Category: ಸುದ್ದಿ

  • ಕೋಟ :ಕಾರಣಿಕ ದೈವಗಳ ನೆಲೆಬಿಡು ಕಳಿಬೈಲು ಶ್ರೀಕ್ಷೇತ್ರ – ಡಾ.ವಿದ್ವಾನ್ ವಿಜಯ ಮಂಜರ್

    ಕೋಟ :ಕಾರಣಿಕ ದೈವಗಳ ನೆಲೆಬಿಡು ಕಳಿಬೈಲು ಶ್ರೀಕ್ಷೇತ್ರ – ಡಾ.ವಿದ್ವಾನ್ ವಿಜಯ ಮಂಜರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಶ್ರೀ ಕ್ಷೇತ್ರ ಕಾರಣಿಕ ದೈವ ದೇವರುಗಳ ನೆಲೆಬಿಡಾಗಿ ಕಂಗೊಳಿಸುತ್ತಿದೆ ಎಂದು ಪಾಂಡೇಶ್ವರದ ಯೋಗ ಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ನುಡಿದರು.

    ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ಚಾಮಿ ಕೊರಗಜ್ಜ ಸಪರಿವಾರ ದೇವಸ್ಥಾನದ ಇದರ ಕಳಿಬೈಲು ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಿ ಯಾವ ಕಾಲಕ್ಕೆ ದೈವದೇವರುಗಳು ಅವತರಿಸಿಕೊಳ್ಳಬೇಕೊ ಆ ಸಂದರ್ಭಕ್ಕೆ ಕೆಲ ವ್ಯಕ್ತಿಗಳ ಮೂಲಕ ಆ ಶಕ್ತಿ ಹೊರ ಜಗತ್ತಿಗೆ ಪಸರಿಸಿಕೊಳ್ಳುತ್ತದೆ. ಅದೇ ರೀತಿ ಇಂದು ಪಾಂಡೇಶ್ವರದ ಕಳಿಬೈಲು ಭಕ್ತರ ಇಷ್ಟಾರ್ಥಗಳನ್ನು ಇಡೆರಿಸುವ ತಾಣವಾಗಿ ಮೂಡಿದೆ. ದೈವ ದೇವರುಗಳನ್ನು ಕಾಟಚಾರಕ್ಕೆ ನಂಬುವ ಅಥವಾ ಹೋಗುವ ಪರಿಪಾಠ ಒಳ್ಳೆದಲ್ಲ ಯಾವುದೋ ಉದ್ದೇಶವಿರಿಸಿ ಹೋಗುವುದು ಅಥವಾ ವ್ಯವಹಾರಿಕವಾಗಿ ಮಾಡಿಕೊಳ್ಳುವ ತಾಣವಾಗಬಾರದು ಬದಲಾಗಿ ದೃಢಭಕ್ತಿಯಿಂದ ದೇವರ ಧ್ಯಾನವನ್ನು ಮಾಡಬೇಕು. ಆಗ ಶ್ರೀ ದೇವರು ನಮ್ಮ ಇಷ್ಟಾರ್ಥಗಳಿಗೆ ಸ್ಪಂದಿಸುತ್ತಾನೆ, ತನ್ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಸಭೆಯ ಅಧ್ಯಕ್ಷತಯನ್ನು ಶ್ರೀ ಕ್ಷೇತ್ರದ ಮುಖ್ಯಸ್ಥ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.

