ಮರುಮೌಲ್ಯ ಮಾಪನದಿಂದ ಜನತಾ ಪಿಯು ಕಾಲೇಜಿನ 22 ವಿದ್ಯಾರ್ಥಿಗಳು ಟಾಪ್ 10 ರ್ಯಾಂಕ್ ನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ. ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

0
431

ರಶ್ಮಿ ಪೈ 2ನೇ ರ್ಯಾಂಕ್, ಶ್ರಾವ್ಯ ದೇವಾಡಿಗ 3ನೇ ರ್ಯಾಂಕ್, ಶಮ್ಯ ಶೆಟ್ಟಿ 4ನೇ ರ್ಯಾಂಕ್, ಪ್ರಥಮ ಜಿ ಕಾಂಚನ್ 4ನೇ ರ್ಯಾಂಕ್

ಹೆಮ್ಮಾಡಿ :ದ್ವಿತೀಯ ಪಿಯು ಫಲಿತಾಂಶದಲ್ಲಿ ಜನತಾ ಪಿಯು ಕಾಲೇಜ್ ಹೆಮ್ಮಾಡಿ ರಾಜ್ಯ ಮಟ್ಟದ ದ್ವಿತೀಯ ರ್ಯಾಂಕ್ ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಗಳಿಸಿದ್ದು
ಮರು ಮೌಲ್ಯಮಾಪನದಿಂದ ಜನತಾ ಪಿಯು ಕಾಲೇಜಿನ 22 ವಿದ್ಯಾರ್ಥಿಗಳು ಟಾಪ್ 10 ರ್ಯಾಂಕ್ ನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದು ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಗುರುತಿಸಲಾಗಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ ಜಿ ಕಾಂಚನ 597ಅಂಕ ಪಡೆದು ರಾಜ್ಯಕ್ಕೆ 4ನೇ ರ್ಯಾಂಕ್,ಆಕಾಶ್ 594 ಅಂಕ ಪಡೆದು 7ನೇ ರ್ಯಾಂಕ್,ತನ್ವಿತಾ ವಿ 593 ಅಂಕ ಪಡೆದು 8ನೇ ರ್ಯಾಂಕ್, ಐಶ್ವರ್ಯ 592 ಅಂಕ ಪಡೆದು 9ನೇ ರ್ಯಾಂಕ್, ಶ್ರೇಷ್ಠ 591 ಅಂಕ ಪಡೆದು 10ನೇ ರ್ಯಾಂಕ್, ತನ್ವಿಲವ 591 ಅಂಕ ಪಡೆದು 10ನೇ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ, ಬೋಧಕ, ಬೋಧಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here