Category: ಸುದ್ದಿ

  • ಕುಂದಾಪುರ :ಜನ, ಮನ ಮೆಚ್ಚಿದ ಯಕ್ಷದೇಗುಲದ ‘ಕಂಸವಧೆ’

    ಕುಂದಾಪುರ :ಜನ, ಮನ ಮೆಚ್ಚಿದ ಯಕ್ಷದೇಗುಲದ ‘ಕಂಸವಧೆ’

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಕಳೆದ 45ವರ್ಷದಿಂದ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷದೇಗುಲ ತಂಡದ ಕಂಸವಧೆ ಯಕ್ಷಗಾನ ಪ್ರದರ್ಶನ 500ಕ್ಕೂ ಹೆಚ್ಚು ಪ್ರಯೋಗ ಕಂಡರೂ, ತನ್ನ ತನವನ್ನು ಉಳಿಸಿಕೊಂಡಿದೆ. ಈವರೆಗೆ ನೂರಾರು ಕಲಾವಿದರು ಈ ಕಂಸವಧೆಯಲ್ಲಿ ಪ್ರದರ್ಶನ ನೀಡಿದ್ದಾರೆ.

    ಸೆ.22ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಗಾನ ರೆಸಿಡೆನ್ಸಿಯಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯಕ್ಷದೇಗುಲದ ಕಂಸವಧೆ ಯಕ್ಷಗಾನ ಪ್ರದರ್ಶನ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕೆ. ಮೋಹನ್ ನಿರ್ದೇಶನದಲ್ಲಿ, ಸುದರ್ಶನ ಉರಾಳರ ಸಂಯೋಜನೆಯಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆವಾದನದಲ್ಲಿ ಚಿನ್ಮಯಿ, ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಹಾಗೇ ಮುಮ್ಮೇಳದಲ್ಲಿ ಕಂಸನಾಗಿ ತಮ್ಮಣ್ಣ ಗಾಂವ್ಕರ್, ಕೃಷ್ಣನಾಗಿ ಮನೋಜ್ ಭಟ್, ಅಕ್ರೂರನಾಗಿ ಬಾಲಕೃಷ್ಣ ಭಟ್, ಬಲರಾಮನಾಗಿ ಶ್ರೀನಿಧಿ ಹೊಳ್ಳ, ರಜಕನಾಗಿ ದೇವರಾಜ್ ಕರಬ, ಚಾಣುರನಾಗಿ ಆದಿತ್ಯ ಹೊಳ್ಳ, ಮುಷ್ಟಿಕನಾಗಿ ಪ್ರಕಾಶ್ ಉಳ್ಳೂರ, ಗೋಪಿಕೆಯರಾಗಿ ಶ್ರೀವಿದ್ಯಾ, ಅನಿಕ ಮತ್ತು ಪ್ರತ್ಯುಷ ಭಾಗವಹಿಸಿದರು.
    ಮೇಕಪ್‍ನಲ್ಲಿ ಪ್ರಿಯಾಂಕ ಕೆ. ಮೋಹನ್ ಸಹಕಾರ ನೀಡಿದರು.

  • ಕಂಡ್ಲೂರು :ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಜಯ್ ಕುಮಾರ್ ಶೆಟ್ಟಿ ಅವರಿಗೆ ಸನ್ಮಾನ

    ಕಂಡ್ಲೂರು :ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಜಯ್ ಕುಮಾರ್ ಶೆಟ್ಟಿ ಅವರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಸಾಮ್ರಾಟ್ ಶೆಟ್ಟಿ ಗೌರವಾಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಜಯ್ ಕುಮಾರ್ ಶೆಟ್ಟಿ ಅವರನ್ನು ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

    “ಶಿಕ್ಷಣದ ಪ್ರತಿಯೊಂದು ಘಟ್ಟದಲ್ಲಿಯೂ ಮಗು ತನಗರಿವಿಲ್ಲದೆ ಶಿಕ್ಷಕರನ್ನು ಅನುಕರಿಸುತ್ತದೆ ಅನುಸರಿಸುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣದ ವಿನ್ಯಾಸಕರಾಗಿ, ಬದುಕಿನ ರೂವಾರಿಗಳಾಗಿ, ಕರ್ತವ್ಯ ನಿರ್ವಹಿಸುವ ಶಿಕ್ಷಕ ವೃತ್ತಿ ಉಳಿದೆಲ್ಲ ವೃತ್ತಿ ಗಳಿಗಿಂತ ಭಿನ್ನವಾದುದು. ಉತ್ತಮ ಶಿಕ್ಷಕರು ಸಂಸ್ಥೆಯ ಆಸ್ತಿ , ಅವರ ಕ್ರಿಯಾಶೀಲತೆ, ವೃತ್ತಿ ಬದ್ಧತೆ ,ಪ್ರತಿಭೆಗಳು ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಏಳಿಗೆಗೆ ಮಹತ್ತರವಾದ ಕೊಡುಗೆ ನೀಡುತ್ತಾರೆ.” ಎಂದು ಪ್ರಕಾಶ್ಚಂದ್ರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕಂಡ್ಲೂರು ಇವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.

