Category: ಸುದ್ದಿ

  • ಪಂಚವರ್ಣ ಸಂಸ್ಥೆ ವರ್ಣಮಯ ಕಾರ್ಯಗಳ ಕ್ರೀಯಾಶೀಲ ಸಂಸ್ಥೆ- ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್

    ಪಂಚವರ್ಣ ಸಂಸ್ಥೆ ವರ್ಣಮಯ ಕಾರ್ಯಗಳ ಕ್ರೀಯಾಶೀಲ ಸಂಸ್ಥೆ- ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್

    ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

    ಕುಂದಾಪುರ ಮಿರರ್ ‌ಸುದ್ದಿ…
    ಕೋಟ: ಪಂಚವರ್ಣ ಸಂಸ್ಥೆ ನಾನಾ ಸಮಾಜಮುಖಿ ವರ್ಣಮಯ ಕಾರ್ಯಕ್ರಮಗಳಿಂದ ಜನಮನ್ನಣೆಗಳಿಸಿದೆ ಎಂದು ಕುಂದಾಪುರದ ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಹೇಳಿದರು.

    ಶುಕ್ರವಾರ ಹಂಗಾರಕಟ್ಟೆ ಬಾಳಕುದ್ರು ಶ್ರೀ ಮಠದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ನ.10ರಂದು ಕೋಟ ಗಾಂಧಿ ಮೈದಾನದಲ್ಲಿ ನಡೆಯುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ನಿರಂತರ ಸಾಮಾಜಿಕ ಕಾರ್ಯಗಳು ಅದರಲ್ಲೂ ಅವರ ಸ್ವಚ್ಛತಾ ಪರಿಸರಸ್ನೇಹಿ ಕಾರ್ಯಕ್ರಮಗಳು ಅದರ ಯಶಸ್ಸಿನ ಭಾಗವಾಗಿದೆ. ಇವರ ಕಾರ್ಯಭಾಹುಳ್ಯ ಎಲ್ಲಾ ಕ್ಷೇತ್ರಗಳಲ್ಲಿ ಪಸರಿಸಿಕೊಂಡಿದೆ, ಅನ್ನದಾನ ಆರೋಗ್ಯ ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚಿನ ಆಯಾಮ ನೀಡಿದಂತೆ ಸಮಾಜದ ಕುಂದುಕೊರತೆಗಳ ಬಗ್ಗೆ ಸ್ಪಂದಿಸುವ ಈ ಸಂಸ್ಥೆ ಬಹು ಎತ್ತರಕ್ಕೆ ಬೆಳೆಯಲಿ ಇನ್ನಷ್ಟು ಸೇವಾ ಕಾರ್ಯ ಜನಸಾಮಾನ್ಯರಿಗೆ ದಕ್ಕಲಿ ಎಂದು ಹಾರೈಸಿದರು.

    ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ಪಂಚವರ್ಣ ಸಂಸ್ಥೆ ನಿರಂತ 26 ಸಂವತ್ಸರಗಳಿಂದ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸಿದೆ.ಪರೋಪಕಾರಕ್ಕಾ ಪರಿಸರದಲ್ಲಿ ನದಿ, ಮರಗಿಡಗಳು ಪಕ್ಷಿ ಸಂಕುಲಗಳು ಜೀವಿಸುತ್ತದೆ ಅದರಂತೆ ಒಂದು ಸಂಸ್ಥೆಯಾಗಿ ಮಾಡಬೇಕಾದ ನೈಜ ಕಾರ್ಯಕ್ರಮಗಳನ್ನು ಪಂಚವರ್ಣ ಸಂಸ್ಥೆ ನೀಡುತ್ತಿದೆ. ಸಮಾಜದ ಋಣ ತಿರಿಸಲು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇದೊಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಶುಭಾಶ್ರೀವಾದ ನೀಡಿದರು.

    ಇದೇ ವೇಳೆ ಗಣ್ಯರ ಸಮ್ಮುಖದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

    ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಾಂಡೇಶ್ವರ ಕಳಿಬೈಲು ಶ್ರೀ ಕ್ಷೇತ್ರದ ಮುಕ್ತೇಸರ ಎಂ.ಸಿ ಚಂದ್ರಶೇಖರ, ಗೋಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್, ಸಾಮಾಜಿಕ ಚಿಂತಕ ಗಣೇಶ್ ಪುತ್ರನ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಹಂದಟ್ಟು ಮಹಿಳಾ ಬಳಗದ ಶಕೀಲ ಎನ್ ಪೂಜಾರಿ , ಶ್ರೀ ಮಠದ ಚಂದ್ರ ಭಟ್, ಮಂಜುನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.

    ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಇದೇ ಬರುವ ನ.10ರಂದು ಕೋಟದ ಗಾಂಧೀ ಮೈದಾನದಲ್ಲಿ ಚಿತ್ರನಟ ದೊಡ್ಡಣ್ಣ ಇವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

  • ಕುಂದಾಪುರ :ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ದೆಹಲಿಯ ಉದ್ಯಾನವನಕ್ಕೆ ಗ್ರಾಮಗಳ ಮಣ್ಣು – ಕುಂದಾಪುರದಲ್ಲಿ ಚಾಲನೆ

    ಕುಂದಾಪುರ :ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ದೆಹಲಿಯ ಉದ್ಯಾನವನಕ್ಕೆ ಗ್ರಾಮಗಳ ಮಣ್ಣು – ಕುಂದಾಪುರದಲ್ಲಿ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದ ವತಿಯಿಂದ ದೇಶಕ್ಕಾಗಿ ಹೋರಾಡಿದ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿಗಾಗಿ ದೆಹಲಿಯ ಉದ್ಯಾನವನಕ್ಕೆ ಹಳ್ಳಿ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಉವ ವಿಭಿನ್ನ ಕಾರ್ಯಕ್ರಮ “ನನ್ನ ಮಣ್ಣು ನನ್ನ ದೇಶ”ಕ್ಕೆ ಕುಂದಾಪುರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

    ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ, ನೆಹರು ಯುವಕೇಂದ್ರ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಆಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ನನ್ನ ಮಣ್ಣು ನನ್ನ ದೇಶ ವಿಭಿನ್ನ ಕಾರ್ಯಕ್ರಮವಾಗಿದ್ದು, ಈ ಮೂಲಕ ಪ್ರತಿಯೊಬ್ಬರೂ ದೇಶ ಪ್ರೇಮ ಬಿಂಬಿಸಲು ಅವಕಾಶ ಕಲ್ಪಿಸುತ್ತದೆ. ನಮ್ಮ ನೆಲದ ಮಣ್ಣು ದೇಶಮಟ್ಟದ ಸ್ವಾತಂತ್ರಯ ನೆನಪಿಸುವ ಉದ್ಯಾನವೊಂದರಲ್ಲಿ ಸ್ಥಾಪನೆಯಾಗುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತದೆ ಎಂದವರು ಹೇಳಿದರು.

    ಪ್ರತಿಜ್ಞಾವಿಧಿ ಬೋಧಿಸಿದ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಲ್ಲದೇ ಸಂವಿಧಾನ ನಮಗೆ ನೀಡಿದ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ನಮ್ಮ ದೇಶವನ್ನು ರಕ್ಷಣೆ ಮಾಡಲು ಕಣ್ಭಲ್ಲಿ ಕಣ್ಣಿಟ್ಟು ಕಾಯುವ ಪ್ರತಿಯೊಬ್ಬ ಸೈನಿಕನಿಗೂ ನಾವು ಗೌರವ ನೀಡಬೇಕು. ಆ ನಿಟ್ಟಿನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

    ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಕುಂದಾಪುರ ತಹಶಿಲ್ದಾರ ಶೋಭಾ ಲಕ್ಷ್ಮೀ, ಕುಂದಾಪುರ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ್,
    ಮೊದಲಾದವರು ಇದ್ದರು.

  • ಉಡುಪಿ :ಹೆಚ್ಚು ಶಬ್ದವನ್ನುಂಟು ಮಾಡುವ ಸುಡುಮದ್ದುಗಳ ಬಳಕೆ ನಿಷೇಧ

    ಉಡುಪಿ :ಹೆಚ್ಚು ಶಬ್ದವನ್ನುಂಟು ಮಾಡುವ ಸುಡುಮದ್ದುಗಳ ಬಳಕೆ ನಿಷೇಧ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ : ಕೇಂದ್ರ ಸರ್ಕಾರವು ಜೋಡಿಸಲಾದ ಸುಡುಮದ್ದುಗಳನ್ನೊಳಗೊಂಡ (ಗಾರ್ಲ್ಯಾಂಡ್) 125 ಡಿ.ಬಿ (ಎ1) ಗಿಂತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದು, ಇಂತಹ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯು ಕಾನೂನು ಬಾಹಿರವಾಗಿರುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಈ ಕೆಳಗಿನಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

