಿ” ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯು ರಜತ ಮಹೋತ್ಸವದ ವರ್ಷವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದು, ಸಂಸ್ಥೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪೋಷಿಸಲು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಲು ಕಳೆದ 25 ವರ್ಷಗಳಿಂದ ಅವಿರತವಾಗಿ ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ಶಾಲೆಯ ಮತಂಗವನದಲ್ಲಿ ಫೆಬ್ರವರಿ 8, 9, 10ನೇ ತಾರೀಖಿನಂದು ಆರ್ಟಿಸ್ಟ್ ಪೋರಮ್, ಉಡುಪಿ ಇವರ ಸಹಯೋಗದೊಂದಿಗೆ “ವರ್ಣಾಂಜಲಿ” ಎಂಬ ಹೆಸರಿನ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮವು ಮೂರು ದಿನಗಳ ಕಾಲ ರಾಜ್ಯ ಮಟ್ಟದ ವಿವಿಧ ಕಲಾವಿದರ ಒಗ್ಗೂಡುವಿಕೆಯಿಂದ ನೆರವೇರಲಿದೆ ಎಂದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹೇಳಿದರು.

    ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಸವರಾಜ ಕುತನಿ, ಗದಗ, ಚಂದ್ರನಾಥ ಆಚಾರ್ಯ, ಬೆಂಗಳೂರು, ಗಣೇಶ್ ಸೋಮಯಾಜಿ, ಮಂಗಳೂರು, ಜನಾರ್ದನ ಹಾವಂಜೆ, ಹಾವಂಜೆ, ಕಂಡನ್ ಜಿ. ಬೆಂಗಳೂರು, ಕಿಶೋರ್ ಕುಮಾರ್, ತುಮಕೂರು, ಕೃಷ್ಣ ಶೆಟ್ಟಿ, ಬೆಂಗಳೂರು, ಮೋಹನರಾವ್ ಬಿ. ಪಾಂಚಾಲ್, ಹಂಪಿ, ಸಕು ಪಾಂಗಾಳ, ಉಡುಪಿ, ಸಾವಿತ್ರೀ ಯರಶಿ, ಬಾಗಲಕೋಟೆ, ಸಿಂಧು ಕಾಮತ್, ಉಡುಪಿ, ಶಂಕರ್ ಕೆ. ವಿ., ಹುಬ್ಬಳ್ಳಿ, ವಿಶ್ವಾಸ್ ಎಂ., ಕಾಸರಗೋಡು, ವಿಲ್ಸನ್ ಸೋಜಾ, ಕಾಸರಗೋಡು, ರಮೇಶ್ ರಾವ್, ಉಡುಪಿ ಇವರುಗಳು ಆಗಮಿಸಲಿದ್ದಾರೆ.

    ಫೆ.10 ಮಧ್ಯಾಹ್ನ 3-00 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕಲಾವಿದರು ರಚಿಸಿದ ವರ್ಣಚಿತ್ರಗಳ ಪ್ರದರ್ಶನವೂ ಸಹ ನಡೆಯಲಿದೆ ಎಂದರು.

    ದಿ. ಶ್ರೀ ಹೆಚ್. ರಾಮಚಂದ್ರ ಭಟ್ಟರ ಕನಸಿನ ಶಿಶುವಾದ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯು ತನ್ನ ಸಾರ್ಧಕ್ಯ 25 ವಸಂತಗಳನ್ನು ಪೂರೈಸಿದ್ದು, ದಿನಾಂಕ 10 ಶನಿವಾರದಂದು ಸಂಸ್ಥಾಪಕರ ದಿನಾಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸಹ ಹಮ್ಮಿಕೊಂಡಿದೆ.

    ಸಭಾ ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಗೆ ನಡೆಯಲಿದ್ದು ಅಧ್ಯಕ್ಷತೆಯನ್ನು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಅಂಗಡಿಯ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ, ಸಾಗರ ವಹಿಸಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಯ್ಯಾಸ್ ಬೆವೆರೇಜಸ್ ಮತ್ತು ಫುಡ್ ಪ್ರೈ.ಲಿ ಬೆಂಗಳೂರು ಇದರ ಡಾ. ಪಿ. ಸದಾನಂದ ಮಯ್ಯ, ಪತ್ರಕರ್ತ ವಿನಾಯಕ ಭಟ್, ಮೂರೂರು ಆಗಮಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ.ಮೂ.ಹೆಚ್.ಬಾಲಚಂದ್ರ ಭಟ್, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಹೆಚ್.ಗಣೇಶ್ ಕಾಮತ್, ವೀಣಾರಶ್ಮಿ ಎಂ.,ಪ್ರೊ.ಎಸ್.ನಾರಾಯಣ ರಾವ್, ಡಾ.ಎನ್.ಪಿ ನಾರಾಯಣ ಶೆಟ್ಟಿ ಭಾಗವಹಿಸಲಿದ್ದಾರೆ.

