Category: ಸುದ್ದಿ

  • ಯಡ್ತಾಡಿಯಲ್ಲಿ 15ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

    ಯಡ್ತಾಡಿಯಲ್ಲಿ 15ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿಯವರ ಜಮೀನಿನಲ್ಲಿ ಜು.1ರಂದು 15ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.
    ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಧನಂಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿಯ ಉಳಿವಿಗೆ ಯಾಂತ್ರೀಕರಣ ಅತೀ ಅಗತ್ಯ. ಈ ಭಾಗದಲ್ಲಿ ಯಾಂತ್ರೀಕ ನಾಟಿಯನ್ನು ಮೊದಲ ಬಾರಿಗೆ ಪರಿಚಯಿಸಿ ಸಾಕಷ್ಟು ಜನರಿಗೆ ಮಾಹಿತಿ ನೀಡಿದ ಸತೀಶ್ ಕುಮಾರ್ ಶೆಟ್ಟಿಯವರ ಸಾಧನೆ ಶ್ಲಾಘನೀಯವಾದದ್ದು ಎಂದರು.

    ಬಾರ್ಕೂರು ಸಹಕಾರಿ ಸೇವಾ ಸಂಘದ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸತೀಶ್ ಶೆಟ್ಟಿಯವರ ಕೃಷಿ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕೃಷಿ ವಿಜ್ಞಾನಿಗಳಾದ ಡಾ| ಲಕ್ಷಣ್, ಡಾ|ಸುಧೀರ್ ಕಾಮತ್, ಡಾ|ಶಂಕರ್, ಉಡುಪಿ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕ ಡಾ|ಮೋಹನ್ ರಾಜ್, ವಿ.ಆರ್.ಡಿ.ಎಫ್. ಮಂಗಳೂರಿನ ಕಾರ್ಯದರ್ಶಿ ರಾಜೇಂದ್ರ ರೈ, ಸಿ.ಇ.ಓ. ಸಚಿನ್ ಹೆಗ್ಡೆ, ರೈತರಾದ ಕೂಡ್ಲಿ ಶ್ರೀನಿವಾಸ ಉಡುಪ, ವಿಮಲಾ ಎಸ್.ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಬಾರ್ಕೂರು ಸೀತಾರಾಮ ಶೆಟ್ಟಿ, ನಿತ್ಯಾನಂದ ಶೆಟ್ಟಿ ಶಿರಿಯಾರ, ಪ್ರಸಾದ ಶೆಟ್ಟಿ ಕೊಳ್ಕೆಬೈಲು, ಸುಬ್ರಾಯ ಆಚಾರ್ಯ, ಫಿರೋಜ್ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಆಯೋಜಕ ಯಡ್ತಾಡಿ ಸತೀಶ ಕುಮಾರ ಶೆಟ್ಟಿ ಸ್ವಾಗತಿಸಿ, ಜಂಬೂರು ಕೃಷ್ಣ ಅಡಿಗ ಅತಿಥಿಗಳನ್ನು ಪರಿಚಯಿಸಿದರು. ಸಾಕ್ಷ್ಯ ಹೆಗ್ಡೆ ವಂದಿಸಿದರು.

  • ಕೋಟ :ಕೋಟದ ಪಂಚವರ್ಣ ಸಂಸ್ಥೆಗೆ ರೋಟರಿ ಕ್ಲಬ್ ಗೌರವ

    ಕೋಟ :ಕೋಟದ ಪಂಚವರ್ಣ ಸಂಸ್ಥೆಗೆ ರೋಟರಿ ಕ್ಲಬ್ ಗೌರವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲದ ಸಾಮಾಜಿಕ ಮತ್ತು ಪರಿಸರಸ್ನೇಹಿ ಕಾರ್ಯಕ್ರಮವನ್ನು ಗುರುತಿಸಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಗೌರವ ಸಮ್ಮಾನ ನೀಡಿ ಪುರಸ್ಕರಿಸಿದೆ.

    ಶುಕ್ರವಾರ ಕೋಟದ ಸಮುದ್ಯತಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ಪದಪ್ರದಾನ ಸಮಾರಂಭದಲ್ಲಿ ಈ ಗೌರವ ನೀಡಿದೆ.

    ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಅದರ ಅಧ್ಯಕ್ಷ ಅಜಿತ್ ಆಚಾರ್ ಇವರನ್ನು ಗೌರವಿಸಲಾಯಿತು.

    ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಗೌರವಾರ್ಪಣೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಗೌರವ ಸದಸ್ಯ ಆನಂದ್ ಸಿ ಕುಂದರ್, ಮುಖ್ಯ ಅತಿಥಿಗಳಾಗಿ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ, ರೋಟರಿ ಕ್ಲಬ್ ನೂತನ ಅಧ್ಯಕ್ಷ ದೇವಪ್ಪ ಪಟಗಾರ್, ಕಾರ್ಯದರ್ಶಿ ಜಿ.ತಿಮ್ಮ ಪೂಜಾರಿ, ವಲಯ ಸಹಾಯಕ ಗವರ್ನರ್ ಕೆ.ನರಸಿಂಹ ಪ್ರಭು, ಮಾಜಿ ಅಧ್ಯಕ್ಷ ಅರುಣ್ ಕುಂದರ್, ನಿಕಟಪೂರ್ವ ಕಾರ್ಯದರ್ಶಿ ಕೆ.ಶ್ರೀಕಾಂತ್ ಶೆಣೈ, ರೋಟರಿ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಕೋಟ :ನಿವೃತ್ತ ಯೋಧ ಪಾರಂಪಳ್ಳಿ ಗಣೇಶ್ ಅಡಿಗ ಅವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕೋಟ :ನಿವೃತ್ತ ಯೋಧ ಪಾರಂಪಳ್ಳಿ ಗಣೇಶ್ ಅಡಿಗ ಅವರಿಗೆ ಪಂಚವರ್ಣ ರಜತ ಗೌರವ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಾಲಿಗ್ರಾಮದ ಪಾರಂಪಳ್ಳಿ ಗಣೇಶ್ ಅಡಿಗ ಅವರಿಗೆ ಗುರುವಾರ ರಜತ ಗೌರವ ನೀಡಿ ಗೌರವಿಸಲಾಯಿತು.

    ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಮಾಜಿ ಧರ್ಮದರ್ಶಿ ಸದಾರಾಮ ಹೆರ್ಳೇ ದೇಶದ ಭದ್ರತೆಯಲ್ಲಿ ಯೋಧರ ಪಾತ್ರ ಗಣನೀಯವಾದದ್ದು ಈ ನಿಟ್ಟಿನಲ್ಲಿ ಸಾಕಷ್ಟು ವರ್ಷ ದೇಶ ಸೇವೆಗೆ ತನ್ನ ಸರ್ವಸ್ವವನ್ನೂ ಮುಡಿಪಿಟ್ಟೂ ಸೈನಿಕರಿಗೆ ನೀಡುವ ಗೌರವ ಎಲ್ಲವುದಕ್ಕಿಂತ ಮಿಗಿಲಾದದ್ದು,ಸರಕಾರ ಮತ್ತು ಸೈನ್ಯ ಮಧ್ಯೆ ಸ್ನೇಹ ಸಂಬಂಧ ಗಟ್ಟಿಯಾದರೆ ದೇಶ ಮತ್ತಷ್ಟು ಸುಭದ್ರವಾಗಿರಲು ಸಾಧ್ಯ ಈ ದಿಸೆಯಲ್ಲಿ ಸೈನ್ಯ ಹಾಗೂ ಭದ್ರತೆಯ ವಿಚಾರದಲ್ಲಿ ಪ್ರಧಾನಿ ಗಟ್ಟಿ ನಿಲುವು ಹೊಂದಿದ್ದಾರೆ. ದೇಶದ ಬೆನ್ನೆಲುಬಾಗಿ ರೈತ ಹೇಗೆ ಕಾಪಾಡುತ್ತಾನೊ ಅದೇ ರೀತಿ ಸೈನಿಕರು ಸಹ ಅಷ್ಟೆ ಗಮನಾರ್ಹ ಪಾತ್ರ ಪಾತ್ರ ವಹಿಸುತ್ತಾರೆ. ಅದೇ ರೀತಿಯಲ್ಲಿ ನಿರಂತ 31ವರ್ಷಗಳ ಕಾಲ ಸೈನ್ಯದ ಮೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಗಣೇಶ್ ಅಡಿಗರಿಗೆ ಸ್ವಗೃಹದಲ್ಲಿ ಗೌರವಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಯುವ ಸಮುದಾಯಕ್ಕೆ ಅಗ್ನಿಪಥ್ ಸೇರಿದಂತೆ ಅವರಿಗೆ ಸಾಕಷ್ಟು ಮಾಹಿತಿ ನೀಡುವ ಅಡಿಗರ ದೇಶ ಸೇವೆಯ ಕೆಚ್ಚು ಮಾದರಿ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

    ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಸಾಲಿಗ್ರಾಮ ಪ.ಪಂ ಉಪಾಧ್ಯಕ್ಷೆ ಅನುಸೂಯ ಹೆರ್ಳೇ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಪ್ರದಾನ ಅರ್ಚಕ ಜನಾರ್ದನ ಅಡಿಗ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್, ಯುವ ಕೂಟ ಮಹಾಜಗತ್ತು ಅಂಗಸಂಸ್ಥೆ ಗೌರವಾಧ್ಯಕ್ಷ ಪಿ.ವೈ ಕೃಷ್ಣಪ್ರಸಾದ್ ಹೆರ್ಳೇ, ಅಧ್ಯಕ್ಷ ಗಿರೀಶ್ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಶಕೀಲ ಪೂಜಾರಿ ಸ್ವಾಗತಿಸಿದರೆ, ಸಾಂಸ್ಕೃತಿಕ ಕಾರ್ಯದರ್ಶಿ ವನಿತಾ ಉಪಾಧ್ಯ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರೆ ,ಸಂಚಾಲಕಿ ಪುಷ್ಭಾ ಕೆ ಹಂದಟ್ಟು ವಂದಿಸಿದರು. ಪಂಚವರ್ಣ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

    ನನ್ನಗೆ ನನ್ನ ಗೃಹಕ್ಕೆ ಬಂದು ಗೌರವಿಸಿದ ಪಂಚವರ್ಣ ಸಂಸ್ಥೆಯ ಗೌರವ ಇಡೀ ದೇಶ ಕಾಯುವ ಸೈನಿಕರಿಗೆ ನೀಡಿದ ಅಭಿಮಾನದ ಗೌರವವಾಗಿದೆ. ಸೇನೆಯಲ್ಲಿ ಸಾಕಷ್ಟು ಮಜಲುಗಳನ್ನು ಕ್ರಮಿಸಿದ್ದೇನೆ, ಅದೊಂದು ಹೆಮ್ಮೆಯ ಕಾರ್ಯವಾಗಿದೆ ಎಂಬ ಹಮ್ಮು ನನ್ನಲಿದೆ‌. ಅದು ಪ್ರತಿಯೊಬ್ಬರಲ್ಲೂ ಹುಟ್ಟಬೇಕು, ಇಸ್ರೇಲ್ ಮಾದರಿಯಲ್ಲಿ ಪ್ರತಿಯೊರ್ವರು ಸೈನ್ಯದಲ್ಲಿ ಪಳಗುವಂತ್ತಾಗಬೇಕು ಆಗ ದೇಶ ಸುಭದ್ರವಾಗಿರುತ್ತದೆ. ತಮ್ಮ ಆತ್ಮ ರಕ್ಷಣೆ ಹೊಂದುತ್ತದೆ.ಯುವ ಸಮುದಾಯ ದೇಶದ ಬಗ್ಗೆ ಅದರ ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು, ದೇಶಾಭಿಮಾನದ ಪರಂಪರೆ ಪ್ರತಿಯೊರ್ವರ ರಕ್ತದಲ್ಲಿ ನಿತ್ಯ ನಿರಂತರವಾಗಿ ಹರಿಯುತ್ತಿರಬೇಕು – ಗಣೇಶ್ ಅಡಿಗ ನಿವೃತ್ತ ಯೋಧರು ಪಾರಂಪಳ್ಳಿ

