Category: ಸುದ್ದಿ

  • ಕುಂದಾಪುರ: ಆರೋಗ್ಯವಂತ ಸಮಾಜ ದೇಶದ ಆಸ್ತಿ – ಉದಯಕುಮಾರ ಶೆಟ್ಟಿ

    ಕುಂದಾಪುರ: ಆರೋಗ್ಯವಂತ ಸಮಾಜ ದೇಶದ ಆಸ್ತಿ – ಉದಯಕುಮಾರ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಆಯುರ್ವೇದ ಎನ್ನುವುದು ದೇಶದ ಸ್ವಾಸ್ಥ್ಯ. ಆರೋಗ್ಯವಂತ ಸಮಾಜವೇ ದೇಶದ ಆಸ್ತಿ ಎಂದು ಅಮೃತೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಕೋಟೇಶ್ವರ ಇದರ ಕಾರ್ಯದರ್ಶಿ ಬೈಲೂರು ಉದಯಕುಮಾರ್ ಶೆಟ್ಟಿ ಹೇಳಿದರು.

    ಅವರು ಶಂಕರನಾರಾಯಣದ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ಶಂಕರನಾರಾಯಣ, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ, ಅಮೃತೇಶ್ವರಿ ಶಿಕ್ಷಣ ಸಂಸ್ಥೆ, ಕೋಟೇಶ್ವರ, UVA ಯುವ ಮೆರಿಡಿಯನ್ ಹೋಟೆಲ್, ಅಮ್ಯೂಸೈಂಟ್ ಪಾರ್ಕ್, ಕನ್ವೆನ್ಷನ್ ಸೆಂಟರ್ ಕೋಟೇಶ್ವರ ಇವರ ಸಹಯೋಗದೊಂದಿಗೆ ನಡೆದ ಉಚಿತ ಆಯುರ್ವೇದ ತಪಾಸಣೆ, ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಜಪಾನ್, ಚೈನಾ ಮೊದಲಾದೆಡೆ ಈಗಲೂ ಎಂಭತ್ತು ವರ್ಷಕ್ಕಿಂತ ಹೆಚ್ಚು ಬದುಕುತ್ತಾರೆ. ಅಲ್ಲೆಲ್ಲ ವರ್ಷಪೂರ್ತಿ ಕೆಲಸ ಮಾಡುತ್ತಾರೆ ಮತ್ತು ಆಯುರ್ವೇದ ಔಷಧಿಗಳನ್ನು ಒಪ್ಪಿಕೊಂಡಿದ್ದಾರೆ.
    35ಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. 100 ಬೆಡ್ ಗಳ ಆಸ್ಪತ್ರೆ ಇದೆ. ಜನರಿಗೆ ಫಲಿತಾಂಶ ಸಿಕ್ಕರೆ ನಮಗೆ ತೃಪ್ತಿ. ಯಾವುದೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಗಲುವ ಔಷಧಿಯ ಖರ್ಚುಗಳನ್ನು ಉಚಿತವಾಗಿ ಪೂರೈಸುವ ಭರವಸೆ ನೀಡಿದರು.

    ಪ್ರಾಸ್ತಾವಿಸಿ ಮಾತನಾಡಿದ ಮಮತಾ ಆರ್ ಶೆಟ್ಟಿ, ಆರೋಗ್ಯ ಸರಿ ಇದ್ದರೆ ಬದುಕು ಸುಸೂತ್ರವಾಗುತ್ತದೆ. ಹಿಂದೆಲ್ಲ ನಮ್ಮ ಹಿರಿಯರು ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳನ್ನು ಬಳಸಿ ದೀರ್ಘಾಯುಷಿಗಳಾಗುತ್ತಿದ್ದರು ಎಂದರು.

    ಡಾ. ಸಚ್ಚಿದಾನಂದ ವೈದ್ಯ ಮಾತನಾಡಿ, ಆಹಾರ ಮತ್ತು ಮನಸ್ಸು ಎರಡನ್ನೂ ಉತ್ತಮವಾಗಿ ಇಟ್ಟುಕೊಂಡಾಗ ಜೀವನ ಸ್ವಾಸ್ಥ್ಯ ಎಂದರು.

    ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್ ಐತಾಳ್ ಮಾತನಾಡಿ, ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ರೋಗಕ್ಕೆ ಚಿಕಿತ್ಸೆ ಇರುವುದೇ ಆಯುರ್ವೇದದಲ್ಲಿ. ಆಯುರ್ವೇದ ಎನ್ನುವುದು ಶರೀರ, ಮನಸ್ಸು ಮತ್ತು ಆತ್ಮ ನಿಯಂತ್ರಣ. ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ಆಯುರ್ವೇದ ಮಾಹಿತಿ ನೀಡುತ್ತದೆ. 14 ವಿವಿಧ ವಿಭಾಗಳ ಒಪಿಡಿ, 100 ಹಾಸಿಗೆ, 100 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ. 10% ಚಿಕಿತ್ಸೆಯಲ್ಲಿ ರಿಯಾಯಿತಿ ಇದೆ. ಎಂದರು.

    ಮೃದುಲಾ ಎಸ್. ಹೆಗ್ಡೆ ಪ್ರಾರ್ಥಿಸಿದರು. ಶಾಮ ಶೆಟ್ಟಿ ಸ್ವಾಗತಿಸಿದರು. ಮಮತಾ ಆರ್ ಶೆಟ್ಟಿ ಪ್ರಾಸ್ತಾವಿಸಿದರು. ಶಂಕರನಾರಾಯಣ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅನಿಲ್ ವಂದಿಸಿದರು.

  • ಸಾಲಿಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ

    ಸಾಲಿಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ

    ಕುಂದಾಪುರ ಮಿರರ್ ಸುದ್ದಿ..

    ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಅಮೀನ್ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾದ ಲಕ್ಷ್ಮಿ ಹೆಬಾಳ್ಕರ್‍ರವರನ್ನು ಭೇಟಿಯಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಡ ಜನರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ತೆರೆಯುವ ಕುರಿತು ಮನವಿ ಸಲ್ಲಿಸಿತು.

    ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಪಂದನೆ ನೀಡಿ ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲು ನಗರ ಅಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ರವರಿಗೆ ಶಿಫಾರಸ್ಸು ಮಾಡಿದರು. ಈ ವೇಳೆ ಕೋಟ ಬ್ಲಾಕ್‍ನ ಮುಖಂಡರಾದ ಗಣೇಶ್ ಕೆ ನೆಲ್ಲಿಬೆಟ್ಟು, ದಿನೇಶ್ ಬಂಗೇರ ಗುಂಡ್ಮಿ ಇದ್ದರು.

  • ಪ್ರತಿಭಾ ಕಾರಂಜಿ: ಹೆಸಕುತ್ತೂರು ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

    ಪ್ರತಿಭಾ ಕಾರಂಜಿ: ಹೆಸಕುತ್ತೂರು ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಹುಣಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಒಟ್ಟು ಭಾಗವಹಿಸಿದ್ದ 27 ಸ್ಪರ್ಧೆಗಳಲ್ಲಿ 23 ಪ್ರಶಸ್ತಿಗಳನ್ನು ಪಡೆದು ಕ್ಲಸ್ಟರ್ ಮಟ್ಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಶಾಲೆಯಾಗಿ ಹೊರಹೊಮ್ಮಿದೆ. ಒಟ್ಟು 9 ಪ್ರಥಮ, 9 ದ್ವಿತೀಯ ಹಾಗೂ 5 ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಅಲ್ಲದೆ 9 ವಿದ್ಯಾರ್ಥಿಗಳು ಕುಂದಾಪುರ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಗವಹಿಸಿದ ಹಾಗೂ ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಎಸ್ ಡಿ ಎಂ ಸಿ, ಶಾಲಾ ಶಿಕ್ಷಕ ಬಳಗ, ವಿದ್ಯಾರ್ಥಿಗಳು, ಪೋಷಕರು ಅಭಿನಂದಿಸಿದ್ದಾರೆ.

