Category: ರಾಜಕೀಯ

  • ವಿಧಾನ ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ನಾಮಪತ್ರ ಸಲ್ಲಿಕೆ

    ವಿಧಾನ ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…
    ಮಂಗಳೂರು:
    ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಡಿ.10ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ನ.23ರಂದು ಬೆಳಿಗ್ಗೆ 11 ಗಂಟೆಗೆ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರಿಗೆ ನಾಮಪತ್ರ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವರಾದ ರಾಮನಾಥ ರೈ , ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಅಭಯಚಂದ್ರ ಜೈನ್‌, ಮಾಜಿ ಶಾಸಕ ಗೋಪಾಲ ಪೂಜಾರಿ, ರಾಜು ಪೂಜಾರಿ,
    ಪ್ರದೀಪ್ ಕುಮಾರ್ ಶೆಟ್ಟಿ, ಎಸ್ ಪ್ರಕಾಶಚಂದ್ರ ಶೆಟ್ಟಿ,ಪ್ರಸನ್ನ ಕುಮಾರ್ ಶೆಟ್ಟಿ, ಶೇಖರ ಪೂಜಾರಿ ಹಾಗೂ ಇತರ ಮುಖಂಡರು ಈ ಸಂದರ್ಭದಲ್ಲಿದ್ದರು.

  • ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಉದ್ಘಾಟನೆ

    ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಬೈಂದೂರು ಕ್ಷೇತ್ರ ಕೆ.ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಪಕ್ಷದ ಎಲ್ಲ ಮುಖಂಡರ ಸಹಕಾರದಿಂದ ಭದ್ರ ನೆಲೆ ಕಂಡುಕೊಂಡಿದೆ. ಪಕ್ಷ ಇನ್ನೂ ಕೂಡಾ ಪ್ರಬಲವಾಗಿ ಬೆಳೆಯಲು ಕ್ಷೇತ್ರದ ಹೃದಯ ಭಾಗದಲ್ಲಿ ಇಂದು ಆರಂಭಗೊಂಡಿರುವ ಕಛೇರಿ ಭದ್ರ ಬುನಾದಿಯಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

    ಅವರು ಬೈಂದೂರು ಸರ್ಕಲ್ ಬಳಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.






    ಕಾಂಗ್ರೆಸ್‍ನ ಸದಸ್ಯರ ನೊಂದಾವಣೆ ಈಗಾಗಲೇ ಆರಂಭವಾಗಿದೆ. ಪ್ರತೀ ಕ್ಷೇತ್ರದಲ್ಲಿ ಹೊಸತಾಗಿ 7 ಸಾವಿರ ಸದಸ್ಯರನ್ನು ನೇಮಿಸುವ ಮೂಲಕ ಜಿಲ್ಲೆಯಲ್ಲಿ 70 ಸಾವಿರ ಸದಸ್ಯರ ಸೇರಿಸುವ ಗುರಿ ಹೊಂದಲಾಗಿದೆ ಎಂದರು.

    ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಬೈಂದೂರು ಕ್ಷೇತ್ರದ ಹೃದಯ ಭಾಗದಲ್ಲಿ ಕಛೇರಿ ಆರಂಭಗೊಂಡಿದೆ. ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ, ಹೊಸ ಸದಸ್ಯರನ್ನು ಸೇರಿಸುವ ಕೆಲಸ ನಡೆಯುತ್ತಿದೆ. ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸವಿಟ್ಟಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ರಾಜು ಪೂಜಾರಿ, ವಾಸುದೇವ ಯಡಿಯಾಳ, ರಘುರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ತಾಪಂ ಮಾಜಿ ಸದಸ್ಯರಾದ ವಿಜಯ ಶೆಟ್ಟಿ, ಕೆ.ರಮೇಶ ಗಾಣಿಗ ಕೊಲ್ಲೂರು, ಜಗದೀಶ ದೇವಾಡಿಗ, ಉದಯ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಪ್ರಸನ್ನ ಕುಮಾರ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ, ಉದಯ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಶರತ ಕುಮಾರ್ ಶೆಟ್ಟಿ, ಅರವಿಂದ ಪೂಜಾರಿ, ರೋಶನ್ ಕುಮಾರ್ ಶೆಟ್ಟಿ, ಶಾಂತಿ ಪಿರೇರಾ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ ಬಿಜೆಪಿ ಯುವಮೋರ್ಚಾ ವತಿಯಿಂದ  280 ಫಲಾನುಭವಿಗಳಿಗೆ ಕನ್ನಡಕ ವಿತರಣೆ