  • ಕುಂದಾಪುರ :ಕಾರ್ಯಾಲಯ, ಶಾಸಕರು ಜನಸಮಾನ್ಯರ ನಡುವಿನ ಸೇತುವೆಯಾಗಲಿ – ಬಿ.ಅಪ್ಪಣ್ಣ ಹೆಗ್ಡೆ

    ಕುಂದಾಪುರ :ಕಾರ್ಯಾಲಯ, ಶಾಸಕರು ಜನಸಮಾನ್ಯರ ನಡುವಿನ ಸೇತುವೆಯಾಗಲಿ – ಬಿ.ಅಪ್ಪಣ್ಣ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಉತ್ತರಾಧಿಕಾರಿಯಾಗಿ, ನಮ್ಮೆಲ್ಲರ ಪ್ರತಿನಿಧಿಯಾಗಿ ಕಿರಣ್ ಕೊಡ್ಗಿಯವರು ಇವತ್ತು ಕ್ಷೇತ್ರದ ಶಾಸಕರಾಗಿದ್ದಾರೆ. ಮಿತ ಭಾಷಿ, ಒಳ್ಳೆಯ ಕಾರ್ಯಕರ್ತ, ಜನಸೇವಕ, ಜನರ ಜೊತೆ ಉತ್ತಮ ಒಡನಾಟ ಇರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ದಿ ಆಗುತ್ತದೆ. ತಾರತಮ್ಯ, ಪಕ್ಷಪಾತ ಇಲ್ಲದೆ ಎಲ್ಲರನ್ನು ಸಮಾನ ಮನಸ್ಥಿತಿಯಲ್ಲಿ ನೋಡುವ ಮೂಲಕ ಶಾಸಕ ಕಿರಣ್ ಕೊಡ್ಗಿಯವರು ಕ್ಷೇತ್ರವನ್ನು ಅಭಿವೃದ್ದಿಗೊಳಿಸಿಲಿ. ಅದಕ್ಕೆ ಪೂರಕವಾಗಿ ಶಾಸಕರ ಕಾರ್ಯಾಲಯವು ಕೂಡಾ ಶಾಸಕರು ಮತ್ತು ಜನಸಮಾನ್ಯರ ನಡುವಿನ ಸೇತುವೆಯಾಗಲಿ ಎಂದು ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

    ಕುಂದಾಪುರ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ನೂತನ ಶಾಸಕರ ಕಚೇರಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಇವತ್ತಿನ ದಿನಗಳಲ್ಲಿ ರಾಜಕೀಯ ಒಂದು ದಂಧೆಯಾಗಿ ಮಾರ್ಪಟ್ಟಿದೆ. ಕರಾವಳಿಯ ಜಿಲ್ಲೆಗಳಲ್ಲಿ ಸೇವಾಮನೋಭಾವದ ಶಾಸಕರನ್ನು ಕಾಣಬಹುದಾಗಿದೆ. ನಾನು ಶಾಸಕನಾದ ಸಂದರ್ಭದಲ್ಲಿ ಹೀಗಿರಲಿಲ್ಲ. ಹಣದ ಪಾತ್ರ ಆಗ ಗೌಣವಾಗಿತ್ತು. ಸೇವೆಗೆ ವಿಫುಲವಾದ ಅವಕಾಶವಿತ್ತು. ಇವತ್ತು ಕಾಲ ಬದಲಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭಿವೃದ್ಧಿ ಹಾದಿಯಲ್ಲಿ ಶಾಸಕ ಕಿರಣ ಕೊಡ್ಗಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂದಾಪುರ ಜನನಿಬಿಡ ಪ್ರದೇಶದಲ್ಲಿ ಶಾಸಕರ ಕಾರ್ಯಾಲಯ ಆರಂಭಿಸಿದ್ದಾರೆ. ಶಾಸಕರನ್ನು ಭೇಟಿ ಮಾಡಲು, ಅಹವಾಲು ಸಲ್ಲಿಸಲು ಶಾಸಕರ ಮನೆಗೇ ಹೋಗಬೇಕಾಗಿಲ್ಲ. ಕಚೇರಿಯಲ್ಲಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಈ ಶಾಸಕರ ಕಛೇರಿ ಜನಸಾಮಾನ್ಯರು, ಪಂಚಾಯತ್ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಅನುಕೂಲವಾಗಲಿ. ಕ್ಷೇತ್ರದ ಅಭಿವೃದ್ದಿಗೆ ಇದು ಪೂರಕವಾಗಿ ರೂಪುಗೊಳ್ಳಲಿ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇದು ಶಾಸಕರ ಕಛೇರಿಯಾದರೂ ಸರ್ಕಾರಿ ಕಚೇರಿ ಇದ್ದಂತೆ. ಜನರು ತಮ್ಮ ಸಮಸ್ಯೆ ಇಲ್ಲಿ ಬಂದು ಪರಿಹಾರ ಕಂಡುಕೊಳ್ಳಬಹುದು. ಪ್ರತಿ ಶನಿವಾರ ನಾನು ಇಲ್ಲಿ ಲಭ್ಯವಿರುತ್ತೇನೆ. ಉಳಿದ ದಿನಗಳಲ್ಲಿ ಇಬ್ಬರು ಆಪ್ತ ಸಹಾಯಕರು ಕಚೇರಿಯಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕಾಡೂರು ಸುರೇಶ್ ಶೆಟ್ಟಿ, ರಾಜೇಶ್ ಕಾವೇರಿ, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸಂಪತ್ ಕುಮಾರ್ ಶೆಟ್ಟಿ, ರಮೇಶ ಶೆಟ್ಟಿ, ಅಲ್ತಾರು ಗೌತಮ್ ಹೆಗ್ಡೆ, ಸದಾನಂದ ಬಳ್ಕೂರು, ಮಡಾಮಕ್ಕಿ ಶಶಿಧರ್ ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

    ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಸ್ವಾಗತಿಸಿದರು. ರೂಪಾ ಪೈ ವಂದೇ ಮಾತರಂ ಹಾಡಿದರು. ಆಪ್ತ ಸಹಾಯಕ ಮಹಿಮ್ ಶೆಟ್ಟಿ ನಿರೂಪಿಸಿದರು. ಪುರಸಭಾ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಮಾದಕ ವ್ಯಸನ ನಮ್ಮ ಇಡೀ ದೇಹವನ್ನು ಆವರಿಸಿ ನಿತ್ರಾಣ, ನರದೌರ್ಬಲ್ಯ, ಮೆದುಳಿಗೆ ಹಾನಿ, ಶ್ವಾಸಕೋಶ ಎಲ್ಲವನ್ನು ಹಾಳುಮಾಡುತ್ತದೆ. ಮೊದಲಿಗೆ ಶೋಕಿಗಾಗಿ ಪ್ರಾರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗುತ್ತದೆ. ಡ್ರಗ್ಸ್ ಆರಂಭದಲ್ಲಿ ಆಕರ್ಷಕವಾಗಿ ಕಾಣಬಹುದು ಆದರೆ ಅದು ವ್ಯಕ್ತಿಯ ಭವಿಷ್ಯವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಪ್ರತಿಯೊಬ್ಬರು ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸುವ ಜವಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಕುಂದಾಪುರದ ತಕ್ಷಾ ಕ್ಲಿನಿಕ್‌ನ ಮನೋವೈದ್ಯರಾದ ಡಾ| ನಿತಿನ್ ಎ. ಶೆಟ್ಟಿ ಹೇಳಿದರು.

    ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ. ಘಟಕ, ಯುವ ರೆಡ್‌ಕ್ರಾಸ್ ಹಾಗೂ ರೋಟರಾಕ್ಟ್ ಘಟಕಗಳ ಸಹಯೋಗದೊಂದಿಗೆ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ದ್ವಿತೀಯ ಬಿ.ಸಿ.ಎ.ನ ವಿದ್ಯಾರ್ಥಿನಿ ಶಿಲ್ಪಾ ಪ್ರತಿಜ್ಞಾ ವಿಧಿ ಬೋಧಿಸಿದರು. ರೋರ‍್ಯಾಕ್ಟ್ ಕ್ಲಬ್‌ನ ಸಂಯೋಜಕರಾದ ಸತೀಶ್ ಕಾಂಚನ್, ರೇವತಿ ಡಿ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಯೋಗೀಶ್ ಶ್ಯಾನುಭೋಗ್, ವಾಣಿಜ್ಯ ಉಪನ್ಯಾಸಕ ಶರತ್ ಕುಮಾರ್ ಉಪಸ್ಥಿತರಿದ್ದರು.

