Category: ಸುದ್ದಿ

  • ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ವಿಶ್ವ ರಕ್ತದಾನ ದಿನಾಚರಣೆ

    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ವಿಶ್ವ ರಕ್ತದಾನ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ, ಜೆಸಿಐ ಕುಂದಾಪುರ ಸಿಟಿ ಹಾಗೂ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನ ದಿನಾಚರಣೆಯ ಪ್ರಯುಕ್ತ ನಡೆದ ರಕ್ತದಾನ ಶಿಬಿರವನ್ನು ಕುಂದಾಪುರದ ತಹಶೀಲ್ದಾರರಾದ ಶೋಭಲಕ್ಷ್ಮೀ ಉದ್ಘಾಟಿಸಿದರು.

    ಈ ಸಂದರ್ಭ ರಕ್ತದಾನದ ಮಹತ್ವದ ಕುರಿತು ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಸೀತಾರಾಮ ನಕ್ಕತ್ತಾಯ, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಚೇರ್‍ಮೆನ್ ಜಯಕರ್ ಶೆಟ್ಟಿ, ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ| ಸೋನಿ ಡಿಕೋಸ್ತಾ, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಸದಸ್ಯರಾದ ಶಿವರಾಮ್ ಶೆಟ್ಟಿ, ಸೀತರಾಮ ಶೆಟ್ಟಿ, ಮುತ್ತಯ್ಯ ಶೆಟ್ಟಿ, ಗಣೇಶ್ ಆಚಾರ್, ಸದಾನಂದ ಶೆಟ್ಟಿ, ಅಬ್ದುಲ್ ಬಶೀರ್ ಹಾಗೂ ಕುಂದಾಪುರ ಸಿಟಿ ಜೆಸಿಐನ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ವಿಜಯ್ ಭಂಡಾರಿ, ಪ್ರಶಾಂತ್ ಹವಾಲ್ದಾರ್, ಜೇಸಿರೆಟ್ ಅಧ್ಯಕ್ಷೆ ಪ್ರೇಮ, ಪೂರ್ವ ಜೇಸಿರೆಟ್ ಅಧ್ಯಕ್ಷೆ ಸುವರ್ಣಾ ಅಲ್ಮೇಡಾ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜಕರಾದ ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಉಪಸ್ಥಿತರಿದ್ದರು.

    ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿ, ಅವಿತಾ ಎಮ್. ಕೊರೆಯಾ ನಿರೂಪಿಸಿದರು.

  • ತೆಕ್ಕಟ್ಟೆ : ಮಾಲಾಡಿಯಲ್ಲಿ ಬೋನಿಗೆ ಬಿದ್ದ 8ನೇ ಚಿರತೆ!

    ತೆಕ್ಕಟ್ಟೆ : ಮಾಲಾಡಿಯಲ್ಲಿ ಬೋನಿಗೆ ಬಿದ್ದ 8ನೇ ಚಿರತೆ!

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಇದೀಗ 8ನೇ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಈ ಹಿಂದೆ ಏಳು ಚಿರತೆಗಳು ಇಲ್ಲಿ ಓಡಾಡಿದ್ದನ್ನು ಇಲಾಖೆ ಬೋನಿಟ್ಟು ಬಂಧಿಸಿತ್ತು. ಮತ್ತೆ ಮತ್ತೆ ಈ ಪ್ರದೆಶದಲ್ಲಿ ಚಿರತೆಗಳು ಓಡಾಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಮತ್ತೆ 8ನೇ ಚಿರತೆಯ ಬಂಧನವಾಗಿದ್ದು ಇಲ್ಲಿನ ಜನ ಭಯಭೀತರಾಗಿದ್ದಾರೆ.

    ಕಳೆದ ವಾರವಷ್ಟೇ ಇಲ್ಲಿಗೆ ಸಮೀಪದ ಕೆಲವು ಮನೆಗಳ ಅಂಗಳಕ್ಕೆ ಬಂದು ನಾಯಿ ಎಳೆದೊಯ್ಯಲು ಪ್ರಯತ್ನಿಸಿತ್ತು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಇಟ್ಟ ಬೋನಿಗೆ ಅಂದಾಜು ನಾಲ್ಕರಿಂದ ಐದು ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ.

