Category: ಸುದ್ದಿ

  • ಕುಂದಾಪುರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಕುಂದಾಪುರ ವಲಯ ವತಿಯಿಂದ ಗುರುವಂದನ ಕಾರ್ಯಕ್ರಮ

    ಕುಂದಾಪುರ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಕುಂದಾಪುರ ವಲಯ ವತಿಯಿಂದ ಗುರುವಂದನ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಜುಲೈ 2023ರಂದು ವಯೋನಿವೃತ್ತಿ ಹೊಂದಿದ ಸಿದ್ಧಾಪುರ ಶಾಲೆಯ ಸಹಶಿಕ್ಷಕ ಶ್ರೀಧರ ಜೋಗಿ ಹಾಗೂ ಸೂರ್ಗೋಳಿ ಶಾಲೆಯ ಮುಖ್ಯ ಶಿಕ್ಷಕ ರಾಮ ಶೆಟ್ಟಿ ಇವರನ್ನು ಕುಂದಾಪುರ ವಲಯದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ವತಿಯಿಂದ ಗುರುವಂದನ ಕಾರ್ಯಕ್ರಮದ ಅಂಗವಾಗಿ ವಲಯಾಧ್ಯಕ್ಷ ಗಣೇಶ ಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಗೌರವಿಸಿ ಬೀಳ್ಕೊಡಲಾಯಿತು.

    ಪ್ರಧಾನ ಕಾರ್ಯದರ್ಶಿ ರಾಮ ಮೊಗವೀರ, ಖಜಾಂಚಿ ಶ್ರೀನಾಥ ಜಿ ಪೂಜಾರಿ, ಉಪಾಧ್ಯಕ್ಷರಾದ ವನಜ ಎಸ್ ಹಾಗೂ ಶಶಿಧರ ಶೆಟ್ಟಿ, ಜಿಲ್ಲಾ ಸಹಕಾರ್ಯದರ್ಶಿ ಸುಚಿತ್ರಾ, ಸಂಘಟನಾ ಕಾರ್ಯದರ್ಶಿ ರೇಖಾ ಕೆ ಎಲ್ ಹಾಗೂ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಜಯ ಕುಮಾರ್ ಶೆಟ್ಟಿ ಆಯ್ಕೆ

    ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಜಯ ಕುಮಾರ್ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಪ್ರಭಾಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು.

    ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ರಾಜ್ಯ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಅಧ್ಯಕ್ಷರಾಗಿ ಸಾಯ್ಬರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಜಯ ಕುಮಾರ್ ಶೆಟ್ಟಿ ಆಯ್ಕೆಯಾದರು.