    ಇದೇ ವೇಳೆ ಕಳಿಬೈಲು ಕಂಬಳರತ್ನ ಪುರಸ್ಕಾರವನ್ನು ಬಿ.ಶಾಂತರಾಮ್ ಶೆಟ್ಟಿ, ಸಹಕಾರ ರತ್ನ ಪುರಸ್ಕಾರವನ್ನು ಜೋರ್ಜ ಎಸ್ ಫರ್ನಾಂಡೀಸ್, ಜೀವರಕ್ಷಕ ಪುರಸ್ಕಾರವನ್ನು ಈಶ್ವರ ಮಲ್ಪೆ, ಭಜನಾಸೇವಾ ಪುರಸ್ಕಾರವನ್ನು ವಾಸುದೇವ ಹಂಗಾರಕಟ್ಟೆ, ರಂಗರತ್ನ ಪರಸ್ಕಾರವನ್ನು ಸುಜಾತ ಅಲ್ವಿನ್ ಆಂದ್ರಾದೆ ದಂಪತಿಗಳಿಗೆ ನೀಡಲಾಯಿತು. ಕಳಿಬೈಲ್ ಕಿಂಗ್ ಕುಟ್ಟಿ ಕಂಬಳದ ಶ್ರೇಷ್ಠ ಒಟದ ಕೋಣ ಬಾರ್ಕೂರು ಕುಟ್ಟಿಗೆ ವಿಶೇಷ ಪುರಸ್ಕಾರ ನೀಡಲಾಯಿತು.

    ಮುಖ್ಯ ಅಭ್ಯಾಗತರಾಗಿ ಐರೋಡಿ ಮಹಾಕಾಳಿ ದೇಗುಲದ ಅಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ದಯಾನಂದ ಪೂಜಾರಿ, ಶ್ರೀ ಕ್ಷೇತ್ರದ ಪಾತ್ರಿಗಳಾದ ನವಿನ್ ಗುರುಗಳು, ಗೌರವ ಸಲಹೆಗಾರ ಶಶಿಧರ ರಾವ್, ಬೆಣ್ಣೆಕುದ್ರು ಉದ್ಯಮಿ ಸತೀಶ್ ಪೂಜಾರಿ, ಪಾಂಡೇಶ್ವರ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್, ವಿಠ್ಠಲ ಪಾತ್ರಿ, ಕಂಬಿಗಾರ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮಟಪಾಡಿ ಮುಕ್ತೇಸರ ವಿಶ್ವನಾಥ ಶೆಟ್ಟಿ, ವೇ.ಮೂ ರಮೇಶ್ ಭಟ್, ರೈಲ್ವೆ ಇಲಾಖೆಯ ಇಂಜಿನಿಯರ್ ಶರೀತಾ ವಿಕಾಸ್ ಕುಮಾರ್ ಉಪಸ್ಥಿತರಿದ್ದರು.

    ದೇಗುಲದ ಪ್ರಧಾನಾರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಮಂಜುನಾಥ ಹಿಲಿಯಾಣ ನಿರೂಪಿಸಿದರು. ನಿರೂಪಕ ಶ್ರೀಶ ಆಚಾರ್ ವಂದಿಸಿದರು.

  • ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು – ಸಂಸ್ಥಾಪನಾ ದಿನ

    ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು – ಸಂಸ್ಥಾಪನಾ ದಿನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿದ ನಿವೃತ್ತ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹೆಚ್. ಜಯಶೀಲ ಶೆಟ್ಟಿ, ಸಂಸ್ಥೆ ಸ್ಥಾಪನೆಯಾದ ತದನಂತರದಲ್ಲಿ ಅದರ ಅಭಿವೃದ್ಧಿಗೆ ಬಹಳಷ್ಟು ಶ್ರಮಪಟ್ಟಿದ್ದಾರೆ, ಆ ಶ್ರಮದ ಫಲ ಇಂದು ಕಾಣುತ್ತಿದೆ ಎಂದರು.

    ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಎಸ್.ಎ. ಪ್ರಭಾಕರ್ ಶರ್ಮ, ಜಿಲ್ಲಾ ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಸಂಸ್ಥೆ ಸ್ಥಾಪನೆಯಾದ ಹದಿನಾಲ್ಕು ವರ್ಷಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಹಾಗೂ ಶಿಸ್ತನ್ನು ಶ್ಲಾಘಿಸಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಕಾರ್ಕಳದ ಅಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹಾಗೂ ಸತತ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

    ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಐಕ್ಯೂಎಸಿ ಸಂಯೋಜಕಿ ದೀಪಿಕಾ ಜಿ. ಉಪಸ್ಥಿತರಿದ್ದರು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಪ್ರಾಧ್ಯಾಪಕರಾದ ಪೂಜಾ ಕುಂದರ್, ಪ್ರಣಮ್ ಆರ್., ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿ, ವಿಲ್ಮಾ ಡಿ’ಸೋಜಾ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.

  • ತೆಕ್ಕಟ್ಟೆ: ಜ್ಯೂನಿಯರ್ ಕಾಲೇಜಿನ ಎಸ್ಸೆಸ್ಸೆಲ್ಸಿಗೆ ಶೇ.90 ಫಲಿತಾಂಶ

    ತೆಕ್ಕಟ್ಟೆ: ಜ್ಯೂನಿಯರ್ ಕಾಲೇಜಿನ ಎಸ್ಸೆಸ್ಸೆಲ್ಸಿಗೆ ಶೇ.90 ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ…

    ತೆಕ್ಕಟ್ಟೆ: 2023-24ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ತೆಕ್ಕಟ್ಟೆ ಪ್ರೌಡ ಶಾಲಾ ವಿಭಾಗ ಶೇ. 90 ಫಲಿತಾಂಶಗಳಿಸಿದೆ.

    ಕುಮಾರಿ ರಶ್ಮಿತಾ 597 ಅಂಕಗಳನ್ನು ಪಡೆದು ಶೇ. 95.57 ಫಲಿತಾಂಶ ಪಡೆದುಕೊಂಡಿದ್ದಾಳೆ. ಕುಮಾರಿ ತೃಪ್ತಿ 583 ಅಂಕಗಳನ್ನು ಪಡೆದು ಶೇ. 93.28, ಕುಮಾರಿ ಸಮೃದ್ದಿ 581 ಅಂಕಗಳನ್ನು ಪಡೆದು ಶೇ. 92.96 ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ಒಟ್ಟು 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 11 ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ
    20ಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಬೋಧಕವರ್ಗ ಶುಭ ಹಾರೈಸಿದ್ದಾರೆ.

  • ಕುಂದಾಪುರ :ರವಿ ಬಸ್ರೂರು ಪ್ರಮೋದ್ ಶೆಟ್ಟಿ ಉಪಸ್ಥಿತಿಯಲ್ಲಿ ಗಾಡ್ ಪ್ರಾಮಿಸ್ ಚಿತ್ರಕ್ಕೆ ಆನೆಗುಡ್ಡೆಯಲ್ಲಿ ಮುಹೂರ್ತ

    ಕುಂದಾಪುರ :ರವಿ ಬಸ್ರೂರು ಪ್ರಮೋದ್ ಶೆಟ್ಟಿ ಉಪಸ್ಥಿತಿಯಲ್ಲಿ ಗಾಡ್ ಪ್ರಾಮಿಸ್ ಚಿತ್ರಕ್ಕೆ ಆನೆಗುಡ್ಡೆಯಲ್ಲಿ ಮುಹೂರ್ತ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ʼಒಂದು ಸಿನಿಮಾದಿಂದ ಎಷ್ಟೋ ಜನ ಕಲಾವಿದರ ಭವಿಷ್ಯ ನಿರ್ಧಾರವಾಗುತ್ತದೆ. ಕೇವಲ ನಟನೆ ಮಾತ್ರವಲ್ಲದೇ ಬ್ಯಾಕ್ ಸ್ಟೇಜ್ ಕಲಾವಿದರೂ ಸಿನೆಮಾ ನಂಬಿ ಬದುಕುತ್ತಿದ್ದಾರೆ ಎಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

    ಅವರು ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಯುವ ಪ್ರತಿಭೆ ಸೂಚನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ʼಗಾಡ್ ಪ್ರಾಮಿಸ್’ನ ಮುಹೂರ್ತದ ಕ್ಲ್ಯಾಪ್ ನೆರವೇರಿಸಿ ಮಾತನಾಡಿದರು.