    ಸುಡುಮದ್ದನ್ನು ಲೈಸೆನ್ಸ್ ಹೊಂದಿರುವ ವಿಶ್ವಾಸಾರ್ಹ ಮರಾಟಗಾರರಿಂದ ಖರೀದಿಸಬೇಕು, ಸುಡುಮದ್ದುಗಳ ಬಳಕೆಯನ್ನು ಯಾವಾಗಲೂ ಒಬ್ಬ ವಯಸ್ಕ ಪರಿವೀಕ್ಷಿಸಬೇಕು. ಸುಡುಮದ್ದುಗಳ ಮೇಲೆ ನಮೂದಿಸಲಾದ ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಮೇಣದ ಬತ್ತಿ ಅಥವಾ ಅಗರ್‌ಬತ್ತಿಯನ್ನು ಉಪಯೋಗಿಸಬೇಕು. ಬೆಂಕಿಯನ್ನು ಮೊದಲ ಹಂತದಲ್ಲೇ ಆರಿಸಲು ಯಾವಾಗಲೂ ಕೈಗೆ ಎಟುಕುವಂತೆ ಒಂದು ಬಾಟಲಿನಲ್ಲಿ ನೀರನ್ನು ಇರಿಸಿಕೊಳ್ಳಬೇಕು. ಆಕಾಶದ ಸುಡುಮದ್ದುಗಳನ್ನು ಸುರಕ್ಷಿತವಾಗಿ ಕೆಳಗೆ ಬೀಳಬಹುದಾದ ವಲಯದಲ್ಲಿ ಉಪಯೋಗಿಸಬೇಕು ಹಾಗೂ ಸುಡುಮದ್ದುಗಳನ್ನು ಸೂಕ್ತ ರೀತಿಯಲ್ಲಿ ನೀರಿನಲ್ಲಿ ಅದ್ದುವ ಮೂಲಕ ವಿಲೇವಾರಿ ಮಾಡಬೇಕು.

    ಸಿಡಿಸುವ ಜಾಗದಿಂದ ನಾಲ್ಕು ಮೀಟರ್ ದೂರದಲ್ಲಿ 125 ಡಿ.ಬಿ(ಎ1) ಅಥವಾ 145 ಪಿ.ಕೆ ಗಿಂತ ಅಧಿಕ ಶಬ್ದವನ್ನು ಉಂಟುಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಶಬ್ದವನ್ನುಂಟು ಮಾಡುವ ಸುಡುಮದ್ದುಗಳನ್ನು ಸುಡಬಾರದು. ಕೈಯಲ್ಲಿ ಹಿಡಿದಿರುವಾಗ ಸುಡುಮದ್ದುಗಳನ್ನು ಉರಿಸದೇ, ಅವುಗಳನ್ನು ಕೆಳಗಿಟ್ಟು ಹೊತ್ತಿಸಿ, ದೂರ ಹೀಗಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಯಾವುದೇ ಧಾರಕ (ಪಾತ್ರೆ) ಗಳನ್ನು ಉಪಯೋಗಿಸಬಾರದು. ಮೇಲ್ಭಾಗದಲ್ಲಿ ತಡೆಗಳು ಇರುವಲ್ಲಿ, ಮರಗಳು, ಎಲೆಗಳು, ತಂತಿ ಇತ್ಯಾದಿಗಳು ಇರುವಲ್ಲಿ ಆಕಾಶದ ಸುಡುಮದ್ದುಗಳನ್ನು ಹೊತ್ತಿಸಬಾರದು. ಸುಡುಮದ್ದುಗಳು ಬಾಗಿಲು, ಕಿಟಕಿ, ಇತ್ಯಾದಿಗಳ ಮೂಲಕ ಪ್ರವೇಶಿಸುವುದನ್ನು ತಡೆಯಲು ಆಕಾಶದ ಸುಡುಮದ್ದುಗಳನ್ನು ಕಟ್ಟಡಕ್ಕೆ ನಿಕಟವಾಗಿ ಹೊತ್ತಿಸಬಾರದು. ಇದು ಕಟ್ಟಡದೊಳಗೆ ಬೆಂಕಿಗೆ ಕಾರಣವಾಗಬಹುದು. ಸುಡುಮದ್ದುಗಳನ್ನು ಎಂದಿಗೂ ಮನೆಯೊಳಗೆ ಹಾಗೂ ಸಾರ್ವಜನಿಕರು ನಡೆದಾಡುವ ಭಾಗದಲ್ಲಿ ಉಪಯೋಗಿಸಬಾರದು. ಸುಡುಮದ್ದುಗಳಿಂದ ಪ್ರಯೋಗ ಮಾಡುವುದಾಗಲೀ ಅಥವಾ ಸ್ವಂತವಾಗಿ ಸುಡುಮದ್ದುಗಳನ್ನು ತಯಾರು ಮಾಡಬಾರದು. ವಿಫಲವಾದ ಸುಡುಮದ್ದುಗಳನ್ನು ಪುನಃ ಉರಿಸದೇ, ಕೆಲವು ನಿಮಿಷಗಳ ಕಾಲ ವೀಕ್ಷಿಸಿ, ನಂತರ ಅವುಗಳನ್ನು ನೀರಿನಲ್ಲಿ ಅದ್ದಿ ವಿಲೇವಾರಿ ಮಾಡಬೇಕು. ನಕಲಿ ಅಥವಾ ಕಾನೂನು ಬಾಹಿರವಾದ ಸುಡುಮದ್ದುಗಳನ್ನು ಉಪಯೋಗಿಸಬಾರದು. ಮಕ್ಕಳು ಸ್ವತಃ ಸುಡುಮದ್ದುಗಳನ್ನು ಬಳಸಲು ಅನುವು ಮಾಡಿಕೊಡದೇ ಪೋಷಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

