Category: ರಾಜಕೀಯ

  • ಬೈಂದೂರು :ನೂರು ಬೂತ್ ನಲ್ಲಿ ನೂರಾರು ಅನುಭವ, ಶಾಸಕರ ಬೂತ್ ಕಡೆಗೆ ಸಮೃದ್ಧ ನಡಿಗೆ ಶತ ಸಂಭ್ರಮ

    ಬೈಂದೂರು :ನೂರು ಬೂತ್ ನಲ್ಲಿ ನೂರಾರು ಅನುಭವ, ಶಾಸಕರ ಬೂತ್ ಕಡೆಗೆ ಸಮೃದ್ಧ ನಡಿಗೆ ಶತ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ಪಡೆದು ಬಹುದೊಡ್ಡ ಅಂತರದಲ್ಲಿ ಜಯ ಸಾಧಿಸಬೇಕು ಎಂಬ ಛಲದೊಂದಿಗೆ ಜನಪ್ರಿಯ ಶಾಸಕರಾದ ಗುರುರಾಜ ಗಂಟೆಹೊಳೆ ಯವರು ಆರಂಭಿಸಿದ ಬೂತ್ ಕಡೆಗೆ ಸಮೃದ್ಧ ನಡೆಗೆ ಒಂದು ವಾರದಲ್ಲಿಯೇ ನೂರು ಬೂತ್ ಗಳಲ್ಲಿ ಸಂಚಲನ ಮೂಡಿಸಿದೆ.

    ಬಿ.ವೈ.ರಾಘವೇಂದ್ರ ಅವರು ಬೈಂದೂರಿನಲ್ಲಿ ಒಂದು ಲಕ್ಷ ಲೀಡ್ ಪಡೆದು ವಿಜಯಶಾಲಿಯಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವುದರೊಂದಿಗೆ ಅವರನ್ನು ಬೈಂದೂರಿಗೆ ಕರೆತರುವ ಸಂಕಲ್ಪವನ್ನು ಈಗಾಗಲೇ ಕೊಲ್ಲೂರಿಗೆ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಕೊಲ್ಲೂರಿಗೆ ಬಂದು ಮೂಕಾಂಬಿಕಾ ಕಾರಿಡಾರ್ ರಚನೆಯ ಘೋಷಣೆ ಮಾಡುವುದನ್ನು ನಾವೆಲ್ಲರೂ ಕಾಣಬೇಕು ಮತ್ತು ಮೋದಿ ಅವರನ್ನು ಹತ್ತಿರದಿಂದ ಕ್ಷೇತ್ರದ ಜನತೆ ನೋಡಬೇಕು ಎಂಬ ಸದಾಶಯದೊಂದಿಗೆ ಬೂತ್ ಕಡೆಗೆ ಸಮೃದ್ಧ ನಡಿಗೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಬೂತ್ ಗಳಲ್ಲಿ ಮತದಾರರು, ಬಿಜೆಪಿಯ ಕಾರ್ಯಕರ್ತರು, ಪ್ರಮುಖರು, ಮುಖಂಡರು, ಹಿತೈಷಿಗಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

    ಅಷ್ಟು ಮಾತ್ರವಲ್ಲದೆ ಶಾಸಕರು ಖುದ್ದು ಮತದಾರರು ಮತ್ತು ಜನತೆಯ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡುತ್ತಿರುವುದು ಶ್ಲಾಘನೀಯ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರಾದ ಗುರುರಾಜ ಗಂಟಿಹೊಳೆ ಯವರು, ಬೈಂದೂರು ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ನೀಡುವುದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಕರೆದುಕೊಂಡು ಬರುವುದು ಮತ್ತು ಕ್ಷೇತ್ರದ ಸಮಗ್ರವಾದ ಅಭಿವೃದ್ಧಿ ಕಲ್ಪನೆಯೊಂದಿಗೆ ಸಮೃದ್ಧ ನಡಿಗೆ ಪ್ರತಿ ಬೂತಗಳಲ್ಲೂ ನಡೆಸಲು ಉದ್ದೇಶಿಸಿದ್ದೇವೆ. ಅದರಂತೆ ಇದೀಗ ನೂರಕ್ಕೂ ಅಧಿಕ ಬೂತ್ಗಳನ್ನು ಸಂದರ್ಶಿಸಲಾಗಿದೆ. ಬೂತ್ ನಡಿಗೆ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಸೇರುವುದು, ಅವರ ದುಃಖ ದುಮ್ಮಾನಗಳನ್ನು ಆಲಿಸುವುದು, ಪ್ರತಿಜ್ಞೆ ಸ್ವೀಕಾರ ಇತ್ಯಾದಿಗಳು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಹಿರಿಯ ಕಾರ್ಯಕರ್ತರಲ್ಲಿನ ಉತ್ಸಾಹ, ಹೊಸ ಕಾರ್ಯಕರ್ತರ ಸೇರ್ಪಡೆ, ಯುವಕರ ಚೈತನ್ಯ ಹೀಗೆ ಬೂತ್ ನಡಿಗೆಯಲ್ಲಿ ಎಲ್ಲವೂ ಪ್ರೇರಣಾದಾಯಿಯಾಗಿದೆ. ಅಲ್ಲದೆ ನಿತ್ಯವೂ ನಮ್ಮೊಂದಿಗೆ ಹಲವರು ಸೇರಿಕೊಳ್ಳುತ್ತಿರುವುದು ಇನ್ನೊಂದು ಖುಷಿಯ ವಿಚಾರವಾಗಿದೆ. ಒಂದು ಲಕ್ಷ ಲೀಡ್ ನ ಸ್ಪಷ್ಟ ಗುರಿ ಹಾಗೂ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಪರಿಕಲ್ಪನೆ ನಮ್ಮ ಈ ನಡಿಗೆಯಲ್ಲಿದೆ ಎಂದು ವಿವರ ನೀಡಿದರು.

    ಬೂತ್ ನಡಿಗೆಯಲ್ಲಿ ಕಾರ್ಯಕರ್ತರ ಆರೋಗ್ಯಕ್ಕೂ ಆದ್ಯತೆ
    ಬೂತ್ ನಡಿಗೆಯಲ್ಲಿ ಪ್ರತಿ ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ ಬೂತ್ ಗಳಲ್ಲಿ ಹೊಸ ಕಾರ್ಯಕರ್ತರು ಸೇರಿಕೊಳ್ಳುತ್ತಿದ್ದಾರೆ. ಹಿರಿಯರು ನಮ್ಮೊಂದಿಗೆ ನಿತ್ಯ ಜೊತೆಯಾಗುತ್ತಿದ್ದಾರೆ. ಆದರೂ ಈ ನಿರಂತರ ಪ್ರಕ್ರಿಯೆಯಲ್ಲಿ ಪ್ರತಿದಿನವೂ ಎಲ್ಲರಿಗೂ ಜೊತೆಯಾಗಲು ಸಾಧ್ಯವಾಗದೆ ಇರಬಹುದು. ನಮ್ಮೊಂದಿಗೆ ಬೂತ್ ಅಭಿಯಾನದಲ್ಲಿ ಇರುವ ಕಾರ್ಯಕರ್ತರ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ಹರಿಸುತಿದ್ದೇವೆ. ಹವಾಮಾನ ವ್ಯತ್ಯಾಸ ಬಿಸಿಲು ಇತ್ಯಾದಿಗಳಿಂದ ಆರೋಗ್ಯ ಸಮಸ್ಯೆ ಆಗದಂತೆ ಎಚ್ಚರ ತೆಗೆದುಕೊಳ್ಳುತ್ತಿದ್ದೇವೆ.

    ಸಾಮಾಜಿಕ ಕಾರ್ಯದಲ್ಲಿ ಸಾಥ್
    ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಬೂತ್ ಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಆ ಸಂದರ್ಭದಲ್ಲಿ ಕೆಲವೊಂದು ಬೂತ್ ಗಳಿಗೆ ಪತ್ನಿ ಭೇಟಿ ನೀಡಿದ್ದಳು. ಈಗ ನಮಗೆ ಪ್ರತಿ ಬೂತ್ ಸಂದರ್ಶಿಸಿ, ಕಾರ್ಯಕರ್ತರೊಂದಿಗೆ ಬೆರೆಯುವ ಅವಕಾಶ ಮತ್ತೆ ದೊರೆತಿದೆ. ಈ ಕಾರ್ಯದಲ್ಲಿ ಮನೆಯವರು ಸಾಥ್ ನೀಡುತ್ತಿದ್ದಾರೆ. ನಾವು ಸಾಮಾಜಿಕ ಕಾರ್ಯಗಳನ್ನು ಒಟ್ಟಿಗೆ ಮಾಡಿದ್ದರಿಂದ ಇದೊಂದು ಸಾಮಾಜಿಕ ಕಾರ್ಯದ ಭಾಗವಾಗಿ ನಮ್ಮೊಂದಿಗೆ ಜೋಡಿಸಿಕೊಂಡಿದ್ದಾರೆ.

    ವಿಷಯ ಮನದಟ್ಟು ಮಾಡಲು ಪ್ರತಿಜ್ಞೆ
    ಬೂತ್ ನಡಿಗೆ ಸಂದರ್ಭದಲ್ಲಿ ಅನೇಕ ವಿಷಯಗಳು ಚರ್ಚೆಗೆ ಬರುತ್ತದೆ. ಇಂಥ ಸಂದರ್ಭದಲ್ಲಿ ಚುನಾವಣೆ ಸೀಮಿತವಾಗಿ ಕೆಲವೊಂದು ವಿಷಯಗಳನ್ನು ಸ್ಪಷ್ಟ ಮತ್ತು ನಿಖರವಾಗಿ ಮನದಟ್ಟು ಮಾಡಬೇಕಾಗಿರುತ್ತದೆ. ಅದಕ್ಕೆ ಪ್ರತಿಜ್ಞೆ ಸಹಕಾರಿಯಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ಮಾಡುತ್ತೇವೆ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸುತ್ತಿದ್ದೇವೆ.