    ಅಂದು ಬೆಳಿಗ್ಗೆ 9.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ‘ಸ್ಪಂದನ ಬೌದ್ಧಿಕ ದಿವ್ಯಾಂಗರ ತರಬೇತಿ ಹಾಗು ಪುನರ್ವಸತಿ ಕೇಂದ್ರ’ ಉಪ್ಪೂರು ಉಡುಪಿ ಇಲ್ಲಿನ ಮಕ್ಕಳಿಂದ ‘ರಾಮಾಯಣ ನೃತ್ಯ ರೂಪಕ, ಮಧ್ಯಾಹ್ನ ಸಭಾ ಕಾರ್ಯಕ್ರಮದ ಬಳಿಕ ವಿನಯ ಹೆಗಡೆ ಸಿರ್ಸಿ ಇವರಿಂದ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಆಧಾರಿತ ಕಾಸ್ಮಿಕ್ ಸ್ಪಾಶ್ ಅಪರೂಪದ ಕಲಾ ಪ್ರದರ್ಶನ ನಡೆಯಲಿದೆ ಎಂದರು.

    ಆರ್ಟಿಸ್ಟ್ ಫೊರಮ್ ಉಡುಪಿ ಇದರ ಅಧ್ಯಕ್ಷರಾದ ರಮೇಶ ರಾವ್ ಮಾತನಾಡಿ ವರ್ಣಾಂಜಲಿ ರಾಜ್ಯ ಮಟ್ಟದ ಕಲಾ ಶಿಬಿರವಾಗಿದೆ. ಇಲ್ಲಿ ಭಾಗವಹಿಸುವ ಎಲ್ಲ ಕಲಾವಿದರು ಕೂಡಾ ಮೊದಲ ದಿನವೇ ತಮ್ಮ ರಚನೆಯ ಚಿತ್ರಗಳನ್ನು ಪ್ರದರ್ಶನ ಮಾಡಲಿದ್ದಾರೆ. ಅವರ ಶೈಲಿ, ಚಿತ್ರಗಳ ವಿಶೇಷತೆಯ ಬಗ್ಗೆ ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಾದದ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
    ಆರ್ಟಿಸ್ಟ್ ಫೊರಮ್ ಉಡುಪಿ ಇದರ ಕಾರ್ಯದರ್ಶಿ ಸಕು ಪಾಂಗಳ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಕಲಾ ಶಿಬಿರದಲ್ಲಿ ಸ್ಥಳದಲ್ಲಿಯೇ ಕಲಾವಿದರು ಚಿತ್ರಕಲೆಯನ್ನು ಮಾಡಲಿದ್ದಾರೆ. ಬೇರೆ ಬೇರೆ ಶೈಲಿಯ ಚಿತ್ರಕಲೆಯನ್ನು ಇಲ್ಲಿ ಪ್ರದರ್ಶನದಲ್ಲಿ ವೀಕ್ಷಿಸಬಹುದು. ಚಿತ್ರಕಲಾವಿದರು ತಮ್ಮ ಕಲಾಕುಂಚದಲ್ಲಿ ಚಿತ್ರಗಳನ್ನು ಹೇಗೆ ರಚಿಸುತ್ತಾರೆ ಎನ್ನುವುದನ್ನು ಸ್ಥಳದಲ್ಲಿ ವೀಕ್ಷಿಸಬಹುದಾಗಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಉಪಸ್ಥಿತರಿದ್ದರು.

  • ಕುಂದಾಪುರ :ವಿವಿಧ ಮತಗಳ ಯುವಜನರು ಒಂದಾಗಿ ನಿರುದ್ಯೋಗ ವಿರುದ್ಧ ಹೋರಾಡಬೇಕು – ಡಿವೈಎಫ್ಐ ಕುಂದಾಪುರ ತಾಲೂಕು ಸಮ್ಮೇಳನದಲ್ಲಿ ಕರೆ

    ಕುಂದಾಪುರ :ವಿವಿಧ ಮತಗಳ ಯುವಜನರು ಒಂದಾಗಿ ನಿರುದ್ಯೋಗ ವಿರುದ್ಧ ಹೋರಾಡಬೇಕು – ಡಿವೈಎಫ್ಐ ಕುಂದಾಪುರ ತಾಲೂಕು ಸಮ್ಮೇಳನದಲ್ಲಿ ಕರೆ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ : ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆ ಅಡಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕುಂದಾಪುರ 15ನೇ ತಾಲೂಕು ಸಮ್ಮೇಳನ ಭಾನುವಾರ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆಯಿತು.

