Category: ಸುದ್ದಿ

  • ಕುಂದಾಪುರ :ಬ್ಯೂಟಿಷಿಯನ್ ಹಾಗೂ ಪ್ರೋಫೆಷನಲ್ ಮೇಕಪ್ & ಹ್ಯಾಂಡ್ ಎಂಬ್ರೆಡಿಂಗ್ ವರ್ಕ್ ತರಬೇತಿ

    ಕುಂದಾಪುರ :ಬ್ಯೂಟಿಷಿಯನ್ ಹಾಗೂ ಪ್ರೋಫೆಷನಲ್ ಮೇಕಪ್ & ಹ್ಯಾಂಡ್ ಎಂಬ್ರೆಡಿಂಗ್ ವರ್ಕ್ ತರಬೇತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದಾಪುರದಲ್ಲಿ ಇಂಟರ್ ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ (ರಿ) ಬೆಂಗಳೂರು ವತಿಯಿಂದ ಅಡ್ವಾನ್ಸ್ ಹಾಗೂ ಬೇಸಿಕ್ ಬ್ಯೂಟಿಷಿಯನ್ ಹಾಗೂ ಪ್ರೋಫೆಷನಲ್ ಮೇಕಪ್ & ಹ್ಯಾಂಡ್ ಎಂಬ್ರೆಡಿಂಗ್ ವರ್ಕ್ ತರಬೇತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದೇ ತಿಂಗಳು ಆಗಸ್ಟ್ 21 ಸೋಮವಾರದಿಂದ ಕುಂದಾಪುರ ಮೊಟ್ಟಮೊದಲ ಬಾರಿಗೆ ಅಡ್ವಾನ್ಸ್ ಹಾಗೂ ಬೇಸಿಕ್ ಬ್ಯೂಟಿಷಿಯನ್ ಹಾಗೂ ಪ್ರೋಫೆಷನಲ್ ಮೇಕಪ್ ಅಂಡ್ ಹ್ಯಾಂಡ್ ಎಂಬೈಡಿಂಗ್ ವರ್ಕ್ ಪೋಟೋಗ್ರಾಫಿ ವರ್ಕ್ ತರಭೇತಿಯನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಕೆಚ್ಚೆದೆ ಕನ್ನಡಿಗರ ಮಹಿಳಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಇಂಟರ್ ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ ಮಾಲಕಿ ಮಮತಾ ಶೆಟ್ಟಿ ಹೇಳಿದರು.

    ಅವರು ಗುರುವಾರ ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆಸಕ್ತ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಲು ಸಹಕಾರಿಯಾಗುವಂತೆ ಕೌಶಲ್ಯ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡಲು ವಿಷಯ ತಜ್ಞರು ಆಗಮಿಸಲಿದ್ದಾರೆ ಎಂದರು.

    ಇಲ್ಲಿಯ ತನಕ 500ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದು ಸ್ವತಂತ್ರವಾಗಿ ಬ್ಯೂಟಿಪಾರ್ಲರ್ ಗಳನ್ನು ತೆರದು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಒಂದೊಂದು ವಿಷಯಕ್ಕೆ ಸಂಬಂಧಿಸಿದ ತರಬೇತಿಗೆ ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ತರಬೇತಿಯ ಬಳಿಕ ಸ್ವ ಉದ್ಯೋಗ ಸ್ಥಾಪನೆಗೆ ಕಂಪೆನಿಯ ವತಿಯಿಂದ ಸಾಲಸೌಲಭ್ಯದ ವ್ಯವಸ್ಥೆ ಮಾಡಲಾಗುವುದು ಎಂದರು.
    ಆಸಕ್ತರು ತರಬೇತಿ ಪಡೆಯಲು ದೂರವಾಣಿ ಸಂಖ್ಯೆ 7338658739 6361843315 ಯನ್ನು ಸಂಪರ್ಕಿಸಬಹುದಾಗಿ ಎಂದು ಹೇಳಿದರು.

    ಸುದ್ಧಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಭಾರ್ಗವಿ, ಆಡಳಿತ ನಿರ್ದೇಶಕ ಶ್ರೇಯಸ್, ರಕ್ಷಾ ಉಪಸ್ಥಿತರಿದ್ದರು.