    ಸಮೃದ್ಧ ನಡಿಗೆಯ ಭವಿಷ್ಯದ ಆಲೋಚನೆ
    ಸಮೃದ್ಧ ನಡಿಗೆ ರಾಜಕೀಯ ಅಥವಾ ಚುನಾವಣಾ ವಿಷಯ ಎನ್ನುವುದಕ್ಕಿಂತ ಇದು ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇರುವ ಒಂದು ಆಂದೋಲನ, ಅಭಿಯಾನ. ಅಭಿವೃದ್ಧಿ, ಕಾರ್ಯಕರ್ತರು ಹಾಗೂ ಸಂಘಟನೆಯ ದೃಷ್ಟಿಯಿಂದ ಇದು ಪ್ರತಿಬೂತಗಳ ಸಮೃದ್ಧಿಯ ಕಾರ್ಯವಾಗಿದೆ. ಸಂಘಟನೆ ಗಟ್ಟಿಯಾದಂತೆ ಪಕ್ಷ ಭದ್ರವಾಗುವಂತೆ ಬೂತ್ ಗಟ್ಟಿಯಾದರೆ ಕ್ಷೇತ್ರ ಸಮೃದ್ಧವಾಗಲಿದೆ ಅಭಿವೃದ್ಧಿ ಹೊಂದಲಿದೆ.

    ಭಿನ್ನ ವಾತಾವರಣ
    ಎಲ್ಲ ಬೂತ್ ಒಂದೇ ರೀತಿ ಇರುವುದಿಲ್ಲ. ಕೆಲವು ಬೂತ್ ಗಳು ಬಿಜೆಪಿಗೆ ಪರವಾಗಿದ್ದರೆ ಇನ್ನು ಕೆಲವು ಬೂತಗಳಲ್ಲಿ ಕಾರ್ಯಕರ್ತರಿಗೆ ಅನೇಕ ಸಮಸ್ಯೆ ಎದುರಾಗಿರುತ್ತದೆ. ಕಾರ್ಯಕರ್ತನ ಮನೆಯಲ್ಲಿ ನಾವು ಸೇರಿರುವುದರಿಂದ ಇಲ್ಲಿ ಯಾವುದೇ ಆತಂಕದ ವಾತಾವರಣ ಅಥವಾ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂಬ ಮಾನಸಿಕತೆ ಇರುವುದಿಲ್ಲ ಎಲ್ಲಾ ವಿಷಯಗಳ ಮುಕ್ತವಾಗಿ ಚರ್ಚೆಯಾಗುತ್ತದೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತದೆ. ಎಲ್ಲ ಬೂತ್ ಗಳನ್ನು ಸಮಾನವಾಗಿ ಸ್ವೀಕರಿಸುತ್ತೇವೆ.

    ಬೈಂದೂರಿನ ಸುಂದರ ಕಾವ್ಯ
    ತೊಂಬಟ್ಟು, ಮಚ್ಚಟ್ಟು ಮೊದಲಾದ ಬೂತ್ ಗಳಿಗೆ ಗುಡ್ಡದಾಟಿ, ನದಿದಾಟಿ ಹೋಗಬೇಕು. ಕರಾವಳಿ ಭಾಗದಲ್ಲಿ ಬೂತ್ ಗಳು ಒಂದಕ್ಕೊಂದು ಅಂಟಿಕೊಂಡಿವೆ. ಇನ್ನು ಕೆಲವು ಭಾಗದಲ್ಲಿ ಕಾಡಿನ ಮಧ್ಯೆ ಬೂತ್ ಗಳಿವೆ ಕತ್ತಲಾದ ಅನಂತರದಲ್ಲಿ ಓಡಾಟ ಕಷ್ಟ. ಹೀಗೆ ಒಟ್ಟಾರೆಯಾಗಿ ಬೈಂದೂರು ಕ್ಷೇತ್ರದ ಪೂರ್ಣ ದರ್ಶನವಾಗುತ್ತಿದೆ.

    ಭಿನ್ನ ಅನುಭೂತಿ
    ಬೂತ್ ನಡಿಗೆಯಲ್ಲಿ ಒಂದೊಂದು ಬೂತ್ ನಲ್ಲಿ ಭಿನ್ನ ಅನುಭವ ಕಾಣಸಿಗುತ್ತಿದೆ. ಕೆಲವರು ಸಮಸ್ಯೆಯ ಆಳ ಅಗಲವನ್ನು ವಿಸ್ತೃತವಾಗಿ ಬಿಚ್ಚಿಟ್ಟರೇ ಇನ್ನು ಕೆಲವರು ಸ್ತೂಲವಾಗಿ ಪರಿಚಯಿಸುತ್ತಿದ್ದಾರೆ. ಬೂತ್, ವಾರ್ಡ್, ಗ್ರಾಮ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಕ್ಷೇತ್ರ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸಮಸ್ಯೆಗಳು ಚರ್ಚೆಗೆ ಬರುತ್ತಿವೆ.

    ಗ್ಯಾರಂಟಿ ಚರ್ಚೆಗೆ ಬರುತ್ತಿಲ್ಲ
    ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಯಾವುದೇ ಚರ್ಚೆ ನಡೆಸುತ್ತಿಲ್ಲ. ಯೋಜನೆಯಿಂದ ಜನರಿಗೆ ಅನುಕೂಲವಾದರೆ ಅದಕ್ಕೆ ನಮ್ಮ ಆಕ್ಷೇಪವು ಇಲ್ಲ. ಯೋಜನೆ ಸಿಗದಿರುವ ಬಗ್ಗೆ ಅನೇಕರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಕೊಡುವ ಸಾಮರ್ಥ್ಯ, ಆರ್ಥಿಕ ವ್ಯವಸ್ಥೆ, ಅಭಿವೃದ್ಧಿ, ಅನುದಾನ ಇತ್ಯಾದಿಗಳನ್ನು ಹಾಳು ಮಾಡಿಕೊಂಡು ಗ್ಯಾರಂಟಿ ಕೊಡುವುದರ ಬಗ್ಗೆ ಪ್ರಶ್ನೆ ಎತ್ತಿದ್ದೆವೆಯೇ ಹೊರತು, ಜನರಿಗೆ ಲಾಭ ಸಿಕ್ಕಿದ್ದನ್ನು ದೂರುವುದಿಲ್ಲ. ಈ ಬಗ್ಗೆಯೂ ನಮಗೆ ಸ್ಪಷ್ಟತೆಯಿದೆ ಎಂಬುದು ಶಾಸಕರಾದ ಗುರುರಾಜ ಗಂಟಿಹೊಳೆ ಅಭಿಪ್ರಾಯವಾಗಿದೆ.
    ಹೀಗೆ ಬೂತ್ ಕಡೆಗೆ ಸಮೃದ್ಧ ನಡಿಗೆ ಚುನಾವಣೆಯ ದೃಷ್ಟಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ನೀಡುವ ಸಂಕಲ್ಪದ ಭಾಗವಾಗಿ ನಡೆಯುತ್ತಿದ್ದರೂ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ಬೂತ್ ಹಂತದಲ್ಲಿ ಮುಖಂಡರು, ಪ್ರಮುಖರಿಗೆ ಉತ್ಸಾಹ ಹೆಚ್ಚಿಸುತ್ತಿದೆ. ಪಕ್ಷ ಸಂಘಟನೆಗೂ ಒತ್ತು ನೀಡುತ್ತಿರುವ ಶಾಸಕರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
    ಬಿಜೆಪಿಯ ಹಿರಿಯರು ಯಾವ ಕನಸು ಕಂಡಿದ್ದಾರೋ ಮತ್ತು ಪಕ್ಷ ಸಂಘಟನೆಯಲ್ಲಿ ಯಾವ ವಿಧಾನ ಪರಿಣಾಮಕಾರಿಯಾಗಬಹುದು ಎಂಬುದನ್ನು ವಸ್ತುಸಹ ಅನುಷ್ಠಾನಕ್ಕೆ ತರುವ ಮೂಲಕ ಶಾಸಕರಾದ ಗುರುರಾಜ ಗಂಟಿಹೊಳೆಯವರು ಎಲ್ಲರಿಗಿಂತ ಮಾದರಿಯಾಗಿದೆ. ಒಂದು ಕ್ಷೇತ್ರದ ಎಲ್ಲ ಬೂತ್ ಗಳನ್ನು ಸೀಮಿತ ಅವಧಿಯಲ್ಲಿ ತಲುಪುವುದು, ಕಾರ್ಯಕರ್ತರ ಸಭೆ ನಡೆಸಿ, ಸಮಸ್ಯೆ ಆಲಿಸುವುದು ಸುಲಭದ ಕಾರ್ಯವಲ್ಲ. ಇಚ್ಛಾಶಕ್ತಿ ಹಾಗೂ ತಾಳ್ಮೆ ಎರಡೂ ಅವಶ್ಯಕ. ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಶಾಸಕರು ಮಾಡಿ ತೋರಿಸುತ್ತಿದ್ದಾರೆ. ಶಾಸಕರ ಈ ನಡೆ ಎಲ್ಲರಿಗೂ ಮಾದರಿಯಾಗಲಿ