    ಈ ಬಾರಿ ಕುಂದಾಪುರ ವಲಯ ಮಟ್ಟದ ಖೋ – ಖೋ ಪಂದ್ಯಾಟದಲ್ಲಿ ಸಂಸ್ಥೆಯ ಹುಡುಗರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಸಂಬಂಧ ತರಬೇತಿ ನೀಡಿ, ಶ್ರಮಿಸಿದ ಸಂಸ್ಥೆಯ ಕ್ರಿಯಾಶೀಲ ದೈಹಿಕ ಶಿಕ್ಷಣ ಶಿಕ್ಷಕರಾದ ಅಣ್ಣಪ್ಪ ಎಂ .ಗೌಡ ಇವರನ್ನು ಗುರುತಿಸಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವ ಮೊಗವೀರ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಘವೇಂದ್ರ ಶೆಟ್ಟಿ ಕಲ್ಲೋಳಿ ಮನೆ , ಜ್ಯೋತಿ ಆಲಿಸ್ ಬುತ್ತೆಲ್ಲೋ, ಶಶಿಕಲಾ, ಸುಮಾ, ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್, ಶಿಕ್ಷಕರಾದ ಗೋಪಾಲ್ ವಿಷ್ಣು ಭಟ್, ನಿತ್ಯಾನಂದ ಶೆಟ್ಟಿ ಹಳನಾಡು,ರಜನಿ .ಎಸ್. ಹೆಗಡೆ, ರತ್ನ, ಲಕ್ಷ್ಮಿ ಶೆಟ್ಟಿ, ಸಂಗೀತ , ಕುಮಾರಿ ದಿಶಾ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಮುಖ್ಯೋಪಾಧ್ಯಾಯರಾದ ಸುರೇಶ್ ಭಟ್ ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ರಜನಿ. ಎಸ್. ಹೆಗಡೆ ಸಹ ಶಿಕ್ಷಕರು ಇವರು ವಂದಿಸಿದರು.

  • ಕುಂದಾಪುರ :“ಸ್ವಚ್ಛ ಕುಂದಾಪುರ – ನಮ್ಮ ಕುಂದಾಪುರ” ಬೃಹತ್ ಜನ ಜಾಗೃತಿ ಅಭಿಯಾನ

    ಕುಂದಾಪುರ :“ಸ್ವಚ್ಛ ಕುಂದಾಪುರ – ನಮ್ಮ ಕುಂದಾಪುರ” ಬೃಹತ್ ಜನ ಜಾಗೃತಿ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಭಂಡಾರ್‍ಕಾರ್ಸ್ ಕಾಲೇಜು, ಕುಂದಾಪುರ ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾ ಸಂಸ್ಥೆಗಳ ಸಹಕಾರದಿಂದ ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮದಿನಾಚರಣೆ ದಿನ ಅಕ್ಟೋಬರ್ 2 ರಂದು, ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮ “ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ” ಅಭಿಯಾನ ನಡೆಸಲು ನಿರ್ಧರಿಸಿದೆ. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಬೃಹತ್ “ಸ್ವಚ್ಛ ಕುಂದಾಪುರ-ನಮ್ಮ ಕುಂದಾಪುರ” ಎಂಬ ಜನ ಜಾಗೃತಿ ಕಾರ್ಯಕ್ರಮವನ್ನು ಸ್ಥಳೀಯ ಕುಂದಾಪುರದ 23 ವಾರ್ಡ್‍ಗಳಲ್ಲಿ ಹಮ್ಮಿಕೊಂಡಿದ್ದಾರೆ. ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಜನ ಜಾಗೃತಿ ಕಾರ್ಯಕ್ರಮ ಇದಾಗಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಯ ಸುಮಾರು 15000 ಕ್ಕೂ ಮಿಕ್ಕಿ ಮನೆಗಳ ಸಂಪರ್ಕ ಮಾಡುವುದು ಮತ್ತು ಅವರಲ್ಲಿ ಮತ್ತು ಜನರಲ್ಲಿ ಪರಿಸರದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

    ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶ ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಲೇವಾರಿ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ಮತ್ತು ಜಲಸಂರಕ್ಷಣೆಯಾಗಿದೆ.

