Category: ಸುದ್ದಿ

  • ಬೈಂದೂರು :ಪ್ರಜಾಪ್ರಭುತ್ವದ ಹಬ್ಬವನ್ನು ಅನುಭವಿಸೋಣ – ಮತದಾನ ಜಾಗೃತಿ ಉದ್ಘಾಟಿಸಿದ ಡಿಸಿ ವಿದ್ಯಾಕುಮಾರಿ

    ಬೈಂದೂರು :ಪ್ರಜಾಪ್ರಭುತ್ವದ ಹಬ್ಬವನ್ನು ಅನುಭವಿಸೋಣ – ಮತದಾನ ಜಾಗೃತಿ ಉದ್ಘಾಟಿಸಿದ ಡಿಸಿ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಪ್ರಜಾಪ್ರಭುತ್ವಕ್ಕೆ ಚುನಾವಣೆಯೇ ತಳಪಾಯ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡಿಯಬೇಕು ಮತ್ತು ಎಲ್ಲರೂ ಭಾಗವಹಿಸುವಂತಾಗಬೇಕು. ಜನರು ಊರ ಹಬ್ಬವನ್ನು ಉತ್ಸಾಹದಿಂದ ಆಚರಿಸುವಂತೆ ಮತದಾನವೂ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ. ಕೆ ತಿಳಿಸಿದರು.

    ಅವರು ಇಂದು ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಮೀನುಗಾರಿಕಾ ಲಂಗರು ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಇತ್ತಿಚಿಗೆ ಯುವಜನತೆ ಚುನಾವಣೆಯಿಂದ ವಿಪುಖರಾಗುತ್ತಿರುವುದು ಕಂಡುಬರುತ್ತಿದೆ. ಚುನಾವಣಾ ದಿನವೆಂದರೆ ರಜಾ ದಿನವಲ್ಲ. ಸಂವಿಧಾನ ನಮಗೆ ನೀಡುವ ಹಕ್ಕು ಹಾಗೂ ಜವಾಬ್ದಾರಿಯನ್ನು ನಿಭಾಯಿಸಲು ಮತದಾನ ಮಾಡುವುದು ಅಗತ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಶತ ನೂರರಷ್ಟು ಮತದಾನವಾಗಿಲ್ಲ, ಕಡಿಮೆಯಾಗಿದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಕಾರ್ಯವಾಗಬೇಕು ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ಕುಮಾರಿ, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ಬೈಂದೂರು ತಹಶಿಲ್ದಾರ್ ಪ್ರದೀಪ್, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.

    ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಎಸ್. ಬಡಕುಂದಿ ಸ್ವಾಗತಿಸಿ, ಶಿರೂರು ಪಂಚಾಯತ್ ಪಿಡಿಓ ರಾಜೇಶ್ ವಂದಿಸಿದರು. ತಾಲೂಕು ಪಂಚಾಯತ್ ಸಿಬ್ಬಂದಿ ರೂಪ ಕಾರ್ಯಕ್ರಮ ನಿರೂಪಿಸಿದರು.

    ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಶಿರೂರಿನ ಮಹಿಳೆಯರು ಲಂಗರು ಪ್ರದೇಶದಲ್ಲಿ ವಿವಿಧ ರಂಗೋಲಿಗಳನ್ನು ಬಿಡಿಸಿದ್ದು ಗಮನ ಸೆಳೆಯಿತು. ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿರೂರಿನಿಂದ ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಮುದ್ರದ ಮಧ್ಯೆಯೇ ಜಿಲ್ಲಾಧಿಕಾರಿಗಳು ಪ್ರತಿಜ್ಞಾ ವಿಧಿ ಭೋದಿಸಿದರು. ಜಿಲ್ಲಾ ಪಂಚಾಯತ್ ಸಿಇಓ, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಅವರುಗಳು ಸ್ಕೂಭಾ ಡೈವಿಂಗ್ ಮೂಲಕ ತೆರಳಿ ಮತದಾನ ಜಾಗೃತಿಯ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಮತದಾನ ಜಾಗೃತಿ ಬೋರ್ಡುಗಳನ್ನು ಪ್ರದರ್ಶಿಸಲಾಯಿತು.