  • ಗುಂಡ್ಮಿ – ರಥಬೀದಿ ಗೆಳೆಯರಿಂದ ವಿಶೇಷ ಸೋಣೆ ಆರತಿ ಕಾರ್ಯಕ್ರಮ

    ಗುಂಡ್ಮಿ – ರಥಬೀದಿ ಗೆಳೆಯರಿಂದ ವಿಶೇಷ ಸೋಣೆ ಆರತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಮಾಣಿ ಚನ್ನಕೇಶವ ದೇವಸ್ಥಾನ ಗುಂಡ್ಮಿ ಇಲ್ಲಿನ ಶ್ರೀ ದೇವರಿಗೆ ರಥಬೀದಿ ಗೆಳೆಯರು ಗುಂಡ್ಮಿ ಸಾಸ್ತಾನ ಇವರ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಶೇಷ ಸೋಣೆ ಆರತಿ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

    ದೇವಸ್ಥಾನದ ಅರ್ಚಕರಾದ ಅನಂತರಾಮ ಬಾಯರಿ, ಅನಂತ ಕೃಷ್ಣ ಬಾಯರಿ, ವಿಶ್ವನಾಥ ಐತಾಳರು, ಮೋಹನ ಶಾಸ್ತ್ರಿ, ಚಂದ್ರಶೇಖರ ಶಾಸ್ತ್ರಿಗಳ ಸಮ್ಮುಖದಲ್ಲಿ ವಿಧಿ ವಿಧಾನಗಳಿಂದ ದೇವರ ಪೂಜೆ ತುಂಬಾ ಅದ್ದೂರಿಮಯವಾಗಿ ನೆರವೆರಿತು.

    ಧಾರ್ಮಿಕ ಕೈಂಕರ್ಯದಲ್ಲಿ ಸುಬ್ರಮಣ್ಯ ರಾವ್ ಪಾಂಡೇಶ್ವರ ಸಹಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಶಿಷ್ಯ ವೃಂದದವರಿಂದ ಸತ್ಸಂಗ ಭಜನಾ ಕಾರ್ಯಕ್ರಮ ಜರುಗಿತು.ಶಿವ ಕೃಪಾ ಚಂಡೆ ಬಳಗ ಸಾಸ್ತಾನ ಇವರಿಂದ ಚಂಡೆ ವಾದನ,ದೇವಸ್ಥಾನವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಯಿತು.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು,ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ಭಕ್ತಾಧಿಗಳು ದೇವರ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

  • ಕೋಡಿ- ಚೆಕ್ರೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1ಲಕ್ಷ ಸಹಾಯನಿಧಿ ಹಸ್ತಾಂತರ

    ಕೋಡಿ- ಚೆಕ್ರೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1ಲಕ್ಷ ಸಹಾಯನಿಧಿ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಾಂಡೇಶ್ವರ ವಲಯದ, ಕೋಡಿ ಕಾರ್ಯಕ್ಷೇತ್ರದ ಚೆಕ್ರೇಶ್ವರಿ ಅಮ್ಮನವರು ಮತ್ತು ಪರಿವಾರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1ಲಕ್ಷ ರೂಪಾಯಿ ಅನುದಾನವನ್ನು ಸಮಿತಿಯ ಅಧ್ಯಕ್ಷ ರಾಮಚಂದ್ರ ಖಾರ್ವಿ ಮತ್ತು ಸಮಿತಿ ಸದಸ್ಯರಿಗೆ ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ. ಕೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸುಬ್ರಮಣ್ಯ ಖಾರ್ವಿ, ಸುರೇಶ ಖಾರ್ವಿ, ಆನಂದ್ , ಗೋಪಾಲ ಖಾರ್ವಿ, ಕುಶಾಲ ಖಾರ್ವಿ ಮತ್ತು ಮೇಲ್ವಿಚಾರಕರಾದ ಜಯಲಕ್ಷ್ಮೀ ಸೇವಾಪ್ರತಿನಿಧಿ ಮಾಲತಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

     

  • ಕುಂದಾಪುರ: ಗಣೇಶ ಚತುರ್ಥಿಗೆ ಉಡುಪಿ ಜಿಲ್ಲೆಯಲ್ಲಿ ಸೆ.19 ರಂದು ಸರ್ಕಾರಿ ರಜೆ ಘೋಷಣೆ

    ಕುಂದಾಪುರ: ಗಣೇಶ ಚತುರ್ಥಿಗೆ ಉಡುಪಿ ಜಿಲ್ಲೆಯಲ್ಲಿ ಸೆ.19 ರಂದು ಸರ್ಕಾರಿ ರಜೆ ಘೋಷಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿದ್ದು, ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಹಾಗಾಗಿ ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ.

    ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಒತ್ತಡ ಹಾಕಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.

  • ಕುಂದಾಪುರ : ಅಂಕದಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಲ್ ಜಿ ಫೌಂಡೇಶನ್ ವತಿಯಿಂದ ಸಮವಸ್ತ್ರ ವಿತರಣೆ

    ಕುಂದಾಪುರ : ಅಂಕದಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಲ್ ಜಿ ಫೌಂಡೇಶನ್ ವತಿಯಿಂದ ಸಮವಸ್ತ್ರ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಅಂಕದ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಲ್ ಜಿ ಫೌಂಡೇಶನ್ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ನಾಗರಾಜ್ ಡಿ ಪಡುಕೋಣೆ ಅವರು ಸಮವಸ್ತ್ರ ವಿತರಿಸಿ ಮಾತನಾಡಿ ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ದಾನಿಗಳ ನೆರವು ಪಡೆದು ಕೊಂಡು ಪರಿಸರದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಶಾಲೆ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.

    ಈ ಸಂದರ್ಭದಲ್ಲಿ ಟ್ರಸ್ಟಿನ ನಿರ್ದೇಶಕರಾದ ಕುಸುಮ ನಾಗರಾಜ್ ಪಡುಕೋಣೆ, ವ್ಯವಸ್ಥಾಪಕರಾದ ಸುರೇಶ್ ಪಡುಕೋಣೆ, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವರದ ಆಚಾರ್, ಉಪಾಧ್ಯಕ್ಷರಾದ ಸುರೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಬು ಪೈ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುನೀತಾ ಉಪಸ್ಥಿತರಿದ್ದರು.

    ಶಿಕ್ಷಕರಾದ ರವೀಂದ್ರ ಸ್ವಾಗತಿಸಿದರು. ಸಹ ಶಿಕ್ಷಕಿ ಅಖಿಲಾ ವಂದಿಸಿದರು.

  • ಕುಂದಾಪುರ :ಸೆ.17ರಂದು ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ ಕರೆ

    ಕುಂದಾಪುರ :ಸೆ.17ರಂದು ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ ಕರೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸಪ್ಟೆಂಬರ್ 17ರಂದು ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯವರು ಜಿಲ್ಲೆಯ ತಾಲೂಕಿನ ಹಾಗೂ ಗ್ರಾಮದಲ್ಲಿ ನೆರವೇರಿಸರಿದ್ದಾರೆ. ಜಿಲ್ಲಾಧಿಕಾರಿ ಕಛೇರಿ, ತಹಶೀಳ್ದಾರ್ ಕಛೇರಿ, ಗ್ರಾಮ ಪಂಚಾಯತ್ ಕಛೇರಿಯಲ್ಲಿ ಎಲ್ಲರೂ ಆಚರಿಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಎಲ್ಲಾ ವಿಶ್ವಕರ್ಮ ಬಂಧುಗಳು ಅವರವರ ಹತ್ತಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ವಿಶ್ವಕರ್ಮ ದೇವರ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಕ್ರೀಯವಾಗಿ ಭಾಗವಹಿಸುವ ಮೂಲಕ ವಿಶ್ವಕರ್ಮ ಜಯಂತೋತ್ಸವವನನು ಯಶಸ್ವಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ ತಿಳಿಸಿದರು.