    ನಮ್ಮ ಕರಾವಳಿಯ ಕಲಾವಿದರಿಗೆ ಒಳ್ಳೆಯ ವೇದಿಕೆ ಸಿಗುತ್ತಿಲ್ಲ. ಒಂದು ಸಿನಿಮಾದಿಂದ ಎಷ್ಟೋ ಜನರ ಬದುಕು ಹಸನಾಗಲಿ. ಇದೇ ರೀತಿ ನೂರಾರು ಸಿನಿಮಾಗಳು ಆಗಲಿ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಹಾರೈಸಿದರು.

    ಚಿತ್ರದ ನಿರ್ದೇಶಕ ಸೂಚನ್ ಶೆಟ್ಟಿ ಮಾತನಾಡಿ, ಗಾಡ್ ಪ್ರಾಮಿಸ್ʼ ಚಿತ್ರದ ಮುಹೂರ್ತ ನೆರವೇರಿದೆ. ಕಳೆದ ಆರೇಳು ತಿಂಗಳಿನಿಂದ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ಆರಂಭಗೊಂಡಿದೆ. 2015ರಿಂದ ರವಿ ಬಸ್ರೂರು ಜತೆ ಕೆಲಸ ಮಾಡುತ್ತಿದ್ದೇನೆ. ಈಗ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ಕುಂದಾಪುರ ಸುತ್ತಮುತ್ತ ನಡೆಯುತ್ತಿದೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಆಡಿಷನ್ ನಡೆಸಿದ್ದೇವೆ. ಯಾರು ಆಯ್ಕೆಯಾಗಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಡೈರೆಕ್ಟರ್ ತಂಡದ ಜತೆಗೆ ʼಕಟಕʼ, ʼಗಿರ್ಮಿಟ್ʼ ಸಿನಿಮಾಗಳ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದೆ. ಹೀಗಾಗಿ ಆ ಅನುಭವದ ಇಟ್ಟುಕೊಂಡು ನಿರ್ದೇಶನಕ್ಕೆ ಇಳಿದಿದ್ದೇನೆ ಎಂದರು.

    ಕ್ಯಾಮರಾಕ್ಕೆ ಚಾಲನೆ ನೀಡಿದ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ʼʼಸೂಚನ್ ಯಾವುದೇ ಕೆಲಸ ಮಾಡಿದ್ರೂ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾರೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುತ್ತಿರುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರಿಯಲಿ. ಒಂದೊಳ್ಳೆ ತಂಡವಾಗಿ ಹೊರ ಹೊಮ್ಮಲಿ. ನನ್ನ ಪ್ರಕಾರ ಈ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ ಎಂಬ ಭರವಸೆ ಇದೆ. ಸೂಚನ್ ಅದ್ಭುತ ನಟನೂ ಹೌದು ಎನ್ನುವುದನ್ನು ನಮ್ಮ ಸಿನಿಮಾದಲ್ಲಿ ಪ್ರೂವ್ ಮಾಡಿದ್ದಾನೆ ಎಂದು ಹೇಳಿದರು.

    ನಿರ್ಮಾಪಕ ಮೈತ್ರಿ ಮಂಜುನಾಥ್ ಮಾತನಾಡಿ, ʼʼನಾವು ಈ ಹಿಂದೆ ʼಹಫ್ತಾʼ ಸಿನಿಮಾ ಮಾಡಿದ್ದೇವೆ. ಇದು ನನ್ನ ಎರಡನೇ ಸಿನಿಮಾ. ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಅನುಭವ ತಂಡದೊಂದಿಗೆ ಕೈ ಜೋಡಿಸಿದೆʼʼ ಎಂದರು.