  • ಕುಂದಾಪುರ :ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ – ಕೋಟಾ ವಿಶ್ವಾಸ

    ಕುಂದಾಪುರ :ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ – ಕೋಟಾ ವಿಶ್ವಾಸ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಪರಿಗಣಿಸಿ ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಜಯಭೇರಿ ಭಾರಿಸಲಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶುಕ್ರವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕುಂದಾಪುರ ಮಂಡಲದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ, ಶಕ್ತಿ ಕೇಂದ್ರ, ನಗರಸಭೆ, ಪುರಸಭೆಗಳ ವಾರ್ಡ್ಗಳು ಸೇರಿದಂತೆ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿದ್ದು, ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಉತ್ಸಾಹ ಕಂಡಾಗ ಈ ಬಾರಿ ದಾಖಲೆಯ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡಿದೆ. ಅದೇ ರೀತಿ ಕುಂದಾಪುರ ಮಂಡಲದ ನಾಯಕರು, ಪದಾಧಿಕಾರಿಗಳು ಕಾರ್ಯಕರ್ತರ ಪರಿಶ್ರಮ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಭಾರೀ ಮತಗಳ ಮುನ್ನಡೆ ಸಿಗುವ ವಿಶ್ವಾಸವಿದೆ ಎಂದರು.

    ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಬಿಜೆಪಿ ಶಾಸಕರಿದ್ದು, ಪೂಜಾರಿಯವರ ಗೆಲುವು ಸುಲಭವಾಗಲಿದೆ ಎಂದರು.

    ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಮಾತನಾಡಿದರು.

    ಇದೇ ಸಮದರ್ಭ ಕುಂದಾಪುರ ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಪ್ರಮುಖರಾದ ರಾಜೇಶ್ ಕಾವೇರಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾಡೂರು ಸುರೇಶ್ ಶೆಟ್ಟಿ, ಕಿರಣ ಪೂಜಾರಿ ತೆಕ್ಕಟ್ಟೆ, ಸುರೇಂದ್ರ ಕಾಂಚನ್, ಜಯಶೀಲ ಶೆಟ್ಟಿ, ಪ್ರವೀಣ್ ವಕ್ವಾಡಿ, ಸಂಧ್ಯಾ ರಮೇಶ್, ನಯನ ಗಣೇಶ, ವಿಠಲ ಪೂಜಾರಿ ಕೋಟ, ಅನಿತಾ ಶ್ರೀಧರ, ಮಂಜುನಾಥ ಬಳ್ಕೂರು, ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮತ್ತಿತರರು, ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ ಪ್ರಸ್ತಾವಿಸಿದರು.

  • ಕೋಟ :ಸಮಗ್ರ ಕೃಷಿ ನೀತಿ ಅನುಸರಿಸಿ – ಮೊಳಹಳ್ಳಿ ಪ್ರವೀಣ್ ಕುಲಾಲ್

    ಕೋಟ :ಸಮಗ್ರ ಕೃಷಿ ನೀತಿ ಅನುಸರಿಸಿ – ಮೊಳಹಳ್ಳಿ ಪ್ರವೀಣ್ ಕುಲಾಲ್

    ಕೋಟದ ಪಂಚವರ್ಣದ ರೈತರೆಡೆಗೆ 34ನೇ ಸರಣಿ ಕಾರ್ಯಕ್ರಮ

    ಕೋಟ: ಪ್ರಸ್ತುತ ವಿದ್ಯಮಾನಗಳಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಬೇಕು ಆ ಮೂಲಕ ಯಶಸ್ಸುಗಳಿಸಲು ಸಾಧ್ಯವಿದೆ ಮೊಳಹಳ್ಳಿಯ ಯುವ ಕೃಷಿಕ ಪ್ರವೀಣ್ ಕುಲಾಲ್ ಹೇಳಿದರು.