  • ಕುಂದಾಪುರ :ಮನುವಾದಿಗಳಿಂದ ಸಂವಿಧಾನಕ್ಕೆ ಧಕ್ಕೆ ಸಾಧ್ಯತೆ : ಚುನಾವಣೆಯಲ್ಲಿ ಉತ್ತರ ಕೊಡಬೇಕಿದೆ – ಮಂಜುನಾಥ ಭಂಡಾರಿ

    ಕುಂದಾಪುರ :ಮನುವಾದಿಗಳಿಂದ ಸಂವಿಧಾನಕ್ಕೆ ಧಕ್ಕೆ ಸಾಧ್ಯತೆ : ಚುನಾವಣೆಯಲ್ಲಿ ಉತ್ತರ ಕೊಡಬೇಕಿದೆ – ಮಂಜುನಾಥ ಭಂಡಾರಿ

    ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಸಾಮಾಜಿಕ ನ್ಯಾಯ, ಸಮಾನತೆ , ಸ್ವಾತಂತ್ರ್ಯ ಮತ್ತು ಹಕ್ಕುಗಳನ್ಬು ನೀಡಿರುವ ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದಿಂದಲೇ ನಾವಿಂದು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಅಂತಹಾ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರವಿದ್ದು, ಮನುವಾದಿಗಳಿಗಳಿಂದ ಸಂವಿಧಾನಕ್ಕೆ ಧಕ್ಕೆಯಾಗುವ ಸಾದ್ಯತೆಗಳಿವೆ. ಆ ನಿನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠಕಲಿಸಬೇಕಿದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

    ಅವರು ಭಾನುವಾರ ತೆಕ್ಕಟ್ಟೆಯ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು..

    ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೊದಲು ಅವರ ಮನೆಯ ತುಳಸಿ ಕಟ್ಟೆಗೆ ದೀಪ ಹಚ್ಚುವ ಕೆಲಸ ಮಾಡಲಿ. ನಾವೂ ಹಿಂದೂಗಳೇ. ಆದರೆ ನಮ್ಮ ಮನೆಯಲ್ಲಿ ದೇವರ ಕೆಲಸ, ದೈವಗಳ ಆರಾಧನೆ ಹಿಂದಿನಿಂದಲೇಬನಡೆದುಕೊಂಡು ಬಂದಿದೆ. ಮೋದಿ ಸರ್ಕಾರದ ಜಿಎಸ್ಟಿ ನೀತಿಯಿಂದ ಸಂಭ್ರಮ ಕಡಿಮೆಯಾಗಿದೆ. ನಾವು ಹಿಂದುತ್ವ, ಸಂಪ್ರದಾಯಗಳ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಸುಳ್ಳು ಸರಳತೆಗಳಿಗೆ ಬಲಿಯಾಗಿ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಳ್ಳಬೇಡಿ ಎಂದರು.

    ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಜಯಪ್ರಕಾಶ್ ಹೆಗ್ಡೆಯಂತಹಾ ನಾಯಕತ್ವವನ್ನು ಕಳೆದುಕೊಳ್ಳದಂತೆ ಮತದಾರರು ಎಚ್ಚರವಹಿಸಬೇಕು ಎಂದರು.

    ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಗಡೆ, ಕೆಪಿಸಿಸಿ(KPCC) ಉಪಾಧ್ಯಕ್ಷ ಎಮ್.ಎ.ಗಫೂರ್, ಕೆಪಿಸಿಸಿ(KPCC)ಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್‌ ಮುಖಂಡ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಕಾಂಗ್ರೆಸ್ ಮುಖಂಡ ಸದಾನಂದ ಶೆಟ್ಟಿ ಕೆದೂರು, ಯೂತ್ ಕಾಂಗ್ರೆಸ್ ಕೋಟ ಬ್ಲಾಕ್ ಅಧ್ಯಕ್ಷ ಸುನಿಲ್‌ ಮಡಿವಾಳ, ಕುಂದಾಪುರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್‌ ಕೋಡಿ, ಕುಂದಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಅಭಿಜಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    ಸಲಾಂ ತೆಕ್ಜಟ್ಟೆ ಕಾರ್ಯಕ್ರಮ ನಿರೂಪಿಸಿ, ದೀಪಕ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

  • ವಂಡ್ಸೆ :ಗೀತಾ ಸಂಸದೆಯಾಗಿ ಉತ್ತಮ ಕೆಲಸ ಮಾಡುತ್ತಾಳೆಂದು ನಾನು ಗ್ಯಾರಂಟಿ ಕೊಡುತ್ತೇನೆ” -ನಟ ಶಿವರಾಜ್ ಕುಮಾರ್

    ವಂಡ್ಸೆ :ಗೀತಾ ಸಂಸದೆಯಾಗಿ ಉತ್ತಮ ಕೆಲಸ ಮಾಡುತ್ತಾಳೆಂದು ನಾನು ಗ್ಯಾರಂಟಿ ಕೊಡುತ್ತೇನೆ” -ನಟ ಶಿವರಾಜ್ ಕುಮಾರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನನ್ನ ಹೆಂಡತಿಗೂ ಒಂದೇ ಒಂದು ಅವಕಾಶ ಕೊಡಿ, ಸಂಸದೆಯಾಗಿ ಅವರು ಉತ್ತಮ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತಾಳೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ. ಜನಸೇವೆ ಮಾಡುವ ಇಚ್ಛೆ ಗೀತಾ ಅವರಲ್ಲಿದೆ. ಕ್ಷೇತ್ರದ ಜನತೆಯ ಧ್ವನಿಯಾಗಿ, ಮುಖ್ಯಸ್ಥೆಯಾಗಿ ನಿಂತು ಕೆಲಸ ಮಾಡಲು ಹೊರಟಿರುವ ಅವರ ಮನಸ್ಸಿಗೆ ಆಶೀರ್ವಾದ ಮಾಡಿ, ಎಂದು ನಟ, ಹ್ಯಾಟ್ರೀಕ್ ಹೀರೋ ಶಿವರಾಜ ಕುಮಾರ್ ಹೇಳಿದರು.

    ವಂಡ್ಸೆಯ ಶ್ರಿಯಾ ಕನ್ವನ್‍ಷನ್ ಹಾಲ್‍ನಲ್ಲಿ ನಡೆದ ಇಡೂರು ಕುಂಜ್ಞಾಡಿ ಗ್ರಾಮ, ಚಿತ್ತೂರು ಗ್ರಾಮ, ವಂಡ್ಸೆ ಗ್ರಾಮದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಮಾತನಾಡಿ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಜನರ ಪರವಾಗಿ ನೀಡಿದ ಕೆಲಸಕಾರ್ಯಗಳು ಇಂದು ಜನರ ಮುಂದಿದೆ. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಆಶ್ರಯ ಹೀಗೆ ಈ ಯೋಜನೆಗಳು ಇಂದಿಗೂ ಜನರ ಮನಸಿನಲ್ಲಿದೆ. ಬಂಗಾರಪ್ಪನವರ ಮಗಳಾಗಿ ನಾನು ಕೂಡಾ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬೈಂದೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜೆಜೆಎಂ, ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಹಿಂದುಳಿದ ವರ್ಗದವರನ್ನು ಬೆಳೆಯಲು ಬಿಜೆಪಿಯಲ್ಲಿ ಸಾಧ್ಯವಿಲ್ಲ. ಪ್ರಮೋದ್ ಮದ್ವರಾಜ ಅವರನ್ನು ಮನೆಗೆ ಕಳಿಸಿದರು, ಹಿಂದುತ್ವಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದ ಸತ್ಯಜಿತ್ ಸುರತ್ಕಲ್‍ಗೆ ಅವಕಾಶ ನೀಡಲಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮತ್ತು ವಿನಯ ಕುಮಾರ್ ಸೊರಕೆ ಸೋಲಿಸಲು ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಹೊಸ ಹೊ ಸ ಅಸ್ತ್ರ ಪ್ರಯೋಗಿಸಿದರು. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಮಾತುಗಳಿಗೆ ಮರುಳಾಗದೆ ರಾಘವೇಂದ್ರ ಅವರನ್ನು ವಾಪಸ್ಸು ಕಳಿಸಬೇಕು, ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದರು.

    ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಈ ರಾಜ್ಯಕ್ಕೆ ಎಸ್.ಬಂಗಾರಪ್ಪ ಅವರ ಕೊಡುಗೆ ದೊಡ್ಡದು. ಅವರ ಪುತ್ರಿ ಇಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು. ನಾನು 40 ವರ್ಷ ಕಾಂಗ್ರೆಸ್‍ನಲ್ಲಿದ್ದವ, ಜಿ.ಎಸ್ ಆಚಾರ್ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದೆ, ಕಳೆದ ಹತ್ತು ವರ್ಷದ ಹಿಂದೆ ಬಿಜೆಪಿಗೆ ಬಂದು ಕ್ಷೇತ್ರವನ್ನು ಪೂರ್ಣ ಬಿಜೆಪಿ ಮಾಡಿದೆ. ಮರಳಿ ಕಾಂಗ್ರೆಸ್‍ಗೆ ಬಂದಿದ್ದೇನೆ, ಕಾಂಗ್ರೆಸ್ ಕ್ಷೇತ್ರವನ್ನಾಗಿ ಮಾಡುವ ಛಲ ಹೊಂದಿದ್ದೇನೆ, ಶಾಸಕನಾಗಿ ಕ್ಷೇತ್ರ 3.5ಸಾವಿರ ಕೋಟಿ ರೂ ಅನುದಾನ ತಂದೆ, ವಂಡ್ಸೆ ಗ್ರಾಮಕ್ಕೆ 7.5 ಕೋಟಿ ಅನುದಾನ ಕೊಡಿಸಿದೆ. ರೂ.7.5 ಕೋಟಿ ವೆಚ್ಚದಲ್ಲಿ ವಂಡ್ಸೆ ಚಕ್ರನದಿಗೆ ವೆಂಟೆಂಡ್ ಡ್ಯಾಂ ಮಾಡಿದೆ. ಪರಿಣಾಮ ಈ ಬಾರಿ ಎಲ್ಲ ಬಾವಿಯಲ್ಲೂ ನೀರಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನನಗೆ ಅವಕಾಶ ಕೊಟ್ಟಿದ್ದಿದ್ದರೆ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಿದ್ದೆ. ರಾಘವಂದ್ರರ ಮೂರು ಬಾರಿ ಸಂಸದರನ್ನಾಗಿ ಮಾಡಿದ್ದೇವೆ, ಈ ಬಾರಿ ಗೀತಾ ಶಿವರಾಜ ಕುಮಾರ್ ಅವರನ್ನು ಗೆಲ್ಲಿಸುವ ಕೆಲಸ ನಾನು ಮಾಡುತ್ತೇನೆ ಎಂದರು.

    ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಚುನಾವಣಾ ಪೂರ್ವ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಯಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳ ಅನುಷ್ಠಾನದ ಗುರಿ ಹೊಂದಿದೆ. ನಾರಿ ನ್ಯಾಯ ಯೋಜನೆಯಲ್ಲಿ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ, ಯುವ ನ್ಯಾಯ ಯೋಜನೆಯಲ್ಲಿ 30 ಲಕ್ಷ ಹೊಸ ಉದ್ಯೋಗ ಸೃಷ್ಟಿ, 5 ಸಾವಿರ ಕೋಟಿ ನಿಧಿ ಸಂಗ್ರಹ, ಕಿಸಾನ್ ನ್ಯಾಯ ಯೋಜನೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗಧಿ, ಕೃಷಿ ಸಾಲ ಮನ್ನಾ, ಕೃಷಿ ಕ್ಷೇತ್ರವನ್ನು ಜಿಎಸ್‍ಟಿಯಿಂದ ಮುಕ್ತ ಮಾಡುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಅನುಷ್ಠಾನ ಗೊಳಿಸಲಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಚುನಾವಣಾ ಉಸ್ತುವಾರಿ ಜಿ.ಎ.ಬಾವ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ವಂಡಬಳ್ಳಿ ಜಯರಾಮ ಶೆಟ್ಟಿ, ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವಿನಾಶ್, ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಬಿ.ಟಿ ರಾಜು, ಸಂತೋಷ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಉಪಸ್ಥಿತರಿದ್ದರು.

    ಚಿತ್ತೂರು ಗ್ರಾಮೀಣ ಕಾಂಗ್ರೆಸ್ ಮುಖಂಡರಾದ ಉದಯ ಜಿ ಪೂಜಾರಿ ಸ್ವಾಗತಿಸಿ, ವಂಡ್ಸೆ ಗ್ರಾ.ಪಂ.ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ ವಂದಿಸಿದರು. ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.

  • ಬೈಂದೂರು :ಈಶ್ವರಪ್ಪನವರಿಗೆ ನಮ್ಮ ಸಂಸದರನ್ನು ಪ್ರಶ್ನಿಸುವ ನೈತಿಕತೆ ಇಲ್ಲ: ದೀಪಕ್ ಕುಮಾರ್ ಶೆಟ್ಟಿ

    ಬೈಂದೂರು :ಈಶ್ವರಪ್ಪನವರಿಗೆ ನಮ್ಮ ಸಂಸದರನ್ನು ಪ್ರಶ್ನಿಸುವ ನೈತಿಕತೆ ಇಲ್ಲ: ದೀಪಕ್ ಕುಮಾರ್ ಶೆಟ್ಟಿ

    ಬಿಜೆಪಿ ಅಭ್ಯರ್ಥಿ 1 ಲಕ್ಷಕ್ಕೂ ಅಧಿಕ ಮತದಿಂದ ಜಯ ಸಾಧಿಸಲಿದ್ದಾರೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು : ಸಂಸದರಾದ ಬಿ.ವೈ. ರಾಘವೇಂದ್ರ ಅವರಿಂದ ಎಲ್ಲ ರೀತಿಯ ಅನುಕೂಲ ಪಡೆದವರೆ ಇದೀಗ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ‌ ಎಂಬುದೂ ತಿಳಿದಿದೆ. ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ನಮ್ಮ ಸಂಸದರನ್ನು ಪ್ರಶ್ನಿಸುವ ನೈತಿಕತೆ ಕೆ.ಎಸ್.ಈಶ್ವರಪ್ಪ ಅವರಿಗೆ ಇಲ್ಲ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

    ಬೈಂದೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಶ್ವರಪ್ಪನವರು ಬಗ್ಗೆ ನಮಗೆ ಗೌರವವಿದೆ. ಆದರೂ ಕೆಲವೊಂದು ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ಅದ್ಭುತವಾದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಮತ್ತು ನಮ್ಮ ಕಾರ್ಯಕರ್ತರನ್ನು ಅಷ್ಟೇ ಗೌರವಯುತವಾಗಿ ನಡೆಸಿಕೊಂಡು ಬಂದಿದ್ದಾರೆ. ಬೈಂದೂರಿನಲ್ಲಿ ತಿರುಗಾಡಿದ ತಕ್ಷಣ ಈಶ್ವರಪ್ಪ ಅವರಿಗೆ ಯಾವುದೇ ಮತ ಬರುವುದಿಲ್ಲ. ಹಣ ಅಥವಾ ಯಾವುದೇ ಆಮಿಷಕ್ಕೂ ಯಾರೂ ಮರಳಾಗುವುದಿಲ್ಲ. ನಮ್ಮ ಕಾರ್ಯಕರ್ತರು ಯಾರೂ ಅವರೊಂದಿಗೆ ಇಲ್ಲ ಮತ್ತು ಮತದಾರರಲ್ಲೂ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೈಕಲ್ ನಲ್ಲಿ ಸುತ್ತಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅವರ ಮಕ್ಕಳು ಎನ್ನುವ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿಲ್ಲ. ಅವರು ಮಾಡಿದ ಅಭಿವೃದ್ಧಿ ಕಾರ್ಯ ಗಮನಿಸಿ ಟಿಕೆಟ್ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅಥವಾ ಅವರ ಮಕ್ಕಳು ಹಿಂದುತ್ವ ವಿಚಾರ ಬಂದಾಗ ಸದಾ ಸಂಘಟನೆ ಜತೆಗೆ ಇರುತ್ತಾ ಬಂದಿದ್ದಾರೆ. ಬಿ.ವೈ. ರಾಘವೇಂದ್ರ ಅವರು ಕೂಡ ಮಾಜಿ ಮುಖ್ಯಮಂತ್ರಿ ಮಗ ಎಂದು ಬೆಂಗಳೂರಿನಲ್ಲಿ ಕುಳಿತು ಆಡಳಿತ ನಡೆಸಿಲ್ಲ. ಕ್ಷೇತ್ರದಲ್ಲಿದ್ದು, ಜನರ ಮಧ್ಯೆಯೇ ಓಡಾಡಿಕೊಂಡಿದ್ದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

    ಸಂಸದರಾಗಿ ರಾಘವೇಂದ್ರ ಅವರು ಮಾಡಿದ ಅಭಿವೃದ್ಧಿ ಕಾರ್ಯದ ಆಧಾರದಲ್ಲಿ ಕಳೆದ ಬಾರಿ ಕ್ಷೇತ್ರದ ಜನತೆ 74 ಸಾವಿರ ಲೀಡ್ ನೀಡಿದ್ದು, ಈ ಬಾರಿ 1 ಲಕ್ಷ ಲೀಡ್ ನೀಡುವ ಉತ್ಸಾಹದಲ್ಲಿದ್ದಾರೆ. ಮೀನುಗಾರಿಕೆ, ಪ್ರವಾಸೋದ್ಯಮ, ಕಿಂಡಿಅಣೆಕಟ್ಟು, ಸಮುದಾಯಗಳ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಂಸದರು ಆದ್ಯತೆ ನೀಡಿದ್ದಾರೆ ಎಂದರು.
    ಸಮುದಾಯ ಭವನ ಆಗಲಿದೆ.

    ದೇವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಈ ಹಿಂದೆ ಬಂದಿದ್ದ 1 ಕೋಟಿ ರೂ. ತಾಂತ್ರಿಕ ಕಾರಣದಿಂದ ವಾಪಸ್ ಹೋಗಿದೆ. ನಂತರ ಮತ್ತೊಮ್ಮೆ ಬಿಡುಗಡೆಯಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ನೀಡಿಲ್ಲ. ಮುಂದೆ ಖಂಡಿತ ಸಂಸದರು ದೇವಾಡಿಗರ ಭವನ ಮಾಡಿಸಲಿದ್ದಾರೆ. ದೇವಾಡಿಗ ಸಮುದಾಯಕ್ಕೆ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ ಎಂದರು.

    ಕಾಂಗ್ರೆಸ್ ನಾಯಕರಿಗೆ ಪ್ರಿಯದರ್ಶಿನಿ ತಿರುಗೇಟು
    ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ, ದೇವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ಬಿಜೆಪಿ ಸರಕಾರ ನೀಡಿರುವ ಅನುದಾನ ಬಗ್ಗೆ ನಾನೇನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರಿಗೂ ಉತ್ತರ ನೀಡಲು ಸಾಧ್ಯವಿಲ್ಲ. ಆದರೆ, ಹಿರಿಯರಾದ ಗೌರಿ ದೇವಾಡಿಗ ಅವರು ನನ್ನ ಅಮ್ಮನ ಹೆಸರು ಹೇಳಿದ್ದರಿಂದ ಉತ್ತರ ಕೊಡಲೇ ಬೇಕು. ಗೌರಿ ದೇವಾಡಿಗ ಅವರನ್ನು ಜಿ.ಪಂ., ತಾ.ಪಂ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿಸಿದ್ದು ಬಿಜೆಪಿ, ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋದರು.