  • ಕುಂದಾಪುರ: ನಾಳೆಯಿಂದ ಪೀರ್‌ಮಹಮ್ಮದ್ ವರದಿ ಜ್ಯಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

    ಕುಂದಾಪುರ: ನಾಳೆಯಿಂದ ಪೀರ್‌ಮಹಮ್ಮದ್ ವರದಿ ಜ್ಯಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಡಾ. ಮಹಮ್ಮದ್ ಫೀರ್ ವರದಿ ಜ್ಯಾರಿಗೆ ಆಗ್ರಹಿಸಿ ನಾಳೆ ದಿನಾಂಕ 14ರಿಂದ ನಾಡಾ ಗ್ರಾಮ ಪಂಚಾಯತ್ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ ತಿಳಿಸಿದ್ದಾರೆ.

    ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ 40 ಕೊರಗ ಕುಟುಂಬಗಳಿಗೆ ಡಾ. ಮಹ್ಮದ್ ಫೀರ್ ವರದಿ ಪ್ರಕಾರ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿ‌ ನೀಡಬೇಕು. ಆದರೆ ವರದಿಯನ್ನು ಸರ್ಕಾರ ಜಾರಿಗೆ ತರದೆ ಕೊರಗ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಹಾಗಾಗಿ ನಾಡ ಪಂಚಾಯತ್ ವ್ಯಾಪ್ತಿಯ ಪ್ರತಿ ಕೊರಗ ಕುಟುಂಬಗಳಿಗೆ ಭೂಮಿಯನ್ನು ನೀಡಬೇಕು ಹಾಗೂ ಜೈನರ ಕಾಲದಿಂದಲೂ 300 ಅಧಿಕ ವರ್ಷದಿಂದ ವಾಸವಿರುವ, ನಾಡ ಗ್ರಾಮ ಸರ್ವೇ ನಂಬರ್ 41/1 ರ 4.17 ಎಕರೆ ಭೂಮಿ ಕೊರಗ ಕುಟುಂಬದ ಸ್ವಾಧೀನ ಇದೆ. ಕೊರಗ ಸಮುದಾಯದ ಶೈಕ್ಷಣಿಕ ಮತ್ತು ತಿಳುವಳಿಕೆಯ ಕೊರತೆಯಿಂದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಿರಿಯರು ಸರಿಯಾಗಿ ನಿರ್ವಹಿಸಿಲ್ಲ. ಕೊರಗರ ಈ ದೌರ್ಬಲ್ಯಗಳನ್ನು ದುರುಪಯೋಗ ಮಾಡಿಕೊಂಡು ಸ್ಥಳೀಯ ಅಂದಿನ ಜಮೀನ್ದಾರರು ಅವರ ಹೆಸರಿಗೆ ದಾಖಲೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಳಿವಿನಂಚಿನಲ್ಲಿರುವ ಕೊರಗರ ಅಭಿವೃದ್ಧಿಗೆ ಸರ್ಕಾರವೆ 1994ರಲ್ಲಿ ನೇಮಿಸಿ ಪಡೆದಿರುವ ಡಾ. ಮಹ್ಮದ್ ಫೀರ್ ಆಯೋಗದ ವರದಿ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಆಶಾದಾಯಕವಾಗಿದೆ. ಇಂತಹ ಮಹತ್ವದ ವರದಿ ಜಾರಿಗೆ ತರಲು ಸರಕಾರ ವಿಫಲವಾಗಿದೆ. ಡಾಕ್ಟರ್ ಮಹಮದ್ ಪೀರ್ ವರದಿ ಪ್ರಕಾರ ಮೊದಲ ಹಂತದಲ್ಲಿ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿಯನ್ನು ನೀಡಿ, ಕೃಷಿ ತರಬೇತಿ, ಕೃಷಿ ಪರಿಕರಗಳ ಜೊತೆಗೆ ಸಹಾಯ ಒದಗಿಸಿ ಕೃಷಿ ಪೂರ್ವ ನಾಗರಿಕತೆಯಿಂದ ಮುಂದಿನ ಹಂತಕ್ಕೆ ಸಮುದಾಯವನ್ನು ಕೊಂಡೊಯ್ಯುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಹೇಳಿದ್ದಾರೆ.