  • ಉಡುಪಿ :ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಉಡುಪಿ :ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಪ್ರತಿಯೊಬ್ಬ ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಲ್ಲಿ ರಸ್ತೆ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾರಣಾ ಮೂಲಭೂತ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ಪ್ರಮಾಣವನ್ನು ಅತ್ಯಂತ ಕಡಿಮೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಅಪಘಾತ ವಲಯ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಸಂಬಂದಿಸಿದ ಅಧಿಕಾರಿಗಳು ತತ್‌ಕ್ಷಣದಲ್ಲಿಯೇ ಸುರಕ್ಷಿತಾ ಸೌಕರ್ಯಗಳ ಕಾರ್ಯಗಳನ್ನು ವೈಜ್ಞಾನಿಕವಾಗಿ ಕೈಗೊಂಡು ಅಪಘಾತಗಳನ್ನು ತಪ್ಪಿಸಲು ಮುಂದಾಗಬೇಕು ಎಂದರು.

    ಇಂದ್ರಾಳಿ ರೈಲ್ವೆ ಮೇಲು ಸೇತುವೆ ಮೇಲಿನ ರಸ್ತೆ ಆಭಿವೃಧ್ದಿ ಕಾಮಗಾರಿಗಳನ್ನು ಮುಂಬರುವ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

    ಇಂದ್ರಾಳಿಯ ರೈಲ್ವೆ ಮೇಲ್ಸೇತುವೆಯ ಎರಡೂ ಭಾಗದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಬಸ್‌ಗಳು ನಿಲ್ಲಿಸದಂತೆ ಕ್ರಮ ವಹಿಸಬೇಕು. ಬಸ್‌ಗಳ ನಿಲುಗಡೆಯಿಂದ ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ರಸ್ತೆ ಅಪಘಾತಗಳು ಆಗುವ ಸಾಧ್ಯತೆಗಳಿವೆ ಎಂದರು.
    ರಸ್ತೆಯ ಬದಿಯ ಖಾಲಿ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲು ಮಾರ್ಗಸೂಚಿಗಳನ್ನು ರಚಿಸಿ, ಗಿಡ ಮರಗಳನ್ನು ನೆಡಬೇಕು ಎಂದ ಅವರು, ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

    ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಪೌರಾಯುಕ್ತ ರಾಯಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಕ ಇಂಜಿನಿಯರ್ ದಿನೇಶ್ ಕೆ.ಎನ್, ರಾಷ್ಟ್ರೀಯ ಹೆದ್ದಾರಿ ಅಭಿಯಂತರ ಮಂಜುನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕೋಟ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ

    ಕೋಟ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ದುರ್ಗಾಹೋಮ, ಅನ್ನಸಂತರ್ಪಣೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸೇವಾಕರ್ತರ ಸಮ್ಮುಖದಲ್ಲಿ ಜರಗಿದವು.

    ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು.