    ಅವರಿಂದ ನನಗೆ ರಾಜಕೀಯ ಪಾಠದ ಅಗತ್ಯವಿಲ್ಲ. ಗೋಪಾಲ ಪೂಜಾರಿಯವರು ಕಾಂಗ್ರೆಸ್‌ಗೆ ಬರುವ ಮೊದಲೇ ನನ್ನ ಅಮ್ಮ ಕಾಂಗ್ರೆಸ್‌ನಲ್ಲಿದ್ದರು. 30 ವರ್ಷ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದರು. ಬೇರೆ ಪಕ್ಷದಿಂದ ಕಾಂಗ್ರೆಸ್ ಬಂದಿದ್ದ ಗೋಪಾಲ್ ಪೂಜಾರಿಯವರನ್ನು ಶಾಸಕರನ್ನಾಗಿಸಲು ಶಾರದಾ ಬಿಜೂರು ಕೆಲಸ ಮಾಡಿದ್ದಾರೆ. ಹೀಗಾಗಿ ಶಾರದಾ ಬಿಜೂರ್ ಅವರ ಮೇಲೆ ಗೋಪಾಲ ಪೂಜಾರಿ ಋಣ ಇಲ್ಲ ಎಂದು ಗೌರಿ ದೇವಾಡಿಗ ಹಾಗೂ ಗೋಪಾಲ್ ಪೂಜಾರಿಯವರಿಗೆ ತಿರುಗೇಟು ನೀಡಿದರು.

    ನಮಗೆ ಪಕ್ಷದ ಋಣವಿದೆಯೇ ಹೊರತು ವ್ಯಕ್ತಿಯ ಋಣ ಅಲ್ಲ
    ನಾವ್ಯಾರೂ ರೊಟ್ಟಿ, ಇಡ್ಲಿಗಾಗಿ ರಾಜಕೀಯಕ್ಕೆ ಬಂದಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಉದ್ಯೋಗಸ್ಥರು ನಮಗೆ ಪಕ್ಷದ ಋಣ ಇದೆಯೇ ಹೊರತು ಯಾವ ವ್ಯಕ್ತಿಯ ಋಣ ಇಲ್ಲ. ಪ್ರಾಧ್ಯಪಕನಿಗೆ ತಾನು ಯಾವ ಪಕ್ಷಕ್ಕೂ ಬಹಿರಂಗ ಬೆಂಬಲ ನೀಡಬಾರದು ಎಂಬ ಸಾಮಾನ್ಯ ಪರಿಜ್ಞಾನ ಇರಬೇಕು.

    ನಕಾರಾತ್ಮಕ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಸಿದ್ಧರಿದ್ದೆವೆ. ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಯಾವ ವ್ಯಕ್ತಿಯನ್ನು ವೈಯಕ್ತಿಕ ನೆಲೆಯಲ್ಲಿ ಟೀಕೆ ಮಾಡುವವರು ನಾವಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಟೀಕೆಗಳನ್ನು ಮಾತ್ರ ಮಾಡುತ್ತೇವೆ. ಆದರೆ, ಗೌರಿ ದೇವಾಡಿಗ ಅವರು ವೈಯಕ್ತಿಕವಾಗಿ ಟೀಕಿಸಿದ್ದರಿಂದ ಅವರಿಗೆ ಈ ಪ್ರಶ್ನೆ, ಗೋಪಾಲ್ ಪೂಜಾರಿಯವರು ಇತ್ತೀಚಿಗೆ ನೀಡಿದ ಹೇಳಿಕೆ ಬಗ್ಗೆ ನಿಮ್ಮ ನಿಲುವೇನು? ಕಾಂಗ್ರೆಸ್ ಪಕ್ಷದಿಂದ ನಿಮ್ಮ ಬೆನ್ನಿಗೆ ಬುಲೆಟ್ ಇಟ್ಟು ಹೇಳಿಕೆ ನೀಡುವಂತೆ ಮಾಡಿದವರು ಯಾರು ಎಂಬುದನ್ನು ಹೇಳಿ ಬಿಡಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ನಿಮ್ಮ ನಿಲುವೇನು?.

    ಉಕ್ಕಿನಷ್ಟೇ ಬಲಿಷ್ಠ
    ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಮೂಲಕ ಮಾಡುವ ಯಾವ ಕಾಮೆಂಟ್ ಗಳಿಗೂ ಪ್ರತಿಕ್ರಿಯ ನೀಡುವುದಿಲ್ಲ. ಏನೇ ಇದ್ದರು ನೇರ ಬಂದು ಹೇಳಿ ಉತ್ತರ ನೀಡುವೆ. ಉಕ್ಕಿನಷ್ಟೇ ಬಲಿಷ್ಠವಾಗಿದ್ದೇನೆ ಮತ್ತು ಅಷ್ಟು ಬೇಗ ಗುಜರಿಯೂ ಆಗುವುದಿಲ್ಲ ಎಂದು ಖಡಕ್ ಉತ್ತರ ನೀಡಿದರು.
    ಹಿಂದೂಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಮಂಡಲ ಖಜಾಂಚಿ ಗಣೇಶ್ ಗಾಣಿಗ ಉಪಸ್ಥಿತರಿದ್ದರು.

  • ಬೈಂದೂರು :ಚುನಾವಣೆ ಸಂದರ್ಭ ಹಿಂದುತ್ವ ನೆನಪಾಯಿತೇ? ಪಕ್ಷ ನಿಷ್ಠೆ ಇಲ್ಲದ ನಿಮಗೆ ಮೋದಿ ಫೋಟೋ ಯಾಕೆ? – ಈಶ್ವರಪ್ಪ ವಿರುದ್ಧ ದೀಪಕ್ ಕುಮಾರ್ ಶೆಟ್ಟಿ ಕಿಡಿ

    ಬೈಂದೂರು :ಚುನಾವಣೆ ಸಂದರ್ಭ ಹಿಂದುತ್ವ ನೆನಪಾಯಿತೇ? ಪಕ್ಷ ನಿಷ್ಠೆ ಇಲ್ಲದ ನಿಮಗೆ ಮೋದಿ ಫೋಟೋ ಯಾಕೆ? – ಈಶ್ವರಪ್ಪ ವಿರುದ್ಧ ದೀಪಕ್ ಕುಮಾರ್ ಶೆಟ್ಟಿ ಕಿಡಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷದ ವರಿಷ್ಠರೇ ಆಯ್ಕೆ ಮಾಡಿದ್ದರೂ ಪಕ್ಷದ ನಿಲುವನ್ನು ಒಪ್ಪಿಕೊಳ್ಳದ ಈಶ್ವರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪನವರಿಗಿಲ್ಲ ಎಂದು ಬುಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಿಡಿ ಕಾರಿದ್ದಾರೆ. ಬೈಂದೂರಿನಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೆ ಬದಲಾವಣೆಯಾಘುತ್ತದೆ ಎನ್ನುವ ಭ್ರಮೆ ಬೇಡ ಎಂದು ಈಶ್ವರಪ್ಪಗೆ ಕಿವಿಮಾತು ಹೇಳಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವ ನಿಮ್ಮ ಹಿಂದುತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷ ಹೇಗೆ ಕಟ್ಟಿದ್ದಾರೆ ಎಂಬುದೂ ತಿಳಿದಿದೆ. ನಿಮ್ಮನ್ನು ಶಾಸಕ, ಸಚಿವ, ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಬಿ.ಎಸ್.ವೈ. ಹೊರತು ಬೇರ್ಯಾರು ಅಲ್ಲ ಎಂಬುದೂ ನೆನಪಿರಲಿ ಎಂದು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