    ಪಡುಕೋಣೆ ಕೊರಗರ ಭೂಮಿ ವಿವಾದವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿ ನ್ಯಾಯ ಒದಗಿಸಲು ಮತ್ತು ನಾಡ ಪಂಚಾಯತ್ ವ್ಯಾಪ್ತಿಯ ಕೊರಗ ಕುಟುಂಬಗಳ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದು ಮುಖಂಡರಾದ ವಿ. ಗಣೇಶ ಕೊರಗ, ಲಕ್ಷ್ಮಣ ಬೈಂದೂರು, ಮಹಬಲ ಕೋಟ, ಗೌರಿ ಕೆಂಜೂರು ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಮುಖಂಡರಾದ ಡಾ. ಎಸ್. ವೈ.ಗುರುಶಾಂತ, ಡಾಕ್ಟರ್ ಕೃಷ್ಣಪ್ಪ ಕೊಂಚಾಡಿ ಭಾಗವಹಿಸುತ್ತಾರೆ ಎಂದು ಶ್ರೀಧರ ನಾಡ ಹೇಳಿದ್ದಾರೆ.

  • ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :2023 – 24 ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶನಿವಾರದಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.

    ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ಯವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿರವರು ಶೈಕ್ಷಣಿಕ ಕಾರ್ಯ ಯೋಜನೆಗಳ ಕುರಿತು ಮಾಹಿತಿ ನೀಡಿ, ಶೈಕ್ಷಣಿಕ ಪ್ರಗತಿಗೆ ಉಪನ್ಯಾಸಕರೊಂದಿಗೆ ಪೋಷಕರು ಸಹಕರಿಸಬೇಕು ಎನ್ನುವುದರ ಕುರಿತು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

    ವೇದಿಕೆಯಲ್ಲಿ ಆಡಳಿತಾಧಿಕಾರಿ ಪ್ರಭಾಕರ್ ಶ್ಯಾನುಭೋಗ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕ ರಮಾಕಾಂತ್ ರೇವಣಕರ್ ಉಪಸ್ಥಿತರಿದ್ದರು.

    ರಸಾಯನ ಶಾಸ್ತ್ರ ಉಪನ್ಯಾಸಕಿ ಅನುಷಾ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸ್ಮಿತಾ ವಂದಿಸಿ, ಇಂಗ್ಲೀಷ್ ಉಪನ್ಯಾಸಕಿ ಸುಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

  • ಕೋಟ :ಗಿಳಿಯಾರು ಜನಸೇವಾ ಟ್ರಸ್ಟ್‌ನ ಹಸಿರು ಅಭಿಯಾನ

    ಕೋಟ :ಗಿಳಿಯಾರು ಜನಸೇವಾ ಟ್ರಸ್ಟ್‌ನ ಹಸಿರು ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗಿಳಿಯಾರು ಜನಸೇವಾ ಟ್ರಸ್ಟ್‌ನ ಹಸಿರು ಅಭಿಯಾನದ ಮೊದಲ ಕಾರ್ಯಕ್ರಮ ಟೀಮ್ ಅಭಿಮತ ನೇತೃತ್ವದಲ್ಲಿ ಐರೋಡಿ, ಗೋಳಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಔಷಧೀಯ ಗುಣವುಳ್ಳ ಲಕ್ಷ್ಮಣ ಫಲ ಗಿಡಗಳ ವಿತರಿಸುವ ಮೂಲಕ ಚಾಲನೆಗೊಂಡಿತು.

    ಸ್ಥಳೀಯರಾದ ರಮೇಶ್ ಕಾರಂತರಿಂದ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರು ರವರಿಗೆ ಸಸಿ ನೀಡುವ ಮೂಲಕ ಶುಭ ಕೋರಿದರು, ಈ ಸಂದರ್ಭದಲಿ ಜನಸೇವೆ ಟ್ರಸ್ಟ್‌ನ ಅಧ್ಯಕ್ಷ ವಸಂತ್ ಗಿಳಿಯಾರು, ಕಾರ್ಯಕಾರಿ ಸಮಿತಿಯ ಸದಸ್ಯ ಸಫಲ್ ಶೆಟ್ಟಿ, ಕಾರ್ಯ ನಿರ್ವಾಹಣಾಧಿಕಾರಿ ರಾಘವೇಂದ್ರ ರಾಜ್ ಸಾಸ್ತಾನ ಉಪಸ್ಥಿತರಿದ್ದರು.

