Category: ಸುದ್ದಿ

  • ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 28ನೇ ಸಾಧಕ ಶಕ್ತಿಯಾಗಿ ತೆಕ್ಕಟ್ಟೆ ಶೇಷು ದೇವಾಡಿಗ ಆಯ್ಕೆ

    ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 28ನೇ ಸಾಧಕ ಶಕ್ತಿಯಾಗಿ ತೆಕ್ಕಟ್ಟೆ ಶೇಷು ದೇವಾಡಿಗ ಆಯ್ಕೆ

    ಕುಂದಾಪುರ ಮಿರರ್ ‌ಸುದ್ದಿ..

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಕೋಟ ಸೇರಿದಂತೆ ವಿವಿಧ ಭಾಗಗಳ ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 28ರ ಸಂಭ್ರಮ ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಬರುವ ಆ.20ರ ಬೆಳಿಗ್ಗೆ 10.ಗ ನಡೆಯಲಿದ್ದು ತೆಕ್ಕಟ್ಟೆ ಪರಿಸರದ ಸಾಂಪ್ರದಾಯಿಕ ಕೃಷಿ ಕಾಯಕ ಜೀವಿ ಶೇಷು ದೇವಾಡಿಗ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿದ್ದಾರೆ

  • ಕೋಟ ಪಂಚವರ್ಣ ಸಂಸ್ಥೆಯಿಂದ ಸ್ವಾತಂತ್ರ್ಯ ದಿನಾಚರಣೆ

    ಕೋಟ ಪಂಚವರ್ಣ ಸಂಸ್ಥೆಯಿಂದ ಸ್ವಾತಂತ್ರ್ಯ ದಿನಾಚರಣೆ

    ದೇಶದ ಸೇನೆಯಲ್ಲಿ ಯುವ ಜನತೆ ಹೆಚ್ಚು ಆಸಕ್ತರಾಗಬೇಕು – ನಿವೃತ್ತ ಯೋಧ ಶಿವಕುಮಾರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ದೇಶಾಭಿಮಾನದ ಕಿಚ್ಚು ಪ್ರತಿಯೊಬ್ಬರಲ್ಲೂ ಹೆಚ್ಚಬೇಕು ಆ ಮೂಲಕ ನನ್ನ ದೇಶದ ಕೀರ್ತಿಯನ್ನು ಜಗದಗಲ ವಿಸ್ತರಿಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಶಿವಕುಮಾರ್ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ವಿಶ್ವಗುರು ಸನಿಹದಲ್ಲಿದೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ದೇಶ ಸ್ವಾತಂತ್ರ್ಯ ಗಳಿಸಿ ಈ ದಿನದವರೆಗೂ ಸರ್ವಾಂಗಿಣ ಅಭಿವೃದ್ಧಿ ಹೊಂದುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವವಾದದ್ದು ಈ ಹಿನ್ನಲ್ಲೆಯಲ್ಲಿ ಯುವ ಸಮೂಹ ಹೆಚ್ಚು ಹೆಚ್ಚು ಸೈನಿದಲ್ಲಿ ತೋಡಗಿಕೊಳ್ಳುವಂತೆ ಆಗಬೇಕು ಎಂದರಲ್ಲದೆ ಪಂಚವರ್ಣ ಸಂಸ್ಥೆಯ ಸಾಮಾಜಿಕ ಕಾಳಜಿ ಜೊತೆ ಪರಿಸರಸ್ನೇಹಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿ ಬೆಳೆದಿದೆ. ಸೇವೆಯ ಮೂಲಕ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿಸಿಕೊಳ್ಳಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ನಿವೃತ್ತ ಯೋಧ ಶಿವಕುಮಾರ್ ಇವರನ್ನು ಸನ್ಮಾನಿಸಲಾಯಿತು.

    ಇದೇ ವೇಳೆ ಪಂಚವರ್ಣ ಸಂಸ್ಥೆಯ ಯುವ ಸದಸ್ಯರಿಗೆ ವಿದ್ಯಾರ್ಥಿವೇತನ ವೇತನ ಹಾಗೂ ಕಾರ್ಕಳದ ರಂಗನಪಲ್ಕೆ ಹೊಳಬೆಳಕು ಅನಾಥಾಶ್ರಮಕ್ಕೆ ಒಂದು ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿಯನ್ನು ಆಶ್ರಯದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಲಾಯಿತು.

