ಕರಾಟೆ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ಜನತಾ – ರಾಜ್ಯಮಟ್ಟಕ್ಕೇರಿದ 3 ವಿದ್ಯಾರ್ಥಿಗಳು

0
934

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ರಿಯೇಟಿವ್ ಕಾಲೇಜು, ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಇತಿಹಾಸ ಸೃಷ್ಟಿಸಿದ್ದಾರೆ.

Click Here

17ರ ವಯೋಮಾನದ ಹುಡುಗರ -58ಕೆಜಿ ವಿಭಾಗದಲ್ಲಿ ಸಾಯಿನಾಥ್ ಆಚಾರ್ಯ, -78 ಕೆಜಿ ವಿಭಾಗದಲ್ಲಿ ಪ್ರೀತಮ್ ಹಾಗೂ 14ರ ವಯೋಮಾನದ ಬಾಲಕರ -60 ಕೆಜಿ ವಿಭಾಗದಲ್ಲಿ ಸಾಕ್ಷಿತ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿಕೊಂಡರು.
17ರ ವಯೋಮಾನದ ಹುಡುಗರ-54 ಕೆಜಿ ವಿಭಾಗದಲ್ಲಿ ರಜತ್ ಆರ್ ಮತ್ತು 14ರ ವಯೋಮಾನದ ಹುಡುಗರ +60ಕೆಜಿ ವಿಭಾಗದಲ್ಲಿ ಆಶೀಷ್ ಹಾಗೂ -35 ಕೆಜಿ ವಿಭಾಗದಲ್ಲಿ ಸರ್ಮಥ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದರು.
ಅನುಭವಿ ಮತ್ತು ಪ್ರಭಾವಿ ತರಬೇತುದಾರರ ಮೂಲಕ ನಿತ್ಯದ ತರಬೇತಿ ತರಗತಿಗಳು, ಕಟ್ಟುನಿಟ್ಟಿನ ಫಿಟ್ನೆಸ್ ತಂತ್ರಗಳು, ಸ್ಪರ್ಧಾಳುಗಳ ನಿಯಮಿತ ಮೌಲ್ಯಮಾಪನಗಳು, ಸತ್ವಯುತ ಆಹಾರ ನಿಯಮಗಳ ಪಾಲನೆಯ ಮೂಲಕ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹೊಸ ಅಲೆಯನ್ನು ಎಬ್ಬಿಸುತ್ತಿದೆ.
ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವಿಜೇತ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು , ಕಾರ್ಯದರ್ಶಿಗಳು,ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕರು ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here