    ಸೂಚನ್ ಶೆಟ್ಟಿ ನಿರ್ದೇಶನದ ʼಗಾಡ್ ಪ್ರಾಮಿಸ್ʼ ಸಿನಿಮಾ ಪಯಣಕ್ಕೆ ನಿರ್ಮಾಪಕ ಮೈತ್ರಿ ಮಂಜುನಾಥ್ ಬಲ ತುಂಬಿದ್ದಾರೆ. ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ನಡೆಯಲಿದೆ.

  • ಕುಂದಾಪುರ :ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್.ಎಲ್.ಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರ್ಯಾಂಕ್

    ಕುಂದಾಪುರ :ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಎಸ್. ಎಸ್.ಎಲ್.ಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರ್ಯಾಂಕ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದ್ದು . ಪ್ರಥ್ವಿತಾ ಪಿ ಶೆಟ್ಟಿ ರಾಜ್ಯ ಮಟ್ಟದಲ್ಲಿ 5ನೇಯ ರ್ಯಾಂಕ್ ಗಳಿಸಿದ್ದು ಕುಂದಾಪುರ ತಾಲೂಕಿಗೆ ಪ್ರಥಮ 621(99.36%) ಅಂಕಗಳು, ಶಾಧನಾ ದೇವಾಡಿಗ ರಾಜ್ಯ ಮಟ್ಟದಲ್ಲಿ 10ನೆಯ ರ್ಯಾಂಕ್‍ಗಳಿಸಿದ್ದು , ಕುಂದಾಪುರ ತಾಲೂಕಿಗೆ 6ನೇಯ ಸ್ಥಾನ ಪಡೆದಿದ್ದು, 616(98.56%) ಅಂಕಗಳನ್ನು ಗಳಿಸಿರುತ್ತಾರೆ. ಅಲ್ಲದೆ ಬಸನಗೌಡ ಪಾಟೀಲ್ 610 (97.6), ಕೆ ಶ್ರೀಶಾ ಶೆಟ್ಟಿ 610(97.6), ನಿಝಾ 608 (97.28), ಸನ್ನಿಧಿ 606 (96.96), ಸುಶ್ಮಿತಾ ಸುಕಾಲಿ 605 (96.8), ದಿವಿತ್ ಕುಮಾರ್ ಶೆಟ್ಟಿ 602 (96.32), ಸÀೃಜನ್ ಜೆ ಶೆಟಿ ್ಟ 601 (96.16), ಐಶ್ವರ್ಯ ಬಿ ಆಚಾರ್ಯ್ 591 (94.56), ಸನ್ಸಿತಾ 588 (94.08), ಸಂದೀಪ್ ರೆಡ್ಡಿ ವಿ 587 (93.92), ವಿದ್ಯಾಶ್ರೀ 585 (93.60), ಕೃತಿ ಕೆ ಶೆಟ್ಟಿ 582 (93.12), ಲತಿಕಾ 581 (92.96) ಅಂಕಗಳನ್ನು ಪಡೆದಿರುತ್ತಾರೆ. ಸಂಸ್ಥೆಯಲ್ಲಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 40 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 01 ವಿದ್ಯಾರ್ಥಿಯು ತೇರ್ಗಡೆ ಹೊಂದಿರುತ್ತಾರೆ.

    ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಎಮ್.ಎಮ್ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಮ್. ಮಹೇಶ್ ಹೆಗ್ಢೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖೋಪಾಧ್ಯಾಯರು ಸಂತಸ ವ್ಯಕ್ತಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಅಪೂರ್ವ ಸಾಧನೆಗೆ ಕಾರಣಿಕರ್ತರಾದ ಅಧ್ಯಾಪಕ ವರ್ಗ ಶಾಲಾ ಸಿಬ್ಬಂದಿಗಳು ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

