ನವೀ ಮುಂಬೈಯಲ್ಲಿ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸಭೆ – ಕೊಂಕಣ ರೈಲ್ವೇ ಡಬ್ಲಿಂಗ್ ಕುರಿತು ಗಣೇಶ್ ಪುತ್ರನ್ ಚರ್ಚೆ

0
17

Click Here

Click Here

ಕುಂದಾಪುರ ಮಿರರ್ ಸುದ್ದಿ….

ಕುಂದಾಪುರ :ನವೀ ಮುಂಬೈಯಲ್ಲಿ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸಭೆ ನಡೆದಿದ್ದು , ಕೊಂಕಣ ರೈಲ್ವೇಗೆ ತಕ್ಷಣ ಆಗ ಬೇಕಾದ ವಿಷಯಗಳ ಕುರಿತು ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ನಿಗಮದ ಮುಂದೆ ಚರ್ಚೆ ನಡೆಸಿದ್ದಾರೆ.

Click Here

ಕೊಂಕಣ ನಿಗಮದ ಮೂರನೇ ಹಣಕಾಸು ಮರುವಿನ್ಯಾಸಕ್ಕೆ ಭಾರತ ಸರಕಾರದ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರೈಲುಗಳನ್ನು ಆರಂಭಿಸಲು ಮತ್ತು ಪಾರ್ಕ್ ಮಾಡಲು ಬೇಕಾದ ಸ್ಟೇಬಲ್ ಲೈನ್ ನಿರ್ಮಾಣದ ಬೇಡಿಕೆಯಿಟ್ಟ ಪುತ್ರನ್ ಅವರಿಗೆ ನಿಗಮವು ಸಕಾರತ್ಮಕವಾಗಿ ಸ್ಪಂದಿಸಿದೆ.
ಬಾರ್ಕೂರಿಗೆ ಎರಡನೇ ಪ್ಲಾಟ್ ಪಾರಂ, ಮೇಲ್ ಸೇತುವೆ, ಗೋಕರ್ಣ ನಿಲ್ದಾಣದ ಆಧುನೀಕರಣ, ರೈಲುಗಳ ಸಮಯ ಫಾಲನೆ ಕುರಿತು ಚರ್ಚೆ ನಡೆಸಲಾಯಿತು. ಪಂಚಗಂಗಾ ರೈಲಿಗೆ 19 ಕೋಚ್ ಗಳಿದ್ದು ಇದನ್ನು 22 ಮಾಡುವ ಕುರಿತು ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗಿದ್ದು ಅದನ್ನು ನೈರುತ್ಯ ರೈಲ್ವೇಗೆ ತಿಳಿಸುವ ಕುರಿತು ತೀರ್ಮಾನ ತೆಗೆದುಕೊಳ್ಲಲಾಯಿತು. ಕೊಂಕಣ ರೈಲ್ವೆಯ ಡಬ್ಲಿಂಗ್ ಕುರಿತು ಚರ್ಚೆ ನಡೆಸಲಾಯಿತಾದರೂ , ಡೀಪಿಆರ್ ಕೆಲಸಗಳು ಮುಗಿದಿದ್ದರೂ ಅದಕ್ಕೆ ಬೇಕಾದ ಹಣಕಾಸಿನ ಗೊಂದಲ ಮುಂದುವರಿದಿದ್ದು ಅದನ್ನು ಸಂಸದರ ಜತೆ ಈ ವಿಷಯವನ್ನು ದೆಹಲಿ ಮಟ್ಟದಲ್ಲಿ ಚರ್ಚೆಗೆ ಯೊಜನೆ ರೂಪಿಸಿರುವುದಾಗಿ ಶ್ರೀ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ರೈಲುಗಳಿಗೆ ನೀರು ತುಂಬುವ ವ್ಯವಸ್ತೆ , ಮೂಕಾಂಬಿಕ ದೇಗುಲವನ್ನು ವೇಗವಾಗಿ ತಲುಪಲು ಸಾದ್ಯವಾಗುವ ಕುಂದಾಪುರ ರೈಲು ನಿಲ್ದಾಣ ಅಭಿವೃದ್ದಿ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ರವಾನಿಸಲಾಯಿತು ಎಂದು ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅದ್ಯಕ್ಷರು, ಸಲಹಾ ಸಮಿತಿಯ ಸದಸ್ಯರು ಗಣೇಶ್ ಪುತ್ರನ್ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here