    ಸುಸ್ಥಿರ ಬದುಕಿಗೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅತ್ಯಗತ್ಯವಾಗಿರುವ ಉತ್ತಮ ಪರಿಸರವನ್ನು ಉಳಿಸುವ ಕುರಿತು ಜನ ಜಾಗೃತಿ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದರ ಕುರಿತು ವಿದ್ಯಾರ್ಥಿಗಳು ವಿವರಿಸಲಿದ್ದಾರೆ.

    ಕುಂದಾಪುರದ ಸಹಾಯಕ ಆಯುಕ್ತರು, ಪುರಸಭಾ ಮುಖ್ಯಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಪುರಸಭಾ ಸದಸ್ಯರು ಈ “ಸ್ವಚ್ಛ ಕುಂದಾಪುರ-ನಮ್ಮಕುಂದಾಪುರ” ಅಭಿಯಾನಕ್ಕೆ ಉತ್ತಮ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

    ಈಗಾಗಲೇ ಕುಂದಾಪುರ ಪುರಸಭೆ ಪುರ ಸ್ವಚ್ಛತೆ ಕುರಿತು ಉತ್ತಮವಾದ ಸೇವೆ ಸಲ್ಲಿಸುತ್ತಿದ್ದು, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದರೊಂದಿಗೆ ಮುಂದಿನ ಪೀಳಿಗೆಗೂ ಪರಿಸರ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ಹಾಗೂ ಕುಂದಾಪುರವನ್ನು ಮಾದರಿ ನಗರವಾಗಿ ಬೆಳೆಸುವುದು ಭಂಡಾರ್‍ಕಾರ್ಸ್ ಕಾಲೇಜಿನ ಈ ಅಭಿಯಾನದ ಉದ್ದೇಶವಾಗಿದೆ.
    60 ಸಂವತ್ಸರವನ್ನು ಪೂರೈಸಿ 61ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜು ಸುಮಾರು 3000 ವಿದ್ಯಾರ್ಥಿಗಳಿಗೆ ಈ ಜಾಗೃತಿ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಅನುವು ಮಾಡಿ ಕೊಡುತ್ತಿದೆ. ಕಾಲೇಜು ಈ ಹಿಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಅಲ್ಲದೇ ಇಂತಹ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.

    ಈ ಅಭಿಯಾನದಲ್ಲಿ ಎಲ್ಲಾ ಪುರಸಭೆಯ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಭಂಡಾರ್‍ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿನಂತಿಸಿದ್ದಾರೆ.

  • ಕುಂದಾಪುರ :ಯುವಜನತೆ ಸಂಘಟಿತರಾದಾಗ ಸಮಾಜದ ಉನ್ನತಿ ಸಾಧ್ಯ – ಸದಾಶಿವ ಶೆಟ್ಟಿ

    ಕುಂದಾಪುರ :ಯುವಜನತೆ ಸಂಘಟಿತರಾದಾಗ ಸಮಾಜದ ಉನ್ನತಿ ಸಾಧ್ಯ – ಸದಾಶಿವ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಒಂದು ಸಮಾಜದ ಸರ್ವತೋಮುಖ ಏಳಿಗೆಯಾಗಬೇಕಾದರೆ ಆ ಸಮಾಜದ ಶ್ರೀಮಂತ ವರ್ಗ ಆರ್ಥಿಕ ಬೆಂಬಲವನ್ನು ದುರ್ಬಲರ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

    ಅವರು ಭಾನುವಾರ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ದಶಮ ಸಂಭ್ರಮದ ಪ್ರಯುಕ್ತ ನಡೆದ ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಬಂಟ ಸಮಾಜದಲ್ಲಿ ಶೇ.80ರಷ್ಟು ಬಡವರಿದ್ದಾರೆ. ಅವರ ಆರೋಗ್ಯ, ಶಿಕ್ಷಣ ಹಾಗು ಆರ್ಥಿಕ ಸಮಸ್ಯೆಗಳಿಗೆ ಶ್ರೀಮಂತರು ಸಹಾಯ ಹಸ್ತ ಚಾಚಬೇಕು. ಕೋಟ್ಯಾಧೀಶರನ್ನು ಹುಡುಕಿ ಅವರ ಮನವೊಲಿಸಿ ಸಂಘಟನೆಗೆ ಆರ್ಥಿಕ ಬೆಂಬಲ ಪಡೆಯಬೇಕು. ಪ್ರತಿಭಾನ್ವಿತರಿಗೆ ಬೆಂಬಲ ನೀಡುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕರೆ ನೀಡಿದರು.

