ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿಯ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಕಂದಾಯ ಜಿಲ್ಲೆಯನ್ನು ಒಳಗೊಂಡ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182ರ 2023-2024ನೇ ಸಾಲಿನ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರು ರೋಟರಿ ಕ್ಲಬ್‍ಗಳಾದ ಕೋಟ – ಸಾಲಿಗ್ರಾಮ, ಕೋಟ ಸಿಟಿ, ತೆಕ್ಕಟ್ಟೆ, ಕೊಟೇಶ್ವರ, ಅಂಪಾರ್, ಶಂಕರನಾರಾಯಣ ಒಳಗೊಂಡ 6 ಕ್ಲಬ್‍ಗಳ ವಲಯ 2ಕ್ಕೆ ಸಹಾಯಕ ಗವರ್ನರ್ ಆಗಿ ಕೆ. ನರಸಿಂಹ ಪ್ರಭು ಇವರನ್ನು ನಿಯುಕ್ತಿಗೊಳಿಸಿದ್ದಾರೆ. ಇವರು ಕೋಟ – ಸಾಲಿಗ್ರಾಮ ರೋಟರಿ ಕ್ಲಬ್‍ನ ಹಿರಿಯ ಸದಸ್ಯರಾಗಿದ್ದು, ಜಿಲ್ಲೆಯಲ್ಲಿ ಹಲವಾರು ಹುದ್ದೆಯನ್ನು ಪಡೆದ ಅನುಭವಿ ರೋಟರಿ ಸದಸ್ಯರಾಗಿದ್ದಾರೆ.