    ಶುಕ್ರವಾರ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು , ರೈತಧ್ಚನಿ ಸಂಘ ಕೋಟ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 34ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಯುವ ಕೃಷಿಕ ಪ್ರವೀಣ್ ಕುಲಾಲ್ ಗೌರವ ಸ್ವೀಕರಿಸಿ ಮಾತನಾಡಿ ಕೃಷಿ ಕಾಯಕದಲ್ಲಿ ಕಷ್ಟ ನಷ್ಟಗಳು ನೋವು ನಲಿವುಗಳು ಇರುವುದು ಸಹಜ ಆದರೆ ನಷ್ಟವಾಯಿತು ಎಂದು ದೃತಿಗೆಡಬಾರದು ಒಂದೇ ರೀತಿಯ ಕೃಷಿ ನೀತಿಯಿಂದ ಹೊರಬಂದು ಎಲ್ಲಾ ರೀತಿಯ ಆಧುನಿಕ ಕೃಷಿ ನೀತಿಗೆ ಒಗ್ಗಿಕೊಳ್ಳಬೇಕು ,ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿಯಲ್ಲಿ ಮುಂಚೂಣಿಗೆ ನಿಲ್ಲಬೇಕು,ಈ ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಧ್ಯೇಯದೊಂದಿಗೆ ಮೊದಲು ರೈತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಆ ಮೂಲಕ ಕೃಷಿ ಅವಲಂಬಿತ ರಾಷ್ಟ್ರವಾಗಿ ಸದಾ ನಿಲ್ಲಬೇಕು ಎಂದು ಕರೆ ಇತ್ತರು.

    ಕುಂದಾಪು ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ಋಮಿತಾ ಮಾತನಾಡಿ ಪ್ರವೀಣ್ ಕುಲಾಲ್ ಯುವ ಸಮುದಾಯಕ್ಕೆ ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಹೊಸ ಹೊಸ ಆವಿಷ್ಕಾದರ ಮೂಲಕ ಕೃಷಿ ಕ್ಷೇತ್ರದಲ್ಲಿ ಅದು ಗ್ರಾಮೀಣ ಭಾಗದ ಈ ಪ್ರದೇಶದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದಾರೆ.ಸರಕಾರದಿಂದ ಸಿಗುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳವ ಮೂಲಕ ಕೃಷಿ ಕಾಯಕದಲ್ಲಿ ಸ್ವಾವಲಂಬಿ ಬದುಕು ಕಾಣುತ್ತಿದ್ದಾರೆ ಎಂದು ತಮ್ಮ ಆಶಯ ವ್ಯಕ್ತಪಡಿಸಿ ಪಂಚವರ್ಣ ಸಂಸ್ಥೆಯ ರೈತರನ್ನು ಗುರುತಿಸುವ ಸಾಮಾಜಿಕ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

    ಇದೇ ವೇಳೆ ಕೃಷಿ ಪರಿಕರವನ್ನಿಟ್ಟು ಪ್ರವೀಣ್ ಕುಲಾಲ್ ಮೊಳಹಳ್ಳಿಯವರನ್ನು ಪಂಚವರ್ಣ ಸಾಧಕ ಕೃಷಿ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಯುವ ನ್ಯಾಯವಾದಿ ಚಂದ್ರ ಪೂಜಾರಿ ತೆಕ್ಕಟ್ಟೆ, ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಪಂಚವರ್ಣದ ಪದಾಧಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು.

    ಪಂಚವರ್ಣದ ಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಸ್ವಾಗತಿಸಿದರೆ, ಸಂಚಾಲಕಿ ಸುಜಾತ ಎಂ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಪಂಚವರ್ಣದ ಸದಸ್ಯ ಕೇಶವ ಆಚಾರ್ ವಂದಿಸಿದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

    ವಿಶೇಷತೆ
    ಇದೇ ಮೊದಲಬಾರಿಗೆ ಕೃಷಿ ತೋಟದಲ್ಲಿ ಪ್ರವೀಣ್ ಕುಲಾಲ್ ಇವರನ್ನು ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಯಿತು.

  • ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಮೊದಲ ದಿನ 1 ನಾಮಪತ್ರ ಸಲ್ಲಿಕೆ

    ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಮೊದಲ ದಿನ 1 ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬ ಸಂಬಂದಿಸಿದಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಬಹುಜನ ಸಮಾಜ ಪಾರ್ಟಿಯ ಕೆ.ಟಿ ರಾಧಾಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 8 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.

  • ಕುಂದಾಪುರ : ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಿ.ಇ.ಒ ಚಾಲನೆ

    ಕುಂದಾಪುರ : ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಿ.ಇ.ಒ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಸ್ವೀಪ್ ಸಮಿತಿ ವತಿಯಿಂದ ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಮತದಾರರ ಜಾಗೃತಿ ಸಂದೇಶ ಹೊಂದಿರುವ ರಾಷ್ಟ್ರ ಧ್ವಜ ತ್ರಿವರ್ಣ ಬಣ್ಣಗಳ ಬಲೂನುಗಳನ್ನು ಹಾರಿಸುವ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಸಿ.ಇ.ಓ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಶತಃ ನೂರರಷ್ಟು ಮತದಾನ ನಮ್ಮ ಗುರಿಯಾಗಿದೆ. ಕಳೆದ ಚುನಾವಣೆಯಲ್ಲಿ ಯಾವ ಮತಗಟ್ಟೆ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾಗಿದೆ ಅಂತಹ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುವುದರೊಂದಿಗೆ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದರು.

    ಕುಂದಾಪುರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಶಶಿಧರ್ ಮಾತನಾಡಿ, ಮತದಾರರಿಗೆ ಮತದಾನದ ಮಹತ್ವ ತಿಳಿಸಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಭಾಗವಹಿಸುವಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

    ಕಾರ್ಯಕ್ರಮದಲ್ಲಿ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು ಹಾಗೂ ಕಡ್ಡಾಯ ಮತದಾನದ ಅರಿವು ಮುಡಿಸುವ ಸಲುವಾಗಿ ಸಹಿ ಸಂಗ್ರಹಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರಶ್ಮಿ, ತಹಶೀಲ್ದಾರಾದ ಶೋಭಾಲಕ್ಷ್ಮೀ, ತಾಲೂಕು ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ತಾಲೂಕು ಮಟ್ಟದ ಇಲಾಖಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

  • ಕುಂದಾಪುರ :“ಯಕ್ಷಾಮೃತ “ ವಿನೂತನ ಯಕ್ಷಗಾನ ಕಾರ್ಯಕ್ರಮ

    ಕುಂದಾಪುರ :“ಯಕ್ಷಾಮೃತ “ ವಿನೂತನ ಯಕ್ಷಗಾನ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶ್ರೀ ನಟರಾಜ ನೃತ್ಯನಿಕೇತನ ಸಾಲಿಗ್ರಾಮ ಇವರ ಆಶ್ರಯದಲ್ಲಿ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಸಹಕಾರದಲ್ಲಿ ಯಕ್ಷ ಅಭಿನೇತ್ರಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾಗೀರಥಿ ಎಂ ರಾವ್ ರವರಿಂದ ಭಾಮೆಯೋರ್ವಳ ಭಾವರಂಗದ ಸಮಗ್ರ ಕಂಸ ಎಂಬ ಪರಿಕಲ್ಪಿತ ಯಕ್ಷಾಮೃತ ಪ್ರದರ್ಶನವು ಇಂದು ಶುಕ್ರವಾರ ಸಂಜೆ 6.00 ಗಂಟೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಜರುಗಲಿದೆ.

    ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಸೀತಾರಾಮ ಕಾರಂತ್‌ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷರಾದ ಆನಂದ್ ಸಿ ಕುಂದರ್ ಆದರ್ಶ ಆಸ್ಪತ್ರೆಯ ಡಾ.ಆದರ್ಶ ಹೆಬ್ಬಾರ್ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಹಾಗೂ ನಿರ್ದೇಶಕರಾದ ಕೆ ಜೆ ಗಣೇಶ್ ಕಿದಿಯೂರ್ ರವರು ಉಪಸ್ಥಿತರಿರುವರು.

    ಭಾಮೆಯೋರ್ವಳ ಭಾವರಂಗದ ಸಮಗ್ರ ಕಂಸ ಎಂಬ ಯಕ್ಷಾಮೃತ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಕೆ ಜೆ ಗಣೇಶ್‌ ಮದ್ದಳೆ ಕೆ ಜೆ ಸುಧೀಂದ್ರ ಕಿದಿಯೂರು ಚಂಡೆ ಕೆ ಜೆ ಕೃಷ್ಣ ಕಿದಿಯೂರು ನಿರೂಪಣೆ ದೀಪ್ತ ಕಿದಿಯೂರು ನಿರ್ವಹಿಸಲಿದ್ದಾರೆ.

  • ಕೋಡಿ ಕಡಲ ತೀರದಲ್ಲಿ ರೆಡ್ ಕ್ರಾಸ್, ಲಯನ್ಸ್ ಕ್ಲಬ್ ನಿಂದ ಸಿಮೆಂಟ್ ಬೆಂಚುಗಳ ಅಳವಡಿಕೆ

    ಕೋಡಿ ಕಡಲ ತೀರದಲ್ಲಿ ರೆಡ್ ಕ್ರಾಸ್, ಲಯನ್ಸ್ ಕ್ಲಬ್ ನಿಂದ ಸಿಮೆಂಟ್ ಬೆಂಚುಗಳ ಅಳವಡಿಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪದ ಕಡಲ ತೀರದಲ್ಲಿ ಅಳವಡಿಸಲಾದ ಸಿಮೆಂಟ್ ಬೆಂಚುಗಳನ್ನು ಲಯನ್ಸ್ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ನೀಲಕಾಂತ ಎಂ ಹೆಗಡೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಸಭಾಪತಿ ಜಯಕರ್ ಶೆಟ್ಟಿ ಉದ್ಘಾಟಿಸಿದರು.

    ಈ ಸಂದರ್ಭ ಮಾತನಾಡಿದ ನೀಲಕಾಂತ ಎಂ ಹೆಗಡೆ, “ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕಡಲ ಕಿನಾರೆಯಲ್ಲಿ ಸಾರ್ವಜನಿಕರು ಆರಾಮವಾಗಿ ಕುಳಿತು ಪ್ರಕೃತಿಯನ್ನು ವೀಕ್ಷಿಸಲು ಹಾಗೂ ಉತ್ತಮ ಗಾಳಿ ಸವಿಯಲು ಅನುಕೂಲವಾಗುವಂತೆ ಉತ್ತಮ ದರ್ಜೆಯ ಆಸನಗಳನ್ನು ಸಮಾಜಕ್ಕೆ ಕೊಡುಗೆಯನ್ನು ನೀಡಿರುವುದು ಪ್ರಶಂಸನೀಯ. ಈಗಾಗಲೇ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಪರಿಸರ ಸಂರಕ್ಷಣೆಯಲ್ಲಿ ಅದ್ಭುತವಾದ ಕ್ರಾಂತಿಯನ್ನ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ” ಎಂದರು.