    ಪ್ರಧಾನ ಕಾರ್ಯದರ್ಶಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕುಂಜೆ ಕೃಷ್ಣ ನಾಯ್ಕ್, ಕೋಶಾಧಿಕಾರಿಯಾಗಿ ನಿಟ್ಟೂರು ಪ್ರೌಢ ಶಾಲೆ ಅಶೋಕ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೂಕಾಂಬಿಕಾ ಪ್ರೌಢಶಾಲೆ ಹೊಸೂರು ಬೈಂದೂರಿನ ರವಿಶಂಕರ ಹೆಗ್ಡೆ, ಸೈಂಟ್ ಜೋಸೆಫ್ ಪ್ರೌಢ ಶಾಲೆ ಬೆಳ್ಮಣ್ಣು ಕಾರ್ಕಳ ಹರಿದಾಸ ಪ್ರಭು,ಸರಕಾರಿ ಹಿ.ಪ್ರಾ.ಶಾಲೆ ಹಳ್ಳಾಡಿ ಹರ್ಕಾಡಿ ಕುಂದಾಪುರ ಶರತ್ ಕುಮಾರ್ ಶೆಟ್ಟಿ,ಸರಕಾರಿ ಪ್ರೌಢಶಾಲೆ ಮೂಡುಗಿಳಿಯಾರು ಬ್ರಹ್ಮಾವರದ ಶೇಖರ್, ಎಸ್‍ವಿಎಸ್ ಪ್ರೌಢ ಶಾಲೆ ಕಟಪಾಡಿ ಉಡುಪಿ
    ಕಿರಣ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿಯ ಸೌಮ್ಯ ಅಮೀನ್,ಮೂಕಾಂಬಿಕಾ ಪ್ರೌಢ ಶಾಲೆ ಕೊಡ್ಲಾಡಿ ಬೈಂದೂರಿನ ಸಂತೋಷ್ ಕುಮಾರ್ ಶೆಟ್ಟಿ, ಸರಕಾರಿ ಹಿ.ಪಾ.್ರಶಾಲೆ ಬೆಳ್ವೆ ಕುಂದಾಪುರ ಕಿಶನ್‍ರಾಜ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಹಿ.ಪ್ರಾ. ಶಾಲೆ ಕಾರ್ಕಳ ಪ್ರಕಾಶ್, ಸರಕಾರಿ ಪ.ಪೂ.ಕಾಲೇಜು ಬ್ರಹ್ಮಾವರ ಜಗದೀಶ್, ಮಾಧ್ಯಮ ಕಾರ್ಯದರ್ಶಿಯಾಗಿ ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಚಂದ್ರಶೇಖರ ಬೀಜಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸ.ಹಿ.ಪ್ರಾ.ಶಾಲೆ ಬಾಳ್ಕುದ್ರು ಬ್ರಹ್ಮಾವರದ ಶ್ರೀಕಾಂತ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ಬೈಂದೂರಿನ ಚಂದ್ರಶೇಖರ ಶೆಟ್ಟಿ,ಸ.ಹಿ.ಪ್ರಾ.ಶಾಲೆ ಕುಂದಾಪುರದ ಸುಮಂಗಲಾ ನಾಯಕ್ ಆಯ್ಕೆಗೊಂಡರು.

     

  • ಕುಂದಾಪುರ :ಭಂಡಾರ್ಕಾರ್ಸ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಶುಭಕರ ಆಚಾರಿ ನೇಮಕ

    ಕುಂದಾಪುರ :ಭಂಡಾರ್ಕಾರ್ಸ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಶುಭಕರ ಆಚಾರಿ ನೇಮಕ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೇಜು ಆಡಳಿತ ಮಂಡಳಿಯು ಡಾ.ಶುಭಕರ ಆಚಾರಿ ಅವರನ್ನು 1ಆಗಸ್ಟ್ 2023ರಿಂದ ಪ್ರಾಂಶುಪಾಲರಾಗಿ ನೇಮಕ ಮಾಡಿದೆ.

    ಕಾಲೇಜಿನ ಜನಪ್ರಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಡಾ.ಶುಭಕರಾಚಾರಿ ಅವರು ಮೂಲತಃ ತೀರ್ಥಹಳ್ಳಿಯ ಗಬಡಿ ಗ್ರಾಮದ ಸೀತಾರಾಮ ಆಚಾರ್ಯ ಮತ್ತು ಇಂದಿರಾ ಅವರ ಪುತ್ರ ಶುಭಕರಾಚಾರಿ ತೀರ್ಥಹಳ್ಳಿಯ ತುಂಗಭದ್ರಾ ಮಹಾವಿದ್ಯಾಲಯಲ್ಲಿ ಪದವಿ ಶಿಕ್ಷಣದ ನಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದು ಡಾಕ್ಟರೇಟ್ ನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು.

    ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

    ಕಾರ್ಕಳದ ಭುವನೇಂದ್ರ ಮತ್ತು ಮೂಡುಬಿದಿರೆ ಮಹಾವೀರ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿದ್ದರು.

    ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಾದ 2014ರ ಮಾದರಿ ಸಂಸತ್ತು, 2015ರ ಬುಡಕಟ್ಟು ಸಂಸ್ಕೃತಿ ಅನಾವರಣ
    2016ರ ವಿಕಲ ಚೇತನ ಸಮಾವೇಶ
    2017ರ ರಾಷ್ಟ್ರಮಟ್ಟದ ಬುಡಕಟ್ಟು ಸಮ್ಮೇಳನ
    2019ರಲ್ಲಿ ನಮ್ಮ ಕುಂದಾಪ್ರ ಸ್ವಚ್ಛ ಕುಂದಾಪ್ರ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಿದರು.

    ಪ್ರಸ್ತುತ 1ಆಗಸ್ಟ್ ಈ ಹಿಂದಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರು 31 ಜುಲೈ 2023ರಂದು ನಿವೃತ್ತಿ ಹೊಂದಿದ್ದಾರೆ. 1ಆಗಸ್ಟ್ 2023ರಿಂದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಶುಭಕರಾಚಾರಿ ನೇಮಕಗೊಂಡು ಕಾಲೇಜನ್ನು ಮುನ್ನಡೆಸಲಿರುವರು.

  • ಬೀಜಾಡಿ ಮೂಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅನೂಪ್ ಕುಮಾರ್ ಬಿ.ಆರ್ ಆಯ್ಕೆ

    ಬೀಜಾಡಿ ಮೂಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅನೂಪ್ ಕುಮಾರ್ ಬಿ.ಆರ್ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಬೀಜಾಡಿ: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ ಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉದ್ಯಮಿ ಅನೂಪ್ ಕುಮಾರ್ ಬಿ.ಆರ್ ಆಯ್ಕೆಯಾಗಿದ್ದಾರೆ.

    ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಉಪಾಧ್ಯಕ್ಷರಾಗಿ ಸೌಮ್ಯನಾರಾಯಣ, ರಕ್ಷಾ ಕುಮಾರಿ, ವೀಣಾ ಸಂದೀಪ್, ಕಾರ್ಯದರ್ಶಿ ರಾಘವೇಂದ್ರ ಅಮೀನ್, ಜೊತೆ ಕಾರ್ಯದರ್ಶಿ ಗಣೇಶ್ ಕಾಂಚನ್, ಕೋಶಾಧಿಕಾರಿ ನವೀನ ಕುಮಾರ್ ಬಿ, ಸಹಾಯಕ ಕೋಶಾಧಿಕಾರಿ ಸಂದೇಶ ಸುಬ್ರಹ್ಮಣ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ತೋಳಾರ್, ಜೊತೆ ಕಾರ್ಯದರ್ಶಿ ಗೀತಾ ನಟರಾಜ್, ಕ್ರೀಡಾ ಕಾರ್ಯದರ್ಶಿ ಹರ್ಷವರ್ಧನ್, ಜೊತೆ ಕಾರ್ಯದರ್ಶಿ ಆದಿತ್ಯ, ನಿರ್ದೇಶಕರಾಗಿ ಚಂದ್ರಶೇಖರ ಬೀಜಾಡಿ, ರಾಮ ನಾಯ್ಕ್, ಶಂಕರನಾರಾಯಣ ಗಾಣಿಗ, ರಾಜೇಶ್ ಬೆಳ್ಳಂಕಿ, ಅರವಿಂದ ಬಿ.ಆರ್., ನಾಗರಾಜ .ಬಿ.ಜಿ, ಅನಿಲ್ ಉಪಾಧ್ಯ, ಆದಿತ್ಯ ವಿ.ನಾಯ್ಕ್, ಉದಯ ಬೆಳ್ಳಂಕಿ, ಕುಮಾರ್ ಕಾಂಚನ್, ಸಂದೀಪ್ ಶೇರಿಗಾರ್, ಗೋಪಾಲ ಮಡಿವಾಳ, ಶ್ರೀಧರ ಆಚಾರ್, ನಾಗರಾಜ್ ಬೀಜಾಡಿ, ಮಾರ್ಗದರ್ಶಕರಾಗಿ ಚಂದ್ರ ಬಿ.ಎನ್., ಯಶೋದ, ಕಾರ್ತಿಕ್ ಆರ್.ನಾಯ್ಕ್, ಸುಜಾತ, ಗೀತಾ, ಪೂರ್ಣಿಮಾ, ಉದಯ ಕೆ.ಗಾಣಿಗ, ಅವಿನಾಶ್.ಬಿ, ದಿನೇಶ್ ಗೋಳಿಬೆಟ್ಟು, ಗಜೇಂದ್ರ, ರಾಜೇಶ್ ಆಚಾರ್,ಪ್ರಪುಲ್ಲ, ಮಹೇಶ್ ಮೊಗವೀರ, ಶ್ರೀಕಾಂತ್ ಭಟ್, ಸತೀಶ್ ಗೋಳಿಬೆಟ್ಟು,ಗಿರೀಶ್ ಆಚಾರ್,ಕೃಷ್ಣ ಗೋಪಾಡಿ ಆಯ್ಕೆಯಾಗಿದ್ದಾರೆ.