    ನರೇಂದ್ರ ಮೋದಿಯವರು ವಿಶ್ವ ನಾಯಕ ಎನ್ನುವ ನೀವು ಅದೇ ಮೋದಿಯವರ ಹೆಸರಿನಲ್ಲಿ ಪದೇ ಪದೇ ಬಿಜೆಪಿ ಪಕ್ಷಕ್ಕೆ ಮುಜುಗರ ಮಾಡುತ್ತಿರುವುದ್ಯಾಕೆ, ಮೋದಿಯವರೇ ನಿಮ್ಮನ್ನು ತಿರಸ್ಕಾರ ಮಾಡಿರುವಾಗ ಮೋದಿಯವರ ಭಾವ ಚಿತ್ರ ಯಾಕೆ ಬಳಸುತ್ತಿದ್ದೀರಿ? ಅನಂತ್ ಕುಮಾರ್, ಹೆಗಡೆ, ಪ್ರತಾಪ್ ಸಿಂಹ ಮೊದಲಾದ ನಾಯಕರಿಗೆ ಟಿಕೆಟ್ ತಪ್ಪಿದಾಗ ಚಕಾರ ಎತ್ತಲಿಲ್ಲ. ನಿಮಗೆ ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮೇಲಾಯಿತೇ ? ಬಿಜೆಪಿ ಬೇಡ ಮತ ಕೇಳಲು ಮೋದಿ ಬೇಕು? ಹಾಗಿದ್ದರೆ ಮೋದಿ ಪ್ರಧಾನಿಯಾಗಬಾರದು ಎನ್ನುವುದು ನಿಮ್ಮ ಬಂಡಾಯವೇ? ಎಲ್ಲ ಸ್ಥಾನಮಾನ ನೀಡಿದ ಬಿಜೆಪಿಗೆ ಬ್ರಿಗೆಟ್ ಹೆಸರಿನಲ್ಲಿ ಅನ್ಯಾಯ ಮಾಡಿದ್ರೀ. ಈಗ ಬಂಡಾಯದ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೀರಿ. ನಿಮ್ಮ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೇಳಿದ್ದ ನೀವು ಶಿವಮೊಗ್ಗದಲ್ಲಿ ಏಕೆ ಸ್ಪರ್ಧಿಸುತ್ತಿದ್ದೀರಿ? ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗ ಮರಿ ರಾಜಹುಲಿ ಎಂದಿದ್ದ ನಿಮಗೆ ಆಗ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ? ಅಧಿಕಾರಕ್ಕಾಗಿ ಯಡಿಯೂರಪ್ಪರ ಮನೆ ಬಾಗಿಲಿಗೆ ಹೋಗುವಾಗ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ? ಅಧಿಕಾರಕ್ಕಾಗಿ ಜಾತಿಯನ್ನು ಮುಂದೆ ತರುವುದು, ಬ್ರೀಗೆಡ್ ಹೆಸರಿನಲ್ಲಿ ಬಿಜೆಪಿಗೆ ತ್ರೇಟ್ ನೀಡುವ ನಿಮ್ಮ ಸಂಸ್ಕೃತಿ ಯಾವುದು? ದೆಹಲಿಗೆ ಹೋದರೂ ವರಿಷ್ಠರು ನಿಮಗೆ ಮಾತನಾಡಲು ಸಿಗಲಿಲ್ಲ ಯಾಕೆ? ಈ ಹಿಂದೆ ಕರಾವಳಿಯ ಹಿಂದೂ ಸಂಘಟನೆ ಕಾರ್ಯಕರ್ತರು ಹೇಗಿದ್ದರು ಎಂದು ಒಮ್ಮೆಯಾದರೂ ವಿಚಾರಿಸಿದ್ದೀರಾ? ಇಷ್ಟಕ್ಕೂ ಬೈಂದೂರಿಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

  • ದ್ವಿತೀಯ ಪಿ.ಯು.ಸಿ ಫಲಿತಾಂಶ: ಕುಂದಾಪುರದ ಎಕ್ಸಲೆಂಟ್ ಪ. ಪೂ ಕಾಲೇಜಿಗೆ ಶೇ.100 ಫಲಿತಾಂಶ

    ದ್ವಿತೀಯ ಪಿ.ಯು.ಸಿ ಫಲಿತಾಂಶ: ಕುಂದಾಪುರದ ಎಕ್ಸಲೆಂಟ್ ಪ. ಪೂ ಕಾಲೇಜಿಗೆ ಶೇ.100 ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : 2023 -24 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್ ಪ. ಪೂ ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.100 ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ್ಯಾಂಕ್‍ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಂಸ್ಥೆಯಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಒಟ್ಟು 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಬರುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ 08 ಸ್ಥಾನಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 05 ಸ್ಥಾನಗಳನ್ನು ರಾಜ್ಯಮಟ್ಟದಲ್ಲಿ ಗಳಿಸುವುದರ ಮೂಲಕ ಸಂಸ್ಥೆಯ ಕೀರ್ತಿ ಕಳಶಕ್ಕೆ ಇನ್ನು ಹೊಳಪು ನೀಡಿದ್ದಾರೆ.

    ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ, ಅನನ್ಯ ಉಡುಪ 590 ಅಂಕಗಳೊಂದಿಗೆ 9 ನೇ ಸ್ಥಾನ, ನಾಗರಾಜ ಉಪ್ಪಾರ್ 590 ಅಂಕಗಳೊಂದಿಗೆ 9 ನೇ ಸ್ಥಾನ, ರಕ್ಷಾ ಆರ್ ಪೂಜಾರಿ 590 ಅಂಕಗಳೊಂದಿಗೆ 9 ನೇ ಸ್ಥಾನ, ನಿಶಾ 589 ಅಂಕಗಳೊಂದಿಗೆ 10 ನೇ ಸ್ಥಾನ, ನಿರ್ಮಿತಾ ಎನ್. ಡಿ 588 ಅಂಕಗಳೊಂದಿಗೆ 11 ನೇ ಸ್ಥಾನ, ವಿನುತಾ 588 ಅಂಕಗಳೊಂದಿಗೆ 11 ನೇ ಸ್ಥಾನ, ಸನ್ನಿದಿ ಕುಲಾಲ್ 588 ಅಂಕಗಳೊಂದಿಗೆ 11 ನೇ ಸ್ಥಾನ, ಪಡೆದುಕೊಂಡಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 315 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 100 ಫಲಿತಾಂಶ ಬಂದಿದೆ 246 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

    ಹಾಗೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಿತನ್ಯ ನಾಯ್ಕ 591 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 7 ನೇ ಸ್ಥಾನ , ಹರ್ಷಿತಾ ಡಿ. ಎಸ್ 591 ಅಂಕಗಳೊಂದಿಗೆ 7 ನೇ ಸ್ಥಾನ , ಸಿಂಚನಾ ಎಸ್ ಬಸ್ರೂರು 589 ಅಂಕಗಳೊಂದಿಗೆ 9 ನೇ ಸ್ಥಾನ, ಸಿಂಚನಾ ಎಸ್ ಶೆಟ್ಟಿ 589 ಅಂಕಗಳೊಂದಿಗೆ 9 ನೇ ಸ್ಥಾನ, ಭೂಮಿಕಾ 588 ಅಂಕಗಳೊಂದಿಗೆ 10 ನೇ ಸ್ಥಾನಗಳನ್ನು ಪಡೆಯುದರ ಮೂಲಕ ಅತ್ಯುತ್ಕೃಷ್ಟ ಸಾಧನೆ ಮಾಡಿ ಸಂಸ್ಥೆಯ ಪ್ರತಿಷ್ಟೆಗೆ ಇನ್ನೂ ಮೆರುಗು ನೀಡಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 89 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇಕಡ 100 ಫಲಿತಾಂಶ ಬಂದಿದೆ. 62 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
    ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎ0 .ಎ0 ಹೆಗ್ಡೆ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಎಂ ಮಹೇಶ್ ಹೆಗ್ಡೆಯವರು ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ ರಮೇಶ್ ಶೆಟ್ಟಿಯವರು, ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿಯವರು, ಖಜಾಂಚಿ ಭರತ್ ಶೆಟ್ಟಿಯವರು, ಹಾಗೂ ಉಪನ್ಯಾಸಕರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಬೈಂದೂರು :ನನ್ನ ಪೇಜ್ ನನ್ನ ಜವಾಬ್ದಾರಿ : ಬೈಂದೂರು ಬಿಜೆಪಿ ಮಂಡಲ ವತಿಯಿಂದ ವಿನೂತ‌ ಕಾರ್ಯಕ್ರಮಕ್ಕೆ ಚಾಲನೆ

    ಬೈಂದೂರು :ನನ್ನ ಪೇಜ್ ನನ್ನ ಜವಾಬ್ದಾರಿ : ಬೈಂದೂರು ಬಿಜೆಪಿ ಮಂಡಲ ವತಿಯಿಂದ ವಿನೂತ‌ ಕಾರ್ಯಕ್ರಮಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನನ್ನ ಪೇಜ್ ನನ್ನ ಜವಾಬ್ದಾರಿ ವಿಶೇಷ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ.

    ಮಂಡಲದ ಎಲ್ಲ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬುಧವಾರ ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೀಪಕ್ ಕುಮಾರ್ ಶೆಟ್ಟಿಯವರು ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮವನ್ನು ನಿತ್ಯವೂ ಆಯಾ ಶಕ್ತಿ ಕೇಂದ್ರದಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ ಅಥವಾ ಸಂಜೆ ಕಾರ್ಯಕ್ರಮ ನಡೆಸಿ ಅದರ ಅಪ್ಡೇಟ್ ಅಥವಾ ಫೋಟೊ ವನ್ನು ಮಂಡಲಕ್ಕೆ ಕಳುಹಿಕೊಡಬೇಕು ಎಂದು ಪ್ರಮುಖರಿಗೆ ತಿಳಿಸಿದರು. ಎಲ್ಲ ಬೂತ್ ಗಳಲ್ಲೂ ಪೇಜ್ ಪ್ರಮುಖರ ನೇಮಕ ಆಗಬೇಕು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ನಂತರ ಅವರು ತಮ್ಮ ಜವಾಬ್ದಾರಿಗಳ ಬಗ್ಗೆ ಅರಿತು ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದರು.

    ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1 ಲಕ್ಷಕ್ಕೂ ಅಧಿಕ ಲೀಡ್ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

    ಈ ಕಾರ್ಯಕ್ರಮದ ಸಂಚಾಲಕರಾದ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಂಡಲ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಮಂಡಲ ಖಜಾಂಚಿ ಗಣೇಶ್ ಗಾಣಿಗ, ಮಂಡಲ ಉಪಾಧ್ಯಕ್ಷ ರಮೇಶ್ ಪೂಜಾರಿ, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ, ಪ್ರಮುಖರಾದ ನಾಗರಾಜ, ಕರುಣ ಪೂಜಾರಿ, ಉಪ್ಪುಂದ ಗ್ರಾಮ ಪಂಚಾಯತಿಯ 10 ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು, ಕಾರ್ಯಕರ್ತರು ಸಭೆಯಲ್ಲಿದ್ದರು.