    ಕಾಲೇಜಿನ ಉಪ ಪ್ರಾಂಶುಪಾಲರಾದ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಎನ್.ಸಿ.ಸಿ. ಅಧಿಕಾರಿ ಹರೀಶ್ ಬಿ. ಸ್ವಾಗತಿಸಿ, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕಿ ಅವಿತಾ ಕೊರೆಯಾ ವಂದಿಸಿ, ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಕಾರ್ಯಾಗಾರ

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಕಾರ್ಯಾಗಾರ

    ಕುಂದಾಪುರ ‌ಮಿರರ್ ಸುದ್ದಿ…

    ಕುಂದಾಪುರ: ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಸಹಭಾಗಿತ್ವದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜು.29ರಂದು ಭೌತಶಾಸ್ತ್ರದ ಉಪನ್ಯಾಸಕರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿಯವರು ಕಾರ್ಯಾಗಾರವನ್ನು ಉದ್ಘಾಟಿಸಿ, ಉಪನ್ಯಾಸಕರು ಅತ್ಯುತ್ತಮ ಬೋಧನಾ ಶೈಲಿಯನ್ನು ಅಳವಡಿಸಿ ಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾಗಬೇಕು ಎಂದು ತಿಳಿಸಿದರು.

    ಬಿದ್ಕಲ್ ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಡುಪಿ ಜಿಲ್ಲಾ ಭೌತ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರು ಆಗಿರುವ ವಿಘ್ನೇಶ್ವರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

    ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಗೌರವಾಧ್ಯಕ್ಷರಾದ ಯು. ಲಕ್ಷ್ಮೀನಾರಾಯಣ ಛಾತ್ರ ಶುಭಶಂಸನೆಗೈದರು. ಮುಖ್ಯ ಅತಿಥಿಯಾಗಿ ಗೋವಾ ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರ ಹಾಗೂ ಅನ್ವಯಿಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ. ವೆಂಕಟೇಶ್. ಆರ್.ಹತ್ವಾರ್ ಉಪಸ್ಥಿತರಿದ್ದರು.

    ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿ ಯವರು ಅಧ್ಯಕ್ಷತೆ ವಹಿಸಿದ್ದರು.

    ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿಗಳಾದ ಸಿ. ಎಸ್. ಉಮಾಪತಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಖಜಾಂಚಿ ಸದಾನಂದ ಅವರು ವಂದಿಸಿದರು. ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಭರತ್ ಚಂದ್ರ.ಕೆ ಕಾರ್ಯಕ್ರಮ ನಿರೂಪಿದರು.

  • ಪಂಚವರ್ಣ ಸಂಸ್ಥೆ ಪುನಿತ್ ರಾಜ್ ಕುಮಾರ್ ಸವಿನೆನಪಿಗಾಗಿ ವಿದ್ಯಾರ್ಥಿ ದತ್ತು ಸ್ವೀಕಾರ, ಪರಿಕರ ವಿತರಣೆ

    ಪಂಚವರ್ಣ ಸಂಸ್ಥೆ ಪುನಿತ್ ರಾಜ್ ಕುಮಾರ್ ಸವಿನೆನಪಿಗಾಗಿ ವಿದ್ಯಾರ್ಥಿ ದತ್ತು ಸ್ವೀಕಾರ, ಪರಿಕರ ವಿತರಣೆ

    ಹಸಿದವರಿಗೆ ಅನ್ನ ನೀಡಿದಂತೆ ಶೈಕ್ಷಣಿಕ ದತ್ತು ಸ್ವೀಕಾರವು ಶ್ರೇಷ್ಠವಾದ ಕಾರ್ಯ- ಜಿ.ಸತೀಶ್ ಹೆಗ್ಡೆ.

