Category: ಸುದ್ದಿ

  • ಸಿದ್ದಾಪುರ :ದೇಶ ಅಭಿವೃದ್ದಿಯಾಗ ಬೇಕಾದರೆ ಸಾಮಾನ್ಯ ಜನರು ಅಭಿವೃದ್ದಿಯಾಗಬೇಕು – ಆರ್ ಅಶೋಕ್

    ಸಿದ್ದಾಪುರ :ದೇಶ ಅಭಿವೃದ್ದಿಯಾಗ ಬೇಕಾದರೆ ಸಾಮಾನ್ಯ ಜನರು ಅಭಿವೃದ್ದಿಯಾಗಬೇಕು – ಆರ್ ಅಶೋಕ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಬಡವರ ಅಭಿವೃದ್ಧಿಯಾಗಬೇಕು. ಇದನ್ನು ಗಮನದಲ್ಲಿ ಇಟ್ಟಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸದೃಡವಾಗಿದೆ. 2047ರ ಸಮಯದಲ್ಲಿ ವಿಶ್ವದಲ್ಲೇ ಭಾರತ ಪ್ರಥಮ ಸ್ಥಾನಕ್ಕೇರಲು ನರೇಂದ್ರ ಮೋದಿ ಅವರು ಗುರಿಹೊಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

    ಅವರು ಸಿದ್ದಾಪುರ ಗ್ರಾಮ ಪಂಚಾಯತ್ ಮತ್ತು ಕೆನರಾ ಬ್ಯಾಂಕ್ ಸಿದ್ದಾಪುರ ಶಾಖೆಯ ಸಹ ಯೋಗದೊಂದಿಗೆ ಶನಿವಾರ ಸಿದ್ದಾಪುರ ಶ್ರೀ ರಂಗನಾಥ ಸಭಾ ಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಿಜೆಪಿ ನೇತ್ರತ್ವದ ನರೇಂದ್ರ ಮೋದಿ ಸರಕಾರ ಬಡವರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವಕರ್ಮ ಯೋಜನೆಯ ಮೂಲಕ ಬ್ಯಾಂಕ್ ಮೂಲಕ ಒಂದು ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಈ ಸಾಲಕ್ಕೆ ನರೇಂದ್ರ ಮೋದಿ ಅವರೇ ಗ್ಯಾರಂಟಿಯಾಗಿದ್ದಾರೆ. ವಿಕಾಸಿತ ಭಾರತ ಕಾರ್ಯಕ್ರಮದ ಮೂಲಕ ಕೇಂದ್ರ ಸರಕಾರದ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸುವ ಮಹತ್ವದ ಕಾರ್ಯ ಗ್ರಾ.ಪಂ. ಮಟ್ಟದಲ್ಲಿ ನಡೆಯುತ್ತಿದೆ. ಗ್ರಾಮೀಣ ಜನತೆ ಸರಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಉದ್ದೇಶಿತ ಫಲಾನುಭವಿಗಳಿಗೆ ಸಮಯಕ್ಕೆ ಅನುಗುಣವಾಗಿ ಸರಕಾರದ ಯೋಜನೆಗಳನ್ನು ತಲುಪುವುದನ್ನು ಖಾತ್ರಿಪಡಿಸುವ ಮೂಲಕ, ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಖಾತ್ರಿಯನ್ನು ಸಾಧಿಸುವ ಗುರಿಯನ್ನು ವಿಕಾಸಿತ ಭಾರತ ಸಂಕಲ್ಪಯಾತ್ರೆ ಹೊಂದಿದೆ ಎಂದರು.

    ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

    ಮುಖ್ಯ ಅತಿಥಿಗಳಾಗಿ ಬೆಂಗಳೂರು ಶಾಸಕ ಭೈರತಿ ಬಸವರಾಜ್ ಬಸವರಾಜ್, ದಾಸರಹಳ್ಳಿ ಶಾಸಕ ಮುನಿರಾಜು, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಉಡುಪಿ ಜಿಲ್ಲಾ ಆರೋಗ್ಯ ಮಿತ್ರ ಸುಜನ್ ಮಾಲಾ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ| ಸದಾನಂದ ಆಚಾರ್ಯ, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕ ಗಿರೀಶ್ ಶಾನ್‍ಭೋಗ್, ಸಿದ್ದಾಪುರ ಶಾಖೆಯ ಹಿರಿಯ ಪ್ರಬಂಧಕ ಸಮೀರ್‍ಕುಮಾರ ದೇಸಾಯಿ, ರುಡ್‍ಸೆಟ್ ಬ್ರಹ್ಮಾವರ ಸಂತೋಷ್ ಶೆಟ್ಟಿ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ| ನಾಗಭೂಷಣ ಉಡುಪ, ಅಂಚೆ ಇಲಾಖೆಯ ಜೀವನ್ ಕೆ., ಗ್ರಾ.ಪಂ. ಸದಸ್ಯರು ಹಾಗೂ ಸಿಬಂದಿಗಳು, ಬ್ಯಾಂಕ್ ಸಿಬಂದಿಗಳು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರತಿಜ್ಞಾವಿ„ ಬೋದಿಸಿದರು. ಉಜ್ವಲ್ ಯೋಜನಾ ಫಲಾನುಭವಿಗೆ ಬಾಂಡ್ ವಿತರಿಸಿದರು. ಡ್ರೋನ್ ಪ್ರಾತ್ಯಕ್ಷಿಕೆ ಜರಗಿತು.

    ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ ಸೀನಿಯರ್ ಕೌನ್ಸಿಲರ್ ಮೀರಾ ಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಕಾರ್ಯದರ್ಶಿ ಗಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಉದಯ ಮಡಿವಾಳ ವಂದಿಸಿದರು.

  • ಕುಂದಾಪುರ :ಸರ್ಕಾರೀ ಶಾಲಾ ಮಕ್ಕಳ ಅಭಿವೃದ್ಧಿಗೆ ಕೆಲಸ – ದಿನೇಶ್ ಹೆಗ್ಡೆ ಮೊಳಹಳ್ಳಿ

    ಕುಂದಾಪುರ :ಸರ್ಕಾರೀ ಶಾಲಾ ಮಕ್ಕಳ ಅಭಿವೃದ್ಧಿಗೆ ಕೆಲಸ – ದಿನೇಶ್ ಹೆಗ್ಡೆ ಮೊಳಹಳ್ಳಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್, ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು ಸಮಾಜಮುಖಿಯಾಗಿ ಇನ್ನಷ್ಟು ಕಾರ್ಯಯೋಜನೆಗಳನ್ನು ಅನುಷ್ಠಾನಿಸುವ ಗುರಿ ಹೊಂದಿದೆ. ಕಳೆದ ಹತ್ತು ವರ್ಷಗಳಿಂದ ನಮ್ಮ ತಂದೆ-ತಾಯಿ ಹೆಸರಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂಲಕ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದೆ ಎಂದು ಟ್ರಸ್ಟ್ ಪ್ರವರ್ತಕರಾದ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.

    ಅವರು ಮೊಳಹಳ್ಳಿಯಲ್ಲಿ ಟ್ರಸ್ಟ್ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಕುಂದಾಪುರ ತಾಲೂಕಿನ ಸರಕಾರಿ ಶಾಲಾ ಕಾಲೇಜಿನ ಮಕ್ಕಳಿಗೆ ಉಚಿತ ಆಪ್ತ ಸಮಾಲೋಚನೆ ಮತ್ತು ಪೂರಕ ಕಾರ್ಯಾಗಾರಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ನಡೆಸಿಕೊಡುವುದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಲ್ಲಂತಹ ಚಟುವಟಿಕೆಗಳನ್ನು ಆಯೋಜಿಸುವುದು, ಶಾಲಾ ಕಾಲೇಜು ಮಕ್ಕಳಿಗೆ ಅಗತ್ಯ ವಿರುವ ಪಾಠ ಸಾಮಗ್ರಿಗಳನ್ನು ಒದಗಿಸುವುದು, ಕುಂದಾಪುರ ವಿಧಾನಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಪುನರ್ಬಲನ ನೀಡುವುದು ಮತ್ತು ಅವರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದರು.