    ಕುಂದಾಪುರ ಬಿಜೆಪಿ ಯುವಮೋರ್ಚಾ ವತಿಯಿಂದ 280 ಫಲಾನುಭವಿಗಳಿಗೆ ಕನ್ನಡಕ ವಿತರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಡಿಯಲ್ಲಿ ಬಿಜೆಪಿ ಯುವಮೋರ್ಚಾ ಕುಂದಾಪುರ ಆಯೋಜಿಸಿದ್ದ ನೇತ್ರ ಚಿಕಿತ್ಸಾ ಶಿಭಿರದಲ್ಲಿ ಕನ್ನಡಕ ಅವಶ್ಯಕತೆಯಿರುವ ಫಲಾನುಭವಿಗಳಿಗೆ ಮಂಗಳವಾರದಂದು ಬಿದ್ಕಲ್ ಕಟ್ಟೆಯ ನಾಗಲಕ್ಷ್ಮೀ ಸಭಾಭವನದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.


    280 ಫಲಾನುಭವಿಗಳಿಗೆ ಕನ್ನಡಕ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಯುವಮೋರ್ಚಾ ಅಧ್ಯಕ್ಷರಾದ ಅವಿನಾಶ್ ಉಳ್ತೂರು ವಹಿಸಿದ್ದರು.

    ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ , ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿಯ ಉಪಾಧ್ಯಕ್ಷ ರಾದ ಕಿರಣ್ ಕುಮಾರ್ ಕೊಡ್ಗಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಚೇತನ್ ಬಂಗೇರ, ಸುನೀಲ್ ಖಾರ್ವಿ, ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ, ಹಾಲಾಡಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಂಕರ್ ಮೊಗವೀರ, ಯುವಮೋರ್ಚಾ ಹಾಲಾಡಿ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಹರ್ಷ ಪೂಜಾರಿ, ಪ್ರಸಾದ್ ನೇತ್ರಾಲಯದ ಕನ್ನಡಕ ವಿಭಾಗದ ಡಾ.ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ವೇದಿಕೆಯಲ್ಲಿ ಅಗಲಿದ ಯುವನಟ ಪುನೀತ್ ರಾಜ್ ಕುಮಾರ್ ಮತ್ತು ಯುವಮೋರ್ಚಾ ಕಾರ್ಯದರ್ಶಿ ದೀಕ್ಷಿತ್ ಶೆಟ್ಟಿ ಕೇಸನಮಕ್ಕಿ ಅವರ ತಂದೆ ಭಾಸ್ಕರ್ ಶೆಟ್ಟಿ ಯವರಿಗೆ ಮೌನ ಪ್ರಾರ್ಥನೆ ಯೊಂದಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

    ಮಹಿಳಾ ಮೋರ್ಚಾ ಕುಂದಾಪುರ ಅಧ್ಯಕ್ಷೆ ರೂಪಾ ಪೈ ವಂದೇ ಮಾತರಂ ಗೀತೆ ಹಾಡಿದರು, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಖಾರ್ವಿ ಸ್ವಾಗತಿಸಿ, ಚೇತನ್ ನಿರೂಪಿಸಿದರು.