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ಶಿವಿನ್ ಗ್ರೂಪ್ ಬೆಂಗಳೂರು ಇವರ ಸಹೋಗದಲ್ಲಿ ದಿ.ಪುನಿತ್ ರಾಜ್ ಕುಮಾರ್ ಸವಿನೆನಪಿಗಾಗಿ ಮೂವರು ಬಡ ವಿದ್ಯಾರ್ಥಿಗಳನ್ನು ಈಗಾಗಲೇ ಶೈಕ್ಷಣಿಕ ದತ್ತು ಸ್ವೀಕರಿಸಿದ್ದು ಈ ಹಿನ್ನಲ್ಲೆಯಲ್ಲಿ ಬೆಂಗಳೂರಿನ ಶಿವಿನ್ ಗ್ರೂಪ್ ನ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪರಿಕರ,ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಜೂ.27ರಂದು ಪಂಚವರ್ಣ ಕಛೇರಿಯಲ್ಲಿ ನಡೆಯಿತು.

    ಪರಿಕರ ವಿತರಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಜಿ.ಸತೀಶ್ ಹೆಗ್ಡೆ ಪಂಚವರ್ಣ ಸಂಸ್ಥೆಯ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ, ಸಂಘಸಂಸ್ಥೆಗಳ ಈ ಸಾಮಾಜಿಕ ಕಾರ್ಯಕ್ರಮ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಹಸಿದವರಿಗೆ ಅನ್ನ ನೀಡಿವುದೇ ಸರ್ವಶ್ರೇಷ್ಠವಾದ ಕಾರ್ಯವಾಗಿದೆ ಇಂಥಹ ಕಾರ್ಯಕ್ರಮ ಶಿಕ್ಷಣ ವ್ಯವಸ್ಥೆಯಲ್ಲಿ ರೂಪಿಸಿಕೊಂಡಿರುವುದು ಶ್ಲಾಘನೀಯ ಎಂದರು.

    ಈ ಸಂದರ್ಭದಲ್ಲಿ ಪಂಚವರ್ಣ ಸಂಸ್ಥೆ ಮೂವರು ಮತ್ತು ಇತರ ಮೂವರು ವಿದ್ಯಾರ್ಥಿಗಳ ಶಿವಿನ್ ಗ್ರೂಪ್ ಬೆಂಗಳೂರು ಸಹಯೋಗದೊಂದಿಗೆ ಶೈಕ್ಷಣಿಕ ಪರಿಕರ, ಅರ್ಥಿಕ ಸಹಾಯ, ಉಡುಪುಗಳನ್ನು ಹಸ್ತಾಂತರಿಸಲಾಯಿತು.

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.

    ಕೋಟ ಮಣೂರು ಗೀತಾನಂದ ಫೌಂಡೇಶನ್ ನಿರ್ದೇಶಕ ರಕ್ಷಿತ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಶಿವಿನ್ ಗ್ರೂಪ್ ಬೆಂಗಳೂರು ಇದರ ನರೇಶ್ ಭಟ್, ಪಂಚವರ್ಣ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಯುವಕ ಮಂಡಲದ ಸ್ಥಾಪಕ ಸದಸ್ಯ ನರಸಿಂಹ ಗಾಣಿಗ, ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು, ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಸಮಾಜ ಸೇವಕ ರಮೇಶ್ ಭಟ್, ಪಂಚರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು. ಪಂಚವರ್ಣ ಮಹಿಳಾ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ವಂದಿಸಿದರು.

  • ರೋಟರಿ ಜಿಲ್ಲೆ 3182 ವಲಯ 2ರ ಸಹಾಯಕ ಗವರ್ನರ್ ಆಗಿ ಕೆ. ನರಸಿಂಹ ಪ್ರಭು ಆಯ್ಕೆ.

    ರೋಟರಿ ಜಿಲ್ಲೆ 3182 ವಲಯ 2ರ ಸಹಾಯಕ ಗವರ್ನರ್ ಆಗಿ ಕೆ. ನರಸಿಂಹ ಪ್ರಭು ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…