    ಆರೋಗ್ಯ ನಿಮಿತ್ತ ನೆರವು ಬಯಸಿ ಬರುವ ಕ್ಷೇತ್ರದ ಜನತೆಗೆ ಸಹಾಯ ಒದಗಿಸುವುದು ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಿಗೆ ನೆರವಾಗುವುದು, ಸಮುದಾಯದ ಮಹಿಳೆಯರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು, ಆರ್ಥಿಕವಾಗಿ ಸ್ವತಂತ್ರರಾಗಲು ಸಬಲಗೊಳಿಸುವುದು. ವಿವಿಧ ಕಂಪೆನಿಗಳ ನೆರವಿನಿಂದ ಉದ್ಯೋಗ ಮೇಳವನ್ನು ನಡೆಸಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸಲು ಶ್ರಮಿಸುವುದು, ತುರ್ತು ಸಂದರ್ಭದಲ್ಲಿ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗೆ ತುರ್ತು ಅಗತ್ಯ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಶ್ರಮಿಸಲಿದೆ ಎಂದರು.
    ಕುಂದಾಪುರ ಕ್ಷೇತ್ರದ ಜನ ಇದರ ಸದುಪಯೋಗ ಪಡೆದುಕೊಳ್ಳಬಹುದು. ನೆರವಿನ ಅವಶ್ಯಕತೆ ಇರುವವರು ಟ್ರಸ್ಟ್‍ನ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಪ್ರಮುಖವಾಗಿ ಶಾಲೆಗಳಲ್ಲಿ ಮನಶಾಸ್ತ್ರಜ್ಞರ ಮೂಲಕ ಮಾಹಿತಿಯನ್ನು ನೀಡಿ ಅಗತ್ಯ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಹಾಗೆಯೇ ಸ್ವ-ಉದ್ಯೋಗಕ್ಕೆ ಪೂರಕವಾದ ತರಬೇತಿಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಟ್ರಸ್ಟ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿದೆ ಎಂದರು.

    ಟ್ರಸ್ಟ್‌ನ ಯೋಜನಾಧಿಕಾರಿಯಾಗಿ ಗಿರೀಶ್ ಎಂ.ಎನ್. ಕೋಶಾಧಿಕಾರಿಯಾಗಿ ದೀಪಿಕಾ ಡಿ.ಹೆಗ್ಡೆ, ಸದಸ್ಯರುಗಳಾಗಿ ಸಂತೋಷ್ ಕಾಂಚನ್, ಸುಜಾತ, ಗಣೇಶ್ ಎನ್., ಸರಸ್ವತಿ ಎಸ್ ಹೆಗ್ಡೆ, ಪೂರ್ಣಿಮಾ ಆರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ಟ್ರಸ್ಟ್‌ನ ಯೋಜನಾಧಿಕಾರಿ, ಮನಃಶಾಸ್ತ್ರ ಉಪನ್ಯಾಸಕ ಗಿರೀಶ್ ಎಂ.ಎನ್ ,ಟ್ರಸ್ಟ್ ಕೋಶಾಧಿಕಾರಿ ದೀಪಿಕಾ ಡಿ.ಹೆಗ್ಡೆ ಉಪಸ್ಥಿತರಿದ್ದರು.