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ಕೋಟ ದಿನೇಶ್ ಗಾಣಿಗ, ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಜೋಗಿ, ಉದ್ಯಮಿ ರಮೇಶ್ ಪ್ರಭು, ಪಂಚವರ್ಣದ ಗೌರವ ಸದಸ್ಯ ವೆಂಕಟೇಶ ಪ್ರಭು, ಕೋಟ ಗ್ರಾ.ಪಂ ಸದಸ್ಯ ಚಂದ್ರ ಆಚಾರ್, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸ್ಥಳೀಯ ಉದ್ಯಮಿ ಹರಿದಾಸ್ ಪೈ,ಕೋಟ ಪರಿಸರವಾದಿ ಕೋ.ಗಿ.ನಾ, ಪಂಚವರ್ಣ ಮಹಿಳಾ ಅಧ್ಯಕ್ಷೆ ಕಲಾವತಿ ಅಶೋಕ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಧೀಂದ್ರ ಜೋಗಿ ಸ್ವಾಗತಿಸಿದರು. ಸದಸ್ಯ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಸ್ತಾವನೆ ಸಲ್ಲಿಸಿದರು. ಗೌರವ ಸದಸ್ಯ ರಾಧಾಕೃಷ್ಣ ಬ್ರಹ್ಮಾವರ ವಂದಿಸಿದರು.

  • ಕುಂದಾಪುರ :ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಧ್ವಜಾರೋಹಣ

    ಕುಂದಾಪುರ :ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಧ್ವಜಾರೋಹಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸ್ವಾತಂತ್ರ್ಯ ,ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಲವು ರೀತಿಯಲ್ಲಿ ಧಕ್ಕೆ ಬರುತ್ತಿದೆ. ನಾವೆಲ್ಲರೂ ಒಂದಾಗಿ ಇವುಗಳ ಸಂರಕ್ಷಣೆಯ ಸಂಕಲ್ಪ ತೊಡಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

    ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಮಾತನಾಡಿ ದೇಶದ ಇಂದಿನ ಸರ್ವತೋಮುಖ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಹೇಳಿ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.

    ಸಭೆಯಲ್ಲಿ ಪುರಸಭೆ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಅಬು ಅಹಮ್ಮದ್, ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಅಶ್ವತ್ ಕುಮಾರ್, ಮುನಾಫ್ ಕೋಡಿ, ಶಶಿಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ಹಾರುನ್ ಸಾಹೇಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ವಕ್ವಾಡಿ ಭಾಸ್ಕರ್ ಪೂಜಾರಿ ,ಉಪಾಧ್ಯಕ್ಷರಾದ ಶೇಖರ ಪೂಜಾರಿ ತಲ್ಲೂರು, ಜೇಮ್ಸ್ ರೆಬೆಲ್ಲೊ ಹೆಮ್ಮಾಡಿ ,ವಿ ಎನ್ ಗುಂಡ ಪಾರಿಜಾತ, ಭಾಸ್ಕರ ಪೂಜಾರಿ ಕಂಡ್ಲೂರು ,ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಎಚ್ ಗಂಗಾಧರ ಶೆಟ್ಟಿ, ಅಭಿಜಿತ್ ಪೂಜಾರಿ, ಅಶೋಕ್ ಸುವರ್ಣ, ಮಧುಕರ, ಆಶಾ ಕರ್ವಾಲ್ಲೊ, ಸುಭಾಷ್ ಪೂಜಾರಿ, ಸದಾನಂದ ಖಾರ್ವಿ, ಜ್ಯೋತಿ ಕೆ, ಶೋಭಾ ಸಚ್ಚಿದಾನಂದ, ಸುವರ್ಣ ಅಲ್ಮೇಡಾ, ಶಶಿ ರಾಜ್ ಪೂಜಾರಿ, ಕೇಶವ ಭಟ್, ವೇಲಾ ಬ್ರಗಾಂಜ , ಜ್ಯೋತಿ ಮೊಗವೀರ, ಜೋಸೆಫ್ ರೆಬೆಲ್ಲೊ, ಡೊಲ್ಫಿ ಡಿಕೋಸ್ತ, ವಿವೇಕಾನಂದ, ಕೆ ಸುರೇಶ, ನಾಗರಾಜ ನಾಯ್ಕ, ಪ್ರೀತಮ್ ಕರ್ವಾಲ್ಲೊ ,ದಿನೇಶ್ ಬೆಟ್ಟ, ಗುಲಾಬಿ, ಡೆಪೋಡಿಲ್ ಕ್ರಾಸ್ಟೋ , ಸೂರ್ಯನಾರಾಯಣ, ಇಬ್ರಾಹಿಂ, ಸಂತೋಷ್ ಖಾರ್ವಿ ,ಬಾಲಾ ಬಸ್ರೂರ್, ನರೇಂದ್ರ ಗಾಣಿಗ, ಪ್ರಕಾಶ್, ಸುರೇಶ್ ಸಂಗಮ್, ಭಾಸ್ಕರ, ಆನಂದ ,ಅಜಿತ್ ಕುಮಾರ್, ರತ್ನಾಕರ್ ಶೆಟ್ಟಿ ,ಜನಾರ್ದನ್ ಖಾರ್ವಿ, ಕೆ ಅಶೋಕ್ ,ಮಂಜುನಾಥ , ಪಿಯುಸ್ ಡಿಸೋಜ, ವಿಶ್ವನಾಥ ಪೂಜಾರಿ, ಎಂ ಉದಯಕುಮಾರ್, ಶಶಿಧರ, ಕಿರಣ್, ಬಸ್ತು, ಅಶೋಕ ಡಿಸೋಜಾ ವಿಜಯ ಪೂಜಾರಿ ತಲ್ಲೂರು ಫೆಲಿಕ್ಸ್ ತಲ್ಲೂರು ಇನ್ನಿತರರು ಉಪಸ್ಥಿತರಿದ್ದರು.

    ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿ, ಅಸೋಶಿಯೇಶನ್ ನಾ ಕಾರ್ಯದರ್ಶಿ ಮಾಣಿ ಉದಯ್ ಅವರು ವಂದಿಸಿದರು.
    ಸಭೆಯ ನಂತರ ಅಸೋಸಿಯೇಷನ್ ನಾ ಸದಸ್ಯರು ವಾಹನಗಳ ಜಾಥ ಕುಂದಾಪುರದ ಪ್ರಮುಖ ರಸ್ತೆಯಲ್ಲಿ ನಡೆಸಿದರು.

  • ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ

    ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ :ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು . ಗ್ರಾಮ‌ಪಂಚಾಯತ್ ಅಧ್ಯಕ್ಷರಾದ ಮಮತಾ ದೇವಾಡಿಗ ಧ್ವಜಾರೋಹಣ ಮಾಡಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರ‌ಮಹನೀಯರನ್ನುಸ್ಮರಿಸಿದರು.

    ತೆಕ್ಕಟ್ಟೆಯ ನಿವೃತ್ತ ಯೋಧರಾದ ರವಿಚಂದ್ರ ಶೆಟ್ಟಿ ಇವರನ್ನು ವಿಶೇಷವಾಗಿ ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂಜೀವ ದೇವಾಡಿಗ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು , ಹಿರಿಯ ಉಪನ್ಯಾಸಕರಾದ ಕೆವಿ ನಾಯಕ್ , ದಲಿತ ಸಂಘಟನೆಯ ಸತೀಶ್ ಕುಮಾರ್ ತೆಕ್ಕಟ್ಟೆ, ಮೊದಲಾದವರು ‌ಉಪಸ್ಥಿತರಿದ್ದರು.

  • ತೆಕ್ಕಟ್ಟೆ :ಸರಕಾರಿ ಪದವಿಪೂರ್ವ ಕಾಲೇಜು ಸ್ವಾತಂತ್ರ್ಯ ದಿನಾಚರಣೆ

    ತೆಕ್ಕಟ್ಟೆ :ಸರಕಾರಿ ಪದವಿಪೂರ್ವ ಕಾಲೇಜು ಸ್ವಾತಂತ್ರ್ಯ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ- ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರಕಾಶ್
    ಶೆಟ್ಟಿ ಧ್ವಜಾರೋಹಣ ಕಾರ್ಯಕ್ರಮ ನೇರವೆರಿಸಿದರು.

    ಕಾರ್ಯಕ್ರಮದಲ್ಲಿಪ್ರಾಂಶುಪಾಲರಾದ ಕವಿತಾ ಸೊರ್ಕೆ, ಮುಖ್ಯ ಅತಿಥಿಯಾಗಿ ಮಲ್ಯಾಡಿ ಶಿವರಾಮ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘವೇಂದ್ರ ಪುರಾಣಿಕ್ ಹಾಗೂ ಸರ್ವ ಸದಸ್ಯರು, ಕಾಲೇಜಿನ ಎಲ್ಲಾ ಉಪನ್ಯಾಸಕರು, ಅಧ್ಯಾಪಕರು, ಸಿಬಂದಿ ವರ್ಗದವರು , ಊರ ನಾಗರೀಕರು ಹಾಜರಿದ್ದರು.

  • ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಸರಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

    ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಸರಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಸರಕಾರಿ ಪ್ರೌಢಶಾಲೆ ಕಾಳಾವರದಲ್ಲಿ77 ನೇ ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಯಾಗಿ ನಡೆಯಿತು. ಕಾಳಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಮಚಂದ್ರ ನಾವಡ ರವರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.

    ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ ಆಚಾರ್ಯ, ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಎಸ್.ಡಿ.ಎಂ.ಸಿ ನಾಮ ನಿರ್ದೇಶಿತ ಸದಸ್ಯರು ಆದ ಮಂಜುನಾಥ ಶೆಟ್ಟಿಗಾರ್, ಕಾಳಾವರ ಗ್ರಾಮ ಪಂಚಾಯತ್‌ ಸದಸ್ಯರುಗಳು, ಹಳೆ ವಿದ್ಯಾರ್ಥಿಗಳು,ನಿವೃತ್ತ ಶಿಕ್ಷಕರಾದ ಆತ್ಮರಾಮ ಎಸ್ ಗುನಗಾ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ, ದೈಹಿಕ ಶಿಕ್ಷಣ ಶಿಕ್ಷಕ ಅರುಣ್‌ ಕುಮಾರ್ ಮತ್ತು ಎಲ್ಲ ಸಹಶಿಕ್ಷಕರು ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತಗಾಯನ ನಡೆಯಿತು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳಿಂದ ಅದ್ದೂರಿ ಪ್ರಭಾತ್‌ ಪೇರಿ ನಡೆಯಿತು. ಕನ್ನಡ ಭಾಷಾ ಶಿಕ್ಷಕ ರವಿರಾಜ್‌ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು, ಸಹಶಿಕ್ಷಕ ಗಣೇಶ ಶೆಟ್ಟಿಗಾರ್‌ ಇವರು ಸಿಹಿತಿನಿಸು ವಿತರಿಸಿದ ದಾನಿಗಳಿಗೆ ವಿಶೇಷ ವಂದನೆ ಸಲ್ಲಿಸಿ, ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಇವರು ಧನ್ಯವಾದ ಸಮರ್ಪಿಸಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – 77ನೇ ಸ್ವಾತಂತ್ರ್ಯ ದಿನಾಚರಣೆ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – 77ನೇ ಸ್ವಾತಂತ್ರ್ಯ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಘಟಕದಲ್ಲಿ ಆಯೋಜಿಸಿದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ನೆರವೇರಿಸಿದರು. ಮಾತನಾಡಿ ಶಿಕ್ಷಣದಿಂದ ರಾಷ್ಟ್ರಪ್ರೇಮವನ್ನು ಬೆಳೆಸುವ ಮೂಲಕ ಸಧೃಡ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

    ಈ ಸಂದರ್ಭ ಕಾಲೇಜಿನ ಪಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಎನ್.ಸಿ.ಸಿ. ಅಧಿಕಾರಿಗಳಾದ ಹರೀಶ್ ಬಿ., ಶರತ್ ಕುಮಾರ್, ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ಬೋಧಕ-ಬೋಧಕೇತರ ಶಿಬ್ಬಂದಿಗಳು, ಎನ್.ಸಿ.ಸಿ., ಎನ್.ಎಸ್.ಎಸ್. ಹಾಗೂ ರೇಂಜರ್ಸ್ & ರೋವರ್ಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎನ್.ಸಿ.ಸಿ. ಕೆಡೆಟ್ ದಿವ್ಯಾ ಅವರಿಂದ ರೈಫಲ್ ಶೂಟಿಂಗ್ ಪ್ರಾತ್ಯಕ್ಷಿಕೆ ನಡೆಯಿತು.

  • ಕುಂದಾಪುರ :ಸ.ಹಿ.ಪ್ರಾ.ಶಾಲೆ ಕೊಂಡಳ್ಳಿಯಲ್ಲಿ77 ನೇ ಸ್ವಾತಂತ್ರ್ಯ ದಿನಾಚರಣೆ

    ಕುಂದಾಪುರ :ಸ.ಹಿ.ಪ್ರಾ.ಶಾಲೆ ಕೊಂಡಳ್ಳಿಯಲ್ಲಿ77 ನೇ ಸ್ವಾತಂತ್ರ್ಯ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ.ಹಿ.ಪ್ರಾ.ಶಾಲೆ ಕೊಂಡಳ್ಳಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಭಾಸ್ಕರ ನಾಯ್ಕ ಧ್ವಜಾರೋಹಣಗೈದರು.

    ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ನೀರ್ಕೋಡು ಚಂದ್ರಶೇಖರ ಶೆಟ್ಟಿಯವರು ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವನ್ನು ವಿತರಿಸಿ, ವಿದ್ಯಾರ್ಥಿಗಳು ಕನ್ನಡ , ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾಡಿದ ಭಾಷಣಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಅಧ್ಯಾಪಕ ಎಚ್ ಶೇಖರ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ದಾನಿಗಳಿಗೆ ಶುಭ ಹಾರೈಸಿದರು.

    ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ ಶೆಟ್ಟಿ, ಎಸ್‌.ಸಿ.ಡಿ.ಸಿ.ಸಿ ಬ್ಯಾಂಕ್ ಗೋಳಿಯಂಗಡಿ ಶಾಖೆಯ ಅಧ್ಯಕ್ಷ ರತ್ನಾಕರ ಶೆಟ್ಟಿ ಮಲ್ಯಾಡಿ ಮನೆ, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಹಾಗೂ ನಾಗರಾಜ ಕುಲಾಲ, ಪ್ರಗತಿ ಪರ ಕೃಷಿಕ ಸದಾಶಿವ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ವಿನೋದಾ ಶೆಟ್ಟಿ ಉಪಸ್ಥಿತರಿದ್ದರು.

    ಸಹ ಶಿಕ್ಷಕಿ ಸುಜಾತ ಎಚ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕ ರಾಮ ಮೊಗವೀರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಶಿಕ್ಷಕಿ ಭಾರತಿ ವಂದಿಸಿದರು. ಗೌರವ ಶಿಕ್ಷಕಿ ಶಿವಾನಿ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿದರು. ಅಂಗನವಾಡಿ ಪುಟಾಣಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹಾಗೂ ದೇಶಭಕ್ತಿಗೆ ಸಂಬಂಧಿಸಿದ ವಿವಿಧ ನೃತ್ಯ ಹಾಗೂ ನೃತ್ಯ ರೂಪಕಗಳನ್ನು ಮತ್ತು ನೀರನ್ನು ಉಳಿಸಿ ಎಂಬ ಕಿರು ಪ್ರಹಸನವನ್ನು ಪ್ರದರ್ಶಿಸಿದರು.

  • ಯಡಾಡಿ-ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯ ದಿನಾಚರಣೆ

    ಯಡಾಡಿ-ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯ ದಿನಾಚರಣೆ

    ವಿಧಾನ ಪರೀಷತ್‌ ಸದಸ್ಯರಾದ ಎಸ್.ಎಲ್‌ ಭೋಜೆಗೌಡರಿಂದ ಧ್ವಜಾರೋಹಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಯಡಾಡಿ-ಮತ್ಯಾಡಿಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ -ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ಎಲ್ ಭೋಜೆಗೌಡರು ಆಗಮಿಸಿದ್ದು, ವಿಶೇಷ ಪಥ ಸಂಚಲನದ ಮೂಲಕ ವೇದಿಕೆಗೆ ಶಾಲಾ ಆಡಳಿತ ಮಂಡಳಿಯ ಸಹಭಾಗಿತ್ವದೊಂದಿಗೆ ಕರೆ ತರಲಾಯಿತು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಎಲ್ ಭೋಜೇಗೌಡರು ಧ್ವಜಾರೋಹಣಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಮುಂದಿನ ಭವ್ಯ ಭಾರತದ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ದೇಶಕಟ್ಟುವ ಕಾಯಕದ ಕುರಿತು ಅರಿವು ಮೂಡಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶ್ರೇಷ್ಠ ನಾಯಕರ ಗುಣಗಾನ ಮಾಡಿ, ಭಾರತೀಯರಾದ ನಾವೆಲ್ಲರೂ ಒಂದೇ, ನಾವೆಲ್ಲರೂ ಈ ದೇಶದ ಸಂವಿಧಾನದ ಅಡಿಯಲ್ಲಿ ಸಮಾನರೆಂದು ಭಾವಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡೋಣ. ವಿದ್ಯಾರ್ಥಿಗಳು ಪ್ರತಿಯೊಂದು ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ, ಬೆಳೆಸಿಕೊಂಡು ಭಾರತದ ಸತ್ಪ್ರಜೆಯಾಗಿ ಬೆಳೆಯಬೇಕೆಂದು ಹೇಳುತ್ತಾ, ಕುವೆಂಪುರವರ ವಿಶ್ವ ಮಾನವ ಗೀತೆಯ ಸಂದೇಶವನ್ನು ಸಾರಿದರು. ‘ವಿಜಯಿ ವಿಶ್ವತಿ ರಂಗಾ ಪ್ಯಾರ ‘ಎಂಬ ಹಾಡಿಗೆ ನೆರೆದ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.