    ಸಾಧಕರು ನಮಗೆ ಮಾರ್ಗದರ್ಶಕರಾಗುತ್ತಾರೆ. ಅವರ ದಾರಿಯಲ್ಲಿ ಯುವಕರು, ವಿದ್ಯಾರ್ಥಿಗಳು ಸಾಗಬೇಕು. ಸಂಘದಿಂದ ಸಹಾಯ ಪಡೆದವರು ಅದರ ನೂರು ಪಟ್ಟು ಸಾಧನೆ ಮಾಡಿ ಸಂಘಟನೆ ಮತ್ತು ಸಮಾಜದ ಋಣ ತೀರಿಸಬೇಕು. ಸಂಘಟನೆಗಳ ನಾಯಕತ್ವ ತೆಗೆದುಕೊಳ್ಳುವವರು ಸಮಾಜವನ್ನು ಮುನ್ನಡೆಸುವ ಜವಾಬ್ಧಾರಿ ತೆಗೆದುಕೊಳ್ಳಬೇಕು ಎಂದು ಐಕಳ ಹರೀಶ್ ಹೇಳಿದರು.

    ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ 95 ವರ್ಷದ ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಿಂದ 85 ವರ್ಷದ ಡಾ. ವೈ.ಎಸ್.ಹೆಗ್ಡೆ, ಲೆಕ್ಕಪರಿಶೋಧನಾ ಕ್ಷೇತ್ರದಿಂದ ಕೆ. ಸುಧಾಕರ ಹೆಗ್ಡೆ, ನ್ಯಾಯಾಂಗ ಕ್ಷೇತ್ರದಿಂದ ಎ.ಬಿ.ಶೆಟ್ಟಿ , ಹೋಟೇಲ್ ಕ್ಷೇತ್ರದಿಂದ ಬಿ. ಅರುಣ್ ಕುಮಾರ್ ಶೆಟ್ಟಿ, ಪರಿಸರ ಕ್ಷೇತ್ರದಿಂದ ಕೊರ್ಗಿ ವಿಠಲ ಶೆಟ್ಟಿ, ಗ್ರಾಮೀಣ ಶಿಕ್ಷಣ ಕ್ಷೇತ್ರದಿಂದ ವೀರಣ್ಣ ಶೆಟ್ಟಿ, ಉನ್ನತ ಶಿಕ್ಷಣ ಕ್ಷೇತ್ರದಿಂದ ಡಾ. ಬಿ.ಜಗದೀಶ್ ಶೆಟ್ಟಿ, ಕೈಗಾರಿಕಾ ಕ್ಷೇತ್ರದಿಂದ ಕೆ. ಜಯಕರ ಶೆಟ್ಟಿ, ಹೈನುಗಾರಿಕಾ ಕ್ಷೇತ್ರದಿಂದ ಸುಧಾಕರ ಶೆಟ್ಟಿ ಜನ್ಸಾಲೆಯವರಿಗೆ 2023ನೇ ಸಾಲಿನ ದಶಮಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅಲ್ಲದೇ ಚಂದ್ರಯಾನ 3 ಖ್ಯಾತಿಯ ಯುವ ವಿಜ್ಞಾನಿ ಆಕಾಶ್ ವಿ. ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಸಂಘದ ಮಹಾ ಪೋಷಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹಾಗು ಐಕಳ ಹರೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

    ಇದೇ ಸಂದರ್ಭ ಗೃಹಚೇತನ ಫಲಾನುಭವಿಗಳಿಗೆ ಚೆಕ್, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿಶೇಷ ಚೇತನರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಯುವ ಬಂಟರ ಸಂಘದ ಅಧ್ಯಕ್ಷ ಡಾ.‌ನಿತ್ಯಾನಂದ ಶೆಟ್ಟಿ ಅಂಪಾರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬೈಲೂರು ಉದಯಕುಮಾರ್ ಶೆಟ್ಟಿ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.