  • ಉಡುಪಿ :ಜೇಸಿಐ ಕಲ್ಯಾಣಪುರಕ್ಕೆ ರಾಷ್ಟ್ರೀಯ ಪುರಸ್ಕಾರ

    ಉಡುಪಿ :ಜೇಸಿಐ ಕಲ್ಯಾಣಪುರಕ್ಕೆ ರಾಷ್ಟ್ರೀಯ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬೆಂಗಳೂರಿನಲ್ಲಿ ನಡೆದ ಜೇಸಿಐ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ 25 ಗಂಟೆಗಳ ನಿರಂತರ ಟ್ರೈನಿಂಗ್ ಮ್ಯಾರಥಾನ್, ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆಯಾದ ತರಬೇತಿ ಕಾರ್ಯಕ್ರಮಕ್ಕೆ ಜೇಸಿಐ ಕಲ್ಯಾಣಪುರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾರ್ತಿಕೇಯನ್ ಜೇಸಿಐ ಕಲ್ಯಾಣಪುರದ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಇವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ವಲಯ15ರ ವಲಯಧ್ಯಕ್ಷ ಪುರುಷೋತ್ತಮ ಶೆಟ್ಟಿ,ಜೇಸಿಐ ಇಂಡಿಯಾದ ನಿರ್ದೇಶಕರಾದ ಅಲನ್ ರೋಹನ್ ವಾಜ್, ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ 15ರ 2024ರ ವಲಯಧ್ಯಕ್ಷ ಸೆನೇಟರ್ ಗಿರೀಶ್ ಎಸ್.ಪಿ, ಪೂರ್ವ ವಲಯಧ್ಯಕ್ಷೆ ಸೌಜನ್ಯ ಹೆಗ್ಡೆ,ಪೂರ್ವ ವಲಯ ಉಪಾಧ್ಯಕ್ಷ ಆಶಾ ಅಲನ್ ವಾಜ್, ಪೂರ್ವ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್ , ಪೂರ್ವ ವಲಯ ಉಪಾಧ್ಯಕ್ಷ ಜಬ್ಬಾರ್ ಸಾಹೇಬ್ ತರಬೇತಿಯ ಕಾರ್ಯಕ್ರಮದ ನಿರ್ದೇಶಕ ಚಿತ್ರ ಕುಮಾರ್,ಘಟಕದ ಅಧ್ಯಕ್ಷ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು.

  • ಕುಂದಾಪುರ :ಮುಚ್ಚುವ ಹಂತದಲ್ಲಿ ಅನುದಾನಿತ ಶಾಲೆ! ಉಳಿಸಿಕೊಳ್ಳಲು ಎಸ್.ಡಿ.ಎಂ.ಸಿ ಮನವಿ

    ಕುಂದಾಪುರ :ಮುಚ್ಚುವ ಹಂತದಲ್ಲಿ ಅನುದಾನಿತ ಶಾಲೆ! ಉಳಿಸಿಕೊಳ್ಳಲು ಎಸ್.ಡಿ.ಎಂ.ಸಿ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮುಚ್ಚುವ ಹಂತದಲ್ಲಿರುವ, ಸುಮಾರು 116 ವರ್ಷಗಳ ಇತಿಹಾಸ ಇರುವ ಬೈಂದೂರು ಶೈಕ್ಷಣಿಕ ವಲಯದ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸರ್ವೋದಯ ಅನುದಾನಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸರ್ಕಾರ ಸ್ವಾಧಿನ ಪಡೆದು ಶಾಲೆ ಆರಂಭಿಸಬೇಕು ಎನ್ನುವ ಹೋರಾಟವನ್ನು ಎಸ್‌ ಡಿ ಎಂ ಸಿ ತಂಡ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಆರಂಭಿಸಿದ್ದಾರೆ.

    ಈ ನಿಟ್ಟಿನಲ್ಲಿ “ಗುಲ್ವಾಡಿ ಶಾಲೆ ಉಳಿಸಿ ಹೋರಾಟ ಸಮಿತಿ” ರಚಿಸಿ ಹೋರಾಟ ಆರಂಭಿಸಲಾಗಿದ್ದು, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಕಚೇರಿಗೆ ಭೇಟಿ ನೀಡಿ ಹೋರಾಟಕ್ಕೆ ಸಲಹೆ ಸೂಚನೆ ಮಾರ್ಗದರ್ಶನ ನೀಡುವಂತೆ ಮನವಿ ನೀಡಲಾಯಿತು.

    ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಇಸ್ಮಾಯಿಲ್, ಉತ್ಸವ ಸಮಿತಿ ಗೌರವಾಧ್ಯಕ್ಷ ವಿವೇಕಾನಂದ ಭಂಡಾರಿ, ಎಸ್.ಡಿ.ಎಂ.ಸಿ. ಸದಸ್ಯರಾದ ಹರೀಶ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಐ . ಕೆ. ಇಬ್ರಾಹಿಂ, ಅಬ್ದುಲ್ಲಾ ಗುಲ್ವಾಡಿ, ಶ್ರೀಧರ ಪೂಜಾರಿ, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು , ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್ , ವಿ ನಾಗರಾಜ್ , ಬೈಂದೂರು ತಾಲೂಕು ಕೋಶಾಧಿಕಾರಿ ಸಾಧಿಕ್ ಮಾವಿನಕಟ್ಟೆ, ಸಂಘಟನಾ ಕಾರ್ಯದರ್ಶಿ ವರದ ಆಚಾರ್ಯ, ಉಪಸ್ಥಿತರಿದ್ದರು, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಮಾತನಾಡಿ, ವೇದಿಕೆಯಿಂದ ಶಿಕ್ಷಣ ಇಲಾಖೆ ಜೊತೆ ಮಾತನಾಡಿ ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಹೇಳಿದರು.

    ಒಂದರಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 60ಕ್ಕಿಂತಲೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು 2 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆ ಇಲ್ಲದೆ ಇರುವುದರಿಂದ ಇದೇ ಶಾಲೆಯನ್ನು ಸರಕಾರಿ ಶಾಲೆಯನ್ನಾಗಿ ಮಾಡಲು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಈಗಾಗಲೇ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಇಲಾಖೆ ನಿಯಮದಂತೆ ಅನುದಾನಿತ ಶಾಲೆಯ ಶಿಕ್ಷಕರ ನಿವೃತ್ತಿ ನಂತರ ಆಡಳಿತ ಮಂಡಳಿ ಶಾಲೆ ನಡೆಸಿಕೊಂಡು ಹೋಗಬೇಕು ಆದರೆ ಇಲ್ಲಿ ಆಡಳಿತ ಮಂಡಳಿ ಅಸ್ತಿತ್ವ ಇಲ್ಲದೆ ಇರುವುದರಿಂದ ಇಲಾಖೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಾಲೆ ಮುಚ್ಚಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.

  • ಕೋಟ ಸುರೇಶ್ ಅವರಿಗೆ ‘ಶ್ರೀನಿವಾಸ ಉಡುಪ’ ಪ್ರಶಸ್ತಿ

    ಕೋಟ ಸುರೇಶ್ ಅವರಿಗೆ ‘ಶ್ರೀನಿವಾಸ ಉಡುಪ’ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲಿ ಒಬ್ಬರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕೊಡಮಾಡುವ 2023-24 ರ ಸಾಲಿನ ಉಡುಪ ಪ್ರಶಸ್ತಿಗೆ ಕೋಟ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ, ಮಟ್ಪಾಡಿ ತಿಟ್ಟಿನ ಕೋಟ ಸುರೇಶ್ ಬಂಗೇರ ಭಾಜನರಾಗಿದ್ದಾರೆ.

    ಯಕ್ಷಗಾನದ ದಂತಕತೆ ಶಿರಿಯಾರ ಮಂಜು ನಾಯ್ಕರ ಮಾತುಗಾರಿಕೆ, ಗುರು ವೀರಭದ್ರ ನಾಯ್ಕ್ ಹೆಜ್ಜೆಗಾರಿಕೆ, ಮೊಳಹಳ್ಳಿ ಹಿರಿಯ ನಾಯ್ಕ್ ರ ರಂಗತಂತ್ರಗಳನ್ನು ಮೈಗೂಡಿಸಿಕೊಂಡು ಪ್ರಸಿದ್ದ ಪುರುಷ ವೇಷಧಾರಿಯಾಗಿ ಗುರುತಿಸಿಕೊಂಡು ಇದೀಗ ಯಕ್ಷರಂಗದಲ್ಲಿ ಎರಡನೆ ವೇಷದಲ್ಲಿ ಮಿಂಚುತ್ತಿರುವ ಸುರೇಶ್‍ರು ಸುಧನ್ವ, ಪುಷ್ಕಳ, ಶುಭ್ರಾಂಗ, ಮಾರ್ತಾಂಡತೇಜ, ಅರ್ಜುನ, ಕೃಷ್ಣ, ತಾಮ್ರಧ್ವಜ, ಪರಶುರಾಮ ಮೊದಲಾದ ಪಾತ್ರಗಳಲ್ಲದೆ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿ, ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ ಮೊದಲಾದ ಮೇಳಗಳಲ್ಲಿ ಸುಮಾರು 36 ವರ್ಷಗಳ ಕಾಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