    ಶರನ್ನವರಾತ್ರಿ ನಾಲ್ಕನೇ ದಿನದ ಅಂಗವಾಗಿ ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಿಯನ್ನು ಸಿಂಹವಾಹಿನಿಯಾಗಿ ಶೃಂಗರಿಸಲಾಯಿತು.

  • ಕಂಡ್ಲೂರು :ಅಜ್ಜ, ಅಜ್ಜಿ ನೆನಪಿಗೆ ಸರ್ಕಾರೀ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

    ಕಂಡ್ಲೂರು :ಅಜ್ಜ, ಅಜ್ಜಿ ನೆನಪಿಗೆ ಸರ್ಕಾರೀ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

    ಕುಂದಾಪುರ ಮಿರರ್ ಸುದ್ದಿ….

    ಕುಂದಾಪುರ: ತಮ್ಮ ಅಜ್ಜ ದಿ. ಅಂಪಾರು ಪಟೇಲ್ ರಾಮಣ್ಣ ಹೆಗ್ಡೆ ಹಾಗೂ ಕನಕ ರಾಮಣ್ಣ ಹೆಗ್ಡೆಯವರ ನೆನಪಿನಲ್ಲಿ ಕಂಡ್ಲೂರಿನ ರಾಮ್ ಸನ್ ಸರಕಾರಿ ಪ್ರೌಢಶಾಲೆಗೆ ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಇದರ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ
    ಮಂಗಳವಾರ ಸ್ಮಾರ್ಟ್ ಕ್ಲಾಸನ್ನು ಕೊಡುಗೆ ನೀಡಿದರು. ಜಿಲ್ಲಾ ರೋಟರಿ ಗವರ್ನರ್ ಬಿ .ಸಿ ಗೀತಾ ಡಿಸ್ಟ್ರಿಕ್ಟ ಗವರ್ನರ್ 3182 ಅವರು ಶಾಲೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಶೈಕ್ಷಣಿಕ ವರ್ಷಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸುತ್ತದೆ. ಈ ಸ್ಮಾರ್ಟ್ ಕ್ಲಾಸನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಲಿ ಎಂದರು.

    ಕೊಡುಗೆ ನೀಡಿದ ರೊ. ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ ಮಾತನಾಡಿ, ಸಂಸ್ಥೆಯ ಬಗ್ಗೆ ಇರುವ ಅಭಿಮಾನ ತಮಗೆ ಈ ಕೊಡುಗೆಯನ್ನು ನೀಡಲು ಪ್ರೇರಣೆಯಾಯಿತು ಎಂದರು. ಇದೇ ಸಂದರ್ಭದಲ್ಲಿ ರೋಟೇರಿಯನ್ ಶೇಖರ್ ಶೆಟ್ಟಿ ಇವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ರೊಟೇರಿಯನ್ ಅಬ್ದುಲ್ ಬಶೀರ್ ಮಾಲಕರು ಪ್ಲೆಸೆಂಟ್ ಫರ್ನಿಚರ್ ಕುಂದಾಪುರ ಅವರು ಶಾಲೆಗೆ ಮೂರು ಗ್ರೀನ್ ಬೋರ್ಡ್ ಗಳನ್ನು ನೀಡುವುದಾಗಿ ತಿಳಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯಪ್ರಕಾಶ್ಚಂದ್ರ ಶೆಟ್ಟಿ, ಸೆಲ್ಕೋ ಸಂಸ್ಥೆಯ ಮ್ಯಾನೇಜರ್ ಮಂಜುನಾಥ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎಸ್ ಭಟ್ ಸ್ವಾಗತಿಸಿದರು. ರೊಟೇರಿಯನ್ ಸಚಿನ್ ಕುಮಾರ್ ಶೆಟ್ಟಿ ಹುಂಚ ವಂದಿಸಿದರು. ಶಿಕ್ಷಕರಾದ ಅಜಯ್ ಕುಮಾರ್ ಶೆಟ್ಟಿ ಶ್ರೀಗೋಪಾಲ್ ವಿ ಭಟ್ ನಿತ್ಯಾನಂದ ಶೆಟ್ಟಿ, ಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು. ರಜನಿ ಎಸ್ ಹೆಗಡೆ ನಿರೂಪಿಸಿದರು.