  • ಕರ್ಕುಂಜೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ರಾಜೀವ ಶೆಟ್ಟಿ, ಉಪಾಧ್ಯಕ್ಷರಾಗಿ ನಾಗರತ್ನ ಆಯ್ಕೆ

    ಕರ್ಕುಂಜೆ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ರಾಜೀವ ಶೆಟ್ಟಿ, ಉಪಾಧ್ಯಕ್ಷರಾಗಿ ನಾಗರತ್ನ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರ್ಕುಂಜೆ ಗ್ರಾಮ ಪಂಚಾಯತ್‍ನ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ರಾಜೀವ ಶೆಟ್ಟಿ ಬಿಜ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಾಗರತ್ನ ಬಿ. ಆಯ್ಕೆಯಾಗಿದ್ದಾರೆ.
    ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
    ಈ ಸಂದರ್ಭ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಪಕ್ಷದ ಮುಖಂಡರಾದ, ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು, ಉದಯ್ ಪೂಜಾರಿ ಚಿತ್ತೂರು, ಕರ್ಕುಂಜೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಜಾಡ್ಕಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ಶೆಟ್ಟಿ ಜಡ್ಡಿನಕೊಡ್ಲು, ಸತೀಶ್ ಪೂಜಾರಿ, ಭಾಸ್ಕರ್ ಭೋವಿ, ಮಂಜುನಾಥ್ ಪೂಜಾರಿ ಬುದ್ದನಜೆಡ್ಡು, ಭಾಸ್ಕರ ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು.

  • ಕೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಶೋಕ್ ಭಂಡಾರಿ, ಉಪಾಧ್ಯಕ್ಷರಾಗಿ ಸೌಮ್ಯ ಆಯ್ಕೆ

    ಕೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಶೋಕ್ ಭಂಡಾರಿ, ಉಪಾಧ್ಯಕ್ಷರಾಗಿ ಸೌಮ್ಯ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೋಣಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಶೋಕ್ ಭಂಡಾರಿ, ಉಪಾಧ್ಯಕ್ಷರಾಗಿ ಸೌಮ್ಯ ಆಯ್ಕೆಯಾಗಿದ್ದಾರೆ.

    ಕೋಣಿ ಗ್ರಾಮ ಪಂಚಾಯಿತಿಯಲ್ಲಿ ೭ ಕಾಂಗ್ರೆಸ್ ಬೆಂಬಲಿತರು, ೩ ಬಿಜೆಪಿ ಬೆಂಬಲಿತರು ಇದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಂದಿತ್ತು.

  • ಕೋಟತಟ್ಟು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸತೀಶ್ ಕುಂದರ್ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಸಿ.ಪೂಜಾರಿ ಆಯ್ಕೆ

    ಕೋಟತಟ್ಟು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸತೀಶ್ ಕುಂದರ್ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಸಿ.ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಕೋಟತಟ್ಟು ಗ್ರಾಮಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತೀಶ್ ಕುಂದರ್ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಸಿ.ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಗುರುವಾರ ಕೋಟತಟ್ಟು ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಆಯ್ಕೆಯಲ್ಲಿ ಚುನಾವಣಾಧಿಕಾರಿ ಉಮಾ.ಬಿ ಭಾಗವಹಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಒಟ್ಟು 13ರಲ್ಲಿ ಬಿಜೆಪಿ ಬೆಂಬಲಿತ 11 ಹಾಗೇ ಕಾಂಗ್ರೆಸ್ ಬೆಂಬಲಿತ 2 ಸ್ಥಾನಗಳಿವೆ.