  • ಕೋಟ ಬ್ಲಾಕ್ ಕಾಂಗ್ರೆಸ್: ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ

    ಕೋಟ ಬ್ಲಾಕ್ ಕಾಂಗ್ರೆಸ್: ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಇಲ್ಲಿನ ಬ್ಲಾಕ್ ಕಾಂಗ್ರೆಸ್ ಹಾಗೂ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಗೂಡುದೀಪ ಸ್ಪರ್ಧೆ ನ.3ರಂದು ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವದೇಶಿ ಗೂಡು ದೀಪ ರಚಿಸಿ ಸ್ಪರ್ಧೆಗೆ ಭಾಗವಹಿಸಬೇಕು ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಹೇಳಿದರು.

    ಅವರು ಭಾನುವಾರ ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ದೀಪಾವಳಿಯ ಹಬ್ಬದ ಪ್ರಯುಕ್ತ ಗೋಪುಜೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಸಂಘಟಿಸುತ್ತಿದ್ದು, ಈ ಬಾರಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಹಯೋಗದಲ್ಲಿ ಗೂಡುದೀಪ ಸ್ಪರ್ಧೆ ಸಂಘಟಿಸಿದ್ದೇವೆ. ಪ್ರಥಮ ರೂ.8 ಸಾವಿರ, ದ್ವಿತೀಯ ರೂ.5ಸಾವಿರ, ತೃತೀಯ ರೂ. ಎರಡುವರೆ ಸಾವಿರ ನೀಡಲಾಗುತ್ತಿದ್ದು, 3 ಸಮಾಧಾಕರ ಬಹುಮಾನವಿದೆ.ಜತೆಗೆ ಗೌರವ ಸ್ಮರಣಿಕೆ ವಿಜೇತರಿಗೆ ನೀಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ,ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಟರಾಜ್ ಹೊಳ್ಳ,ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ಅಮೀನ್,ರವೀಂದ್ರ ಕಾಮತ್,ಸದಾನಂದ ತೆಕ್ಕಟ್ಟೆ,ರಕ್ಷಿತ್ ಪೂಜಾರಿ,ಶಂಕರ್ ಬಂಗೇರ,ಗಣೇಶ್ ನೆಲ್ಲಿಬೆಟ್ಟು,ರವಿ ಪೂಜಾರಿ,ದಿನೇಶ್ ಬಂಗೇರ,ಆನಂದ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

    ಗೂಡುದೀಪದ ಪೋಸ್ಟರ್ ಬಿಡುಗಡೆ
    ಕೋಟ ಬ್ಲಾಕ್ ಕಾಂಗ್ರೆಸ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾರ್ವಜನಿಕ ಗೂಡುದೀಪ ಸ್ಪರ್ಧೆಯ ಪೋಸ್ಟರ್‍ರನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಬಿಡುಗಡೆಗೊಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ವಹಿಸಿದ್ದರು.

  • ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ: ಶಿಕ್ಷಣ ಸಚಿವ ಬಿ. ಸಿ. ನಾಗೇಶ್

    ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ: ಶಿಕ್ಷಣ ಸಚಿವ ಬಿ. ಸಿ. ನಾಗೇಶ್

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ವ್ಯಕ್ತಿಗಿಂತ ಸಂಘಟನೆ ದೊಡ್ಡದು ಎಂಬ ಸಿದ್ಧಾಂತ ಹೊಂದಿದ ಭಾರತೀಯ ಜನತಾ ಪಕ್ಷ, ಸಂಘಟನೆಯ ಉದ್ದೇಶವಿರಿಸಿಕೊಂಡು ಪರಿಶುದ್ಧ ರಾಜಕೀಯದ ಮೂಲಕ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ ಎಂಬ ಕಾರಣಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸೌಕರ‍್ಯಗಳನ್ನು ತಲುಪಿಸುವ ಜವಾಬ್ದಾರಿ ಸಂಘಟನೆಯದ್ದಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.