  • ಹಂಗಾರಕಟ್ಟೆ, ಕೋಡಿ ಭಾಗ ಪ್ರವಾಸೋದ್ಯಮಕ್ಕೆ ಆದ್ಯತೆ – ಯಶ್‍ಪಾಲ್ ಸುವರ್ಣ

    ಹಂಗಾರಕಟ್ಟೆ, ಕೋಡಿ ಭಾಗ ಪ್ರವಾಸೋದ್ಯಮಕ್ಕೆ ಆದ್ಯತೆ – ಯಶ್‍ಪಾಲ್ ಸುವರ್ಣ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಹಂಗಾರಕಟ್ಟೆ ಹಾಗೂ ಕೋಡಿ ನಡುವೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ದಿಸೆಯಲ್ಲಿ ಮೊದಲ ಪ್ರಯತ್ನಕ್ಕೆ ಈ ಹೆಜ್ಜೆ ಇರಿಸಿದ್ದೇವೆ ಎಂದು ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಹೇಳಿದರು.

    ಮಂಗಳವಾರ ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ವತಿಯಿಂದ ಸಾರ್ವಜನಿಕರ ಅನುಕೂಲತೆಗಾಗಿ ಮತ್ತು ಮೀನುಗಾರರ ವ್ಯವಹಾರದ ಹಿತದೃಷ್ಟಿಯಿಂದ ವಾಹನಗಳನ್ನು ಕೊಂಡ್ಯೂಯ್ಯಲು ಅನುಕೂಲವಾಗುವಂತೆ 50 ಟನ್ ಸಾಮಥ್ರ್ಯದ ನೂತನ ಬಾರ್ಜ್ (ಫೆರ್ರಿಬೋಟ್ ) ಚಾಲನೆ ನೀಡಿ ಮಾತನಾಡಿ ಮೀನುಗಾರಿಕೆಯನ್ನೆ ನಂಬಿರುವ ಈ ಭಾಗದಲ್ಲಿ ಬಂದರು ಪ್ರದೇಶ ಸಾಕಷ್ಟು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಈ ನಿಟ್ಟಿನಲ್ಲಿ ಮೀನುಗಾರರ ಅನುಕೂಲಕ್ಕಾಗಿ ಬಾರ್ಜ್ ವ್ಯವಸ್ಥೆಯನ್ನು ಮೀನುಗಾರಿಕಾ ಫೆಡರೇಶನ್ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿದ್ದು ಇಂದಿನಿಂದ ಇದರ ಕಾರ್ಯರೂಪ ಆರಂಭಗೊಳ್ಳಲಿದೆ, ಇದರಲ್ಲಿ ಲಾಭ ಪಡೆಯುವ ಉದ್ದೇಶ ಫೆಡರೇಶನ್ ಹೊಂದಿಲ್ಲ ಬದಲಾಗಿ ಮೀನಗಾರರ ಬೇಡಿಕೆ ಅನುಸಾರ ಒಂದು ಹೆಜ್ಜೆ ಇರಿಸಿದೆ. ಸಂಪರ್ಕದ ಕೊರತೆಯಿಂದ ಇಲ್ಲಿನ ಬೀಚ್‍ಗಳು ಅಭಿವೃದ್ಧಿಯಿಂದ ವಂಚಿತವಾಗಿದೆ ಈ ಎಲ್ಲಾ ವಿಚಾರನ್ನು ರಾಜ್ಯದ ಮೀನುಗಾರಿಕಾ ಸಚಿವರ ಗಮನಕ್ಕೆ ತರಲಾಗಿದೆ. ಅಭಿವೃದ್ಧಿ ಕುರಿತಂತೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.

    ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ್ ಕೆ ಟಿ, ರಾಮಚಂದ್ರ ಕುಂದರ್, ದೇವಪ್ಪ ಕಾಂಚನ್, ಮತಿ ಉಷಾರಾಣಿ ಡಿ.ಕೆ, ಸುಧಾಕರ್, ಸುರೇಶ್ ಸಾಲ್ಯಾನ್ ,ಬೇಬಿ.ಹೆಚ್.ಸಾಲ್ಯಾನ್ ,ನ್ಯಾಯವಾದಿ ಮಂಜುನಾಥ , ಮಲ್ಪೆ ಮೀನುಗಾರಿಕಾ ಜಂಟಿ ನಿರ್ದೇಶಕರಾದ ವಿವೇಕ್ , ಉಡುಪಿ ಮೀನುಗಾರಿಕಾ ಉಪ ನಿರ್ದೇಶಕಿ ಅಂಜನಾದೇವಿ ,ಮೀನುಗಾರ ಮುಖಂಡ ಕೇಶವ ಕುಂದರ್ ಐರೋಡಿ ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸದಸ್ಯ ಬಿ.ಎಸ್.ನಟರಾಜ್ ಗಾಣಿಗ, ದುರ್ಗಾಪರಮೇಶ್ವರಿ ದೇವಸ್ಥಾನ ಕೋಡಿಬೆಂಗ್ರೆ ಜಯ ಎಸ್ ಕುಂದರ್ ಅಧ್ಯಕ್ಷ ನಾಗರಾಜ್ ಬಿ ಕುಂದರ್, ಕೋಡಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ ಮೆಂಡನ್ ,ಯಾಂತ್ರೀಕೃತ ಮೀನುಗಾರರ ಸಂಘ ಹಂಗಾರಕಟ್ಟೆ ಬೆಂಗ್ರೆ ಅಧ್ಯಕ್ಷ ರಾಜು ಎನ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