  • ಕೋಟ :ಪಾಂಡೇಶ್ವರ ಶಾಲೆಗೆ ದಾನಿಗಳ ನೆರವಿನಿಂದ ನೋಟ್‍ಬುಕ್ ವಿತರಣೆ

    ಕೋಟ :ಪಾಂಡೇಶ್ವರ ಶಾಲೆಗೆ ದಾನಿಗಳ ನೆರವಿನಿಂದ ನೋಟ್‍ಬುಕ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಾಂಡೇಶ್ವರ ಶಾಲೆಯ ಶಿಕ್ಷಕ ಕೃಷ್ಣರ ಮನವಿ ಮೇರೆಗೆ ಪಾಂಡೇಶ್ವರ ಶಾಲೆಯ ಹಳೆ ವಿದ್ಯಾರ್ಥಿ ರವೀಶ್ ಶ್ರೀಯಾನ್ ನಿರ್ದೇಶನದ ಹಿನ್ನಲ್ಲೆಯಲ್ಲಿ ಕೋಟತಟ್ಟು ಬಾರಿಕೆರೆ ಉದ್ಯಮಿ ಶಬರಿ ಕನ್‍ಸ್ಟ್ರಕ್ಷನ್ ಮಾಲಿಕ ಸುರೇಶ ಕಾಂಚನ್ ಇವರಿಂದ ಸಾಸ್ತಾನ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 72 ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಭಾನುವಾರ ನಡೆಯಿತು.

    ಮೊಗವೀರ ಗ್ರಾಮ ಸಭಾ ಮೂಡಹಡು ಇದರ ಉಪ ಗುರಿಕಾರ ಮತ್ತು ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯ ರವೀಶ್ ಶ್ರೀಯಾನ್ , ಕೋಟತಟ್ಟು ಬಾರಿಕೆರೆ ಉದ್ಯಮಿ ಶಬರಿ ಕನ್‍ಸ್ಟ್ರಕ್ಷನ್ ಮಾಲಿಕ ಸುರೇಶ ಕಾಂಚನ್,ಎಸ್‍ಡಿಎಮ್‍ಸಿ ಕಾರ್ಯದರ್ಶಿ ಸುರೇಶ ಪೂಜಾರಿ, ಶಾಲಾ ಅಧ್ಯಾಪಕ ಕೃಷ್ಣ ಪೂಜಾರಿ, ಶಾಲಾ ಹಳೆ ವಿದ್ಯಾರ್ಥಿ ಶೇಖರ್ ಪೂಜಾರಿ ಮೂಡಕಟ್ಟು, ಮತ್ತು ಮೊಗವೀರ ಗ್ರಾಮ ಸಭಾ ಮಾಜಿ ಕಾರ್ಯದರ್ಶಿ ಕೃಷ್ಣ ಬಂಗೇರ ಮತ್ತು ಮೊಗವೀರ ಗ್ರಾಮ ಸದಸ್ಯರಾದ ಸಚಿನ್ ಶ್ರೀಯಾನ್, ಅಭಿಜಿತ್ ಕಾಂಚನ್, ಶೇಖರ್ ಕಾಂಚನ್, ಕವಿತಾ ನಂದಿಮನೆ, ಉಪಸ್ಥಿತರಿದ್ದರು.

  • ಎಸ್.ಎಸ್.ಎಲ್.ಸಿ ರ್ಯಾಂಕ್ ವಿದ್ಯಾರ್ಥಿ ಸಾತ್ವಿಕ್‍ಗೆ ಅಭಿನಂದನೆ

    ಎಸ್.ಎಸ್.ಎಲ್.ಸಿ ರ್ಯಾಂಕ್ ವಿದ್ಯಾರ್ಥಿ ಸಾತ್ವಿಕ್‍ಗೆ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಸಮೀಪದ ಬಾರಿಕರೆ ರಾಜು ಮೊಗವೀರ ಮತ್ತು ಪ್ರೇಮಾ ಅವರ ಪುತ್ರ ಸಾತ್ವಿಕ್ ಆರ್. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡಾ 99.5% ಅಂಕ ಗಳಿಸಿ ತೇರ್ಗಡೆಗೊಂಡಿದ್ದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ ಹಿನ್ನಲ್ಲೆಯಲ್ಲಿ ನಮ್ಮ ವಿ. ಥರ್ಟಿನ್ ವಾಟ್ಸ್’ಆಪ್ ಗ್ರೂಪಿನ ಸದಸ್ಯರಾದ ಅಶೋಕ್ ಎಲ್. ಮಂದಾರ್ತಿ ಅವರ ಮುಂದಾಳತ್ವದಲ್ಲಿ ಸಾತ್ವಿಕ್’ರನ್ನು ಗೌರವಿಸಿ ಗುರುತಿಸಲಾಯಿತು. ಈ ಸಂದರ್ಭದಲ್ಲಿ ಗ್ರೂಪ್‍ನ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