    “ನಮ್ಮ ಶಾಲೆಯ ಶಿಕ್ಷಕರು ಸಂಜೆ 6 ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿರುವುದು ಈ ಅಂಕ ಗಳಿಸಲು ಸಹಕಾರಿಯಾಯಿತು ಮತ್ತು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂಧಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ” -ಪ್ರಥ್ವಿತಾ ಪಿ ಶೆಟ್ಟಿ ಎಸ್. ಎಸ್. ಎಲ್ ಸಿ. 2024ರ ರಾಜ್ಯ ಮಟ್ಟದ 5ನೇ ರ್ಯಾಂಕ್ ವಿಜೇತೆ

    ಪ್ರಥ್ವಿತಾ ಪಿ ಶೆಟ್ಟಿ 621(99.36%) ಶಾಧನಾ ದೇವಾಡಿಗ 616(98.56%)ಬಸನಗೌಡ ಪಾಟೀಲ್ 610 (97.6)

    ಕೆ ಶ್ರೀಶಾ ಶೆಟ್ಟಿ 610(97.6)ನಿಝಾ 608 (97.28) ಸನ್ನಿಧಿ 606 (96.96)

    ಸುಶ್ಮಿತಾ ಸುಕಾಲಿ 605 (96.8) ದಿವಿತ್ ಕುಮಾರ್ ಶೆಟ್ಟಿ 602 (96.32) ಸೃಜನ್ ಜೆ ಶೆಟ್ಟಿ 601 (96.16)

    ಐಶ್ವರ್ಯ ಬಿ. ಆಚಾರ್ಯ್ 591 (94.56) ಸನ್ಸಿತಾ 588 (94.08)ಸಂದೀಪ್ ರೆಡ್ಡಿ ವಿ 587 (93.92)

    ವಿದ್ಯಾಶ್ರೀ 585 (93.60) ಕೃತಿ ಕೆ ಶೆಟ್ಟಿ 582 (93.12) ಲತಿಕಾ 581 (92.96)

  • ಕುಂದಾಪುರ :ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಪ್ರತ್ವಿತಾ ಪಿ. ಶೆಟ್ಟಿಗೆ ಎಕ್ಸ್ ಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಡಳಿತ ವರ್ಗದಿಂದ ಸನ್ಮಾನ

    ಕುಂದಾಪುರ :ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಪ್ರತ್ವಿತಾ ಪಿ. ಶೆಟ್ಟಿಗೆ ಎಕ್ಸ್ ಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಡಳಿತ ವರ್ಗದಿಂದ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ 621 ಅಂಕ ಪಡೆದು ರಾಜ್ಯಕ್ಕೆ 5ನೇ ರ್ಯಾಂಕ್ ಬಂದಿರುವ ಎಕ್ಸ್ ಲೆಂಟ್ ಮತ್ತು ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ. ಶೆಟ್ಟಿಗೆ ಇಂದು ಶಾಲೆಯಲ್ಲಿ ಶಿಕ್ಷಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

    ಪ್ರತ್ವಿತಾ ಪಿ ಶೆಟ್ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೇ ರ್ಯಾಂಕ್ ಮತ್ತು ಕುಂದಾಪುರ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

    ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ 10 ಸಾವಿರ ನಗದು ಬಹುಮಾನ ನೀಡುವುದರ ಮೂಲಕ ವಿದ್ಯಾರ್ಥಿಯನ್ನು ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಪತ್ವಿತಾ, ನನ್ನ ಶಿಕ್ಷಕರು ಸಂಜೆ 6ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿದ್ದಾರೆ. ನನ್ನ ಹೆತ್ತವರು ನನಗೆ ಯಾವುದೇ ರೀತಿಯ ಒತ್ತಡವನ್ನು ನೀಡಿರಲಿಲ್ಲ ಆದರೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪರೀಕ್ಷೆಯ ಸಂದರ್ಭ ಮಾತ್ರ ಹಾರ್ಡ್ ವರ್ಕ್ ಮಾಡಿದ್ದೇನೆ. ನನಗೆ ರ್ಯಾಂಕ್ ಬರುತ್ತೆ ಎನ್ನುವ ಭರವಸೆ ಇತ್ತು ಎಂದಿದ್ದಾರೆ. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ. ಮುಂದೆ ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಐ.ಏ.ಏಸ್ ಅಧಿಕಾರಿಯಾಗುವ ಆಸೆಯಿದೆ ಎಂದರು.