    ಈ ಸ್ವಾತಂತ್ರ್ಯ ಸಂಭ್ರಮದ ವೇದಿಕೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲೆ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷರಾಗಿ ಸುಜ್ಞಾನ್ ಎಜುಕೇಶನಲ್ ಟ್ರಷ್ಟ್ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿಯಾದ ಭರತ್ ಶೆಟ್ಟಿ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಅಗಷ್ಟಿನ್ ಕೆ. ಎ, ಇತರ ಗಣ್ಯರು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

    ಸ್ವಾತಂತ್ರ್ಯ ಸಂಭ್ರಮದ ವಿಶೇಷ ಆಕರ್ಷಣೆಯಾಗಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಚಿತ್ರ ಕಲಾ ಶಿಕ್ಷಕರಾದ ಗಿರೀಶ್ ಗಾಣಿಗ ಇವರು ನಿರ್ಮಿಸಿದ ಚಂದ್ರಯಾನ ಮತ್ತು ಭಾರತ ಭೂಪಟ ಮಾದರಿಗಳು ನೋಡುಗರ ಗಮನ ಸೆಳೆದವು. ಆಂಗ್ಲ ಭಾಷಾ ಉಪನ್ಯಾಸಕರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

  • ಹಳ್ಳಿಗಳ ಸುಧಾರಣೆಯು ಗ್ರಾಮ ಪಂಚಾಯತ್ ಗಳಿಂದ ಮಾತ್ರ ಸಾಧ್ಯ :ಲಕ್ಷ್ಮೀ ಆರ್ ಹೆಬ್ಬಾಳ್ಕರ್

    ಹಳ್ಳಿಗಳ ಸುಧಾರಣೆಯು ಗ್ರಾಮ ಪಂಚಾಯತ್ ಗಳಿಂದ ಮಾತ್ರ ಸಾಧ್ಯ :ಲಕ್ಷ್ಮೀ ಆರ್ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಹಳ್ಳಿಗಳ ಸುಧಾರಣೆಯು ಗ್ರಾಮ ಪಂಚಾಯತ್ ಗಳಿಂದ ಮಾತ್ರ ಸಾಧ್ಯ ಆದ್ದರಿಂದ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.

    ಅವರು ಇಂದು ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

    ಗ್ರಾಮಗಳ ಅಭಿವೃದ್ಧಿ ಯಿಂದ ದೇಶದ ಅಭಿವೃದ್ಧಿ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಗ್ರಾಮ ಪಂಚಾಯತ್ ಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಕ್ತಿ ತುಂಬಿದರೆ ಆ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

    ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಪ್ರಸ್ತುತ ನಮ್ಮ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವರು ಹೇಳಿದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡಗಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

    ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಹೆಚ್., ಕುಂದಾಪುರ ಉಪ ವಿಭಾಗಧಿಕಾರಿ ರಶ್ಮಿ, ತಹಶೀಲ್ದಾರ್ ಶೋಭಾಲಕ್ಷ್ಮಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಬೈಂದೂರು ನಲ್ಲಿ ನಡೆದ ಮೀನುಗಾರಿಕೆ ದುರಂತದಲ್ಲಿ ಮೃತಪಟ್ಟ ಸತೀಶ್ ಖಾರ್ವಿ ಕುಟುಂಬ ಕ್ಕೆ ಮೀನುಗಾರಿಕೆ ಇಲಾಖೆ ವತಿಯಿಂದ ನೀಡುವ ಪರಿಹಾರದ ಚೆಕ್ ನ್ನು ಸಚಿವರು ವಿತರಿಸಿದರು.

    ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಬಿದ್ಕಲ್ ಕಟ್ಟೆ ಯ ಕೆ.ಪಿ.ಎಸ್ ಶಾಲೆಯ ಶಿಕ್ಷಕ ಸತೀಶ್ ಶೆಟ್ಟಿಗಾರ್ ಸ್ವಾಗತಿಸಿದರು