  • ಸಾಸ್ತಾನ – ಭಜನೆ ಮೂಲಕ ಧಾರ್ಮಿಕ ಪ್ರಜ್ಞೆ- ದಯಾನಂದ ಪೂಜಾರಿ

    ಸಾಸ್ತಾನ – ಭಜನೆ ಮೂಲಕ ಧಾರ್ಮಿಕ ಪ್ರಜ್ಞೆ- ದಯಾನಂದ ಪೂಜಾರಿ

    ಪಾಂಡೇಶ್ವರ ಕಳಿಬೈಲ್ ತುಳಸಿ ಅಮ್ಮ ದೈವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಭಜನೆ ಮೂಲಕ ಯುವ ಸಮೂಹವಕ್ಕೆ ಧಾರ್ಮಿಕ ಪ್ರಜ್ಞೆ ಬೆಳೆಸಲು ಸಾಧ್ಯವಿದೆ ಎಂದು ವಿದ್ಯುತ್ ಗುತ್ತಿಗೆದಾರ ದಯಾನಂದ್ ಪೂಜಾರಿ ಹೇಳಿದರು.

    ಶ್ರೀ ಕ್ಷೇತ್ರ ಶ್ರೀ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಕೆಳಬೆಟ್ಟು ಸಾಸ್ತಾನ ಇಲ್ಲಿ ಶ್ರೀ ಕ್ಷೇತ್ರ ಕಳಿಬೈಲ್ ಇಲ್ಲಿ ಶರನ್ನವರಾತ್ರಿ ಮಹೋತ್ಸವದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಮನೆಯ ಮಕ್ಕಳಿಗೆ ಭಜನೆ ಸಂಸ್ಕಾರ ನೀಡಿದರೆ ಆ ಮನೆ ಸಂಸ್ಕಾರಭರಿತವಾಗಿಸಲು ಸಾಧ್ಯವಿದೆ. ಭಜನೆಯ ಮೂಲಕ ಶ್ರೀ ದೇವರನ್ನು ಸನಿಹದಲ್ಲಿ ಕಾಣಲು ಸಾಧ್ಯವಿದೆ. ಭಜನೆ ಮನೆ ಮನದಲ್ಲಿ ಪ್ರಚಲಿತಗೊಳ್ಳಲು ಇಂಥಹ ಕ್ಷೇತ್ರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ದೈವಸ್ಥಾನ ಮುಕ್ತೇಸರ ಎಂ.ಸಿ ಚಂದ್ರಶೇಖರ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಭಜನಾ ಮಂಡಳಿ ಪಾಂಡೇಶ್ವರ ಇದರ ಅಧ್ಯಕ್ಷ ದಿನಕರ್ ,ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಪತ್ರಕರ್ತ ರವೀಂದ್ರ ಕೋಟ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ದೈವಸ್ಥಾನದ ಪ್ರದಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಶ ಪಾಂಡೇಶ್ವರ ನಿರೂಪಿಸಿ ವಂದಿಸಿದರು.

    ನಂತರ ಶ್ರೀ ರಾಘವೇಂದ್ರ ಭಜನಾ ತಂಡ ಪಾಂಡೇಶ್ವರ
    ಇವರಿಂದ ಭಜನಾಮೃತ ಕಾರ್ಯಕ್ರಮ ನಡೆಯಿತು.