    ಎಮ್.ಎಮ್.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಮ್. ಮಹೇಶ ಹೆಗ್ಡೆ ಶುಭಹಾರೈಸಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

  • ಕುಂದಾಪುರ :ಎಸ್.ಎಸ್.ಎಲ್.ಸಿ. ಪರೀಕ್ಷೆ – ಕೆಪಿಎಸ್ ಕೋಟೇಶ್ವರ ಶೇ. 98.02% ಫಲಿತಾಂಶ

    ಕುಂದಾಪುರ :ಎಸ್.ಎಸ್.ಎಲ್.ಸಿ. ಪರೀಕ್ಷೆ – ಕೆಪಿಎಸ್ ಕೋಟೇಶ್ವರ ಶೇ. 98.02% ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 149 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡ 98.02% ಫಲಿತಾಂಶದೊಂದಿಗೆ ಆಂಗ್ಲ ಮಾಧ್ಯಮದಲ್ಲಿ ಶೇಕಡ 100% ಫಲಿತಾಂಶ ದಾಖಲಾಗಿ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ 4 ವಿದ್ಯಾರ್ಥಿಗಳು 600ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದಿರುತ್ತಾರೆ. ಅದರಲ್ಲಿ 604 ಅಂಕ ಪಡೆದ ಪ್ರಥಮ್ ಕಾಮತ್ ಶಾಲೆಗೆ ಪ್ರಥಮನಾಗಿ 602 ಅಂಕ ಪಡೆದ ಅನಿಲ್ ಲೋಬೊ ಮತ್ತು ಶ್ರಾವ್ಯ ಜಿ ದೇವಾಡಿಗ ಶಾಲೆಗೆ ದ್ವಿತೀಯ ಸ್ಥಾನ, ರಶ್ಮಿ 601 ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.

  • ಕುಂದಾಪುರ :ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯ

    ಕುಂದಾಪುರ :ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು : 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ೬೩೧೨೦೪ (೭೬೯೧ %) ಫಲಿತಾಂಶ ಸಾಧಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಿಲ್ಲಾವಾರು ಫಲಿತಾಂಶವನ್ನು ಪ್ರಕಟ ಗೊಳಿಸಿದೆ. ಉಡುಪಿ ಜಿಲ್ಲೆ(೯೪%) ಪ್ರಥಮ ಸ್ಥಾನ ಪಡೆದಿದೆ.

    ಗ್ರಾಮೀಣ ಮತ್ತು ಸರ್ಕಾರಿ ಶಾಲಾ ಮಕ್ಕಳ ಉತ್ತನ ಸಾಧನೆ ಮಾಡಿದ್ದು, ಬಾಲಕರು – ೨೮೭೪೧೬ ಹಾಗೂ ಬಾಲಕಿಯರು – ೪೨೩೮೨೯ ಪಾಸ್ ಆಗಿದ್ದಾರೆ. ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್‍ karresults.nic.in ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವೀಕ್ಷಿಸಬಹುದು.