  • ಕುಂದಾಪುರ :ಭಾರತದ ಗ್ರಾಮೀಣ ಮಹಿಳೆಯರೇ ಆರ್ಥಿಕ ಉಳಿತಾಯ ಬ್ಯಾಂಕ್ ಗಳಿಗೆ ಉತ್ತೇಜನ – ಸ್ಟ್ಯಾನೀ ತಾವ್ರೋ

    ಕುಂದಾಪುರ :ಭಾರತದ ಗ್ರಾಮೀಣ ಮಹಿಳೆಯರೇ ಆರ್ಥಿಕ ಉಳಿತಾಯ ಬ್ಯಾಂಕ್ ಗಳಿಗೆ ಉತ್ತೇಜನ – ಸ್ಟ್ಯಾನೀ ತಾವ್ರೋ

    ತಲ್ಲೂರಿನಲ್ಲಿ ರೋಜರಿ ಕೋ – ಆಪರೇಟಿವ್ ಸೊಸೈಟಿ 9ನೇ ಶಾಖೆಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಹಕಾರಿ ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಜಬಾವ್ಧಾರಿಯುತ ಸಮಾಜ ನಿರ್ಮಿಸಲು ಸಹಕರಿಸಿದಂತಾಗುತ್ತದೆ ಎಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಧರ್ಮಗುರುಗಳು ಸ್ಟ್ಯಾನಿ ತ್ರಾವ್ರೋ ಹೇಳಿದರು.

    ಅವರು ತಲ್ಲೂರಿನ ಡೆಜಾನ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ರೋಜರಿ ಕೋ – ಆಪರೇಟಿವ್ ಸೊಸೈಟಿ 9ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

    ಅನಾದಿ ಕಾಲದಿಂದಲೂ ಭಾರತದ ಗ್ರಾಮೀಣ ಮಹಿಳೆಯರು ದವಸ ಧಾನ್ಯ ಹಾಗೂ ಅಲ್ಪಸ್ವಲ್ಪ ಗಣವನ್ನು ಉಳಿತಾಯ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅವರ ಆಲೋಚನೆಯೇ ಇಂದು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದಾರಿಯಾಗಿದೆ ಎಂದರು.

    ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಸಹಾಯಕ ಉಪನಿಬಂಧಕ ಅರುಣ್ ಕುಮಾರ್ ಎಸ್.ವಿ. ಭದ್ರತಾ ಕೊಠಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಚೇರಿಯ ಕಾಮಗಾರಿ ನಡೆಸಿದ ಸತೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ತಲ್ಲೂರು ಸೈಂಟ್ ಪ್ರಾನ್ಸಿಸ್ ಅಸಿಸಿ ಚರ್ಚ್ ಧರ್ಮಗುರು ಫಾ. ಎಡ್ವಿನ್ ಡಿ’ಸೋಜಾ, ತಲ್ಲೂರು ಗ್ರಾ.ಪಂ.ಅಧ್ಯಕ್ಷ ಗಿರೀಶ್ ಎಸ್.ನಾಯ್ಕ್, ಗ್ರಾ.ಪಂ. ಸದಸ್ಯೆ ಜೂಡಿತ್ ಮೆಂಡೋನ್ಸಾ, ತಲ್ಲೂರು ಶಾಖೆಯ ಸಭಾಪತಿ ಓಜ್ಲಿನ್ ರೆಬೆಲ್ಲೋ, ರೋಜರಿ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್ ಡಿ’ಆಲ್ಮೇಡಾ, ನಿರ್ದೇಶಕ ಫಿಲೀಫ್ ಡಿ’ಕೋಸ್ತ್ ಉಪಸ್ಥಿತರಿದ್ದರು.

    ರೋಜರಿ ಕ್ರೆಡಿಟ್ ಸೊಸೈಟಿ ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉಪಾಧ್ಯಕ್ಷ ಕಿರಣ್ ಲೋಬೋ ವಂದಿಸಿದರು. ಶಾಂತಿ ಡಿ’ ಆಲ್ಮೇಡಾ ನಿರೂಪಿಸಿದರು.

  • ಕುಂದಾಪುರ :ಯುವ ಉದ್ಯಮಿ ಪ್ರಕಾಶ್ ಭಟ್ ಉಪ್ಪುಂದ ಅವರಿಗೆ ಸನ್ಮಾನ

    ಕುಂದಾಪುರ :ಯುವ ಉದ್ಯಮಿ ಪ್ರಕಾಶ್ ಭಟ್ ಉಪ್ಪುಂದ ಅವರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಜೇಸಿ ಸಪ್ತಾಹದ ಪ್ರಯುಕ್ತ ಯುವ ಉದ್ಯಮಿ ಪ್ರಕಾಶ್ ಭಟ್ ಅವರಿಗೆ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

    ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷರಾದ ಡಾ.ಸೋನಿ ವಹಿಸಿದ್ದರು.

    ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್ ನ ನಿರ್ದೇಶರಾದ ಡಾ. ಬಿ.ವಿ. ಉಡುಪ, ವಲಯ 15ರ ಪೂರ್ವವಲಯಾಧ್ಯಕ್ಷ ಅಲನ್ ರೋಹನ್ ವಾಜ್ ಭಂಢರ್ಕಾರ್ಸ್ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ಜಿ.ಎಮ್ .ಗೊಂಡ ವಲಯ 15ರ ತರಬೇತುದಾರ ಕೆ. ಕೆ. ಶಿವರಾಮ್ , ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಶ ನಾವಡ, ವಿಜಯ್ ಭಂಡಾರಿ, ಶ್ರೀಧರ್ ಸುವರ್ಣ ಚಂದ್ರಕಾಂತ್ ಗಿರೀಶ್ ಹೆಬ್ಬಾರ್ ಪ್ರಶಾಂತ್ ಹವಾಲ್ದಾರ್, ನಿಕಟ ಪೂರ್ವ ಅಧ್ಯಕ್ಷ ಅಭಿಲಾಶ್ ,ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಡಿ’ಕೋನ್ಹ , ಜೊತೆ ಕಾರ್ಯದರ್ಶಿ ಶೈಲಾ ಲೂಯಿಸ್,
    ಸಪ್ತಾಹದ ಸಭಾಪತಿ ರಾಘವೇಂದ್ರ ಕುಲಾಲ್, ಹೆಮ್ಮಾಡಿ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಇನ್ನಿತರರು ಉಪಸ್ಥಿತರಿದ್ದರು.

  • ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 29ನೇ ಸಾಧಕ ಶಕ್ತಿಯಾಗಿ ಪ್ರೇಮ ಕುಂಭಾಶಿ ಆಯ್ಕೆ

    ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 29ನೇ ಸಾಧಕ ಶಕ್ತಿಯಾಗಿ ಪ್ರೇಮ ಕುಂಭಾಶಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಕೋಟ ಸೇರಿದಂತೆ ವಿವಿಧ ಭಾಗಗಳ ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 29ರ ಸಂಭ್ರಮ. ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಬರುವ ಸೆ.28ರ ಸಂಜೆ.4.30ಗ ನಡೆಯಲಿದ್ದು ಕೃಷಿ ಕ್ಷೇತ್ರದಲ್ಲಿ‌ ವಿಶಿಷ್ಟ ಸಾಧನೆಗೈದ( ಮಲ್ಲಿಗೆ ಕೃಷಿ) ಕುಂಭಾಶಿ ಗ್ರಾ.ಪಂ ವ್ಯಾಪ್ತಿಯ ಪ್ರೇಮ ಕುಂಭಾಶಿ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

  • ಕುಂದಾಪುರ :ಸೆ. 26,27 ರಂದು ಲಯನ್ಸ್ ಸಂಸ್ಥೆಯಿಂದ ಹದಿಹರೆಯದವರಿಗಾಗಿ ಕೌಶಲ್ಯಗಳು – ಕಾರ್ಯಾಗಾರ

    ಕುಂದಾಪುರ :ಸೆ. 26,27 ರಂದು ಲಯನ್ಸ್ ಸಂಸ್ಥೆಯಿಂದ ಹದಿಹರೆಯದವರಿಗಾಗಿ ಕೌಶಲ್ಯಗಳು – ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಲಯನ್ಸ್ ಜಿಲ್ಲೆ 317Cನ ಲಯನ್ಸ್ ಕ್ಲಬ್ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಹಾಗೂ ಲಯನ್ಸ್ ಕ್ಲಬ್ ಸಿಟಿ ಸೆಂಟರ್‌ನ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಫೌಂಡೇಶನ್‌ನ ಕಾರ್ಯಕ್ರಮವಾದ ಲಯನ್ಸ್ ಕ್ವೆಸ್ಟ್‌ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರಿಗಾಗಿ ಕೌಶಲ್ಯಗಳ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಇದೇ ತಿಂಗಳ 26,27ರಂದು ಕುಂದಾಪುರ ಎಜುಕೇಷನ್ ಸೊಸೈಟಿಯ ಅಧೀನ ಶಿಕ್ಷಣ ಸಂಸ್ಥೆಗಳಾದ ಎಚ್ಎಮ್ಎಮ್ ಮತ್ತು ವಿಕೆ ಆರ್ ಶಾಲೆ ಕುಂದಾಪುರದಲ್ಲಿ ನಡೆಯಲಿದೆ.

    ಕಾರ್ಯಕ್ರಮವನ್ನು ಮಾಜಿ ಶಾಸಕ, ಸಂಸ್ಥೆಯ ಮುಖ್ಯಸ್ಥರಾದ ಬಿ.ಎಮ್. ಸುಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಸೋನ್ಸ್ ಹಾಗೂ ಜಯಕರ್ ಶೆಟ್ಟಿ ಉಪಸ್ಥಿತರಿರುವರು.ಉದ್ಟಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಡಾ. ಭಾರ್ಗವಿ ಐತಾಳ್ ಹೆಬ್ರಿ ವಹಿಸಲಿದ್ದು. ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಸಿಟಿ ಸೆಂಟರ್ ನ ಅಧ್ಯಕ್ಷೆ ವೀಣಾ ಕೋಟ್ಯಾನ್, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ಉಪಸ್ಥಿತರಿರುವರು. ಕಾರ್ಯಾಗಾರದಲ್ಲಿ ಪ್ರಧಾನ ತರಬೇತುದಾರರಾಗಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಮಲ್ಟಿಪಲ್ ಲಯನ್ಸ್ ಕ್ವೆಸ್ಟ್ ತರಬೇತುದಾರರಾದ ಮಂಗಳೂರಿನ ಕವಿತಾ ಎಸ್ ಶಾಸ್ತ್ರಿ ಅವರು ಭಾಗವಹಿಸಲಿದ್ದಾರೆ. ದಿ. 27 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಡಾ.ನೇರಿ ಕರ್ನೇಲಿಯೋ, ಮಾಜಿ ಜಿಲ್ಲಾ ಗವರ್ನರ್ ಅಂತರಾಷ್ಟ್ರೀಯ ತರಬೇತುದಾರರಾದ ನೀಲಕಾಂತ ಎಮ್ ಹೆಗಡೆಯವರು ಭಾಗವಹಿಸಿ ದೃಢೀಕರಣ ಪತ್ರ ನೀಡಲಿದ್ದಾರೆ ಎಂದು ಲಯನ್ಸ್ ಕ್ರೆಸ್ಟ್ ಜಿಲ್ಲಾ ಸಂಯೋಜಕಿ ಸರಸ್ವತಿ ಗಣೇಶ್ ಪುತ್ರನ್ ತಿಳಿಸಿದ್ದಾರೆ.

  • ಬೆಂಗಳೂರು ಮೈಸೂರು ಮುರುಡೇಶ್ವರ ರೈಲ್ವೆಯ ವೇಳಾ ಪಟ್ಟಿ ಬದಲಾವಣೆ – ಒಂದು ಗಂಟೆ ಬೇಗ ಬರಲಿದೆ ನಿತ್ಯ ರೈಲು

    ಬೆಂಗಳೂರು ಮೈಸೂರು ಮುರುಡೇಶ್ವರ ರೈಲ್ವೆಯ ವೇಳಾ ಪಟ್ಟಿ ಬದಲಾವಣೆ – ಒಂದು ಗಂಟೆ ಬೇಗ ಬರಲಿದೆ ನಿತ್ಯ ರೈಲು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬೆಂಗಳೂರು ಮೈಸೂರು ಮಂಗಳೂರಿಗೆ ಬರುತ್ತಿದ್ದ ನಿತ್ಯ ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸಿದ್ದು, ವೇಳಾಪಟ್ಟಿಯಲ್ಲಿರುವ ವ್ಯತ್ಯಯ ಮತ್ತು ತಡವಾಗಿ ಪ್ರಯಾಣದ ಬಗ್ಗೆ ಬಿತ್ತರಿಸಿದ ವರದಿಗೆ ರೈಲ್ವೇ ಇಲಾಖೆ ಸ್ಪಂದಿಸಿದೆ. ಆರಂಭದಲ್ಲಿ ವರದಿಗೆ ಸ್ಪಂದಿಸಿದ ಮೈಸೂರು ಸಂಸದ ರೈಲ್ವೇ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ತಕ್ಷಣ ಸ್ಪಂದಿಸಿದ ರೈಲು ಸಚಿವರು ಕೆಲವೇ ಘಂಟೆ ಗಳಲ್ಲಿ ರೈಲ್ವೆ ಬೋರ್ಡ್ ನಿಂದ ದಕ್ಷಿಣ ರೈಲ್ವೆ ಗೆ ಮಂಗಳೂರು ಮತ್ತು ಸುರತ್ಕಲ್ ನಡುವಿನ ಪ್ರಯಾಣವನ್ನು ತಗ್ಗಿಸಲು ಆದೇಶ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ದಕ್ಷಿಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ಗಳು ಜಂಟಿಯಾಗಿ ವೇಳಾಪಟ್ಟಿ ಸರಿಪಡಿಸುವತ್ತ ಕಾರ್ಯನಿರತರಾಗಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ರೈಲ್ವೇ ವೇಳಾಪಟ್ಟಿಯಲ್ಲಿನ ಸಮಸ್ಯೆಗಳನ್ನು ವರದಿ ಮಾಡಿದ ಮಾಧ್ಯಮಗಳಿಗೆ, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ರೈಲ್ವೇ ಸಚಿವರು ಮತ್ತು ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.