    ಮುಂದಿನ ತಿಂಗಳು ಅಂದರೆ ಫೆಬ್ರುವರಿ 11ರ ಆದಿತ್ಯವಾರ ಕೋಟದ ಪಟೇಲರ ಮನೆಯ ಆವರಣದಲ್ಲಿ ಗಣ್ಯರ ಸಮಕ್ಷಮದಲ್ಲಿ ಹತ್ತು ಸಹಸ್ರ ಮೊತ್ತದೊಂದಿಗೆ ಸುರೇಶ್ ಅವರನ್ನು ಗೌರವಿಸಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಟ್ರಸ್ಟ್‍ನ ಕಾರ್ಯಾಧ್ಯಕ್ಷ ಮಹೇಶ್ ಉಡುಪ ಎಂ., ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಪ್ರಶಸ್ತಿ ಸಮಿತಿ ನಿರ್ಣಯಿಸಿದೆ ಎಂದು ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಯುವನಿಧಿ ಯೋಜನೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.:ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಯುವನಿಧಿ ಯೋಜನೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.:ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ‌ಸುದ್ದಿ…

    ಉಡುಪಿ : ಸರ್ಕಾರದ ಮಹತ್ತರ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, 2022-23 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು ಸೇವಾ ಸಿಂಧು ಮೂಲಕ ಜಾಲತಾಣದಲ್ಲಿ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ವರ್ಚುವಲ್ ಮೂಲಕ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಅನುಷ್ಠಾನಗೊಳಿಸುವ ಕುರಿತು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಯುವನಿಧಿ ಯೋಜನೆ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಜಿಲ್ಲೆಯ ಅರ್ಹ ಪದವೀಧರರು ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಗೆ ಜನವರಿ 12 ರ ಯುವ ದಿನಾಚರಣೆಯಂದು ಶಿವಮೊಗ್ಗದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಫಲಾನುಭವಿಗಳ ಖಾತೆಗೆ ಹಣ ವರ್ಗವಣೆ ಮಾಡಲಿದ್ದಾರೆ ಎಂದರು.

    ಯುವನಿಧಿಗೆ ಅರ್ಜಿ ಸಲ್ಲಿಸುವಾಗ ಸೇವಾಸಿಂಧು ಪೋರ್ಟಲ್‌ನಲ್ಲಿ ನ್ಯಾಷನಲ್ ಅಕಾಡೆಮಿಕ್ ಡೆಪೊಸೆಟರಿಯ ಲಿಂಕ್‌ಅನ್ನು ಬಳಕೆ ಮಾಡುವುದರೊಂದಿಗೆ ಸರಳವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ. ಇದನ್ನು ಪ್ರತಿಯೊಬ್ಬರೂ ಬಳಕೆ ಮಾಡಬಹುದು ಎಂದ ಅವರು, ವಿಶ್ವ ವಿದ್ಯಾನಿಲಯದ ರಿಜಿಸ್ಟಾçರ್ ಗೆ ನ್ಯಾಡ್ ಪೋರ್ಟಲ್‌ನಲ್ಲಿ ಬಿಟ್ಟುಹೋಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ವಿವರವನ್ನು ನೋಂದಾಯಿಸಲು ಪತ್ರ ಬರೆಯುದಾಗಿ ತಿಳಿಸಿದರು.

    2023 ರಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಹೊಂದದೆ ಇರುವ ರಾಜ್ಯದಲ್ಲಿ ವಾಸವಾಗಿರುವ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಅಥವಾ ಡಿಪ್ಲೋಮಾ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಅಗತ್ಯ ದಾಖಲೆಗಳು ಸೇರಿದಂತೆ ಮತ್ತಿತರ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಲಂದರ್ ಖಾನ್, ಉಡುಪಿ ಲೀಡ್ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

  • ಆನೆಗುಡ್ಡೆ ದೇಗುಲದಲ್ಲಿ 21ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ

    ಆನೆಗುಡ್ಡೆ ದೇಗುಲದಲ್ಲಿ 21ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಜ. 2ರಂದು 21 ಸಾವಿರ ತೆಂಗಿನ ಕಾಯಿ ಮೂಡು ಗಣಪತಿ ಸೇವೆ ನಡೆಯಿತು.