    ರೆಡ್ ಕ್ರಾಸ್ ಸಭಾಪತಿ ಜಯಕರ್ ಶೆಟ್ಟಿ ಮಾತನಾಡಿ, “ಮುಂದಿನ ದಿನಗಳಲ್ಲಿ ಕೂಡ ರೆಡ್ ಕ್ರಾಸ್ ಸಂಸ್ಥೆಯು ಕಾರ್ಯ ಚಟುವಟಿಕೆಗಳಲ್ಲಿ ಲಯನ್ಸ್ ಕ್ಲಬ್ ಅಮೃತಧಾರ ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಜೊತೆ ಗೂಡಿ ಕಾರ್ಯಕ್ರಮಗಳನ್ನ ಸಂಯೋಜಿಸಲಾಗುವಬುದು.” ಎಂದರು. ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಶ್ರೀ ಗೋಪಾಲ್ ಪೂಜಾರಿ ಅವರ ಕೋರಿಕೆಯಂತೆ ಅದೇ ಸ್ಥಳದಲ್ಲಿ ಆಸುಪಾಸಿನ ಸಾರ್ವಜನಿಕ ಶೌಚಾಲಯ ಸ್ಥಾಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರೆಡ್ ಕ್ರಾಸ್ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಜೊತೆಯಾಗಿ ಅಗತ್ಯ ಶೌಚಾಲಯ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಈ ಸಂದರ್ಭ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ್ ನಾಯಕ್ ಜಿ ಎಮ್ ಟಿ ಕೋ-ಆರ್ಡಿನೇಟರ್ ಅರುಣ್ ಕುಮಾರ್ ಹೆಗಡೆ, ಲಯನ್ಸ್ ಪ್ರಾಂತ ಅಧ್ಯಕ್ಷ ಏಕನಾಥ್ ಬೋಳಾರ್, ವಲಯಾಧ್ಯಕ್ಷ ನವೀನ್ ಶೆಟ್ಟಿ, ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಖಜಾಂಜಿ ಶಿವರಾಂ ಶೆಟ್ಟಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಲಯನ್ಸ್ ಸಂಪುಟ ಸದಸ್ಯರಾದ ರಮಾ ಬೋಳಾರ್, ಸರಸ್ವತಿ ಪುತ್ರನ್, ಕೋಡಿ ಶಂಕರ ಪೂಜಾರಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಸಂಚಾಲಕ ಭರತ್ ಬಂಗೇರ ಹಾಗೂ ಸದಸ್ಯರು, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈಲೇಶ್,ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಸದಸ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಸ್ವಾಗತಿಸಿ ಕಲ್ಪನಾ ಭಾಸ್ಕರ್ ವಂದಿಸಿದರು. ಚಂದ್ರಿಕಾ ಧನ್ಯ ಹಾಗೂ ಸುಮ ಶ್ರೀ ಧನ್ಯ ಕಾರ್ಯಕ್ರಮ ನಿರೂಪಿಸಿದರು

  • ಕುಂದಾಪುರ :ಬಿಜೆಪಿ ಯುವ ಪದಾಧಿಕಾರಿಗಳಿಂದ ಹಾಲಾಡಿ ಭೇಟಿ

    ಕುಂದಾಪುರ :ಬಿಜೆಪಿ ಯುವ ಪದಾಧಿಕಾರಿಗಳಿಂದ ಹಾಲಾಡಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಚುನಾವಣಾ ತಂತ್ರಗಾರಿಕೆ ಗರಿಗೆದರಿದೆ. ಹಾಲಾಡಿ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿಯ ಬಳಿಕ ವಿಚಲಿತರಾದ ಬಿಜೆಪಿ, ಮಂಗಳವಾರ ಮತ್ತೆ ಯುವ ನಾಯಕರ ಜೊತೆಗೆ ಹಾಲಾಡಿ ಭೇಟಿ ಮಾಡಿ ರಾಜಕೀಯ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದೆ.

    ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಬೀಜಾಡಿ ಸುರೇಶ್ ಶೆಟ್ಟಿ ಹಾಗೂ ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನೇತೃತ್ವದಲ್ಲಿ ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ, ಸಲಹೆ ಸೂಚನೆ ಮಾರ್ಗದರ್ಶನವನ್ನು ಪಡೆಯಲಾಯಿತು.

    ಈ ಸಂದರ್ಭ ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ.ಎಸ್, ಕುಂದಾಪುರ, ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪಕ್ಷದ ಮುಖಂಡರಾದ, ಸಂಪತ್ ಶೆಟ್ಟಿ ಶಾನಾಡಿ, ಪ್ರವೀಣ್ ಶೆಟ್ಟಿ ವಂಡಾರು ಹಾಗೂ ವಿವಿಧ ಮೋರ್ಚಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಶ್ರೀ ರಾಮ ಕ್ಯಾಶೂಸ್ ಅಂಪಾರಿಗೆ ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರ ಭೇಟಿ

    ಕುಂದಾಪುರ :ಶ್ರೀ ರಾಮ ಕ್ಯಾಶೂಸ್ ಅಂಪಾರಿಗೆ ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಅಂಪಾರು ಗ್ರಾಮೀಣ ಪ್ರದೇಶದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿದ ಶ್ರೀ ರಾಮ ಕ್ಯಾಶೂಸ್, ಗೇರು ಬೀಜ ಕಾರ್ಖಾನೆಗೆ ಶ್ರೀಮದ್ ವಿದ್ಯಾಧೀಶ ತೀರ್ಥ ವಡೆಯರ್ ಸ್ವಾಮೀಜಿಯವರು ಬಸ್ರೂರು ಶಾಖಾ ಮಠದ ಮೊಕ್ಕಾಂನಿಂದ ಆಗಮಿಸಿ ಆಶಿರ್ವಚನ ಮಾಡಿದರು. ಸಂಸ್ಥೆಯ ನಾಲ್ವರು ಪಾಲುದಾರರಾದ ಕಂಚಾರು ಧನಂಜಯ ಪ್ರಭು ಹಾಗೂ ರಾಘವೇಂದ್ರ ಪ್ರಭು ಸಹೋದರರು ಮತ್ತು ಉಪ್ಪುಂದ ಸತೀಶ್ ಪೈ ಹಾಗೂ ರಾಜೇಶ್ ಪೈ ಸಹೋದರರ ಮನವಿಯನ್ನು ಮನ್ನಿಸಿ ಪರಮಪೂಜ್ಯ ಗುರುವರ್ಯರು ಆಗಮಿಸಿದರು. ಪೂರ್ಣ ಕುಂಭ ಸ್ವಾಗತದೊಂದಿಗೆ ಗುರುವರ್ಯರನ್ನು ಬರಮಾಡಿಕೊಳ್ಳಲಾಯಿತು. ಫ್ಯಾಕ್ಟ್ರೀ ಆವರಣದಲ್ಲಿದ್ದ ಶ್ರೀ ನಾಗ,ನಾಗಯಕ್ಷಿ ಹಾಗೂ ಚಾಮುಂಡಿ ಗುಡಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಾರ್ಖಾನೆ ವ್ಯವಹಾರ, ಗೇರು ಬೀಜ ಗೋದಾಮು, ಕಟ್ಟಿಂಗ್ ಮುಂತಾದ ಎಲ್ಲಾ ವಿಭಾಗಗಳನ್ನು ಸ್ವತಃ ವೀಕ್ಷಿಸಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

    ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಚಾರು ಪ್ರಭು ಕುಟುಂಬದ ಹಿರಿಯ ದೇವದಾಸ್ ಪ್ರಭು ದಂಪತಿ ಹಾಗೂ ಉಪ್ಪುಂದ ಪೈ ಕುಟುಂಬದ ಹಿರಿಯ ಸಹೋದರ ಉಮೇಶ್ ಪೈ ದಂಪತಿಗಳು ಗುರುವರ್ಯರಿಗೆ ಪಾದಪೂಜೆ ಮಾಡಿದರು. ಸಂಸ್ಥೆಯ ಗ್ರಾಹಕರು, ಕೆಲಸಗಾರರು, ಎರಡೂ ಕುಟುಂಬಗಳ ಬಂಧುಗಳು ಊರಿನ ಆಹ್ವಾನಿತರು ಸುಮಾರು ಇನ್ನೂರಕ್ಕೂ ಹೆಚ್ಚು ಭಕ್ತರು ಗುರುವರ್ಯರ ಕೃಪೆಗೆ ಪಾತ್ರರಾದರು. ಶ್ರೀಮದ್ ವಿದ್ಯಾಧೀಶ ತೀರ್ಥರು ತಮ್ಮ ಆಶೀರ್ವಚನ ಮಾತುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶ್ರೀ ರಾಮ ಕ್ಯಾಶೂಸ್ ನ‌ 13 ವರ್ಷಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ಜನ ಪಾಲುದಾರರು ಐಕ್ಯಮತದಲ್ಲಿ ಕೆಲಸ ಮಾಡಿ ಯಶಸ್ಸು ಸಾಧಿಸಲಿ ಎಂದು ಹರಸಿದರು. ಆ‌ಗಮಿಸಿದ ಸರ್ವರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶಿಕ್ಷಕ ಶ್ರೀ ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು, ಸಿದ್ದಾಪುರ ಪಾಂಡುರಂಗ ಪೈ ಸ್ವಾಗತಿಸಿದರು.

  • ಕೋಟ :ಸ್ವಚ್ಛ ಭಾರತ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕು – ಅಜಿತ್ ದೇವಾಡಿಗ

    ಕೋಟ :ಸ್ವಚ್ಛ ಭಾರತ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕು – ಅಜಿತ್ ದೇವಾಡಿಗ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸ್ವಚ್ಛ ಭಾರತದ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಆ ಮೂಲಕವೇ ಜಾಗೃತ ಪರಿಸರ ನಿರ್ಮಾಣ ಸಾಧ್ಯ ಎಂದು ಕೋಟ ಗ್ರಾ.ಪಂ ಸದಸ್ಯ, ಪೂರ್ವಾಧ್ಯಕ್ಷ ಅಜಿತ್ ದೇವಾಡಿಗ ನುಡಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕ ಇವರುಗಳ ಸಹಯೋಗದೊಂದಿಗೆ 201ನೇ ಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದ ಬಗ್ಗೆ ನಿರ್ಲಕ್ಷ್ಯ ಸಲ್ಲ ಅದನ್ನು ನಿರ್ಲಕ್ಷಿಸಿದರೆ ಪಾಕೃತಿಕ ವಿಕೋಪಗಳು ಸಂಭವಿಸುವುದುಈಗಾಲೇ ನಮ್ಮ ನಮ್ಮ ಪರಿಗಣನೆಗೆ ಬಂದಿದೆ ಈ ಹಿನ್ನಲ್ಲೆಯಲ್ಲಿ ಗಿಡ ನೆಟ್ಟು ಪೋಷಿಸಿ, ಸ್ವಚ್ಛ ಪರಿಸರದ ಕಲ್ಪನೆ, ನೀರು ಮಿತವಾಗಿ ಬಳಸಿ ಅದರ ಸದ್ಭಳಕೆಯನ್ನು ಸಮರ್ಪಕವಾಗಿ ಅನುಸರಿಸಿ ಎಂದು ಕರೆ ಇತ್ತರು.

    ಇದೇ ವೇಳೆ ಶೇವಧಿ ನಾಗರಾಜ್ ಗಾಣಿಗರ ಮೂಲಕ ಮಳೆಗಾಲದಲ್ಲಿ ನೆಟ್ಟ ಗಿಡಳಿಗೆ ನೀರುಣಿಸುವ ಕಾಯಕ ಹಾಗೂ ಕೋಟ ಹರ್ತಟ್ಟು ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆಯಿತು.

    ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಸತ್ಯನಾರಾಯಣ ಆಚಾರ್,ಮತ್ತಿತರರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.