ಕುಂದಾಪುರ ಮಿರರ್ ಸುದ್ದಿ…
ಕೋಟೇಶ್ವರ: ಚಿರಂತನ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ಶಿಕ್ಷಕರಿಗಾಗಿ ‘ಧ್ವನಿ ಮತ್ತು ಕಥೆಯ ಮೂಲಕ ಸಂವಹನ ಕಲೆ’ ವಿಷಯದ ತರಬೇತಿ ಕಾರ್ಯಕ್ರಮವನ್ನು ಸಂಸ್ಥೆಯಲ್ಲಿ ಆಗಸ್ಟ್ 22ರಂದು ಮಧ್ಯಾಹ್ನ 1.30ಕ್ಕೆ ಆಯೋಜಿಸಲಾಗಿತ್ತು.
ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದ ಶಿಕ್ಷಕಿ , ಬರಹಗಾರ್ತಿ ಆಶಾ ಶೆಟ್ಟಿ ಮತ್ತು ಶಿಕ್ಷಕಿ , ನಿರೂಪಕಿ ದಿವ್ಯಾ ಎಚ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ
ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಸಂವಹನ, ಧ್ವನಿಯ ಬಳಕೆ ಹಾಗೂ ಕಥೆ ಹೇಳುವ ಕಲೆಯ ಮಹತ್ವವನ್ನು ವಿದ್ಯಾರ್ಥಿ ಶಿಕ್ಷಕರಿಗೆ ಪರಿಚಯಿಸಿ, ತರಗತಿ ಬೋಧನೆಯನ್ನು ಆಸಕ್ತಿದಾಯಕ ಹಾಗೂ ಪರಿಣಾಮಕಾರಿಯಾಗಿಸಲು ಧ್ವನಿ, ಅಭಿವ್ಯಕ್ತಿ ಮತ್ತು ಕಥನ ಕೌಶಲ್ಯಗಳನ್ನು ಬಳಸುವ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಚಿಂತನಾ ರಾಜೇಶ್, ಅಕಾಡೆಮಿಕ್ ಲೀಡ್ ವಿಲ್ಮಾ ಡಿ’ಸಿಲ್ವಾ ಹಾಗೂ ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ವಿದ್ಯಾರ್ಥಿನಿ ಸಹನಾ ನಿರೂಪಿಸಿ, ಪವಿತ್ರ ಸ್ವಾಗತಿಸಿದರು. ವಿನೀತ ಹಾಗೂ ಸ್ವಾತಿ ಪರಿಚಯಿಸಿ, ಶ್ರೀದೇವಿ ವಂದಿಸಿದರು.