    ಉಪ್ಪುಂದ ಮಾತೃಶ್ರಿ ಸಭಾಭವನದಲ್ಲಿ ಬುಧವಾರ ಬಿಜೆಪಿ ಬಂದೂರು ಮಂಡಲದ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿ ಅವರು ಶ್ರೇಷ್ಠ ನಾಯಕರಾಗಿದ್ದು, ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಒಂದು ವಾರಗಳ ಕಾಲ ಪಂಡಿತ ದೀನ್‌ದಯಾಳ್ ಅವರ ’ಅಂತ್ಯೋದಯವೇ ನಮ್ಮೆಲ್ಲರ ಜೀವನದ ಪರಮಗುರಿ’ ಎನ್ನುವ ಮಾತಿನಂತೆ ಸಂಘಟನೆಯು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈ ಧ್ಯೇಯವನ್ನಾಧರಿಸಿ ಬಂದೂರು ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಮರ್ಪಣಾ ಭಾವದಿಂದ ವಿವಿಧ ಸೇವಾ ಕಾರ್ಯವನ್ನು ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಬಂದೂರು ಬಿಜೆಪಿಯ ಸಂಘಟನೆಯು ಬಲಿಷ್ಠವಾಗಿದ್ದು, ಪಕ್ಷವು ನೀಡುವ ಎಲ್ಲ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ಕಾರ್ಯಾರೂಪಕ್ಕೆ ತರಲಾಗುತ್ತಿದೆ. ಆರೋಗ್ಯ ತಪಸಣಾ ಶಿಬಿರದಿಂದ ಈ ಭಾಗದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ ಎಂದರು.

    ಉಪ್ಪುಂದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ಬೈಂದೂರು ಆರೋಗ್ಯ ವೈದ್ಯಾಧಿಕಾರಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಮುಖಂಡರಾದ ಸುರೇಶ ಬಟವಾಡಿ, ಎ. ಆನಂದ ಖಾರ್ವಿ ಉಪ್ಪುಂದ, ಪ್ರಕಾಶ ಪೂಜಾರಿ, ಶ್ರೀಗಣೇಶ ಗಾಣಿಗ ಉಪ್ಪುಂದ, ಮಂಜುನಾಥ ದೇವಾಡಿಗ, ಜಗನ್ನಾಥ ಮೋಗವಿರ, ಅನಿತಾ ಆರ್.ಕೆ., ಶ್ರೀಧರ ಗಾಣಿಗ, ವಿನೋದ್ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಬಂದೂರು ಮಂಡಲದ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

  • ಕುಂದಾಪುರ ಬಿಜೆಪಿ ಕಾರ್ಯಕ್ಷೇತ್ರದಲ್ಲಿ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮ – ಕಿದಿಯೂರು ಉದಯ್ ಕುಮಾರ್ ಶೆಟ್ಟಿ

    ಕುಂದಾಪುರ ಬಿಜೆಪಿ ಕಾರ್ಯಕ್ಷೇತ್ರದಲ್ಲಿ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮ – ಕಿದಿಯೂರು ಉದಯ್ ಕುಮಾರ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಭಾರತೀಯ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಸಿಲರ್ ವಿಷನ್ ಪೌಂಡೇಷನ್ ಇವರ ಸಹಯೋಗದಲ್ಲಿ ಸೆ.17 ರಂದು ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಯಶಸ್ವಿ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ದ 293 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಮಂಗಳವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಜರುಗಿತು.


    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಾತನಾಡಿ ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿಯಿಂದ ದೇಶಾದ್ಯಂತ ಇಂತಹ ಅನೇಕ ಸೇವಾಕಾರ್ಯ ನಡೆದಿದೆ ಅದರಲ್ಲಿ ಕುಂದಾಪುರ ಮಂಡಲದಲ್ಲಿ ಜರುಗಿದ ಈ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮವಾಗಿದೆ ಇದು ರಾಜ್ಯಕ್ಕೆ ಮಾದರಿಯಾಗಿದೆ ಶ್ಲಾಘಿಸಿದರು.

    ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ ಮಹಿಳಾ ಮೋರ್ಚಾ ಜಿಲ್ಲಾದ್ಯಂತ ಮೊದಲಿಂದಲೂ ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು ಪ್ರಸ್ತುತ ಈ ಕಾರ್ಯಕ್ರಮವು ಕೂಡ ಜನಸೇವೆಗೆ ಮಾದರಿಯಾಗಿ ಮಾಡಿದ್ದೇವೆ ಎಂದು ಉಲ್ಲೇಖಿಸಿ ಕನ್ನಡಕದ ಬಳಕೆ ಮತ್ತು ಕಣ್ಣಿನ ಸುರಕ್ಷತೆಯ ಕುರಿತಾಗಿ ವಿವರಿಸಿದರು.

    ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ದೇಶಾದ್ಯಂತ ಬಡವರ್ಗದ ಜನತೆಗೆ ಸೇವೆಯ ರೂಪದಲ್ಲಿ ಜನ್ಮದಿನದ ಆಚರಣೆ ಆಗಬೇಕು ಎಂಬ ಪಕ್ಷದ ಕರೆಯ ಮೇರೆಗೆ ಸೆ. 17ರಿಂದ 20 ದಿನಗಳ ಕಾರ್ಯಕ್ರಮ ಕುಂದಾಪುರ ಭಾಗದಲ್ಲಿ ಅನೇಕ ಜನಪರ, ಜನಸೇವೆಯ ಕಾರ್ಯಕ್ರಮ ನಡೆದಿದೆ, ದೇಶದಲ್ಲಿ ಜನಸೇವೆ ಮೂಲಕ ಜನರನ್ನು ತಲುಪುವ ಪಕ್ಷವಿದ್ದರೆ ಅದು ಕೇವಲ ಭಾರತೀಯ ಜನತಾ ಪಾರ್ಟಿ ಮಾತ್ರ, ಅದು ಕರೋನದಂತ ಸಮಯದಲ್ಲೂ ಕೂಡ ಮನೆಯಲ್ಲಿ ಕುಳಿತುಕೊಳ್ಳದೆ ಜನತೆಯ ಮಧ್ಯ, ರೋಗಿಗಳ ಮಧ್ಯೆ ತೆರಳಿ ದುಡಿದಿದೆ, ಅಂತ ಪಕ್ಷದ ಕಾರ್ಯಕರ್ತರಾದ ನಮಗೆಲ್ಲ ಹೆಮ್ಮೆ ಎಂದರು.

    ಕಾರ್ಯಕ್ರಮದಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿ ಶೆಟ್ಟಿ, ಕೋಟ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಅಜಿತ್ ಕೊತ್ತಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಅಧ್ಯಕ್ಷೆ ರೂಪಾ ಪೈ ವಹಿಸಿದ್ದರು.

    ಕುಂದಾಪುರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ ನಿರೂಪಿಸಿ, ಅನಿತಾ ಶ್ರೀಧರ್ ವಂದಿಸಿದರು,

  • ಜನಸಾಮಾನ್ಯರಿಗೆ ಸದ್ಭಳಕೆ ನೀಡುವ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ -ಬಿ.ಅಪ್ಪಣ್ಣ ಹೆಗ್ಡೆ

    ಜನಸಾಮಾನ್ಯರಿಗೆ ಸದ್ಭಳಕೆ ನೀಡುವ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ -ಬಿ.ಅಪ್ಪಣ್ಣ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ದೇಣಿಗೆ ನೀಡುವ ಹಾಗೂ ಪರಿಶ್ರಮದ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸುವ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ, ಫಲಾನುಭವಿಗಳು ಇದರ ಪೂರ್ಣ ಪ್ರಯೋಜನೆ ಪಡೆಯಬೇಕು ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.