  • ಬೈಂದೂರು :ಹೆಬ್ಬಾಳ್ಕರ್ ಭೇಟಿ ಮಾಡಿದ ಸಂಸದ ಬಿವೈಆರ್ – ಕಡಲ್ಕೊರೆತದ ಹಾನಿಗಳಿಗಳಿಗೆ ಸ್ಪಂದಿಸಲು ಮನವಿ

    ಬೈಂದೂರು :ಹೆಬ್ಬಾಳ್ಕರ್ ಭೇಟಿ ಮಾಡಿದ ಸಂಸದ ಬಿವೈಆರ್ – ಕಡಲ್ಕೊರೆತದ ಹಾನಿಗಳಿಗಳಿಗೆ ಸ್ಪಂದಿಸಲು ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕ್ಕರ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭ ಸಂಸದ ರಾಘವೇಂದ್ರ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಕಡಲಕೊರೆತದಿಂದ ಉಂಟಾದ ಪ್ರದೇಶಗಳಲ್ಲಿ ಹಾನಿಯ ಬಗ್ಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸೂಕ್ತ ಕ್ರಮಕೈಕೊಳ್ಳುವಂತೆ ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಇದೇ ಸಂದರ್ಭ ನೂತನವಾಗಿ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಂಸದ ರಾಘವೇಂದ್ರ ಶುಭ ಹಾರೈಸಿದರು.

  • ಬೈಂದೂರು :ತ್ರಾಸಿಯಲ್ಲಿ ಬಸ್ಸು ಡಿಕ್ಕಿ: ಪಾದಾಚಾರಿ ಸಾವು

    ಬೈಂದೂರು :ತ್ರಾಸಿಯಲ್ಲಿ ಬಸ್ಸು ಡಿಕ್ಕಿ: ಪಾದಾಚಾರಿ ಸಾವು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಸ್ತೆ ಬದಿಯಲ್ಲಿ ನಿಂತಿದ್ದ ಪಾದಾಚಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತ್ರಾಸಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾನುವಾರ ರಾತ್ರಿ ನಡೆದಿದೆ. ಸಾಸ್ತಾನ ಮೂಲದ ರಾಜು ಪೂಜಾರಿ ಎಂದು ಗುರುತಿಸಲಾಗಿದೆ.

    ರಾಜು ಪೂಜಾರಿ ಭಾನುವಾರ ರಾತ್ರಿ ತ್ರಾಸಿಯ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಡಿವೈಡರ್‌ ಬಳಿ ರಸ್ತೆಯ ಅಂಚಿನಲ್ಲಿ ರಾಜು ಪೂಜಾರಿ ರಸ್ತೆ ದಾಟಲು ನಿಂತಿದ್ದರು. ಇದೇ ಸಂದರ್ಭ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಪ್ರಯಾಣಿಸುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಾಜು ಪೂಜಾರಿ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಗಂಭೀರ ಏಟಾಗಿದ್ದು, ಎರಡು ಕಾಲಿನ ಮೂಳೆ ಮುರಿದು ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರಾದ ಪ್ರವೀಣ್ ಒಲಿವೆರಾ, ಲಿಪ್ಟನ್ ಒಲಿವೆರಾ, ದೇವರಾಜ್ ಕೊಠಾರಿ ಮೊದಲಾದವರು ಗಂಗೊಳ್ಳಿ 24*7 ಆಪತ್ಪಾಂಧವ ಅಂಬ್ಯುಲೆನ್ಸ್‌ನಲ್ಲಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಟ – ಬಿಟ್ಟಿ ಭಾಗ್ಯಗಳಿಗಿಂತ ರೈತರ ಕಲ್ಯಾಣಕ್ಕೆ ಸರಕಾರ ಮುನ್ನುಡಿ ಬರೆಯಲಿ – ಕೆ.ವಿ ರಮೇಶ್ ರಾವ್ ಆಗ್ರಹ