    ಅವರು ಸೆ.13ರಂದು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಸಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತೋತ್ಸವವನ್ನು ಆಚರಿಸುವ ಬಗ್ಗೆ ಪ್ರಧಾನ ಮಂತ್ರಿಗಳು ಘೋಷಿಸಲಿರುವ ಅಕ್ಕಸಾಲಿಗರು. ಕಮ್ಮಾರರು. ಬಡಗಿಗಳು. ಶಿಲ್ಪಕಲಾ ಕ್ಷೇತ್ರದವರು. ಅನುಕೂಲ ಕಲ್ಪಿಸಲು ಘೋಷಿಸಲಾದ ಪ್ರಧಾನ ಮಂತ್ರಿ. ವಿಶ್ವಕರ್ಮ ಜಯಂತೋತ್ಸವ ಯೋಜನೆಗೆ ಸಪ್ಟೆಂಬರ್ 17ರಂದು ಚಾಲನೆ ಸಿಗಲಿದೆ. ವಿಶ್ವಕರ್ಮ ಜಯಂತೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ದೇಶದ 70 ಪ್ರಮುಖ ಸ್ಥಳದಲ್ಲಿ ಕೇಂದ್ರದ 70 ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‍ನಲ್ಲಿ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕೇರಿಯವರು ನಾಗಪುರದಲ್ಲಿ, ವಿದೇಶಾಂಗ ಸಚಿವ ಎಸ್ ಜೈ ಶಂಕರ್ ು ತಿರುವನಂತಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸುಮಾರು 13 ಸಾವಿರ ಕೋಟಿ ರೂಪಾಯಿಯನ್ನು ವಿಶ್ವಕರ್ಮ ಸಮಾಹದ ಅಭಿವೃದ್ದಿಗೆ ನೀಡಲಾಗಿದ್ದು, ಈ ಯೋಜನೆಗಳನ್ನು ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆ ಎಂದು ಪ್ರಸ್ತಾಪಿಸಿದ್ದರು ಎಂದರು.

    ವಿಶ್ವಕರ್ಮ ಸಂಘದ ಅಧ್ಯಕ್ಷ ಬೈಂದೂರು ನಾರಾಯಣ ಆಚಾರ್ ಮಾತನಾಡಿ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತ್ಯೂತ್ಸವ ನಡೆಯಲಿದೆ. ಅದರ ಪ್ರಯುಕ್ತ ತ್ರಾಸಿಯಿಂದ ಬೃಹತ್ ವಾಹನ ಜಾಥಾ ನಡೆಯಲಿದೆ. ವಿಶ್ವಕರ್ಮ ಸಮಾಜದವರು ಈ ವಾಹನ ಜಾಥದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

    ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ ಉದ್ದಾಲಗುಡ್ಡಿ ಗಂಗಾಧರ ಆಚಾರ್, ರಮೇಶ ಆಚಾರ್ ಬಂಡಿಮಠ, ನಾಗಪ್ಪಯ್ಯ ಆಚಾರ್ ನಡೂರು ಉಪಸ್ಥಿತರಿದ್ದರು.

  • ಕುಂದಾಪುರ ಕಾಂಗ್ರೆಸ್ ಕಛೇರಿಯಲ್ಲಿ ಆಸ್ಕರ್ ಫರ್ನಾಂಡಿಸ್ ರವರ ಪುಣ್ಯಸ್ಮರಣೆ

    ಕುಂದಾಪುರ ಕಾಂಗ್ರೆಸ್ ಕಛೇರಿಯಲ್ಲಿ ಆಸ್ಕರ್ ಫರ್ನಾಂಡಿಸ್ ರವರ ಪುಣ್ಯಸ್ಮರಣೆ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ :ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಕೇಂದ್ರ ಸರಕಾರದ ಮಾಜಿ ಸಚಿವ ದಿI ಆಸ್ಕರ್ ಫೆರ್ನಾಂಡಿಸ್ ರವರ 2 ನೇ ಪುಣ್ಯತಿಥಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು .

    ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿಯವರು ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸರವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಸರಳ ವ್ಯಕ್ತಿತ್ವದ ಮೂಲಕ ಪಕ್ಷ , ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಅವರು ಪ್ರಚಾರವಿಲ್ಲದೇ ಅನೇಕ ಕೆಲಸ ಮಾಡಿದ್ದರು ಮತ್ತು ಸಾಮಾನ್ಯ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡ ರಾಜಕಾರಣಿಯೆಂದು ಸ್ಮರಿಸಿಕೊಂಡರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

    ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ , ಎಂ. ದಿನೇಶ ಹೆಗ್ಡೆ ಆಸ್ಕರ್ ರವರನ್ನು ಸ್ಮರಿಸಿಕೊಂಡರು.