    ಅವರು ಭಾನುವಾರ ಬಿಜೆಪಿ ಜಿಲ್ಲಾ ಎಸ್.ಸಿ.ಮೋರ್ಚ, ಉಡುಪಿ ಜಿಲ್ಲೆ, ಕುಂದಾಪುರ ವಿಧಾನಸಭಾ ಕ್ಷೇತ್ರ ಎಸ್.ಸಿ.ಮೋರ್ಚ, ಪ್ರಸಾದ್ ನೇತ್ರಾಲಯ ಮಲ್ಟಿ ಸ್ಷೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ಉಡುಪಿ, ಕಾರ್ಲ್ ಜೈಸ್ ಇಂಡಿಯಾ(ಬೆಂಗಳೂರು) ಪ್ರೈ.ಲಿಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ಬಸ್ರೂರು ಕೋಳ್ಕರೆ ಸಮಾ‌ಜ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಅಂಗವಾಗಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜನರ ಆಶೋತ್ತರಗಳನ್ನು ಸೇವಾ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುವ ಜನಪ್ರತಿನಿಧಿಗಳ ಕಾರ್ಯ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಂಡಲದ ಎಸ್.ಸಿ.ಮೋರ್ಚ ಅಧ್ಯಕ್ಷ ‌ಮಹೇಶ್ ಕಾಳಾವರ ವಹಿಸಿದ್ದರು.

    ಈ ಸಂಧರ್ಭದಲ್ಲಿ ರಾಜ್ಯ ಆಹಾರ ಮತ್ತು ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ರಾಜ್ಯ ಎಸ್.ಸಿ.ಮೋರ್ಚ ಪ್ರ.ಕಾರ್ಯದರ್ಶಿ ‌ದಿನಕರ ಬಾಬು, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಚಂದ್ರ ಹೆಗ್ಡೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ‌ ಬಳ್ಕೂರು, ಕುಂದಾಪುರ ಮಂಡಲದ ಪ್ರ.ಕಾರ್ಯದರ್ಶಿ ‌ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ‌ಸುಧೀರ್ ಕೆ.ಎಸ್., ಪ್ರಸಾದ ನೇತ್ರಾಲಯ ವ್ಯದೈಕೀಯ ನಿರ್ದೇಶಕ ನಾಡೋಜ ಡಾ.ಕೃಷ್ಣ ಪ್ರಸಾದ ಕೂಡ್ಲು,
    ಉಡುಪಿ‌ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚ ಅಧ್ಯಕ್ಷ ‌ಗೋಪಾಲ ಕಳಂಜಿ, ಉಡುಪಿ‌ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚ ಪ್ರ.ಕಾರ್ಯದರ್ಶಿ ಸದಾನಂದ ಆರ್.ಕೈ ಪುಂಜಾಲು, ಕುಂದಾಪುರ ತಾ.ಪಂ.ನಿಕಟ ಪೂರ್ವ ಉಪಾಧ್ಯಕ್ಷ ರಾಮ್ ಕೀಶನ್ ಹೆಗ್ಡೆ ಉಪಸ್ಥಿತರಿದ್ದರು.

    ಉಡುಪಿ ಜಿಲ್ಲಾ ಎಸ್.ಸಿ.ಮೋರ್ಚ ‌ಪ್ರ.ಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ. ಸ್ವಾಗತಿಸಿದರು. ನಾಗರಾಜ ಸಂತೆಕಟ್ಟೆ ವಂದಿಸಿದರು. ಕುಂದಾಪುರ ಮಂಡಳದ ಎಸ್.ಸಿ.ಮೋರ್ಚ ಪ್ರ.ಕಾರ್ಯದರ್ಶಿ ‌ಮಹೇಶ್ ಎಂ.ಜಿ.ಬಸ್ರೂರು ಕಾರ್ಯಕ್ರಮ ನಿರೂಪಿಸಿದರು.

