ಕುಂದಾಪುರ ಮಿರರ್ ಸುದ್ದಿ…

ಕೋಟ: ಸ್ವಚ್ಛ ಭಾರತದ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಆ ಮೂಲಕವೇ ಜಾಗೃತ ಪರಿಸರ ನಿರ್ಮಾಣ ಸಾಧ್ಯ ಎಂದು ಕೋಟ ಗ್ರಾ.ಪಂ ಸದಸ್ಯ, ಪೂರ್ವಾಧ್ಯಕ್ಷ ಅಜಿತ್ ದೇವಾಡಿಗ ನುಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕ ಇವರುಗಳ ಸಹಯೋಗದೊಂದಿಗೆ 201ನೇ ಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದ ಬಗ್ಗೆ ನಿರ್ಲಕ್ಷ್ಯ ಸಲ್ಲ ಅದನ್ನು ನಿರ್ಲಕ್ಷಿಸಿದರೆ ಪಾಕೃತಿಕ ವಿಕೋಪಗಳು ಸಂಭವಿಸುವುದುಈಗಾಲೇ ನಮ್ಮ ನಮ್ಮ ಪರಿಗಣನೆಗೆ ಬಂದಿದೆ ಈ ಹಿನ್ನಲ್ಲೆಯಲ್ಲಿ ಗಿಡ ನೆಟ್ಟು ಪೋಷಿಸಿ, ಸ್ವಚ್ಛ ಪರಿಸರದ ಕಲ್ಪನೆ, ನೀರು ಮಿತವಾಗಿ ಬಳಸಿ ಅದರ ಸದ್ಭಳಕೆಯನ್ನು ಸಮರ್ಪಕವಾಗಿ ಅನುಸರಿಸಿ ಎಂದು ಕರೆ ಇತ್ತರು.
ಇದೇ ವೇಳೆ ಶೇವಧಿ ನಾಗರಾಜ್ ಗಾಣಿಗರ ಮೂಲಕ ಮಳೆಗಾಲದಲ್ಲಿ ನೆಟ್ಟ ಗಿಡಳಿಗೆ ನೀರುಣಿಸುವ ಕಾಯಕ ಹಾಗೂ ಕೋಟ ಹರ್ತಟ್ಟು ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆಯಿತು.
ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಸತ್ಯನಾರಾಯಣ ಆಚಾರ್,ಮತ್ತಿತರರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.