    ಪಕ್ಷದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ , ದೇವಕಿ ಸಣ್ಣಯ್ಯ, ಗಂಗಾಧರ ಶೆಟ್ಟಿ , ಚಂದ್ರ ಕಾಂಚನ್ ಕಾಸನಕಟ್ಟೆ , ಪ್ರಭಾವತಿ ಶೆಟ್ಟಿ , ನಾರಾಯಣ ಆಚಾರ್ , ಶಶಿರಾಜ ಪೂಜಾರಿ , ರಮೇಶ ಶೆಟ್ಟಿ ವಕ್ವಾಡಿ , ಚಂದ್ರ ಅಮಿನ್ , ಅಶೋಕ , ಚಂದ್ರಶೇಖರ ಶೆಟ್ಟಿ , ಅಭಿಜಿತ್ ಪೂಜಾರಿ , ದರ್ಮಪ್ರಕಾಶ , ವಿವೇಕಾನಂದ , ಕೇಶವ ಭಟ್ , ಸುನೀಲ್ ಪೂಜಾರಿ , ಸುರೇಶ ಶೆಟ್ಡಿ , ಕಿಶೋರ್ ಮಂದಾರ್ತಿ , ವಿಜಯ ಪೂಜಾರಿ ಉಳ್ತೂರು , ಸದಾನಂದ ಖಾರ್ವಿ , ಸಂತೋಷ್ , ಸುರೇಶ್ ಶೆಟ್ಟಿ , ರಾದಾಕ್ರಷ್ಣ ಉಪಸ್ಥಿತರಿದ್ದರು.

    ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಚಂದ್ರಶೇಖರ ಖಾರ್ವಿ ಸ್ವಾಗತಿಸಿ , ಕಾರ್ಯದರ್ಶಿ ಆಶಾ ಕರ್ವೆಲ್ಲೋ ವಂದಿಸಿದರು . ಅಶೋಕ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಸನ್ಮಾನ ಗೌರವದಿಂದ ಜವಾಬ್ಧಾರಿ ಹೆಚ್ಚುತ್ತದೆ – ಶೇಡಿಮನೆ ಗೋಪಾಲ ಶೆಟ್ಟಿ

    ಕುಂದಾಪುರ :ಸನ್ಮಾನ ಗೌರವದಿಂದ ಜವಾಬ್ಧಾರಿ ಹೆಚ್ಚುತ್ತದೆ – ಶೇಡಿಮನೆ ಗೋಪಾಲ ಶೆಟ್ಟಿ

    Video:

    ಯಡಾಡಿ ಮತ್ಯಾಡಿ : ಎಕ್ಸಲೆಂಟ್ ಹಾಗೂ‌ ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಪ್ರಯುಕ್ತ “ಗುರುವಂದನಾ” ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅಪಾರ. ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸಿದಾಗ ಶಿಕ್ಷಕರ ಜವಾಬ್ಧಾರಿ ಹೆಚ್ಚುತ್ತದೆ ಎಂದು ಕುಂದಾಪುರ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶೇಡಿಮನೆ ಗೋಪಾಲ ಶೆಟ್ಟಿ ಹೇಳಿದರು.

    ಅವರು ಯಡಾಡಿ ಮತ್ಯಾಡಿ ಎಕ್ಸಲೆಂಟ್ ಹಾಗೂ‌ ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಪ್ರಯುಕ್ತ “ಗುರುವಂದನಾ” ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಸುಜ್ಞಾನ್ ಎಜ್ಯಕೇಶನಲ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೇಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರೆ ತಪ್ಪಾಗಲಾರದು ಎಂದರು.

    ಈ ಸಂದರ್ಭದಲ್ಲಿ ಎಕ್ಸಲೆಂಟ್ ಮತ್ತು ಲಿಟ್ಲ್ ಸ್ಟಾರ್ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಗೌರವಿಸಲಾಯಿತು. ವಿಶೇಷವಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ, ರಾಷ್ಟ್ರೀಯ ಅತ್ಯುತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಶೇಡಿಮನೆ ಗೋಪಾಲ ಶೆಟ್ಟಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ್ ಎಜ್ಯಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ವಹಿಸಿದ್ದರು. ಸುಜ್ಜಾನ್ ಎಜ್ಯಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಶುಂಪಾಲರಾದ ಅಗಸ್ಟಿನ್ ಕೆ.ಎ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿ, ರಜತ್ ಭಟ್ ವಂದಿಸಿದರು.