  • ಆಸ್ಕರ್ ಫರ್ನಾಂಡೀಸ್ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಧೀಮಂತ ನಾಯಕ -ಮಾಜಿ ಸಚಿವ ಸೊರಕೆ

    ಆಸ್ಕರ್ ಫರ್ನಾಂಡೀಸ್ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಧೀಮಂತ ನಾಯಕ -ಮಾಜಿ ಸಚಿವ ಸೊರಕೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಎಲ್ಲರಿಂದ ಪ್ರೀತಿಯಿಂದ ಆಸ್ಕರಣ್ಣ ಎಂದು ಕರೆಸಿಕೊಂಡವರು,ಅವರೊಬ್ಬರು ವ್ಯಕ್ತಿಯಾಗಿರಲಿಲ್ಲ ಬದಲಾಗಿ ಶಕ್ತಿಯಾಗಿ ಕಾರ್ಯನಿರ್ವಹಿಸಿದ ಮೇಧಾವಿ ರಾಜಕಾರಣಿ, ಕಾಂಗ್ರೆಸ್ ಹಿರಿಯ ನಾಯಕರಾಗಿ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್. ಅವರು ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

    ಅವರು ಗುರುವಾರ ಮುದೂರಿನ ಸೈಂಟ್ ಮೇರಿಸ್ ಸಭಾಭವನದಲ್ಲಿ ಜಡ್ಕಲ್, ಮುದೂರು ಗ್ರಾಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಅಗಲಿದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮತ್ತು ಪಿ.ಎಲ್. ಜೋಸ್ ಅವರಿಗೆ ಶ್ರದ್ಧಾಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

    ಅವರು ಕ್ರೈಸ್ತ ಸಮುದಾಯವರಾದರೂ ಅದನ್ನು ಮೀರಿ ಎಲ್ಲರಿಗೂ ಅವರು ಆಸ್ಕರಣ್ಣನೇ ಆಗಿದ್ದರು. ಅವರು ಉಡುಪಿಗೆ ಏನು ಮಾಡಿದ್ದಾರೆಂಬ ಅಪವಾದ ಅವರ ಮೇಲಿದೆ. ಅವರು ಜನಪ್ರತಿನಿಧಿಯಾಗಿದ್ದಾಗ ಎಂದಿಗೂ ತಾನು ಇಂಥದ್ದು ಮಾಡಿದ್ದೇನೆ ಎಂದು ಹೇಳಿದವರಲ್ಲ. ಭೂಮಸೂದೆ ಕಾಯ್ದೆ ಬಂದಾಗ ಅವರು ಹಳ್ಳಿ ಹಳ್ಳಿಗೆ ತೆರಳಿ ಫಲಾನುಭವಿಗಳಿಂದ ಅರ್ಜಿ ಬರೆಸಿ ಸಲ್ಲಿಸಲು ಶ್ರಮಿಸಿದ್ದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ವಾರಾಹಿ ಯೋಜನೆಗೆ ಕಾರಣಕರ್ತರು ಎಂದು ಬಣ್ಣಿಸಿದರು.

    ಸೈಂಟ್ ಮೇರಿಸ್ ಚರ್ಚಿನ ಧರ್ಮಗುರು ಅಗಸ್ಟೀನ್ ಮಾತನಾಡಿ, ಜೋಸ್ ಅವರು ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಅವರು ಯಾವುದೇ ಕಾರಣಕ್ಕೂ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡುತ್ತಿರಲಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳುಂಟಾದರೂ ಅದನ್ನು ತಿಳಿಗೊಳಿಸಿ, ಸರಿದೂಗಿಸಿಕೊಂಡೊಯ್ಯುವಲ್ಲಿ ನಿಸ್ಸೀಮರಾಗಿದ್ದರು.

    ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅವರು ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪಕ್ಷ ಕಟ್ಟುವ ಹಾಗೂ ಸಾಕಷ್ಟು ಯುವ ನಾಯಕರನ್ನು ಹುಟ್ಟುಹಾಕಿದ ಕೀರ್ತಿ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ ಎಂದರು. ಪಿ.ಎಲ್. ಜೋಸ್ ಅವರು ಶಿಕ್ಷಣ ಸಂಸ್ಥೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಗ್ರಾಾಮೀಣ ಭಾಗದಲ್ಲಿ ಪಕ್ಷ ಕಟ್ಟುವಲ್ಲಿ ಅವರು ಪ್ರಾಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.