  • ಕೋಟ :ಅಂತರಾಷ್ಟ್ರೀಯ ಐಡಿಯಲ್ ಪ್ಲೇ ಅಭಾಕಸ್ – ಬೆಳ್ಳಿ ಪದಕ ಗೆದ್ದ ಆದಿತ್ಯ ಆರ್. ಕೋಟ

    ಕೋಟ :ಅಂತರಾಷ್ಟ್ರೀಯ ಐಡಿಯಲ್ ಪ್ಲೇ ಅಭಾಕಸ್ – ಬೆಳ್ಳಿ ಪದಕ ಗೆದ್ದ ಆದಿತ್ಯ ಆರ್. ಕೋಟ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಐಡಿಯಲ್ ಪ್ಲೇ ಅಭಾಕಸ್ ಅಂತರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ವಲ್ರ್ಡ್ ಸಿಟಿ ಕಪ್-23 ಜು.30ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಿತು. ಸುಮಾರು 19 ದೇಶಗಳಿಂದ 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಕೋಟ ಎಜ್ಯೂಕೇರ್ ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿಧಿಸಿದ ಆದಿತ್ಯ ಆರ್ ಕೋಟ ಬೆಳ್ಳಿ ಪದಕ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.

    ಇವರು ಕೋಟ ದೀಪಿಕಾ ಆರ್ ಮತ್ತು ಜಿ.ಎ ರವಿ ಅವರ ಪುತ್ರರಾಗಿದ್ದಾರೆ. ಇವರು ಪ್ರಸನ್ನ ಕೆ.ಬಿ ಹಾಗೂ ಸುಪ್ರೀತಾ ಮೊಗವೀರ್ ತರಬೇತಿ ಪಡೆಯುತ್ತಿದ್ದಾರೆ ಎಂದು ಕೋಟ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷ ಚೇತನ.ಎಂ ತಿಳಿಸಿದ್ದಾರೆ.

  • ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಸಮಬಲ : ಕಿಂಗ್ ಮೇಕರ್ ಆದ ಪಕ್ಷೇತರ ಸದಸ್ಯ

    ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಸಮಬಲ : ಕಿಂಗ್ ಮೇಕರ್ ಆದ ಪಕ್ಷೇತರ ಸದಸ್ಯ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ನಡೆದಿದ್ದು ಐದು ಕಾಂಗ್ರೆಸ್ ಬೆಂಬಲಿತ ಹಾಗೂ ಆರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸೊಸೈಟಿ ಆಡಳಿತ ಮಂಡಳಿಯಲ್ಲಿ ಒಂದು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಅವಿರೋಧ ಆಯ್ಕೆಯಾಗಿದ್ದರು. 12 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಆರು ಸ್ಥಾನಗಳನ್ನು ಗೆದ್ದುಕೊಂಡಂತಾಗಿದೆ.