  • ಕೋಟ :ಪಂಚವರ್ಣ ಸಂಸ್ಥೆ ರಾಜ್ಯಕ್ಕೆ ಮಾದರಿ ಸಂಘಸಂಸ್ಥೆಯಾಗಿ ಹೊರಹೊಮ್ಮಿದೆ – ಆನಂದ್ ಸಿ ಕುಂದರ್

    ಕೋಟ :ಪಂಚವರ್ಣ ಸಂಸ್ಥೆ ರಾಜ್ಯಕ್ಕೆ ಮಾದರಿ ಸಂಘಸಂಸ್ಥೆಯಾಗಿ ಹೊರಹೊಮ್ಮಿದೆ – ಆನಂದ್ ಸಿ ಕುಂದರ್

    ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಪೋಸ್ಟರ್ ಅನಾವರಣ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪಂಚವರ್ಣ ಸಂಘಟನೆ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಸಮಾಜ ಸೇವಕ ಆನಂದ್ ಸಿ ಕುಂದರ್ ಹೇಳಿದರು.

    ಮಂಗಳವಾರ ಆನಂದ್ ಸಿ ಕುಂದರ್ ಗೃಹದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ನ.10ರಂದು ಕೋಟ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸದ್ಭಾವನಾ ಶೀರ್ಷಿಕೆಯಡಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೋಸ್ಟರ್ ಅನಾವರಗೊಳಿಸಿ ಮಾತನಾಡಿ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿಸಿ, ಪ್ಲಾಸ್ಟಿಕ್ ಮುಕ್ತ, ಹಸಿರು ಕ್ರಾಂತಿ, ವಿದ್ಯಾರ್ಥಿಗಳನ್ನು ದತ್ತು ಪಡೆಯುವ, ಪರಿಸರ ಜಾಗೃತಿ, ರೈತರನ್ನು ಗುರುತಿಸುವ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಗ್ರಾಮೀಣ ಭಾಗವಾಗ ಈ ಪರಿಸರಕ್ಕೆ ಹೊಸ ಆಯಾಮವನ್ನು ತಂದಿರಿಸಿದೆ, ಇಂಥಹ ಸಂಸ್ಥೆ ನಮ್ಮೂರಿನಲ್ಲಿ ಇರುವುದು ನಮ್ಮ ಹೆಮ್ಮೆ ಇದೇ ರೀತಿ ಇತರ ಸಂಘ ಸಂಸ್ಥೆಗಳು ಅನುಸರಿಸಲಿ ಎಂದು ಶುಭಹಾರೈಸಿದರು.

    ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಕೋಟದ ಪರಿವರ್ತನಾ ಪುನರ್ವಸತಿ ಕೇಂದ್ರದ ನಿರ್ದೇಶಕ. ಡಾ.ಪ್ರಕಾಶ್ ಸಿ ತೋಳಾರ್, ನೋಟರಿ ವಕೀಲರಾದ ಕರುಣಾಕರ್ ನಾಯ್ಕ್, ಜನತಾ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಕುಂದರ್, ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ , ರೈತ ಧ್ವನಿ ಸಂಘ ಕೋಟ ಇದರ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಉಪಾಧ್ಯಕ್ಷೆ ವಸಂತಿ ಹಂದಟ್ಟು, ಸ್ಥಾಪಾಕ ಸದಸ್ಯ ನರಸಿಂಹ ಗಾಣಿಗ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಪಂಚವರ್ಣದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

    ಸದಸ್ಯ ಸಂತೋಷ ಕುಮಾರ್ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

  • ಕುಂದಾಪುರ :ಸರ್ಕಾರಿ ವಕೀಲರಾಗಿ ಐರೋಡಿ ಶಿವರಾಮ ಶ್ರೀಯಾನ್ ಆಯ್ಕೆ

    ಕುಂದಾಪುರ :ಸರ್ಕಾರಿ ವಕೀಲರಾಗಿ ಐರೋಡಿ ಶಿವರಾಮ ಶ್ರೀಯಾನ್ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾರಿ ಆದೇಶದನ್ವಯ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ಬ್ರಹ್ಮಾವರ ತಾಲ್ಲೂಕಿನ ಐರೋಡಿ ನಿವಾಸಿ ಶಿವರಾಮ ಶ್ರೀಯಾನ್ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಲಿದ್ದಾರೆ. ಪ್ರಸ್ತುತ ಐರೋಡಿ ಗ್ರಾಮಪಂಚಾಯತ್ ಸದಸ್ಯರಾಗಿ, ಸ್ಥಳೀಯ ಧಾರ್ಮಿಕ, ಸಾಮಾಜಿಕ ಕ್ಷೆತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.