    ಅಗಲಿದ ಲಿಂಗಪ್ಪ್ ನಾಯ್ಕ್ ಹಾಗೂ ಅಕ್ಷಯ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಉಡುಪಿ ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಮಾಜಿ ತಾ.ಪಂ.ಸದಸ್ಯರಾದ ರಮೇಶ್ ಗಾಣಿಗ, ಜಗದೀಶ್ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ಜಗದೀಶ್ ಯಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು.
    ಪ್ರಸಾದ ಪಿ.ಕೆ. ಸ್ವಾಾಗತಿಸಿ, ಪ್ರಾಾಸ್ತಾವಿಕ ಮಾತನಾಡಿದರು. ದೇವದಾಸ್ ವಂದಿಸಿದರು.

  • ಬೈಂದೂರು: ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

    ಬೈಂದೂರು: ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಎಲ್.ಪಿ.ಜಿ, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋದಿ ನೀತಿಯ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬೈಂದೂರು ತಹಶೀಲ್ದಾರ್ ಕಛೇರಿ ಎದುರು ವಿನೂತನವಾಗಿ ತಯಾರಿಸಿದ ಗ್ಯಾಸ್ ಸಿಲಿಂಡರ್ ನಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಚಹಾ ತಯಾರಿಸುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು. ನಂತರ ಬೈಂದೂರು ತಹಶೀಲ್ದಾರ್ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

    ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಮಾತನಾಡಿ ಕೇಂದ್ರದ ಬಿಜೆಪಿ ಸರಕಾರದ ಜನ ವಿರೋದಿ ನೀತಿಯನ್ನು ಖಂಡಿಸಿ ಈ ಜನವಿರೋದಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ವರೆಗೂ ನಿರಂತರವಾಗಿ ಪ್ರತಿಭಟಿಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.


    ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಾದ ನಮ್ಮ ಜಿಲ್ಲೆಯಲ್ಲೇ ನಿರಂತರ ವಿದ್ಯುತ್ ಕಡಿತವಾಗುತ್ತಿದೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸಚಿವರು ಅವರದೆ ಸರಕಾರ ಹಿಂದೂ ದೇವಾಲಯ ಕೆಡವಿರುವುದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಮದನ್ ಕುಮಾರ್, ಬೈಂದೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ ಗಾಣಿಗ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಮಾಜಿ ತಾ. ಪಂ ಸದಸ್ಯೆ ಗ್ರೀಷ್ಮ ಬಿಡೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ದೇವಾಡಿಗ ಹಾಗೂ ಅರವಿಂದ ಪೂಜಾರಿ, ಮುಖಂಡರಾದ ಗಣೇಶ್ ಪೂಜಾರಿ ಬೈಂದೂರು, ನರಸಿಂಹ ಹಳಗೇರಿ, ಪ್ರಕಾಶ ಪೂಜಾರಿ, ಸುಂದರ್ ಕೊಠಾರಿ,ಉಮೇಶ್ ದೇವಾಡಿಗ, ಗೋವಿಂದ ಪೂಜಾರಿ ಹೊಸ್ಕೊಟೆ, ಮಣಿಕಂಠ ಬೈಂದೂರು, ಶಬ್ಬೀರ್, ಮಂಜುನಾಥ ತಗ್ಗರ್ಸೆ, ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಮರವಂತೆ, ಉದಯ ಪೂಜಾರಿ, ಪ್ರಕಾಶ್ ಆಚಾರ್ಯ, ಗಿರೀಶ್ ದೇವಾಡಿಗ, ವಿನೋದ ಪಡುಕೋಣೆ, ಸಂತೋಷ ಹೊಸ್ಕೊಟೆ, ರಾಮ ಕೆರ್ಗಾಲ್,ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.