    ಪಾಂಡೆಶ್ವರ ಸಾಮಾನ್ಯ ಕ್ಷೇತ್ರದಿಂದ ಚಂದ್ರಮೋಹನ್ (ಕಾಂಗ್ರೆಸ್), ಶ್ರೀಧರ ಪಿ.ಎಸ್. (ಕಾಂಗ್ರೆಸ್), ಐರೋಡಿ ಸಾಮಾನ್ಯ ಕ್ಷೇತ್ರದಿಂದ ಆನಂದ ಗಾಣಿಗ(ಕಾಂಗ್ರೆಸ್), ಎ ರಮೇಶ್ ಕಾರಂತ್(ಬಿಜೆಪಿ) , ಮೂಡುಪಡು ಸಾಮಾನ್ಯ ಕ್ಷೇತ್ರದಿಂದ ವಿಜಯ ಪೂಜಾರಿ(ಬಿಜೆಪಿ), ಅರುಣ ಪೂಜಾರಿ ವೈ. (ಬಿಜೆಪಿ), ಬಾಳೆಕುದ್ರು ಸಾಮಾನ್ಯ ಕ್ಷೇತ್ರದಿಂದ ಸುರೇಶ್ ಅಡಿಗ(ಪಕ್ಷೇತರ), ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಗೋವಿಂದ ಪೂಜಾರಿ(ಬಿಜೆಪಿ), ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕಿರಣ್ ಥಾಮಸ್ ಡಯಾಸ್ (ಬಿಜೆಪಿ), ಮಹಿಳಾ ಮೀಸಲು ಕ್ಷೇತ್ರದಿಂದ ಲೀಲಾವತಿ ಗಂಗಾಧರ ಪೂಜಾರಿ(ಕಾಂಗ್ರೆಸ್), ಕಮಲ ಆಚಾರ್(ಕಾಂಗ್ರೆಸ್), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶೇಖರ ಗದ್ದೆಮನೆ(ಬಿಜೆಪಿ) ಜಯ ಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪ್ರೀತಿ ಅವಿರೋಧ ಆಯ್ಕೆಗೊಂಡಿದ್ದಾರೆ.

    ಈ ಹಿಂದೆ ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯು ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಇದೀಗ ಸಮಬಲದ ಗೆಲುವಿನ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿರುವ ಸುರೇಶ್ ಅಡಿಗ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮುಂದಿನ ದಿನಗಳಲ್ಲಿ ನಡೆಯುವ ವಿದ್ಯಾಮಾನವನ್ನು ಅನುಸರಿಸಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    ಇತ್ತ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಐದನೇ ಬಾರಿ ಆಯ್ಕೆಯಾಗಿರುವ ಶ್ರೀಧರ್ ಪಿಎಸ್ ಪ್ರತಿಕ್ರಿಯಿಸಿ ಮುಂದಿನ ಯಾವುದೇ ಬೆಂಬಲಿತ ಪಕ್ಷಗಳ ಸದಸ್ಯರ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಹಿಂದೆ ಕಟ್ಟಿ ಬೆಳೆಸಿದ ಈ ಸಹಕಾರಿ ಸಂಸ್ಥೆಯ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಲಿದೆ ಎಂದರು.

    ಮತ ಎಣಿಕೆ ಸಂದರ್ಭ ಹಾಜರಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಮ್ಮ ಸದಸ್ಯರ ಒಗ್ಗಟ್ಟಿಗೆ ಸಂದ ಜಯವಾಗಿದೆ ಎಂದು ಪ್ರತಿಕ್ರಿಯಿಸಿದರು.