    ಕೋಟ: ರೋಟರಿಯ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಕಂದಾಯ ಜಿಲ್ಲೆಯನ್ನು ಒಳಗೊಂಡ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182ರ 2023-2024ನೇ ಸಾಲಿನ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರು ರೋಟರಿ ಕ್ಲಬ್‍ಗಳಾದ ಕೋಟ – ಸಾಲಿಗ್ರಾಮ, ಕೋಟ ಸಿಟಿ, ತೆಕ್ಕಟ್ಟೆ, ಕೊಟೇಶ್ವರ, ಅಂಪಾರ್, ಶಂಕರನಾರಾಯಣ ಒಳಗೊಂಡ 6 ಕ್ಲಬ್‍ಗಳ ವಲಯ 2ಕ್ಕೆ ಸಹಾಯಕ ಗವರ್ನರ್ ಆಗಿ ಕೆ. ನರಸಿಂಹ ಪ್ರಭು ಇವರನ್ನು ನಿಯುಕ್ತಿಗೊಳಿಸಿದ್ದಾರೆ. ಇವರು ಕೋಟ – ಸಾಲಿಗ್ರಾಮ ರೋಟರಿ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದು, ಜಿಲ್ಲೆಯಲ್ಲಿ ಹಲವಾರು ಹುದ್ದೆಯನ್ನು ಪಡೆದ ಅನುಭವಿ ರೋಟರಿ ಸದಸ್ಯರಾಗಿದ್ದಾರೆ.

  • ಕಾರಂತ ಯಕ್ಷಾಂತರಂಗ ಪ್ರಶಸ್ತಿಗೆ ಹಿರಿಯ ಹಾಸ್ಯ ಯಕ್ಷ ಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗ ಆಯ್ಕೆ

    ಕಾರಂತ ಯಕ್ಷಾಂತರಂಗ ಪ್ರಶಸ್ತಿಗೆ ಹಿರಿಯ ಹಾಸ್ಯ ಯಕ್ಷ ಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ ಇವರ ಆಶ್ರಯದಲ್ಲಿ ಯಕ್ಷ ವಿಭೂಷಣ ನೂತನ ಯಕ್ಷಾಭರಣ ಹಾಗೂ ಸಪ್ತಮ ವಾರ್ಷಿಕೋತ್ಸವ ಸಂಭ್ರಮ,ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪ್ರದಾನ ಸಮಾರಂಭ ಜು.1ರಂದು ಹಯಗ್ರೀವ ಕಲ್ಯಾಣ ಮಂಟಪ ತೆಕ್ಕಟ್ಟೆ ಇಲ್ಲಿ ನಡೆಯಲಿದೆ.

    ಕಾರಂತ ಯಕ್ಷಾಂತರಂಗ ಪ್ರಶಸ್ತಿಗೆ ಹಿರಿಯ ಹಾಸ್ಯ ಯಕ್ಷ ಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗ ಆಯ್ಕೆಯಾಗಿದ್ದಾರೆ. ಅಲ್ಲದೆ ಸಂಸ್ಥೆಯ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯಕ್ಷಾಂತರಂಗದ ಕೃಷ್ಣಮೂರ್ತಿ ಉರಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ವಿಶೇಷ ಉಪನ್ಯಾಸ

    ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ವಿಶೇಷ ಉಪನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ದೇಶದಾದ್ಯಂತ ಡ್ರಗ್ಸ್, ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್‍ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ ನಿರ್ಣಾಯಕವಾದುದು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳಿನಲ್ಲಿ ಬದಲಾವಣೆ ತಂದು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಧಾಕರ್ ಹೇಳಿದರು.

    ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಶಮುಕ್ತ ಭಾರತ ಅಭಿಯಾನದಡಿಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ರೇಂಜರ್ಸ್ ಲೀಡರ್ ಅರ್ಪಣಾ ಶೆಟ್ಟಿ ವಂದಿಸಿ, ರೋವರ್ಸ್ ಲೀಡರ್ ಸತೀಶ್ ಶೆಟ್ಟಿ ಹೆಸ್ಕತ್ತೂರ್ ಕಾರ್ಯಕ್ರಮ ನಿರೂಪಿಸಿದರು.

    ಇದೇ ಸಂದರ್ಭ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರಿಗಾಗಿ ಮಾದಕ ವ್ಯಸನದ ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ಪ್ರಥಮ ಬಿಬಿಎನ ಶ್ರದ್ಧಾ ಪ್ರಥಮ, ದ್ವಿತೀಯ ಬಿ.ಎಸ್ಸಿ.ಯ ರಕ್ಷತ್ ದ್ವಿತೀಯ, ಪ್ರಥಮ ಬಿಸಿಎ ವಿಭಾಗದ ಪೂಜಾ ಆಚಾರ್ ತೃತಿಯ ಸ್ಥಾನ ಪಡೆದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮ ಅಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.