    ಸಮ್ಮೇಳನವನ್ನು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಉದ್ಘಾಟಿಸಿ; ದೇಶದಲ್ಲಿ ಶೇ 35 ರಷ್ಟು ಮಂದಿ ಯುವಜನರು ದೇಶದಲ್ಲಿದ್ದು ದೇಶವನ್ನು ಸಂಪದ್ಭರಿತವಾಗಿ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಆಳುವವರ ನೀತಿಗಳಿಂದಾಗಿ ಯುವಜನರಿಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ ನಿರುದ್ಯೋಗದ ವಿರುದ್ಧ ಒಂದಾಗಬೇಕಾದ ಯುವಜನತೆ ಇಂದು ನಂಬಿಕೆಗಳು,ಆಚರಣೆಗಳ ವಿಚಾರವಾಗಿ ಅಪನಂಬಿಕೆಗಳು ಬೆಳೆದು ಬರುತ್ತಿರುವುದು ಐಕ್ಯತೆಗೆ ಅಪಾಯಕಾರಿಯಾಗಿದೆ ಆದುದರಿಂದ ವಿವಿಧ ಮತಗಳ ಯುವಜನರು ಒಂದಾಗಿ ನಿರುದ್ಯೋಗದ ವಿರುದ್ಧ ಹೋರಾಡಬೇಕು ಅಂತಹ ಹೋರಾಟ ಮುನ್ನೆಡೆಸಲು ಡಿವೈಎಫ್ಐ ಎಂಬ ಪ್ರಗತಿಪರ ಸಂಘಟನೆಗೆ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

    ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಮಾಜಿ ಅಧ್ಯಕ್ಷರಾದ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ
    ಜನವಾದಿ ಮಹಿಳಾ ಸಂಘಟನೆಯ ನಾಯಕಿ ಶೀಲಾವತಿ ಪಡುಕೋಣೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡರಾದ ಶ್ರೀಧರ ನಾಡ ಮಾತನಾಡಿದರು.

    ಡಿವೈಎಫ್ಐ ತಾಲೂಕು ಕಾರ್ಯದರ್ಶಿ ಗಣೇಶ್ ದಾಸ್ ವರದಿ ಮಂಡಿಸಿದರು.ವರದಿ ಮೇಲೆ ಚರ್ಚೆ ನಡೆಸಿ ಅಂಗೀಕರಿಸಲಾಯಿತು.

    ಸಮ್ಮೇಳನದ ಅಧ್ಯಕ್ಷತೆಯನ್ನು ಡಿವೈಎಫ್ಐ ಅಧ್ಯಕ್ಷ ರಾಜೇಶ್ ವಡೇರಹೋಬಳಿ ವಹಿಸಿ ಧ್ವಜಾರೋಹಣ ನೆರವೇರಿಸಿದರು.

    ರವಿ ವಿಎಂ ಅತಿಥಿಗಳನ್ನು ಗೌರವಿಸಿದರು. ಸಮ್ಮೇಳನ ನೂತನ ಸಮಿತಿ ಆಯ್ಕೆ ಮಾಡಿತು.

    ಅಧ್ಯಕ್ಷರಾಗಿ ಗಣೇಶ್ ದಾಸ್ ಕಾರ್ಯದರ್ಶಿಯಾಗಿ ನಿಸರ್ಗ ಅವರನ್ನು ಆಯ್ಕೆ ಮಾಡಿತು.

    17 ಮಂದಿ ಪದಾಧಿಕಾರಿಗಳನ್ನೋಳಗೊಂಡ 26 ಮಂದಿಯ ತಾಲೂಕು ಸಮಿತಿ ಆಯ್ಕೆಯಾಯಿತು.

    ಫೆಬ್ರವರಿ 11 ರಂದು ಉಡುಪಿಯಲ್ಲಿ ನಡೆಯುವ ಯುವಜನರ ಜಿಲ್ಲಾ ಸಮಾವೇಶ ಹಾಗೂ ಪೆಬ್ರವರಿ 25-27 ರ ವರೆಗೆ ನಡೆಯುವ ರಾಜ್ಯ ಸಮ್ಮೇಳನ ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.