    ಬೆಂಗಳೂರು ಮೈಸೂರು ಮುರ್ಡೇಶ್ವರ ನಿತ್ಯ ರೈಲಿನ ವೇಳಾಪಟ್ಟಿಯ ಸಮಸ್ಯೆಗಳ ಬಗ್ಗೆ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಮಂಗಳೂರಿನಿಂದ ಕುಂದಾಪುರಕ್ಕೆ ಈ ರೈಲು ವೇಳಾಪಟ್ಟಿಯ ಪ್ರಕಾರ ಬರೋಬ್ಬರಿ ನಾಲ್ಕು ಗಂಟೆಯ ಪ್ರಯಾಣವಾಗುತ್ತಿತ್ತು. ಮಂಗಳೂರಿನಿಂದ ಸುರತ್ಕಲ್ ಗೆ ಪ್ರಯಾಣದ ಸಮಯದಲ್ಲಿ ರೈಲ್ವೇ ಇಲಾಖೆ ಕೇರಳದ ಲಾಬಿಗೆ ಮಣಿದಿರುವ ಶಂಕೆಯೂ ವ್ಯಕ್ತವಾಗಿತ್ತು. ಇದೀಗ ಎರಡು ಗಂಟೆ ಅವಧಿಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ರೈಲು ಪ್ರಯಾಣಿಸಲಿದೆ ಎಂದು ತಿಳಿದು ಬಂದಿದೆ.

  • ಮೂಡ್ಡಕಟ್ಟೆಯಲ್ಲಿ ಅಪಾಯಕಾರಿ ತಿರುವು : ಹಂಗಳೂರು ಲಯನ್ಸ್ ಕ್ಲಬ್ ನಿಂದ ಎಚ್ಚರಿಕೆ ಫಲಕ

    ಮೂಡ್ಡಕಟ್ಟೆಯಲ್ಲಿ ಅಪಾಯಕಾರಿ ತಿರುವು : ಹಂಗಳೂರು ಲಯನ್ಸ್ ಕ್ಲಬ್ ನಿಂದ ಎಚ್ಚರಿಕೆ ಫಲಕ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಾಲೂಕಿನ ಬಸ್ರೂರು ಮೂರುಕೈನಿಂದ ಬಸ್ರೂರು ಮಾರ್ಗವಾಗಿ ಸಿದ್ದಾಪುರಕ್ಕೆ ಹೋಗುವ ರಸ್ತೆಯ ಮೂಡ್ಡಕಟ್ಟೆ ದೊಡ್ಡನೆ ಎಂಬಲ್ಲಿ ಈ ಅಪಾಯಕಾರಿ ತಿರುವು ಇದ್ದು ಈ ಪ್ರದೇಶದಲ್ಲಿ ಎದುರುಗಡೆಯಿಂದ ಬರುವ ವಾಹನಗಳು ತೀರಾ ಸಮೀಪಕ್ಕೆ‌ ಬರುವ ತನಕವೂ ಕಾಣಿಸುವುದಿಲ್ಲ.

    ಪ್ರಸ್ತುತ ಧ.ಗ್ರಾ. ಯೋಜನೆಯ ಬಸ್ರೂರಿನ ವಿಪತ್ತು ನಿರ್ವಹಣ ಘಟಕದ ವತಿಯಿಂದ ತಿರುವಿನ ಸುತ್ತ ಬೆಳೆದಿರುವ ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. ಅಲ್ಲದೇ ಹಂಗಳೂರು ಲಯನ್ಸ್ ಸೂಚನಾ ಫಲಕ ಅಳವಡಿಸಲಾಯಿತು.