    ಕೋಟ – ಬಿಟ್ಟಿ ಭಾಗ್ಯಗಳಿಗಿಂತ ರೈತರ ಕಲ್ಯಾಣಕ್ಕೆ ಸರಕಾರ ಮುನ್ನುಡಿ ಬರೆಯಲಿ – ಕೆ.ವಿ ರಮೇಶ್ ರಾವ್ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರಕಾರ ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದನ್ನು ಬಿಟ್ಟು ಬಿಟ್ಟಿ ಭಾಗ್ಯಗಳ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ ಇದು ವಿಪರ್ಯಾಸದ ಸಂಗತಿ ಎಂದು ಪಾಂಡೇಶ್ಚರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ಮಣೂರು ಫ್ರೆಂಡ್ಸ್ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ 26ನೇ ರೈತರೆಡೆಗೆ ನಮ್ಮ ನಡಿಗೆ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಕೃಷಿಕನ ಪಾಲು ಮಹತ್ತರವಾದದ್ದು ಅಂತಹ ರೈತರ ಕಲ್ಯಾಣಕ್ಕೆ ಸರಕಾರ ಹೊಸ ಹೊಸ ಯೋಜನೆಗಳ ರೂಪಿಸಬೇಕಾದ ಅಗತ್ಯತೆಗಳನ್ನು ಒತ್ತಿ ಹೇಳಿದರಲ್ಲದೆ ಈ ಬಗ್ಗೆ ಸೂಕ್ತ ಯೋಜನೆ ರೂಪಿಸದಿದ್ದರೆ ಕೃಷಿ ಹಿನ್ನಡೆ ಕಾಣುವುದು ಖಚಿತವಾಗಿದೆ.ಒಂದು ಸಂಘಸಂಸ್ಥೆಗಳು ರೈತರ ಮನೆಬಾಗಿಲಿಗೆ ಹೋಗಿ ಪ್ರೋತ್ಸಾಹ ನೀಡುತ್ತಿದೆ ಆದರೆ ಸರಕಾರಕ್ಕೆ ಈ ಬಗ್ಗೆ ಕಾಳಜಿ ಇಲ್ಲದಿರುವುದು ಶೋಚನೀಯವಾಗಿದೆ. ಇಲ್ಲಿ ರಾಜಕೀಯವಾಗಿ ಮಾತನ್ನು ಉಲ್ಲೇಖಿಸುವುದಲ್ಲ ಪ್ರತಿ ಬಾರಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೂ ರೈತರನ್ನು ನಿರ್ಲಕ್ಷಿಸುತ್ತಿದೆ ಇದು ಬೇಸರದ ಸಂಗತಿ ಎಂದು ಪಂಚವರ್ಣ ಸಂಸ್ಥೆಯ ರೈತರ ಗೌರವಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಎಂದು ಶ್ಲಾಘಿಸಿದರು.

    ಈ ಸಂದರ್ಭದಲ್ಲಿ ಕೋಟದ ಗಿಳಿಯಾರು ಹರ್ತಟ್ಟು ಶ್ರೀಧರ (ಸಿದ್ಧ) ದೇವಾಡಿಗ ಇವರನ್ನು ಗೌರವಿಸಿಲಾಯಿತು.
    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ವಾರ್ಡ ಸದಸ್ಯ ಪಾಂಡು ಪೂಜಾರಿ, ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಹರ್ತಟ್ಟು ಯುವಕ ಮಂಡಲದ ಅಧ್ಯಕ್ಷ ಹರೀಷ್ ದೇವಾಡಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಸ್ಥಳೀಯರಾದ ಗುರುವ ಬಂಗೇರ,ಚಂದ್ರ ಹಾಡಿಕೆರೆ,ದಿನೇಶ್ ಪೂಜಾರಿ,ಬಾಬು ಶೆಟ್ಟಿ, ವಿಶ್ವನಾಥ ಹೇರ್ಳೆ,ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸನ್ಮಾನ ಪತ್ರ ವಾಚಿಸಿದರು.ಸದಸ್ಯೆ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಸದಸ್ಯ ಶಶಿಧರ ತಿಂಗಳಾಯ ವಂದಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

    ರೈತರೆಡೆಯ ಅಂಗವಾಗಿ ಶ್ರೀಧರ (ಸಿದ್ಧ) ದೇವಾಡಿಗರ ಮನೆಯಂಗಳದಿ ಪರಿಸರಸ್ನೇಹಿ ಗಿಡ ನೆಟ್ಟು ,ಅವರಿಗೆ ಕೃಷಿ ಪರಿಕರ ನೀಡಿ ಗೌರವಿಸಲಾಯಿತು.