  • ಪಂಚಶಕ್ತಿ ಸಂಘದ ಅಧ್ಯಕ್ಷರಾಗಿ ‌ಸಂದೇಶ್ ಖಾರ್ವಿ ಆಯ್ಕೆ

    ಪಂಚಶಕ್ತಿ ಸಂಘದ ಅಧ್ಯಕ್ಷರಾಗಿ ‌ಸಂದೇಶ್ ಖಾರ್ವಿ ಆಯ್ಕೆ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ ಇದರ 2023 – 24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಸಂಘದ ಮಹಾಸಭೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಂದೇಶ ಖಾರ್ವಿ, ಉಪಾಧ್ಯಕ್ಷರಾಗಿ ವೀಕೇಶ ಬಂಗೇರ, ಕಾರ್ಯದರ್ಶಿಯಾಗಿ ಸಂದೀಪ ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ಶರತ ಖಾರ್ವಿ , ಕೋಶಾಧಿಕಾರಿಯಾಗಿ ಗಣೇಶ ಖಾರ್ವಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ದಿನೇಶ ಖಾರ್ವಿ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಎಂದು ಸಂಘದ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷರಾಗಿ ಟಿ.ಶೋಭಾನಾ ಮತ್ತು ಉಪಾಧ್ಯಕ್ಷರಾಗಿ ರೇಣುಕಾ ಆಯ್ಕೆ.

    ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷರಾಗಿ ಟಿ.ಶೋಭಾನಾ ಮತ್ತು ಉಪಾಧ್ಯಕ್ಷರಾಗಿ ರೇಣುಕಾ ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…

    ಕೋಟ: ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಟಿ.ಶೋಭಾನಾ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೇಣುಕಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದು. ಇವರ ಅಧಿಕಾರ ಸ್ವೀಕಾರ ಸಮಾರಂಭ ಬುಧವಾರ ತೆಕ್ಕಟ್ಟೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಮಮತಾ ದೇವಾಡಿಗ, ನಿಕಟಪೂರ್ವ ಉಪಾಧ್ಯಕ್ಷ ಸಂಜೀವ ದೇವಾಡಿಗ, ಸದಸ್ಯರಾದ ವಿಜಯ ಭಂಡಾರಿ, ಶೇಖರ ಕಾಂಚನ್, ಸತೀಶ್ ದೇವಾಡಿಗ, ಪ್ರತಿಮಾ ಯು, ಲಕ್ಷ್ಮೀ, ಪ್ರೇಮ, ಕಮಲ, ಸುರೇಶ್ ಶೆಟ್ಟಿ, ಆಶಾ ಕಾರ್ಯಕರ್ತೆ ಸುಹಾಸಿನಿ ಶೆಟ್ಟಿ ಮತ್ತು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

    ಕೋಟೇಶ್ವರ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಚುನಾವಣಾಧಿಕಾರಿಯಾಗಿ ಚುನಾವಣಾ ಕ್ರಮಗಳನ್ನು ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರ ವಂದಿಸಿದರು.

  • ಪಾಂಡೇಶ್ವರ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುಶೀಲ ಪೂಜಾರಿ, ಉಪಾಧ್ಯಕ್ಷರಾಗಿ ವೈ.ಬಿ ರಾಘವೇಂದ್ರ ಆಚಾರ್ ಅವಿರೋಧವಾಗಿ ಆಯ್ಕೆ

    ಪಾಂಡೇಶ್ವರ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುಶೀಲ ಪೂಜಾರಿ, ಉಪಾಧ್ಯಕ್ಷರಾಗಿ ವೈ.ಬಿ ರಾಘವೇಂದ್ರ ಆಚಾರ್ ಅವಿರೋಧವಾಗಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ಎರಡುವರೆ ವರ್ಷಗಳ ಅವಧಿಗೆ ಅಧಿಕಾರ ಪ್ರಕ್ರಿಯೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುಶೀಲ ಪೂಜಾರಿ, ಉಪಾಧ್ಯಕ್ಷರಾಗಿ ವೈ.ಬಿ ರಾಘವೇಂದ್ರ ಆಚಾರ್ ಅವಿರೋಧವಾಗಿ ಆಯ್ಕೆಗೊಂಡರು. ಒಟ್ಟು 13ಸ್ಥಾನಗಳ ಪೈಕಿ ಕಾಂಗ್ರೆಸ್ 8,ಬಿಜೆಪಿ ಬೆಂಬಲಿತ 5ಸ್ಥಾನಗಳಿವೆ. ಚುನಾವಣಾಧಿಕಾರಿಯಾಗಿ ಸಾಲಿಗ್ರಾಮ ಪ.ಪಂ ಮುಖ್ಯಾಧಿಕಾರಿ ಇಂದು ಶ್ರೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

  • ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಉಮೇಶ ಶೆಟ್ಟಿ ಕಲ್ಗದ್ದೆ, ಉಪಾಧ್ಯಕ್ಷರಾಗಿ ವತ್ಸಲ ಶೆಟ್ಟಿ ಆಯ್ಕೆ

    ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಉಮೇಶ ಶೆಟ್ಟಿ ಕಲ್ಗದ್ದೆ, ಉಪಾಧ್ಯಕ್ಷರಾಗಿ ವತ್ಸಲ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉಮೇಶ ಶೆಟ್ಟಿ ಕಲ್ಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ವತ್ಸಲ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ.17ರಂದು ನಡೆಯಿತು. ಶಂಕರನಾರಾಯಣ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸ್ಥಾನಗಳಿದ್ದು, 16 ಬಿಜೆಪಿ, 2 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ.

    ಪ್ರಸ್ತುತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಉಮೇಶ ಶೆಟ್ಟಿ ಅವರು ಈ ಹಿಂದೆ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

  • ಸೌಜನ್ಯ ಹೋರಾಟಕ್ಕೆ 11 ವರ್ಷ – ಆಗಸ್ಟ್‌ 25ರಂದು ಕುಂದಾಪುರಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಕುಟುಂಬ

    ಸೌಜನ್ಯ ಹೋರಾಟಕ್ಕೆ 11 ವರ್ಷ – ಆಗಸ್ಟ್‌ 25ರಂದು ಕುಂದಾಪುರಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಕುಟುಂಬ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಳೆದ 11 ವರ್ಷಗಳ ಹಿಂದೆ ವಿಕೃತಕಾಮಿಗಳ ಅಟ್ಟಹಾಸಕ್ಕೆ ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹತ್ಯೆಯಾಗಿದ್ದ ಅಪ್ರಾಪ್ತ ಬಾಲಕಿ ಸೌಜನ್ಯಳಿಗೆ ನಿರಂತರ ಹೋರಾಟದ ನಡುವೆಯೂ ನ್ಯಾಯ ಮರೀಚಿಕೆಯಾಗಿದೆ ಎಂದು ಆರೋಪಿಸಿ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಗರೀಕರು ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ. ಸೌಜನ್ಯ ಸಾವಿನ ಹಿಂದಿನ ಶಕ್ತಿ ಬಹಿರಂಗವಾಗಬೇಕು. ಆರೋಪಿಗಳನ್ನು ಪತ್ತೆ ಹಚ್ಚಿ ಗಲ್ಲುಶಿಕ್ಷೆ ನೀಡಬೇಕು, ನಿರಪರಾಧಿ ಸಂತೋಷ್ ರಾವ್ ಗೆ ಸಮಾಜದಲ್ಲಿ ಸಮಾನ ಗೌರವ ಸಿಗಬೇಕು ಎಂಬ ಕೂಗು ಪಕ್ಷಾತೀತವಾಗಿ, ಧರ್ಮಾತೀತವಾಗಿ ಕೇಳಿ ಬರುತ್ತಿದೆ.

