ಕೋಟ ಪಂಚವರ್ಣ ಸಂಸ್ಥೆಯಿಂದ ಸ್ವಾತಂತ್ರ್ಯ ದಿನಾಚರಣೆ

0
340

Click Here

Click Here

ದೇಶದ ಸೇನೆಯಲ್ಲಿ ಯುವ ಜನತೆ ಹೆಚ್ಚು ಆಸಕ್ತರಾಗಬೇಕು – ನಿವೃತ್ತ ಯೋಧ ಶಿವಕುಮಾರ್

ಕುಂದಾಪುರ ಮಿರರ್ ಸುದ್ದಿ…
ಕೋಟ: ದೇಶಾಭಿಮಾನದ ಕಿಚ್ಚು ಪ್ರತಿಯೊಬ್ಬರಲ್ಲೂ ಹೆಚ್ಚಬೇಕು ಆ ಮೂಲಕ ನನ್ನ ದೇಶದ ಕೀರ್ತಿಯನ್ನು ಜಗದಗಲ ವಿಸ್ತರಿಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಶಿವಕುಮಾರ್ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ವಿಶ್ವಗುರು ಸನಿಹದಲ್ಲಿದೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ದೇಶ ಸ್ವಾತಂತ್ರ್ಯ ಗಳಿಸಿ ಈ ದಿನದವರೆಗೂ ಸರ್ವಾಂಗಿಣ ಅಭಿವೃದ್ಧಿ ಹೊಂದುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವವಾದದ್ದು ಈ ಹಿನ್ನಲ್ಲೆಯಲ್ಲಿ ಯುವ ಸಮೂಹ ಹೆಚ್ಚು ಹೆಚ್ಚು ಸೈನಿದಲ್ಲಿ ತೋಡಗಿಕೊಳ್ಳುವಂತೆ ಆಗಬೇಕು ಎಂದರಲ್ಲದೆ ಪಂಚವರ್ಣ ಸಂಸ್ಥೆಯ ಸಾಮಾಜಿಕ ಕಾಳಜಿ ಜೊತೆ ಪರಿಸರಸ್ನೇಹಿ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿ ಬೆಳೆದಿದೆ. ಸೇವೆಯ ಮೂಲಕ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿಸಿಕೊಳ್ಳಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಶಿವಕುಮಾರ್ ಇವರನ್ನು ಸನ್ಮಾನಿಸಲಾಯಿತು.

Click Here

ಇದೇ ವೇಳೆ ಪಂಚವರ್ಣ ಸಂಸ್ಥೆಯ ಯುವ ಸದಸ್ಯರಿಗೆ ವಿದ್ಯಾರ್ಥಿವೇತನ ವೇತನ ಹಾಗೂ ಕಾರ್ಕಳದ ರಂಗನಪಲ್ಕೆ ಹೊಳಬೆಳಕು ಅನಾಥಾಶ್ರಮಕ್ಕೆ ಒಂದು ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿಯನ್ನು ಆಶ್ರಯದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಲಾಯಿತು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ಕೋಟ ದಿನೇಶ್ ಗಾಣಿಗ, ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಜೋಗಿ, ಉದ್ಯಮಿ ರಮೇಶ್ ಪ್ರಭು, ಪಂಚವರ್ಣದ ಗೌರವ ಸದಸ್ಯ ವೆಂಕಟೇಶ ಪ್ರಭು, ಕೋಟ ಗ್ರಾ.ಪಂ ಸದಸ್ಯ ಚಂದ್ರ ಆಚಾರ್, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸ್ಥಳೀಯ ಉದ್ಯಮಿ ಹರಿದಾಸ್ ಪೈ,ಕೋಟ ಪರಿಸರವಾದಿ ಕೋ.ಗಿ.ನಾ, ಪಂಚವರ್ಣ ಮಹಿಳಾ ಅಧ್ಯಕ್ಷೆ ಕಲಾವತಿ ಅಶೋಕ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಧೀಂದ್ರ ಜೋಗಿ ಸ್ವಾಗತಿಸಿದರು. ಸದಸ್ಯ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಸ್ತಾವನೆ ಸಲ್ಲಿಸಿದರು. ಗೌರವ ಸದಸ್ಯ ರಾಧಾಕೃಷ್ಣ ಬ್ರಹ್ಮಾವರ ವಂದಿಸಿದರು.

Click Here

LEAVE A REPLY

Please enter your comment!
Please enter your name here