  • ಕೋಟೇಶ್ವರ :ಚುನಾವಣೆ ದೇಶ ಮತ್ತು ಧರ್ಮದ ಒಗ್ಗೂಡುವಿಕೆಗೆ ನಡೆಯುವ ಚುನಾವಣೆ :ಕೋಟ ಶ್ರೀನಿವಾಸ್ ಪೂಜಾರಿ

    ಕೋಟೇಶ್ವರ :ಚುನಾವಣೆ ದೇಶ ಮತ್ತು ಧರ್ಮದ ಒಗ್ಗೂಡುವಿಕೆಗೆ ನಡೆಯುವ ಚುನಾವಣೆ :ಕೋಟ ಶ್ರೀನಿವಾಸ್ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಿಮ್ಮ ಪ್ರತಿಯೊಂದು ಮತಗಳು ದೇಶದ ಒಗ್ಗೂಡುವಿಕೆ ಮತ್ತು ರಾಷ್ಟ್ರ ರಕ್ಷಣೆಯ ದೃಷ್ಟಿಯಲ್ಲಿ ಚಲಾಯಿಸಬೇಕಾಗಿದೆ ಆ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಮೂಲಕ ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು

    ಭಾರತೀಯ ಜನತಾ ಪಾರ್ಟಿಯ ಕೋಟೇಶ್ವರ ಮಹಾಶಕ್ತಿ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು ಸಶಕ್ತ ಸೇನೆ ದೇಶದ ಆರ್ಥಿಕ ಸುವ್ಯವಸ್ಥೆ ಇದೆಲ್ಲವೂ ನರೇಂದ್ರ ಮೋದಿ ಅವರ ಕೊಡುಗೆ ದೇಶ ಮೊದಲು ಎನ್ನುವ ಸಿದ್ಧಾಂತದೊಂದಿಗೆ ರಾಷ್ಟ್ರಭಕ್ತರು ಮತ್ತು ರಾಷ್ಟ್ರಧ್ರೋಹಿಗಳ ನಡುವಿನ ಚುನಾವಣೆ ಇದಾಗಿದೆ ಎಂದರು

    ರಾಮ ಕೇವಲ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟಿಗೆ ಅಪಿದವಿತ್ ಕೊಟ್ಟ ಕಾಂಗ್ರೆಸ್ ಪಕ್ಷದ ಆಡಳಿತವನ್ನು ದೇಶದಲ್ಲಿ ಮತ್ತೊಮ್ಮೆ ನಾವು ನೋಡುವಂತಾಗಬಾರದು ಎನ್ನುವುದಾದರೆ ಜೈ ಶ್ರೀ ರಾಮ್ ಘೋಷಣೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾವು ಮತ ಚಲಾಯಿಸಬೇಕಾಗಿದೆ ಎಂದರು.

    ಇತ್ತೀಚೆಗೆ ಬಿಜೆಪಿಯ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿದ ಕೋಟ ಶ್ರೀನಿವಾಸ್ ಪೂಜಾರಿ ನಮ್ಮ ಕಾರ್ಯಕರ್ತರು ತಂಟೆಗೆ ಬಂದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ಇದೇ ಸಂದರ್ಭ ಮಾತನಾಡಿದ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಮೊದಲು ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಲಿ ಆಮೇಲೆ ಚುನಾವಣೆ ಎದುರಿಸಲಿ ಯಜಮಾನವಿಲ್ಲದ ಕಾಂಗ್ರೆಸ್ ಪಕ್ಷದ ಆಡಳಿತ ಈ ದೇಶಕ್ಕೆ ಅಗತ್ಯವಿಲ್ಲ ಎಂದರು.

    ನಮ್ಮ ದೇಶದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ದೇಶದ ಸುಭದ್ರತೆಗಾಗಿ ಮೋದಿಯೇ ನಮ್ಮ ಅಭ್ಯರ್ಥಿ ಎಂದು ಭಾವಿಸಿ ಮೋದಿಯ ಆಯ್ಕೆಗಾಗಿ ನಾವು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕಾಗಿದೆ ಎಂದರು

    ಕುಂದಾಪುರದ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಮಂಡಲದ ನಿಕತಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಸುಧೀರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣ ಗೊಲ್ಲ, ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನಕರ ಶೆಟ್ಟಿ, ಕೋಟೇಶ್ವರ ಪಂಚಾಯತ್ ಅಧ್ಯಕ್ಷ ರಾಗಿಣಿ ದೇವಾಡಿಗ, ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

  • ಸಂಸದರ ಬಗ್ಗೆ ಲಘುವಾಗಿ ಮಾತನಾಡಬೇಡಿ : ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಎಚ್ಚರಿಕೆ

    ಸಂಸದರ ಬಗ್ಗೆ ಲಘುವಾಗಿ ಮಾತನಾಡಬೇಡಿ : ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಎಚ್ಚರಿಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಸಂಸದ ಬಿ.ವೈ.ರಾಘವೇಂದ್ರ ಅವರು ನಾಲ್ಕನೇ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಸಂಸತ್ ಸದಸ್ಯರ ಅವಧಿಯಲ್ಲಿ ತಾರತಮ್ಯ ಮಾಡದೆ ಸಾಕಷ್ಟು ಅಭಿವೃದ್ಧಿ, ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಸಭೆಗಳಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಬಹಳ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

    ಬೈಂದೂರಿನ ಬಿಜೆಪಿ ಲೋಕಸಭಾ ಕಛೇರಿಯಲ್ಲಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 15 ವರ್ಷಕ್ಕೂ ಮಿಕ್ಕಿ ಬೈಂದೂರು ಶಾಸಕರಾಗಿದ್ದ ಗೋಪಾಲ ಪೂಜಾರಿ ಅವರು ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡಲಿ, ಸಂಸದ ಬಿ.ವೈ.ರಾಘವೇಂದ್ರ ಅವರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡುತ್ತೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಪರಿಶ್ರಮದಿಂದ ಮೀನುಗಾರಿಕೆ ಬಂದರು ಅಭಿವೃದ್ಧಿ, ವೆಂಟೆಡ್ ಡ್ಯಾಮ್ ಹಾಗೂ ಗುಣಮಟ್ಟದ ರಸ್ತೆಗಳ ನಿರ್ಮಾಣ, ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ಸಂಸದ ರಾಘವೇಂದ್ರ ಅನುದಾನ ಒದಗಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸದರಲ್ಲಿ ಓರ್ವರಾಗಿರುವ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಇದ್ದು, ಕ್ಷೇತ್ರದ ಜನರಿಗೆ ಅವರ ಸಾಧನೆಗಳ ತೃಪ್ತಿ ಇದೆ ಎಂದರು.

    ಬಿಜೆಪಿ ಸರಕಾರದ ಅವಧಿಯಲ್ಲಿ ದೇವಾಡಿಗ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದೆ. ಈ ವಿಚಾರದಲ್ಲಿ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಸಂಸದರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ. ಕಳೆದ ಸರಕಾರದ ಅವಧಿಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾದ ಅನುದಾನವನ್ನು ತಡೆ ಹಿಡಿಯಲಾಗಿದೆ. ಮಾಜಿ ಶಾಸಕರು ತಡೆ ಹಿಡಿದ ಅನುದಾನವನ್ನು ಸರಕಾರ, ಮುಖ್ಯಮಂತ್ರಿಗಳ ಮುಖಾಂತರ ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಪಟ್ಟಿ ಮತ್ತು ನಿಮ್ಮ ಪಟ್ಟಿ ನೋಡೋಣ. ಯಾರು ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂಬುದರ ಬಗ್ಗೆ ಮತದಾರರ ಮುಂದಿದೋಣ ಎಂದು ಸವಾಲು ಹಾಕಿದರು.