    ಬ್ರಹ್ಮಾವರದ ನಿವಾಸಿ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಡಾ.ಮೇಜರ್ ವಂದನ ಬಿರ್ತಿ ಮತ್ತು ಡಾ. ಮೇಜರ್ ಪ್ರವರ್ಧನ ಬಿರ್ತಿ ಇವರಿಂದ ಹರಕೆಯ ಸೇವೆಯಾಗಿತ್ತು.

    ದೇವಳದ ಆಡಳಿತ ಧರ್ಮದರ್ಶಿ ಕೆ.ರಮಣ ಉಪಾಧ್ಯಾಯ, ವಿಶ್ರಾಂತ ಧರ್ಮದರ್ಶಿ, ಸೂರ್ಯನಾರಾಯಣ ಉಪಾಧ್ಯಾಯ, ಕೆ.ನಿರಂಜನ ಉಪಾಧ್ಯಾಯ, ಕೆ. ವಿಠಲ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಶ್ರೀಶ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್, ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಅರ್ಚಕರು ಉಪಸ್ಥಿತರಿದ್ದರು. ರವಿರಾಜ್ ಉಪಾಧ್ಯಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ಶ್ರೀಧರ್ ಉಪಾಧ್ಯಾಯ ಅವರು ವಿಶೇಷ ಪೂಜಾ ಕೈಂಕರ್ಯದಲ್ಲಿ ಸಹಕರಿಸಿದ್ದರು.

  • ಬಾರ್ಕೂರು ಕಾಳಿಕಾಂಬಾ ದೇವಾಲಯ ಮುಕ್ತೇಸರ ಎಂ.ಸುಬ್ರಾಯ ಆಚಾರ್ ರವರಿಗೆ ಸಚಿವ ಕೋಟ ಅಭಿನಂದನೆ

    ಬಾರ್ಕೂರು ಕಾಳಿಕಾಂಬಾ ದೇವಾಲಯ ಮುಕ್ತೇಸರ ಎಂ.ಸುಬ್ರಾಯ ಆಚಾರ್ ರವರಿಗೆ ಸಚಿವ ಕೋಟ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇತಿಹಾಸ ಪ್ರಸಿದ್ಧ ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇವಾಲಯದ ಆಡಳಿತ ಸಮಿತಿಯ ಮೂರನೆಯ ಮೊಕ್ತೇಸರರಾಗಿ ಆಯ್ಕೆಯಾದ ಉದ್ಯಮಿ ಮಣೂರು ಸುಬ್ರಾಯ ಆಚಾರ್ ರವರಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದಂಪತಿಗಳು ಅಭಿನಂದಿಸಿದರು. ಈ ವೇಳೆ ಅಧಿಕಾರಿ ವರ್ಗ ಮತ್ತಿತರರು ಇದ್ದರು.

  • ಮಣೂರು – ಸ್ಪರ್ಶ ಕಾರ್ಯಕ್ರಮದ ಪೂರ್ವಭಾವಿ ಕ್ರೀಡಾಕೂಟ ಆಯೋಜನೆ

    ಮಣೂರು – ಸ್ಪರ್ಶ ಕಾರ್ಯಕ್ರಮದ ಪೂರ್ವಭಾವಿ ಕ್ರೀಡಾಕೂಟ ಆಯೋಜನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಭಗತ್ ಸಿಂಗ್ ಯುವ ವೇದಿಕೆ ಹಾಗೂ ಬಾಳೆಬೆಟ್ಟು ಫ್ರೆಂಡ್ಸ್ ಆಶ್ರಯದಲ್ಲಿ ಇದೇ ಜ.14ರಂದು ಮಣೂರು ಪರಿಸರದಲ್ಲಿ ಆಯೋಜಿಸಲಿರುವ ಸ್ಪರ್ಶ -2024 ಕಾರ್ಯಕ್ರಮದ ಅಂಗವಾಗಿ ಕ್ರೀಡಾ ಕೂಟವನ್ನು ಇತ್ತೀಚಿಗೆ ಮಣೂರು ಪರಿಸರದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ದುಬೈ ಉದ್ಯಮಿ ಪ್ರತಾಪ್ ಶೆಟ್ಟಿ ಕೂಡಾಲ್ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಯೊಬ್ಬರನ್ನು ಕ್ರೀಯಾಶೀಲಗೊಳಿಸುವ ಹಾಗೂ ವ್ಯಕ್ತಿತ್ವ ಬದಲಿಸುವ ಜತೆಗೆ ಗ್ರಾಮಗಳನ್ನು ಒಂದುಗೂಡಿಸವ ಕಾರ್ಯಕ್ಷೇತ್ರವಾಗಿದೆ. ಈ ಮೂಲಕ ಕ್ರೀಡೆ ಸ್ಪರ್ಧಾ ಜಗತ್ತನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಇದೇ ರೀತಿ ಊರಿನ ಮೇರುಗು ಹೆಚ್ಚಿಸುವಂತ್ತಾಗಲಿ ಎಂದು ಹಾರೈಸಿದರು . ಇದೇ ವೇಳೆ ಸಮಾರೋಪ ಕಾರ್ಯಕ್ರಮದಲ್ಲಿ ಟೀಮ್ ಸ್ಪರ್ಶದ ಸದಸ್ಯರು ಮತ್ತು ಬಾಳೆಬೆಟ್ಟು ಗ್ರಾಮಸ್ಥರು ವಿವಿಧ ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ ಸ್ಪರ್ಧಾ ವಿಜೇತಯರಿಗೆ ಬಹುಮಾನ ನೀಡಲಾಯಿತು.

    ವೇದಿಕೆಯಲ್ಲಿ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಹಾಡಿಕೆರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ನಿವೃತ್ತ ಕ್ರೀಡಾ ಪರಿವೀಕ್ಷಣಾ ಅಧಿಕಾರಿ ಗೋಪಾಲ ಶೆಟ್ಟಿ, ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಶಿವರಾಮ ಶೆಟ್ಟಿ , ಶಾಂತ, ಗುಲಾಬಿ ಪೂಜಾರಿ ಉಪಸ್ಥಿತರಿದ್ದರು.

    ಸಭಾಧ್ಯಕ್ಷತೆ ರತ್ನಾಕರ ಪೂಜಾರಿ ವಹಿಸಿ ,ಪ್ರಸಾದ್ ಬಿಲ್ಲವ ಸ್ವಾಗತಿಸಿ, ಪ್ರಸ್ತಾವನೆ ಗೈದರು ,ಅವಿನಾಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

  • ಬೈಂದೂರು :ಅಯೋಧ್ಯೆ ಮಂತ್ರಾಕ್ಷತೆಯ ವಿತರಣಾ ಅಭಿಯಾನಕ್ಕೆ ಗುರುರಾಜ್ ಗಂಟಿಹೊಳೆ ಚಾಲನೆ

    ಬೈಂದೂರು :ಅಯೋಧ್ಯೆ ಮಂತ್ರಾಕ್ಷತೆಯ ವಿತರಣಾ ಅಭಿಯಾನಕ್ಕೆ ಗುರುರಾಜ್ ಗಂಟಿಹೊಳೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಅಯೋಧ್ಯೆ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಿಂದ ಪ್ರಸಾದ ರೂಪದಲ್ಲಿ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಜನವರಿ 1 ರಿಂದ 15ರವರೆಗೆ ದೇಶದ ಗ್ರಾಮ ಗ್ರಾಮಗಳಿಗೂ ತಲುಪಿಸುವ ಸಂಕಲ್ಪ ಹೊಂದಲಾಗಿದೆ.

    ಈ ಸಂಕಲ್ಪದಂತೆ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಜ. 2ರಂದು ಶಿರೂರಿನ ಆಲಂದೂರಿನಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ, ಆಲಂದೂರು ಭಾಗದ ಮನೆ ಮನೆಗಳಿಗೆ ತೆರಳಿ ಪ್ರಸಾದ ವಿತರಿಸಿದರು.