    ಈ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರದಲ್ಲಿ ಸಮಾನಮನಸ್ಕರಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. ನೆಹರೂ ಮೈದಾನದಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ಸಾಗಿ ಬರುವ ಮೆರವಣಿಗೆ ಹೊಸ ಬಸ್ ನಿಲ್ದಾಣದ ವರೆಗೆ ಸಾಗಿ ವಾಪಾಸು ಬಂದು ಕುಂದಾಪುರದ ಶಾಸ್ತ್ರೀವೃತ್ತದ ಸಮೀಪ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸುಧೀರ್ ಮಲ್ಯಾಡಿ ಹೇಳಿದ್ದಾರೆ.
    ಮಾತನಾಡಿದ ಅವರು, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ಅಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶ ನಾವು ಹೊಂದಿಲ್ಲ. ಕ್ರೂರವಾಗಿ ಅತ್ಯಾಚಾರವಾಗಿ ಕೊಲೆಯಾದ, ಸೌಜನ್ಯಗೆ ನ್ಯಾಯ ಸಿಗಬೇಕಿದೆ. ಅಲ್ಲದೇ ಹನ್ನೊಂದು ವರ್ಷಗಳ ಕಾಲ ಹಿಂಸೆ ಅನುಭವಿಸಿದ ಸಂತೋಷ್ ರಾವ್ ಅವರಿಗೆ ಸರ್ಕಾರ ನೀಡಬೇಕಾದ ಗೌರವವನ್ನೂ ನೀಡಬೇಕಿದೆ. ಇದೆಲ್ಲದರ ಬಗ್ಗೆ ಸಮಾನಮನಸ್ಕರು ಒಟ್ಟು ಸೇರಿ ಆಗ್ರಹಿಸಲಿದ್ದೇವೆ ಎಂದರು.

    ಪ್ರತಿಭಟನೆಯಲ್ಲಿ ಸೌಜನ್ಯಾ ನ್ಯಾಯಕ್ಕಾಗಿ ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಾ ಕುಟುಂಬ ಭಾಗವಹಿಸಲಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ನ್ಯಾಯಕ್ಕಾಗಿ ಆಗ್ರಹದ ಮಾತುಗಳನ್ನು ಆಡಲಿದ್ದಾರೆ ಎಂದು ಸುಧೀರ್ ಮಲ್ಯಾಡಿ ಹೇಳಿದ್ದಾರೆ. ಇದೊಂದು ಸ್ವಯಂಪ್ರೇರಿತವಾಗಿ ನಡೆಯುವ ಪ್ರತಿಭಟನೆಯಾಗಿದ್ದು, ಪ್ರತಿಯೊಬ್ಬರು ತಮ್ಮ ಸ್ವಯಂ ಇಚ್ಚೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು 5ಸಾವಿರಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ ನಿರೀಕ್ಷಿಸಲಾಗಿದೆ.

  • ಕೋಟತಟ್ಟು ಪಡುಕರೆ – ಜಂತು ಹುಳು ನಿವಾರಣೆ ಕಾರ್ಯಕ್ರಮ

    ಕೋಟತಟ್ಟು ಪಡುಕರೆ – ಜಂತು ಹುಳು ನಿವಾರಣೆ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಇವರ ಜಂಟಿ ಆಶ್ರಯದಲ್ಲಿ 15ನೇ ಸುತ್ತಿನ ಜಂತು ಹುಳು ನಿವಾರಣೆ ಕಾರ್ಯಕ್ರಮ ಬುಧವಾರ ಶ್ರೀ ಸದ್ಯೋಜಾತ ದೇವಸ್ಥಾನದ ಮಾನಸ ಮಂದಿರ ಸಭಾಭವನ ಕೋಟತಟ್ಟು ಪಡುಕರ ಇಲ್ಲಿ ಜರಗಿತು.

    ಕಾರ್ಯಕ್ರಮವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸ್ಮೀತಾ ಶೆಟ್ಟಿ ಉದ್ಘಾಟಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವಮೂರ್ತಿ ಕೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಜಂತು ಹುಳ ನಿರ್ವಹಣೆಗೆ ಔಷಧವನ್ನು ವಿತರಿಸಲಾಯಿತು.

    ಮುಖ್ಯ ಅಭ್ಯಾಗತಾಗಿ ದ.ಕ ಹಾಲು ಉತ್ಪಾದಕರ ಒಕ್ಕೂಟದ ವಿಸ್ತೀರ್ಣಾಧಿಕಾರಿ ಸರಸ್ವತಿ,ಕೋಟತಟ್ಟು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.ಒಕ್ಕೂಟದ ಉಪವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಒಕ್ಕೂಟದ ವಿಸ್ತೀರ್ಣಾಧಿಕಾರಿ ಪ್ರತಿಭಾ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.ಕಾರ್ಯದರ್ಶಿ ವೀಣಾ ಸಹಕರಿಸಿದರು.