  • ಕೋಟ :ಎಚ್. ಜಿ. ಗಣೇಶ್ ಉರಾಳ ಅವರಿಗೆ ಕಲಾ ಡಾಕ್ಟರೇಟ್ ಪದವಿ

    ಕೋಟ :ಎಚ್. ಜಿ. ಗಣೇಶ್ ಉರಾಳ ಅವರಿಗೆ ಕಲಾ ಡಾಕ್ಟರೇಟ್ ಪದವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೇಂದ್ರ ಲಲಿತ ಕಲಾ ಅಕಾಡೆಮಿಯಿಂದ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತರಾದ ಕೋಟ ಹಂದಟ್ಟಿನ ಎಚ್.ಜಿ. ಗಣೇಶ್ ಉರಾಳರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ‘ಆಧುನಿಕ ಭಾರತೀಯ ಶಿಲ್ಪ ಕಲೆಯಲ್ಲಿ ಅಭಿವ್ಯಕ್ತಿತ ಗ್ರಾಮ್ಯ ರೂಪಾಕಾರಗಳ ಪುನರಭಿವ್ಯಕ್ತಿ’ ಎಂಬ ವಿಷಯದ ಪಿ.ಎಚ್.ಡಿ. ಪ್ರೌಢ ಪ್ರಬಂಧಕ್ಕೆ ಶಿಲ್ಪಕಲಾ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

    ಕೋಟದ ಯಕ್ಷಗಾನ ಮತ್ತು ನಾಟಕ ಪ್ರಸಾಧನ ತಜ್ಞ ಎಚ್. ಗೋವಿಂದ ಉರಾಳ ಮತ್ತು ನಾಗರತ್ನ ದಂಪತಿಗಳ ಪುತ್ರರಾದ ಇವರು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ‘ಸ್ವರ್ಣ ಪದಕ’ದೊಂದಿಗೆ ಶಿಲ್ಪ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದೂ, ಮುಂದೆ ಗುಜರಾತಿನ ವಡೋದರಾದ ‘ದಿ ಮಹಾರಾಜ ಸಯಾಜಿ ರಾವ್ ವಿಶ್ವ ವಿದ್ಯಾನಿಲಯ’ ದಲ್ಲಿ ಶಿಲ್ಪ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇದೀಗ ಮಣಿಪಾಲದ ಮಾಹೆಯಲ್ಲಿ ‘ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್’ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂಭವಿ ಗಿಳಿಯಾರು ಶಾಲೆ, ವಿವೇಕ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪಿ.ಯು ವಿದ್ಯಾಭ್ಯಾಸವನ್ನು ಮುಗಿಸಿರುವ ಗಣೇಶ್ ಉರಾಳರು ದೇಶದ ಶಿಲ್ಪ ಕಲಾ ವಿಭಾಗದ ಅಪರೂಪದ ಅನನ್ಯ ಕಲಾವಿದರೂ, ಶಿಕ್ಷಕರೂ ಆಗಿ ಗುರುತಿಸಿಕೊಂಡಿರುತ್ತಾರೆ.

  • ಹೆಮ್ಮಾಡಿ :NATA ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್

    ಹೆಮ್ಮಾಡಿ :NATA ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ರಾಷ್ಟ್ರೀಯ ಮಟ್ಟದಲ್ಲಿ ನಡೆದ NATA ಪ್ರವೇಶ ಪರೀಕ್ಷೆ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್, ಪರೀಕ್ಷೆ ಬರೆದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 161 ಅಂಕಗಳನ್ನು ಪಡೆದು, ಅದ್ವಿತೀಯ ಸಾಧನೆ ಮಾಡುವುದರ ಮೂಲಕ ಅರ್ಹತೆ ಪಡೆದಿದ್ದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಉಳಿದಂತೆ ಕಾಲೇಜಿನ ವಿದ್ಯಾರ್ಥಿನಿಯರಾದ ಉನ್ನತಿ ಗೌಡ 113 ಅಂಕಗಳು ಹಾಗೂ ವರ್ಣಾ ಆಚಾರ್ 113 ಅಂಕಗಳನ್ನು ಪಡೆದು ಸಾಧನೆ ಮೆರೆದಿರುತ್ತಾರೆ.

    ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದ ವಿದ್ಯಾರ್ಥಿನಿಯರು ಇವರಾಗಿದ್ದು, ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ.

    ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.