ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಎಲ್ಲರಿಂದ ಪ್ರೀತಿಯಿಂದ ಆಸ್ಕರಣ್ಣ ಎಂದು ಕರೆಸಿಕೊಂಡವರು,ಅವರೊಬ್ಬರು ವ್ಯಕ್ತಿಯಾಗಿರಲಿಲ್ಲ ಬದಲಾಗಿ ಶಕ್ತಿಯಾಗಿ ಕಾರ್ಯನಿರ್ವಹಿಸಿದ ಮೇಧಾವಿ ರಾಜಕಾರಣಿ, ಕಾಂಗ್ರೆಸ್ ಹಿರಿಯ ನಾಯಕರಾಗಿ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್. ಅವರು ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಗುರುವಾರ ಮುದೂರಿನ ಸೈಂಟ್ ಮೇರಿಸ್ ಸಭಾಭವನದಲ್ಲಿ ಜಡ್ಕಲ್, ಮುದೂರು ಗ್ರಾಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಅಗಲಿದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮತ್ತು ಪಿ.ಎಲ್. ಜೋಸ್ ಅವರಿಗೆ ಶ್ರದ್ಧಾಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

ಅವರು ಕ್ರೈಸ್ತ ಸಮುದಾಯವರಾದರೂ ಅದನ್ನು ಮೀರಿ ಎಲ್ಲರಿಗೂ ಅವರು ಆಸ್ಕರಣ್ಣನೇ ಆಗಿದ್ದರು. ಅವರು ಉಡುಪಿಗೆ ಏನು ಮಾಡಿದ್ದಾರೆಂಬ ಅಪವಾದ ಅವರ ಮೇಲಿದೆ. ಅವರು ಜನಪ್ರತಿನಿಧಿಯಾಗಿದ್ದಾಗ ಎಂದಿಗೂ ತಾನು ಇಂಥದ್ದು ಮಾಡಿದ್ದೇನೆ ಎಂದು ಹೇಳಿದವರಲ್ಲ. ಭೂಮಸೂದೆ ಕಾಯ್ದೆ ಬಂದಾಗ ಅವರು ಹಳ್ಳಿ ಹಳ್ಳಿಗೆ ತೆರಳಿ ಫಲಾನುಭವಿಗಳಿಂದ ಅರ್ಜಿ ಬರೆಸಿ ಸಲ್ಲಿಸಲು ಶ್ರಮಿಸಿದ್ದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ವಾರಾಹಿ ಯೋಜನೆಗೆ ಕಾರಣಕರ್ತರು ಎಂದು ಬಣ್ಣಿಸಿದರು.

ಸೈಂಟ್ ಮೇರಿಸ್ ಚರ್ಚಿನ ಧರ್ಮಗುರು ಅಗಸ್ಟೀನ್ ಮಾತನಾಡಿ, ಜೋಸ್ ಅವರು ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಅವರು ಯಾವುದೇ ಕಾರಣಕ್ಕೂ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡುತ್ತಿರಲಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳುಂಟಾದರೂ ಅದನ್ನು ತಿಳಿಗೊಳಿಸಿ, ಸರಿದೂಗಿಸಿಕೊಂಡೊಯ್ಯುವಲ್ಲಿ ನಿಸ್ಸೀಮರಾಗಿದ್ದರು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅವರು ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪಕ್ಷ ಕಟ್ಟುವ ಹಾಗೂ ಸಾಕಷ್ಟು ಯುವ ನಾಯಕರನ್ನು ಹುಟ್ಟುಹಾಕಿದ ಕೀರ್ತಿ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ ಎಂದರು. ಪಿ.ಎಲ್. ಜೋಸ್ ಅವರು ಶಿಕ್ಷಣ ಸಂಸ್ಥೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಗ್ರಾಾಮೀಣ ಭಾಗದಲ್ಲಿ ಪಕ್ಷ ಕಟ್ಟುವಲ್ಲಿ ಅವರು ಪ್ರಾಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.








ಅಗಲಿದ ಲಿಂಗಪ್ಪ್ ನಾಯ್ಕ್ ಹಾಗೂ ಅಕ್ಷಯ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಮಾಜಿ ತಾ.ಪಂ.ಸದಸ್ಯರಾದ ರಮೇಶ್ ಗಾಣಿಗ, ಜಗದೀಶ್ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ಜಗದೀಶ್ ಯಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಸಾದ ಪಿ.ಕೆ. ಸ್ವಾಾಗತಿಸಿ, ಪ್ರಾಾಸ್ತಾವಿಕ ಮಾತನಾಡಿದರು. ದೇವದಾಸ್ ವಂದಿಸಿದರು.