    ಭಾನುವಾರದ ಚುನಾವಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಬೆಂಬಲಿತರು ಶನಿವಾರ ನಡೆಸಿದ ಪ್ರತಿಭಟನೆ ಸೊಸೈಟಿ ಮತದಾರರನ್ನು ತಲುಪುವಲ್ಲಿ ಯಶಸ್ವಿಯಾಗಿರುವುದೇ ಬಿಜೆಪಿ ಕಾಂಗ್ರೆಸ್ ಸಮಬಲಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

  • ಕೋಟೇಶ್ವರ: ಬೈಕ್, ಕಾರು ಡಿಕ್ಕಿ – ಸವಾರ ಸಾವು

    ಕೋಟೇಶ್ವರ: ಬೈಕ್, ಕಾರು ಡಿಕ್ಕಿ – ಸವಾರ ಸಾವು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಕ್ ಹಾಗೂ ಕಾರುಗಳ ಡಿಕ್ಕಿಯ ಪರಿಣಾಮ ಬೈಕ್ ಸವಾರ ಸ್ಥಳೀಯ ನಿವಾಸಿ ನರಸಿಂಹ ಶೆಟ್ಟಿ (75) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

    ಕೋಟೇಶ್ವರ ಶಾಲೆ ಸಮೀಪದ ಅಡ್ಡ ರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದ ನರಸಿಂಹ ಶೆಟ್ಟಿ, ಕೋಟೇಶ್ವರ – ಹಾಲಾಡಿ ಮುಖ್ಯರಸ್ತೆಗೆ ಏಕಾಏಕಿ ಪ್ರವೇಶಿಸಿದ್ದರಿಂದ ಈ ದುರಂತ ಸಂಭವಿಸಿದೆ. ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿಗೆ ದ್ವಿಚಕ್ರ ವಾಹನ ಹಠಾತ್ತನೆ ಅಡ್ಡ ಬಂದಿದ್ದರಿಂದ ಚಾಲಕ ಬ್ರೇಕ್ ಹಾಕಿದ್ದರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಕ್ಕೆ ಸರಿದು ಕಲ್ಲು ಕಂಬವನ್ನು ತುಂಡರಿಸಿ, ಸುಮಾರು ಐವತ್ತು ಅಡಿ ದೂರ ಸಾಗಿ, ಒಂದು ಗುಡಿಯ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ ನರಸಿಂಹ ಶೆಟ್ಟಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೊನೆಯುಸಿರು ಎಳೆದರು ಎನ್ನಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಆಸಾಡಿ ಒಡ್ರ್ ಕ್ರೀಡಾಕೂಟ

    ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಆಸಾಡಿ ಒಡ್ರ್ ಕ್ರೀಡಾಕೂಟ

    ಗ್ರಾಮೀಣ ಕ್ರೀಡೆಗಳು ಮನೆ ಮನದಲ್ಲಿ ಸದಾ ಪಸರಿಸಬೇಕು – ಜಾನಕಿ ಹಂದೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಸದಾ ಜನಮನ ಹಾಗೂ ಮನೆಮನೆಯಲ್ಲೂ ಪಸರಿಸಬೇಕು ಆ ಮೂಲಕ ಅದರ ಮೌಲ್ಯಗಳು ಮುಂದಿನ ತಲೆಮಾರಿಗೆ ಕೊಂಡ್ಯೊಯುವ ಕಾರ್ಯಮಾಡುತ್ತಿರುವುದು ಸ್ವಾಗತಾರ್ಹ ಎಂದು ಸಹಕಾರಿ ಧುರೀಣೆ ಎಚ್ ಜಾನಕಿ ಹಂದೆ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಸಾದರಪಡಿಸುವ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಅಗಸ್ಟ್ 6ರಂದು ಹಂದಟ್ಟು ಪರಿಸರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಭಾನುವಾರ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಪಂಚವರ್ಣ ಸಂಸ್ಥೆ ಸದಾ ಕ್ರಿಯಾಶೀಲತೆಯನ್ನು ಹೊಂದಿದೆ ಇಂಥಹ ಸಂಸ್ಥೆ ಸಾಮಾಜಮುಖಿ ಕಾರ್ಯ ಹಾಗೂ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಮಹಿಳಾ ಮಂಡಲದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.

    ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಸದಸ್ಯ ಎಂ.ಜಯರಾಮ ಶೆಟ್ಟಿ ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು, ಪೂಜಾ ಪ್ರಸಾದ್ ಪೂಜಾರಿ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸುಜಾತ ಉದಯ್ ತಿಂಗಳಾಯ ಸ್ವಾಗತಿಸಿದರು.ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಲಿತಾ ಪೂಜಾರಿ ವಂದಿಸಿದರು. ನಂತರ ಗ್ರಾಮೀಣ ಕ್ರೀಡಾಕೂಟ ಏರ್ಪಟ್ಟಿತು. ಕ್ರೀಡಾಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ವನೀತಾ ಉಪಾಧ್ಯ,ಶಕೀಲ,ವಸಂತಿ,ಸುಜಾತ ಬಾಯರಿ,ಅಜಿತ್ ಆಚಾರ್ ನಿರ್ವಹಿಸಿದರು.ಕಾರ್ಯಕ್ರಮವನ್ನು ಪಂಚವರ್ಣ ಸಂಸ್ಥೆಯ ಕಾಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

  • ಪಂಚವರ್ಣ ಸಂಸ್ಥೆಯ 174ನೇ ವಾರದ ಪರಿಸರಸ್ನೇಹಿ ಅಭಿಯಾನ

    ಪಂಚವರ್ಣ ಸಂಸ್ಥೆಯ 174ನೇ ವಾರದ ಪರಿಸರಸ್ನೇಹಿ ಅಭಿಯಾನ

    ಪಂಚವರ್ಣ ಸಂಸ್ಥೆಯ ಪರಿಸರ ಕಾಳಜಿ ಇತರರಿಗೆ ಮಾದರಿ – ಜಯರಾಮ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪಂಚವರ್ಣ ಸಂಸ್ಥೆಯ ಪರಿಸರ ಕಾಳಜಿ ಇತರ ಸಂಸ್ಥೆಗಳಿಗೆ ಮಾದರಿ ಎಂದು ಕೋಟದ ರೈತಧ್ವನಿ ಸಂಘ ಅಧ್ಯಕ್ಷ ಎಂಜಯರಾಮ ಶೆಟ್ಟಿ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ಮಹಿಳಾ ಬಳಗ ಹಂದಟ್ಟು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಉರಾಳಸ್ ಶ್ರೀಂಗೇರಿ ವತಿಯಿಂದ 174ನೇ ವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಅಶ್ವಥ ಗಿಡ ನಡುವ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ಸುಖವನ್ನುಸಂಭ್ರಮಿಸುವ ನೆಪದಲ್ಲಿ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಕಾಡುಗಳನ್ನು ಕಡಿದು ವಾತಾವರಣವನ್ನು ಹಾಳುಗೆಡುವುತ್ತಿದ್ದೇವೆ ಇದರ ಉತ್ತರ ನಾವುಗಳು ಇತ್ತೀಚಿಗಿನ ವರ್ಷಗಳಲ್ಲಿ ಅನಯಭವಿಸುತ್ತಿದ್ದೇವೆ. ಇದಾಗದಂತೆ ತಡಯಬೇಕು ನಾವು ಪ್ರತಿಯೊಬ್ಬ ನಮ್ಮ ಪರಿಸರವನ್ನು ಹಸಿರಾಗಿಸಲು ಪಣತೊಡಬೇಕು ಈ ದಿಸೆಯಲ್ಲಾದರೂ ಪರಿಸರವನ್ನು ಉಳಿಸುವಂತ್ತಾಗಬೇಕು ಎಂದು ಕರೆ ನೀಡಿ ಅಶ್ಚಥ ಗಿಡ ನಡುವುದರಿಂದ ಪರಿಸರದಲ್ಲಿ ಆಕ್ಸಿಜನ್ ಪ್ರಮಾಣ ಸಮತೋಲನ ತರಲು ಸಾಧ್ಯ ಇದರ ಅಭಿಯಾನ ನಿಜಕ್ಕೂ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.

    ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ, ಕೋಟ ಹಿರೇಮಹಾಲಿಂಗೇಶ್ವರ, ಕೋಟ ಪಡುಕರೆ, ಕೋಟ ಗಾಂಧಿ ಮೈದಾನ ಪರಿಸರದಲ್ಲಿ ಅಶ್ವಥ ಗಿಡ ನೆಟ್ಟು ಸಂಭ್ರಮಿಸಲಾಯಿತು.

    ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಕಾರ್ಯದರ್ಶಿ ಸುಧೀಂದ್ರ ಜೋಗಿ, ಸಂಘಟನಾಕಾರ್ಯದರ್ಶಿ ಕೆ.ಆರ್ ಗಿರೀಶ್ ಆಚಾರ್,ಸದಸ್ಯ ಭಾಸ್ಕರ್ ದೇವಾಡಿಗ,ಸಂದೇಶ್ ಆಚಾರ್,ಕೃಷ್ಣ ಕಾಂಚನ್,ಕಾರ್ತಿಕ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಪರಿಸರದ ಹಿರಿಯಜ್ಜಿ ಮಿಣ್ಕು ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

  • ರಸರಂಗ ಕೋಟ ಇವರ ಆಶ್ರಯದಲ್ಲಿಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟ

    ರಸರಂಗ ಕೋಟ ಇವರ ಆಶ್ರಯದಲ್ಲಿಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟ

    ಯಕ್ಷಗಾನದ ಶ್ರೇಷ್ಠತೆ ಅರಿತು ಅದರ ಮೌಲ್ಯಗಳನ್ನು ಉಳಿಸುವಂತ್ತಾಗಲಿ – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಯಕ್ಷಗಾನದ ಮೌಲ್ಯ ಹಾಗೂ ಅದರ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಸಂಘಸಂಸ್ಥೆಗಳು ಮಾಡಬೇಕು ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

    ಶನಿವಾರ ಕೋಟದ ಮಹಿಳಾ ಮಂಡಳದ ಸಭಾಂಗಣದಲ್ಲಿ ರಸರಂಗ ಕೋಟ ಇವರ ಆಶ್ರಯದಲ್ಲಿ ಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಚಂಡೆ ಬಾರಿಸಿ ಮಾತನಾಡಿ ಯಕ್ಷಗಾನದ ಹಿನ್ನಲ್ಲೆ ಇರುವ ಸುಧಾ ಮಣೂರರ ಕುಟುಂಬ ಅದನ್ನು ನಿರಂತರ ಉಳಿಸಬೇಕೆಂಬ ತುಡಿತದೊಂದಿಗೆ ಮುಂದಿನ ತಲೆಮಾರಿಗೆ ರಂಗವೇದಿಕೆಯನ್ನು ಬಳುವಳಿಯಾಗಿ ನೀಡುತ್ತಿದೆ ಇದು ಸಾಗತಾರ್ಹ ಬೆಳವಣಿಗೆಯಾಗಿದೆ.ಇಂತಹ ಕಾರ್ಯಗಳು ಪ್ರತಿಯೊಂದು ಸಂಸ್ಥೆಗಳಿಂದ ಆಗಲಿ ಎಂದು ಆಶಿಸಿದರು.

    ಸಭೆಯ ಅಧ್ಯಕ್ಷತೆಯನ್ನು ರಸರಂಗ ಕೋಟ ಅಧ್ಯಕ್ಷೆ ಸುಧಾ ಮಣೂರು ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್, ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್, ಕೋಟ ಮಹಿಳಾ ಮಂಡಳದ ಅಧ್ಯಕ್ಷೆ ಸುಶೀಲಸೋಮಶೇಖರ್ ಇದ್ದರು. ಕಾರ್ಯಕ್ರಮವನ್ನು ವಸಂತಿ ಹಂದಟ್ಟು ನಿರೂಪಿಸಿ ವಂದಿಸಿದರು.

    ನಂತರ ರಸರಂಗ ಕೋಟದ ಸದಸ್ಯರಿಂದ ಶ್ರೀರಾಮ ಕಾರುಣ್ಯ ಯಕ್ಷಗಾನ ಪ್ರದರ್ಶನಗೊಂಡಿತು.