    ಕೇತ್ರದ ಮೀನುಗಾರರಿಗೆ ಏನಾದರೂ ನ್ಯಾಯ ಕೊಟ್ಟಿದ್ದು ಬಿಜೆಪಿ ಸರಕಾರ ಬಿಟ್ಟರೆ, ಕಾಂಗ್ರೆಸ್ ಸರಕಾರ ಮೀನುಗಾರರಿಗೆ ಒಳ್ಳೆಯದಾಗುವ ಯಾವುದೇ ಕಾರ್ಯಕ್ರಮ ನೀಡಿಲ್ಲ. ಮೀನುಗಾರರಿಗೆ ಉಪಯೋಗವಾಗುವ ಯಾವುದೇ ಯೋಜನೆಯನ್ನು ಕಾಂಗ್ರೆಸ್ ಜಾರಿಗೊಳಿಸಿಲ್ಲ ಎಂದು ಹೇಳಿದ ಅವರು, ಎರಡು ವರ್ಷ ಕರೋನಾ ಹಾವಳಿ ಇದ್ದರೂ ಬೈಂದೂರು ಕ್ಷೇತ್ರಕ್ಕೆ ಸುಮಾರು 3 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
    ಈಗ ಬಿಜೆಪಿಲ್ಲಿರುವ ನಾಯಕರು ಡ್ಯೂಪ್ಲಿಕೇಟ್ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಜೂ.4ಕ್ಕೆ ಮತ ಎಣಿಕೆ ಕಾರ್ಯ ನಡೆದ ಬಳಿಕ ಡ್ಯೂಪ್ಲಿಕೇಟ್ ಯಾರು ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿಯನ್ನು ಖಾಲಿ ಮಾಡುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿ ಕಾರಿದ ಅವರು ಇಡೀ ದೇಶಲ್ಲಿ ಕಾಂಗ್ರೆಸ್ ಖಾಲಿಯಾಗುತ್ತಿದೆ. ಒಂದು ವರ್ಷದೊಳಗೆ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಖಾಲಿಯಾದ ಮನೆಯಾಗುತ್ತದೆ. ನಾಯಕರಿಲ್ಲದೆ ಕಾಂಗ್ರೆಸ್ ನೆಲೆಯಿಲ್ಲದ ವ್ಯವಸ್ಥೆಯಾಗುತ್ತದೆ ಎಂದರು. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಮಂಡಲ ಅಧ್ಯಕ್ಷರಾಗಿ ಸಾಧನೆಯನ್ನು ಎಲ್ಲಾ ಕಾರ್ಯಕರ್ತರು ಒಪ್ಪಿಕೊಂಡು ಸ್ವಾಗತ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಗೊಳಿಸುವ, ಸಂಸದ ರಾಘವೇಂದ್ರ ಅವರನ್ನು ಮತ್ತೊಮ್ಮೆ ಸಂಸದರನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
    ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಅವರು ದೇವಾಡಿಗ ಸಮುದಾಯಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ದೇವಾಡಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡುವಲ್ಲಿ ಸಂಸದ ರಾಘವೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ. ದೇವಾಡಿಗ ಸಮುದಾಯ ಭವನಕ್ಕೆ ಬಿಡುಗಡೆಯಾದ ಅನುದಾನವನ್ನು ಕಾಂಗ್ರೆಸ್ ಸರಕಾರ ತಡೆ ಹಿಡಿದಿದೆ. ಇದಕ್ಕೆ ಮೂಲ ಕಾರಣ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ. ಸರಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಿದರೆ ಸಮುದಾಯ ಭವನ ನಿರ್ಮಾಣವಾಗುತ್ತಿತ್ತು. ಅವರು ನಂಬಿರುವ ಯಾವುದಾದರೂ ದೇವಸ್ಥಾನ ಇದ್ದರೆ ಅವರು ಅಲ್ಲಿಗೆ ಪ್ರಮಾಣ ಮಾಡುವುದಿದ್ದರೆ ನಮ್ಮ ಸರಕಾರ ತಡೆ ಹಿಡಿದಿಲ್ಲ ಎಂದು ಹೇಳುವುದಾರೆ ನಾವೂ ಬರುತ್ತೇವೆ, ನಾವೂ ಪ್ರಮಾಣ ಮಾಡುತ್ತೇವೆ ಎಂದು ಸವಾಲು ಹಾಕಿದರು. ಇದು ದೇಶದ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಚುನಾವಣೆಯೇ ಹೊರತು ವೈಯಕ್ತಿಕ ಋಣ ತೀರಿಸುವ ಚುನಾವಣೆ ಅಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕರ ನಡೆಯನ್ನು ಟೀಕಿಸಿದರು.

    15 ವರ್ಷ ಶಾಸಕರಾಗಿ ಕೆಲಸ ಮಾಡಿದ್ದ ಗೋಪಾಲ ಪೂಜಾರಿಯವರು ಸಂಸದರ ಬಗ್ಗೆ ಮಾತನಾಡುವಾಗ ಯಾವ ರೀತಿ ಮಾತನಾಡಬೇಕು ಎಂದು ಅರಿತಿರಬೇಕು ಮತ್ತು ಆಲೋಚನೆ ಮಾಡಿ ಮಾತನಾಡಬೇಕು ಎಂದ ಅವರು ಹೇಳಿದರು.

    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ರಾಜಶೇಖರ ದೇವಾಡಿಗ, ಕೃಷ್ಣ ದೇವಾಡಿಗ, ಗಣೇಶ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

  • ಬೈಂದೂರು :ನಿಮ್ಮ ಮತಕ್ಕೆ ನ್ಯಾಯ ಕೊಡುವ ಜವಾಬ್ದಾರಿ ನನ್ನದು – ಗೀತಾ ಶಿವರಾಜಕುಮಾರ್

    ಬೈಂದೂರು :ನಿಮ್ಮ ಮತಕ್ಕೆ ನ್ಯಾಯ ಕೊಡುವ ಜವಾಬ್ದಾರಿ ನನ್ನದು – ಗೀತಾ ಶಿವರಾಜಕುಮಾರ್

    ಕುಂದಾಪುರ ಮಿರರ್ ಸುದ್ದಿ…

    ನಾಡ: ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಆಡಳಿತ ವೈಖರಿ ಜನಸಾಮಾನ್ಯರಿಗೆ ರಾಜ್ಯ ಸರ್ಕಾರದ ಮೂಲಕ ಅವರು ನೀಡಿದ ವಿಶೇಷ ಕೊಡುಗೆಗಳು, ಅದರಲ್ಲೂ ರೈತರಿಗೆ ಕೃಷಿಕರಿಗೆ ಉಚಿತ ಪಂಪ್ ಸೆಟ್ ಯೋಜನೆ ಬಿ ಜನಾರ್ದನ ಪೂಜಾರಿಯವರ ಸಾಲ ಸೌಲಭ್ಯಗಳ ಯೋಜನೆ ಮೊದಲಾದ ಯೋಜನೆಗಳ ಮೂಲಕ ಜನರ ಆರ್ಥಿಕ ಬದುಕನ್ನು ಭದ್ರಗೊಳಿಸಿದ ಬಂಗಾರಪ್ಪನವರ ಮಗಳಾಗಿ ನಾನು ನನ್ನ ಪ್ರಾಮಾಣಿಕ ಸೇವೆ ಸಲ್ಲಿಸಲು ಬದ್ಧಳಾಗಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.

    ಅವರು ಭಾನುವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ, ಆಲೂರು, ನಾವುಂದದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತವಾಗಿ ಜೆಡಿಎಸ್ನಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದು ಈ ಕ್ಷೇತ್ರ ನನಗೇನು ಹೊಸದಲ್ಲ ಇಲ್ಲಿನ ಜನ ಜೀವನದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ ಗ್ರಾಮೀಣ ಭಾಗದಲ್ಲಿ ಇರುವ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಅರಿವಿದೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದರೆ ಗ್ರಾಮೀಣ ಭಾಗಗಳ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನಗಳ ಮೂಲಕ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದರು.

    ಇದೇ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸುಳ್ಳುಗಳ ಸರಮಾಲೆಗಳನ್ನು ಹೆಣೆದು ಸೋಲಿಸುವ ವ್ಯವಸ್ಥೆ ನಡೆಸಲಾಯಿತು. ಆದರೆ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದಾಗ ನಾಡ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ಅತಿ ಹೆಚ್ಚು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎನ್ನುವುದನ್ನು ಈ ಊರಿನ ಜನ ಮರೆತಿಲ್ಲ ಈ ಬಾರಿಯ ಚುನಾವಣೆಯಲ್ಲಿ ಜನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾನ ಮಾಡುತ್ತಾರೆ ಎನ್ನುವುದನ್ನು ನಾನು ನಂಬಿದ್ದೇನೆ ಎಂದರು. ಬಂಗಾರಪ್ಪ ನನ್ನ ರಾಜಕೀಯ ಗುರುಗಳು ಅವರ ಋಣ ನನ್ನ ಮೇಲಿದೆ ಆ ನಿಟ್ಟಿನಲ್ಲಿ ನಾವು ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕಿದೆ ನಾನು ಮಾಡಿದ ಕೆಲಸಗಳ ಆಧಾರದ ಮೇಲೆ ನನ್ನೂರಿನ ಜನ ಗೀತಾ ಶಿವರಾಜಕುಮಾರ್ ಗೆ ಮತ ನೀಡಿ ಗೆಲ್ಲಿಸಬೇಕಾಗಿದೆ ಎಂದರು.

    ಮಾಜಿ ಶಾಸಕ ಬಿ. ಎಂ. ಸುಕುಮಾರಶೆಟ್ಟಿ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ಅತ್ಯಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇದು ಸುಕುಮಾರಶೆಟ್ಟಿ ಮಾಡಿರುವ ಕೆಲಸವೇ ಹೊರತು ಎಂಪಿಯ ಸಾಧನೆ ಅಲ್ಲ. ಎಂಪಿ ಏನು ಮಾಡಿದ್ದಾರೆ? ರಾಘವೇಂದ್ರ ಅವರು ಎಂಪಿ ಆದಮೇಲೆ ಇಡೀ ಬೈಂದೂರು ಮತ್ತು ಕುಂದಾಪುರದಲ್ಲಿ ಭೂ ವ್ಯವಹಾರದಲ್ಲಿ ತೊಡಗಿದ್ದು ಹೊರತು ಅಭಿವೃದ್ಧಿಯತ್ತ ದೃಷ್ಟಿ ಹಾಯಿಸಿಲ್ಲ. ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕೇ ಹೊರತು ನಮ್ಮ ಊರಿನಲ್ಲಿ ಭೂ ವ್ಯವಹಾರ ನಡೆಸುವುದಲ್ಲ ಆದುದರಿಂದ ಈ ಬಾರಿ ಜನ ಅಭಿವೃದ್ಧಿಯತ್ತ ಮನಸ್ಸು ಮಾಡಿದ್ದಾರೆ ಎಂದರು.

    ಕಾಂಗ್ರೆಸ್ಸಿನ ಹಿರಿಯ ಮುಖಂಡ ಪ್ರಕಾಶ್ ಚಂದ್ರ ಶೆಟ್ಟಿ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ 25 ಗ್ಯಾರಂಟಿಗಳ ಬಗ್ಗೆ ಕಾರ್ಯಕರ್ತರಲ್ಲಿ ಮತ್ತು ಮತದಾರರಲ್ಲಿ ವಿವರಿಸಿದರು. ಹುಣಸೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಹೊಡಿಬೆಟ್ಟು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಚುನಾವಣಾ ಉಸ್ತುವಾರಿ ಹಾಗೂ ಇನ್ನಿತರ ಕಾಂಗ್ರೆಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು